ಬೈಕ್‌ ಕಳ್ಳನಿಂದ ಯುಟ್ಯೂಬ್‌, ಆಲ್ಬಂ ಸಾಂಗ್ಸ್‌ ನಿರ್ಮಾಣ!


Team Udayavani, Jul 29, 2021, 11:28 PM IST

ಬೈಕ್‌ ಕಳ್ಳನಿಂದ ಯುಟ್ಯೂಬ್‌, ಆಲ್ಬಂ ಸಾಂಗ್ಸ್‌ ನಿರ್ಮಾಣ!

ಬೆಂಗಳೂರು: ವಿಮಾನದಲ್ಲಿ ಬಂದು ಬೆಂಗಳೂರಿನಲ್ಲಿ ದುಬಾರಿ ಮೌಲ್ಯದ ದ್ವಿಚಕ್ರ ವಾಹನಗಳನ್ನು ಕದ್ದು ಮಾರಾಟ ಮಾಡಿ, ಅದರಿಂದ ಬಂದ ಹಣದಲ್ಲಿ ಯುಟ್ಯೂಬ್‌ ಚಾನೆಲ್‌ ಹಾಗೂ ಆಲ್ಪಂ ಸಾಂಗ್ಸ್‌ ತಯಾರಿಸುತ್ತಿದ್ದ ರಾಜಸ್ಥಾನದ ಯುಟ್ಯೂಬ್‌ ಹೀರೋ ಸೇರಿ ಮೂವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.

ರಾಜಸ್ಥಾನ ಮೂಲದ ವಿಕಾಸ್‌ ಕುಮಾರ್‌ ಅಲಿಯಾಸ್‌ ವಿಕ್ಕಿ ಬಿಶೋನಾಯ್‌ (26), ಧವಳ್‌ ದಾಸ್‌(28) ಮತ್ತು ದಶರಥ (30) ಬಂಧಿತರು. ಅವರಿಂದ 32,70 ಲ. ರೂ. ಮೌಲ್ಯದ ದುಬಾರಿ ಮೌಲ್ಯದ ಕೆಟಿಎಂ, ಬುಲೆಟ್‌, ಪಲ್ಸರ್‌ ಸೇರಿ ವಿವಿಧ ಮಾದರಿಯ 26 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಗಳ ಪೈಕಿ ವಿಕಾಸ್‌ ಕುಮಾರ್‌ 3 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಮೆಕ್ಯಾನಿಕ್‌ ಆಗಿದ್ದ. ಬಳಿಕ ಕೊರೊನಾ ಕಾರಣದಿಂದ ರಾಜಸ್ಥಾನಕ್ಕೆ ಹೋಗಿ ಸಣ್ಣಪುಟ್ಟ  ಕೆಲಸ ಮಾಡಿಕೊಂಡಿದ್ದ. ಧವಳದಾಸ್‌ ಮತ್ತು ದಶರಥ ಹಾರ್ಡ್‌ವೇರ್‌ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದರು. ವಿಕಾಸ್‌ ಕುಮಾರ್‌ ಮೆಕ್ಯಾನಿಕ್‌ ಆಗಿದ್ದರಿಂದ ಬೈಕ್‌ ಕಳವು ಮಾಡುವಂತೆ  ಸ್ನೇಹಿತರನ್ನು ಪ್ರಚೋದಿಸುತ್ತಿದ್ದ. ವಿಕಾಸ್‌ ಕುಮಾರ್‌ ರಾಜಸ್ಥಾನದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾನೆ. ಬೈಕ್‌ ಕಳವಿಗಾಗಿ ರಾಜಸ್ಥಾನದಿಂದ ಬೆಂಗಳೂರಿಗೆ ವಿಮಾನದಲ್ಲಿ ಬರುತ್ತಿದ್ದ ಎಂದು ವಿಜಯನಗರ ಉಪವಿಭಾಗದ ಎಸಿಪಿ ನಂಜುಂಡೇ ಗೌಡ ತಿಳಿಸಿದ್ದಾರೆ.

ರಾಜಸ್ಥಾನಕ್ಕೆ ಕೊಂಡೊಯ್ಯುತ್ತಿದ್ದ!: ನಕಲಿ ದಾಖಲೆ ಹಾಗೂ ನಂಬರ್‌ ಪ್ಲೇಟ್‌ ಹಾಕಿಕೊಂಡು ಕೆಟಿಎಂ, ಬುಲೆಟ್‌ಗಳನ್ನು ವಿಕಾಸ್‌ ಕುಮಾರ್‌ ರಾಜಸ್ಥಾನಕ್ಕೆ  ಕೊಂಡೊಯ್ದು ಅಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದರು.

