MP D.K. Suresh: ದೇವೇಗೌಡರ ಕುಟುಂಬವನ್ನು 420 ಎಂದು ಕರೆಯಲ್ಲ: ಡಿಕೆಸು
Team Udayavani, May 2, 2024, 9:30 PM IST
ಬೆಂಗಳೂರು: “ಮಾಜಿ ಪ್ರಧಾನಿಗಳ ಕುಟುಂಬವನ್ನು 420 ಎಂದು ನಾನು ಕರೆಯುವುದಿಲ್ಲ. ಅವರ ಅಭಿಮಾನಿಗಳಿಗೆ ಬೇಸರವಾಗುತ್ತದೆ. ಪೆನ್ಡ್ರೈವ್ ಈ ಕುಟುಂಬದ ಆಸ್ತಿ, ತೆನೆಹೊತ್ತ ಮಹಿಳೆ ಈಗ ಪೆನ್ ಡ್ರೈವ್ ಹೊರುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದ್ದಕ್ಕೆ ಜನ ಹಾಡಿ, ಹೊಗಳುತ್ತಿದ್ದಾರೆ’ ಎಂದು ಸಂಸದ ಡಿ.ಕೆ. ಸುರೇಶ್ ಲೇವಡಿ ಮಾಡಿದರು.
ಸದಾಶಿವನಗರದ ನಿವಾಸದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಪ್ರಧಾನಿಗಳ ಕುಟುಂಬವನ್ನ ಇಡೀ ಪ್ರಪಂಚ ಕೊಂಡಾಡುತ್ತಿದೆ, ಹೊಗಳುತ್ತಿದೆ. ಜನರು ಹೇಳಿದ ಮಾತನ್ನು ನಾನು ಹೇಳುತ್ತಿದ್ದೇನೆ. ಅವರ ಮನಸ್ಸಿಗೆ ಸಮಾಧಾನವಾಗುತ್ತದೆ ಎಂದರೆ ನಾಲ್ಕು ಮಾತು ನಮ್ಮನ್ನು ಬೈದುಕೊಳ್ಳಲಿ ಎಂದರು.
ಮೋದಿ ಅವರು ಕರ್ನಾಟಕದ ಬೇರೆ, ಬೇರೆ ವಿಚಾರಗಳನ್ನು ತೆಗೆದುಕೊಂಡು ರಾಜ್ಯದ ಮಾನ ಹರಾಜು ಹಾಕುತ್ತಾರೆ. ಆದರೆ, ಈ ವಿಚಾರದ ಕುರಿತು ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು. “ನನ್ನನ್ನು ಕೆಣಕಿದ್ದಾರೆ ನಾನು ಸುಮ್ಮನೆ ಇರುವುದಿಲ್ಲ’ ಎನ್ನುವ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಕೇಳಿದಾಗ ಅವರಿಗೆ ದೇವರು ಒಳ್ಳೆಯದು ಮಾಡಲಿ. ನಾವೆಲ್ಲಿ ಕೆಣಕಿದ್ದೇವೆ, ಅವರ ಮೈತ್ರಿ ಪಕ್ಷದವರೇ ಅವರನ್ನು ಕೆಣಕಿರುವುದು, ಅವರಿಂದಲೇ ಎಲ್ಲಾ ಬಿಡುಗಡೆಯಾಗಿರುವುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಎಸೆಸೆಲ್ಸಿ ಪಾಠಕ್ಕೆ ತ್ರಿವಳಿ ಪರೀಕ್ಷೆ ಅಡ್ಡಿ !
ನಾನು 100 ಕೋ.ರೂ. ಆಮಿಷ ಒಡ್ಡಿದ್ದರೆ ಲೋಕಾಯುಕ್ತಕ್ಕೆ ದೂರು ಕೊಡಿ: ಡಿಕೆಶಿ ಸವಾಲು
Siddaramaiah ಸರಕಾರಕ್ಕೆ ನಾಳೆಗೆ 1ವರ್ಷ; ಸಂಭ್ರಮಾಚರಣೆಗೆ ಚುನಾವಣೆ ನೀತಿ ಸಂಹಿತೆ ಅಡ್ಡಿ
Prajwal Revanna ಪತ್ತೆಗೆ ವಿತ್ತ ಅಸ್ತ್ರ ! ಬ್ಯಾಂಕ್ ವ್ಯವಹಾರ ಪರಿಶೀಲನೆ
Eshwara Khandre 5 ಕೋಟಿ ಸಸಿಗಳ ಪೈಕಿ ಎಷ್ಟು ಬದುಕಿವೆ? ವರದಿ ಕೊಡಿ
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Udupi ಗೀತಾಂಜಲಿ ಸಿಲ್ಕ್, ಶಾಂತಿಸಾಗರ್ ಹೊಟೇಲ್ ಸಂಸ್ಥಾಪಕ ನೀರೆ ಬೈಲೂರು ಗೋವಿಂದ ನಾಯಕ್ ನಿಧನ
Vijayapura ಎಪಿಎಂಸಿ ಮಾರುಕಟ್ಟೆಯಲ್ಲಿ ಯುವಕನ ಹತ್ಯೆ; ಆಪ್ತರ ಮೇಲೆ ಶಂಕೆ
Jammu and Kashmir ಉಗ್ರ ದಾಳಿ; ಮಾಜಿ ಸರಪಂಚ್ ಸಾವು, ಇಬ್ಬರು ಪ್ರವಾಸಿಗರಿಗೆ ಗಾಯ
Man of the match ಪ್ರಶಸ್ತಿ ಸಿಗಬೇಕಾಗಿದ್ದು ನನಗಲ್ಲ…: ಫಾಫ್ ಡುಪ್ಲೆಸಿಸ್ ಹೀಗಂದಿದ್ಯಾಕೆ?
ಕೆರೆ ಅಭಿವೃದ್ಧಿಗೆ ಒಮ್ಮೆಯೂ ತಲೆ ಎತ್ತಿ ನೋಡದ ಇಲಾಖೆ; ಆಟದ ಮೈದಾನದಂತಾದ ಬಾವದಕೆರೆ