ಶೀಘ್ರವೇ ಸುಸಜಿತ ಐಟಿ ಪಾರ್ಕ್‌ ನಿರ್ಮಾಣ?

ತೀವ್ರ ಪ್ರಯತ್ನ ನಡೆಸಿದ್ದಾರೆ ಶಾಸಕ ಬೆಳಗಾವಿ ಅಭಯ ಪಾಟೀಲ |60 ಶಾಸಕರಿಂದ ಸರಕಾರಕ್ಕೆ ಪತ್ರ

Team Udayavani, Jul 11, 2021, 9:47 PM IST

984

ವರದಿ: ಕೇಶವ ಆದಿ

ಬೆಳಗಾವಿ: ಕೇಂದ್ರ ಮತ್ತು ರಾಜ್ಯ ಸರಕಾರ ಬೆಳಗಾವಿ ಶಾಸಕರ ಬೇಡಿಕೆಗೆ ತ್ವರಿತವಾಗಿ ಸ್ಪಂದಿಸಿದರೆ ಶೀಘ್ರವೇ ನಗರದ ಹೊರವಲಯದಲ್ಲಿ ಬಹು ರಾಷ್ಟ್ರೀಯ ಕಂಪನಿಗಳಿಗೆ ಅವಕಾಶ ಕಲ್ಪಿಸುವ ಸುಸಜ್ಜಿತ ಮಾಹಿತಿ ತಂತ್ರಜ್ಞಾನ ಪಾರ್ಕ್‌ ನಿರ್ಮಾಣವಾಗಲಿದೆ.

ಸುವರ್ಣ ವಿಧಾನಸೌಧ ಉತ್ತರ ಕರ್ನಾಟಕದ ಶಕ್ತಿ ಕೇಂದ್ರವಾಗಬೇಕೆಂಬ ಬಹು ದಿನಗಳ ಆಸೆ ಈಡೇರಿದ ನಂತರ ಇದಕ್ಕೆ ಪೂರಕವಾಗಿ ಐಟಿ ಪಾರ್ಕ್‌ ನಿರ್ಮಾಣ ಬೇಡಿಕೆ ಇದ್ದು, ಇದಕ್ಕೆ ಸಂಬಂಧಪಟ್ಟಂತೆ ಬೆಳಗಾವಿ ಶಾಸಕ ಅಭಯ ಪಾಟೀಲ ತೀವ್ರ ಪ್ರಯತ್ನ ನಡೆಸಿದ್ದಾರೆ. ಸರಕಾರ ಇದರ ಬಗ್ಗೆ ಮುತುವರ್ಜಿ ವಹಿಸಿ ಅನುಮೋದನೆ ನೀಡಿದ್ದೇ ಆದರೆ ಬೆಳಗಾವಿಯಲ್ಲಿ ಹೊಸ ಅಭಿವೃದ್ಧಿಯ ಹಾದಿ ಸುಗಮವಾಗಲಿದ್ದು, ಉತ್ತರ ಕರ್ನಾಟಕದ ಚಿತ್ರಣವೇ ಬದಲಾಗಲಿದೆ. ಬೆಳಗಾವಿ ಹೊರವಲಯದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಹಾಗೂ ಸದ್ಯ ಕೇಂದ್ರ ರಕ್ಷಣಾ ಇಲಾಖೆ ಅಧೀನದಲ್ಲಿರುವ 774 ಎಕರೆ ಜಾಗದಲ್ಲಿ ಹೊಸ ಐಟಿ ಪಾರ್ಕ್‌ ನಿರ್ಮಿಸಲು ಉದ್ದೇಶಿಸಲಾಗಿದೆ. ಇದಕ್ಕೆ ಪೂರಕವಾಗಿ ಉಪ ಮುಖ್ಯಮಂತ್ರಿ ಹಾಗೂ ಐಟಿ ಬಿಟಿ ಸಚಿವರಾದ ಅಶ್ವಥ್‌ ನಾರಾಯಣ ಅವರು ಕೇಂದ್ರದ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರನ್ನು ಭೇಟಿ ಮಾಡಿ ಐ.ಟಿ ಪಾರ್ಕ್‌ ನಿರ್ಮಿಸಲು ಸಹಕಾರ ಕೋರಿದ್ದಾರೆ.

