ಟೋಲ್‌ನಂತೆ ನೀರೂ ಖಾಸಗೀಕರಣ

ಕಲಬುರ್ಗಿ, ಬೆಳಗಾವಿ, ಹುಬ್ಬಳ್ಳಿ-ಧಾರವಾಡದಲ್ಲಿ ಯೋಜನೆ ಜಾರಿ! ­ದಿನವಿಡಿ ನೀರು: ಎಲ್ಲಾ ವಾರ್ಡ್‌ಗಳಿಗೂ ವಿಸ್ತರಣೆ

Team Udayavani, Jul 8, 2021, 5:24 PM IST

7hub-dwd1(c)

ವರದಿ: ಡಾ|ಬಸವರಾಜ ಹೊಂಗಲ್‌

ಧಾರವಾಡ: ನಗರವಾಸಿಗಳಿಗೆ ಅಗತ್ಯಕ್ಕೆ ತಕ್ಕಷ್ಟು ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ನಿರಂತರ ನೀರು ಯೋಜನೆಯ 2ನೇ ಭಾಗ ಕಾಮಗಾರಿ ಶೀಘ್ರವೇ ಆರಂಭಗೊಳ್ಳಲಿದ್ದು, 2ನೇ ಭಾಗ ವಿಸ್ತರಣೆಗೆ ಹೊಸ ಖಾಸಗಿ ಕಂಪನಿ ಮುಂದಾಗಿದೆ. ಮೊದಲ ಹಂತದಲ್ಲಿ ಆಮೆಗತಿಯಲ್ಲಿ ಸಾಗಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದ ನಿರಂತರ ನೀರು ಯೋಜನೆ 2ನೇ ಭಾಗದಲ್ಲಿ ಇನ್ನುಳಿದ ಶೇ.80 ರಷ್ಟು ಪ್ರದೇಶದಲ್ಲಿ ಜಾರಿಯಾಗಬೇಕಾಗಿದೆ.

ಹೌದು. ರಾಜ್ಯ ಸರ್ಕಾರ ವಿದೇಶಿ ಬ್ಯಾಂಕುಗಳಿಂದ ಸಾಲ ಪಡೆದು ಕಲಬುರ್ಗಿ, ಬೆಳಗಾವಿ ಮತ್ತು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗಳಿಗೆ ದಿನದ 24 ಗಂಟೆ ನೀರು ಪೂರೈಕೆಗೆ ರೂಪಿಸಿದ ಯೋಜನೆ, ಕುಚ್ಚ ಕಟ್ಟಿ ಕುಚ್ಚ ಮೀಟಿ ಅಂಶಗಳೊಂದಿಗೆ ಆಮೆಗತಿಯಲ್ಲಿ ಸಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ಪ್ರಾಯೋಗಿಕವಾಗಿ ಜಾರಿಗೊಳಿಸಿದ ವಾರ್ಡುಗಳಲ್ಲಿ ಕಾಲ ಮಿತಿ ಮೀರಿದರೂ ಜನರಿಗೆ ಶುದ್ಧ ಮತ್ತು ಸಮಯಕ್ಕೆ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ ಎನ್ನುವ ಆರೋಪವೂ ಇದೆ. ಇದೀಗ ಈ ಮೂರು ಮಹಾನಗರ ಪಾಲಿಕೆಗಳ ಇನ್ನುಳಿದ ಶೇ.80ರಷ್ಟು ವಾರ್ಡುಗಳಿಗೂ ದಿನವಿಡಿ ನೀರು ಪೂರೈಸುವ ಈ ಯೋಜನೆ ವಿಸ್ತರಿಸಲು ಮತ್ತೂಂದು ಖಾಸಗಿ ಕಂಪನಿಗೆ ಟೆಂಡರ್‌ ನೀಡಲಾಗಿದ್ದು, ಮತ್ತೆ ಈ ಮೂರು ನಗರಗಳಲ್ಲಿ ರಸ್ತೆ ಅಗೆತ ಶುರುವಾಗಲಿದೆ. ಪ್ರಾಯೋಗಿಕವಾಗಿ ಜಾರಿಗೊಳಿಸಿದ ಪ್ರತಿನಗರದಲ್ಲಿಯೂ ಒಂದೊಂದು ಸಮಸ್ಯೆಗಳು ಎದುರಾಗಿವೆ.

ಕಲಬುರ್ಗಿ-ಬೆಳಗಾವಿಯಲ್ಲಿ ನೀರಿನ ಗುಣಮಟ್ಟ ಸರಿಯಾಗಿಲ್ಲ. ಹುಬ್ಬಳ್ಳಿಯಲ್ಲಿ ನೀರು ಸಂಗ್ರಹಾಗಾರಗಳ ಕೊರತೆ ಎದುರಾಗಿದ್ದು, ಎಲ್ಲಾ ವಾರ್ಡುಗಳಿಗೆ ಯೋಜನೆ ವಿಸ್ತರಣೆಯಾಗಲು ನೂರೆಂಟು ವಿಘ್ನಗಳು ಎದುರಾದಂತಾಗಿದೆ.