ಜಾಗದ ವಿವಾದ: ದಾಖಲೆಯ ಪ್ರಕಾರ ಜಾಗ ರಾಜ್ಯ ಸರಕಾರದ್ದು. ಜಾಗದ ಒಡೆತನದ ಸಂಬಂಧ ಈ ಹಿಂದೆ ನಾಲ್ಕೈದು ಸಭೆ ನಡೆದಿದ್ದರೂ ರಕ್ಷಣಾ ಇಲಾಖೆ ಅಧಿಕಾರಿಗಳು ಇದು ತಮ್ಮ ಜಾಗವೆಂದು ಹೇಳಿಕೊಳ್ಳಲು ಬೇಕಾದ ದಾಖಲೆ ಸಲ್ಲಿಸಿಲ್ಲ. ಜತೆಗೆ ಈ ಹಿಂದೆ ರಕ್ಷಣಾ ಇಲಾಖೆಗೆ ಲೀಸ್‌ ಆಧಾರದ ಮೇಲೆ ನೀಡಿದ್ದ ಈ ಜಾಗದ ಅವಧಿಯೂ ಮುಗಿದಿದೆ. ಇದಲ್ಲದೆ ಉತಾರದಲ್ಲಿ ಇದು ರಾಜ್ಯ ಸರಕಾರದ ಜಾಗ ಎಂತಲೇ ಇದೆ. ಆದರೆ ಜಾಗ ಇನ್ನೂ ರಕ್ಷಣಾ ಇಲಾಖೆ ಸ್ವಾಧೀನದಲ್ಲೇ ಇರುವುದರಿಂದ ಇಲ್ಲಿ ಐಟಿ ಪಾರ್ಕ್‌ ಸ್ಥಾಪಿಸಬೇಕೆಂಬ ಕನಸು ನನಸಾಗಿಲ್ಲ.

ಬೆಳಗಾವಿ ನಗರ ಮಹಾರಾಷ್ಟ್ರ-ಗೋವಾ ರಾಜ್ಯಗಳಿಗೆ ಸಂಪರ್ಕದ ಕೊಂಡಿಯಾಗಿದ್ದು, ಇಲ್ಲಿ ಐಟಿ ಬಿಟಿ ಪಾರ್ಕ್‌ ನಿರ್ಮಾಣವಾದರೆ ಪರೋಕ್ಷ-ಅಪರೋಕ್ಷವಾಗಿ ಸುಮಾರು ಒಂದು ಲಕ್ಷ ಜನರಿಗೆ ಉದ್ಯೋಗ ದೊರೆಯಲಿದೆ. ಹೀಗಾಗಿ ನಗರದ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನನ್ನು ಐಟಿ-ಬಿಟಿ ಪಾರ್ಕ್‌ ನಿರ್ಮಿಸಲು ಕರ್ನಾಟಕ ಸರ್ಕಾರಕ್ಕೆ ಹಸ್ತಾಂತರಿಸಬೇಕೆಂಬುದು ಉದ್ಯಮಿಗಳ ಹಾಗೂ ಶಾಸಕರ ಮನವಿ. ಶಾಸಕರ ಈ ಮನವಿಗೆ ರಾಜ್ಯದ 60 ಶಾಸಕರು ಸಹಿ ಮಾಡಿ ಸರಕಾರ ಹಾಗೂ ರಕ್ಷಣಾ ಸಚಿವರಿಗೆ ಪತ್ರ ಸಲ್ಲಿಸಿದ್ದಾರೆ.

ಒಂದು ಐಟಿ ಪಾರ್ಕ್‌ ನಿರ್ಮಾಣಕ್ಕೆ ಕನಿಷ್ಠ 100 ಎಕರೆ ಜಾಗ ಇರಬೇಕು. ಕೆಎಲ್‌ಇ ಆಸ್ಪತ್ರೆ ಬಳಿ ಇರುವ ಈ ರಾಜ್ಯ ಸರಕಾರದ ಜಾಗ 774 ಎಕರೆ ವ್ಯಾಪ್ತಿ ಹೊಂದಿದ್ದು, ಸಾಕಷ್ಟು ಐಟಿ ಕಂಪನಿಗಳ ಸ್ಥಾಪನೆಗೆ ನೆರವಾಗಲಿದೆ. ಇಲ್ಲಿಂದ ರೈಲು, ವಿಮಾನ ಸಂಪರ್ಕಕ್ಕೆ ಸಾಕಷ್ಟು ಅನುಕೂಲವಾಗಿದೆ. ಈ ಪ್ರದೇಶ ನಗರದೊಳಗೆ ಇರುವುದರಿಂದ ಸೌಲಭ್ಯ ಒದಗಿಸಲು ಯಾವುದೇ ಸಮಸ್ಯೆ ಇಲ್ಲ ಎನ್ನುತ್ತಾರೆ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ.

ಇದ್ದೂ ಇಲ್ಲದಂತಿರುವ ಪಾರ್ಕ್‌: ಸರಕಾರ 10 ವರ್ಷಗಳ ಹಿಂದೆ ಬೆಳಗಾವಿಯಿಂದ 18 ಕಿಮೀ ದೂರದ ದೇಸೂರ ಬಳಿ 41 ಎಕರೆ ಪ್ರದೇಶದಲ್ಲಿ ಐಟಿ ಪಾರ್ಕ್‌ ಸ್ಥಾಪಿಸಲು ನಿರ್ಧರಿಸಿ ಅಲ್ಲಿ ರಸ್ತೆ ನಿರ್ಮಾಣ ಮಾಡಿತು. ದುರ್ದೈವ ಎಂದರೆ ಖಾನಾಪುರ ಮೂಲಕ ಗೋವಾ ರಾಷ್ಟ್ರೀಯ ಹೆದ್ದಾರಿಯಿಂದ ಸುಮಾರು ಎರಡು ಕಿ.ಮೀ. ಒಳಗಿರುವ ಈ ಪ್ರದೇಶದಲ್ಲಿ ಐಟಿ ಪಾರ್ಕ್‌ನ ಒಂದೇ ಒಂದು ಕುರುಹು ಕಾಣುತ್ತಿಲ್ಲ. ಇವತ್ತಿಗೂ ಅಲ್ಲಿ ಯಾವುದೇ ಐಟಿ ಸಂಸ್ಥೆ ತನ್ನ ಕಾರ್ಯಾರಂಭ ಮಾಡಿಲ್ಲ. ಐಟಿ ಪಾರ್ಕ್‌ಗೆ ಆಯ್ಕೆ ಮಾಡಿದ ಜಾಗವೇ ಸರಿ ಇಲ್ಲ. ಇದನ್ನು ಬೆಳಗಾವಿ ವಿಮಾನ ನಿಲ್ದಾಣ ಸಮೀಪ ಮಾಡಬೇಕಿತ್ತು. ಒಂದು ಪಾರ್ಕ್‌ ಮಾಡಿದ ಮೇಲೆ ಉದ್ಯಮಿಗಳಿಗೆ ಅಲ್ಲಿ ಎಲ್ಲ ಸೌಲಭ್ಯ ಕಲ್ಪಿಸಿ ಕೊಡುವುದು ಸರಕಾರದ ಮುಖ್ಯ ಕೆಲಸ. ಆದರೆ ಅಂತಹ ಯಾವುದೇ ಬೆಳವಣಿಗೆ ಆಗಲಿಲ್ಲ. ಹೀಗಾಗಿ ದೇಸೂರ ಬಳಿ ಜಾಗ ಖರೀದಿಸಿದ್ದು ಯಾವ ಪ್ರಯೋಜನಕ್ಕೂ ಬಂದಿಲ್ಲ ಎಂಬುದು ಉದ್ಯಮಿಗಳ ನೋವು. ಈಗ ಕೆಎಲ್‌ಇ ಆಸ್ಪತ್ರೆ ಬಳಿ ಇರುವ ಜಾಗ ಐಟಿ ಪಾರ್ಕ್‌ಗೆ ಹೇಳಿ ಮಾಡಿಸಿದ ಸ್ಥಳ. ಎಲ್ಲದಕ್ಕೂ ಇದು ಅನುಕೂಲ ಆಗಲಿದೆ. ಸಾರಿಗೆ ಮತ್ತಿತರೆ ಸೌಲಭ್ಯಗಳಿಗೆ ಸಂಪರ್ಕದ ಸಮಸ್ಯೆ ಇಲ್ಲ. ನಗರಕ್ಕೆ ಹೊಂದಿಕೊಂಡಿರುವುದರಿಂದ ಯಾವುದಕ್ಕೂ ಪರದಾಡುವ ತಾಪತ್ರಯ ಇಲ್ಲ. ಆದರೆ ಈ ಜಾಗ ಬಿಟ್ಟು ಕೊಡಲು ಕೇಂದ್ರ ರಕ್ಷಣಾ ಇಲಾಖೆ ಮನಸ್ಸು ಮಾಡಬೇಕಷ್ಟೆ.