ಟೋಲ್‌ನಂತೆ ನೀರು ಖಾಸಗಿ 

ಸರ್ಕಾರದ್ದೇಯಾದ ಈ ಯೋಜನೆ ಯಶಸ್ವಿಯಾಗದಿರಲು ಮತ್ತು ಕುಂಟುತ್ತ ಸಾಗಲು ಅದೇ ಸರ್ಕಾರದ ವಿವಿಧ ಇಲಾಖೆಗಳ ಮಧ್ಯದ ಸಮನ್ವಯ ಕೊರತೆಯೇ ಪ್ರಮುಖ ಕಾರಣವಾಗಿದೆ. ಈ ಅಂಶವನ್ನು ಧಾರವಾಡದ ಸಿಎಂಡಿಆರ್‌ ಸಂಸ್ಥೆ ತನ್ನ ಸಮೀಕ್ಷೆಯಲ್ಲಿ ಪತ್ತೆ ಮಾಡಿದ್ದು, ನೀರಿನ ಉಳಿತಾಯ, ಶುದ್ಧ ಕುಡಿಯುವ ನೀರು ಪೂರೈಕೆಯ ಆಶಯಗಳು ಈಡೇರಲು ಸರ್ಕಾರ ಏನು ಮಾಡಬೇಕೆನ್ನುವ ಸಲಹೆ ಕೊಡಲು ಕೂಡ ಸಜ್ಜಾಗಿದೆ. ಹೆದ್ದಾರಿಗಳಲ್ಲಿ ಟೋಲ್‌ ಸಂಗ್ರಹವನ್ನು ಖಾಸಗೀಕರಣ ಮಾಡಿದಂತೆಯೇ ಇದೀಗ ನೀರು ಸಂಗ್ರಹ-ಸರಬರಾಜನ್ನು ಕೂಡ ಖಾಸಗಿ ಕಂಪನಿಗಳಿಗೆ ಸರ್ಕಾರ ನೀಡಿದ್ದು, ಅವರೇ ನೀರು ಸರಬರಾಜು ಮಾಡಿ ಜನರಿಂದ ಅವರೇ ನೀರಿನ ಕರ ಸಂಗ್ರಹಿಸಲಿದ್ದಾರೆ. ಹೀಗಾಗಿ ಇನ್ಮುಂದೆ ಇಲ್ಲಿನ ಜಲಮಂಡಳಿಗಳ ಕೆಲಸ ಮುಕ್ತಾಯವಾದಂತಾಗಿದ್ದು, ಜಲಮಂಡಳಿಗಳಿಗೆ ಬೀಗ ಬೀಳುವುದು ಪಕ್ಕಾ ಆದಂತಾಗಿದೆ.

735 ಕೋಟಿ ರೂ.ಯೋಜನೆ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಗೆ 360 ಕೋಟಿ ರೂ.ಗಳು, ಬೆಳಗಾವಿಗೆ 220 ಕೋಟಿ ರೂ. ಹಾಗೂ ಕಲಬುರ್ಗಿಗೆ 150 ಕೋಟಿ ರೂ.ಗಳ ವೆಚ್ಚವನ್ನು ಅಂದಾಜಿಸಲಾಗಿತ್ತು. ಈ ಪೈಕಿ 367 ಕೋಟಿ ರೂ.ಖಾಸಗಿ ಕಂಪನಿಗಳಿಂದ, 147 ಕೋಟಿ ರೂ. ಕೇಂದ್ರ ಸರ್ಕಾರ ಹಾಗೂ 147 ಕೋಟಿ ರೂ.ರಾಜ್ಯ ಸರ್ಕಾರ ಜತೆಗೆ ಸ್ಥಳೀಯ ಮಹಾನಗರ ಪಾಲಿಕೆಗಳಿಂದ 73 ಕೋಟಿ ರೂ. ಗಳನ್ನು ಬಳಸಿಕೊಳ್ಳಲು ಯೋಜಿಸಲಾಗಿದೆ.

ಟಾಪ್ ನ್ಯೂಸ್

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Devanahalli: ಬೇಸಿಗೆ ಬಿಸಿ; ಹುರುಳಿಕಾಯಿ ದರ ದುಬಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

8

Devanahalli: ಬೇಸಿಗೆ ಬಿಸಿ; ಹುರುಳಿಕಾಯಿ ದರ ದುಬಾರಿ

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.