ಟಾಪ್ ನ್ಯೂಸ್

1——asdsad

IPL ರೋಚಕ ಪಂದ್ಯ:ರಾಜಸ್ಥಾನ್‌ ವಿರುದ್ಧ ಹೈದರಾಬಾದ್ ಗೆ 1 ರನ್ ಜಯ

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

1-wewqewqe

BJP; ಭಾರತ ವಿಶ್ವ ಮಟ್ಟದಲ್ಲಿ ಮಿಂಚಿದ್ದು ಮೋದಿ ಅಭಿವೃದ್ಧಿಯಿಂದ: ಅಣ್ಣಾಮಲೈ

1-asdsad

Farmers ಸಂಪೂರ್ಣ ಸಾಲ ಮನ್ನಾ ಮಾಡದಿದ್ದರೆ ಬೀದಿಗಿಳಿದು ಹೋರಾಟ:ಯಡಿಯೂರಪ್ಪ

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

MP D.K. Suresh: ದೇವೇಗೌಡರ ಕುಟುಂಬವನ್ನು 420 ಎಂದು ಕರೆಯಲ್ಲ: ಡಿಕೆಸು

MP D.K. Suresh: ದೇವೇಗೌಡರ ಕುಟುಂಬವನ್ನು 420 ಎಂದು ಕರೆಯಲ್ಲ: ಡಿಕೆಸು

China: ಭಾರೀ ಮಳೆಗೆ ಕುಸಿದ ಹೈವೇ: ಚೀನಾದಲ್ಲಿ ಕನಿಷ್ಠ 48 ಸಾವು

China: ಭಾರೀ ಮಳೆಗೆ ಕುಸಿದ ಹೈವೇ: ಚೀನಾದಲ್ಲಿ ಕನಿಷ್ಠ 48 ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Prajwal Revanna: ಪ್ರಜ್ವಲ್‌ ಶೀಘ್ರ ಬಂಧನ: ಡಾ| ಜಿ. ಪರಮೇಶ್ವರ್‌

Prajwal Revanna: ಪ್ರಜ್ವಲ್‌ ಶೀಘ್ರ ಬಂಧನ: ಡಾ| ಜಿ. ಪರಮೇಶ್ವರ್‌

1-wwqewqe

Yallapur;ಚುನಾವಣ ಸಿಬಂದಿಗಳ ತರಬೇತಿಯಲ್ಲಿ ಗದ್ದಲದ ವಾತಾವರಣ

1-wewqewqe

BJP; ಭಾರತ ವಿಶ್ವ ಮಟ್ಟದಲ್ಲಿ ಮಿಂಚಿದ್ದು ಮೋದಿ ಅಭಿವೃದ್ಧಿಯಿಂದ: ಅಣ್ಣಾಮಲೈ

1-asdsad

Farmers ಸಂಪೂರ್ಣ ಸಾಲ ಮನ್ನಾ ಮಾಡದಿದ್ದರೆ ಬೀದಿಗಿಳಿದು ಹೋರಾಟ:ಯಡಿಯೂರಪ್ಪ

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

35

Siddaramaiah: ಚುನಾವಣೆ ಬಂದಾಗ ಮೋದಿಗೆ ರಾಜ್ಯದ ನೆನಪು; ಸಿದ್ದು

1——asdsad

IPL ರೋಚಕ ಪಂದ್ಯ:ರಾಜಸ್ಥಾನ್‌ ವಿರುದ್ಧ ಹೈದರಾಬಾದ್ ಗೆ 1 ರನ್ ಜಯ

Prajwal Revanna: ಪ್ರಜ್ವಲ್‌ ಶೀಘ್ರ ಬಂಧನ: ಡಾ| ಜಿ. ಪರಮೇಶ್ವರ್‌

Prajwal Revanna: ಪ್ರಜ್ವಲ್‌ ಶೀಘ್ರ ಬಂಧನ: ಡಾ| ಜಿ. ಪರಮೇಶ್ವರ್‌

Protest: ಪ್ರಜ್ವಲ್‌, ರೇವಣ್ಣ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

Protest: ಪ್ರಜ್ವಲ್‌, ರೇವಣ್ಣ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

Rahul Gandhi: ಜನಗಣತಿಯಿಂದಲೇ ಅಸಲಿ ರಾಜಕೀಯ ಶುರು: ರಾಹುಲ್‌

Rahul Gandhi: ಜನಗಣತಿಯಿಂದಲೇ ಅಸಲಿ ರಾಜಕೀಯ ಶುರು: ರಾಹುಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.