ಯುಟ್ಯೂಬ್ ಚಾನಲ್ ನಿರ್ಮಾಣ!:

ವಿಕಾಸ್‌ ಕುಮಾರ್‌  ವಿಕ್ಕಿ ಬಿಶೋನಾಯ್‌ ಎಂಬ ಯುಟ್ಯೂಬ್‌ ಚಾನೆಲ್‌ ನಿರ್ಮಾಣ ಮಾಡಿದ್ದಾನೆ. ಪ್ರೇಯಸಿ ಜತೆ ಸೇರಿಕೊಂಡು 2-3 ಆಲ್ಬಂ ಸಾಂಗ್‌ಗಳನ್ನು ನಿರ್ಮಾಣ ಮಾಡಿ, ಹಣ ಸಂಪಾದಿಸುತ್ತಿದ್ದ. ಜತೆಗೆ ಇನ್‌ಸ್ಟ್ರಾಗಾಮ್‌ನಲ್ಲಿ ಸಾವಿರಾರು ಮಂದಿ ಅಭಿಮಾನಿಗಳನ್ನು ಹೊಂದಿರುವುದು ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದರು.

ಟಾಪ್ ನ್ಯೂಸ್

Vitla: ಚಲಿಸುತ್ತಿದ್ದ ಬಸ್ಸಿನ ಗಾಜು ಹೊಡೆದು ಮೂವರಿಗೆ ಗಾಯ

Vitla: ಚಲಿಸುತ್ತಿದ್ದ ಬಸ್ಸಿನ ಗಾಜು ಹೊಡೆದು ಮೂವರಿಗೆ ಗಾಯ

1-qweqwqew

Congress ಪಕ್ಷವನ್ನು ಎರಡನೇ ಬಾರಿ ತೊರೆದ ಲವ್ಲಿ; ಮತ್ತೆ ಬಿಜೆಪಿ ಸೇರ್ಪಡೆ

Why Modi doesn’t talk about ladies now: Priyanka Gandhi

Davanagere; ಮೋದಿ ಯಾಕೆ ಬಲಾತ್ಕಾರಕ್ಕೊಳಗಾದ ಮಹಿಳೆಯರ ಬಗ್ಗೆ ಮಾತನಾಡಲ್ಲ: ಪ್ರಿಯಾಂಕಾ ಗಾಂಧಿ

1-wewqewewq

H.D. Revanna ಬಂಧಿಸಿದ ಎಸ್ ಐಟಿ; ನಿರೀಕ್ಷಣಾ ಜಾಮೀನು ನಿರಾಕರಿಸಿದ ಕೋರ್ಟ್

1-qwweqwewq

Tirunelveli; ನಾಪತ್ತೆಯಾಗಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷನ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆ

POCSO Case: 9ನೇ ತರಗತಿ ಬಾಲಕಿಗೆ ಅಶ್ಲೀಲ ವಿಡಿಯೋ ತೋರಿಸಿದ ಶಿಕ್ಷಕ; ಪೋಕ್ಸೋ ಕೇಸ್‌ ದಾಖಲು

POCSO Case: 9ನೇ ತರಗತಿ ಬಾಲಕಿಗೆ ಅಶ್ಲೀಲ ವಿಡಿಯೋ ತೋರಿಸಿದ ಶಿಕ್ಷಕ; ಪೋಕ್ಸೋ ಕೇಸ್‌ ದಾಖಲು

Priyanka Gandhi Slams PM Modi in Banaskantha Rally

ರಾಹುಲ್ ಸಾಮಾನ್ಯ ಜನರ ಕಷ್ಟ ಕೇಳಿದ್ದಾರೆ, ಆದರೆ ಮೋದಿ ಅರಮನೆಯಲ್ಲಿ ಕುಳಿತಿದ್ದಾರೆ:ಪ್ರಿಯಾಂಕಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Why Modi doesn’t talk about ladies now: Priyanka Gandhi

Davanagere; ಮೋದಿ ಯಾಕೆ ಬಲಾತ್ಕಾರಕ್ಕೊಳಗಾದ ಮಹಿಳೆಯರ ಬಗ್ಗೆ ಮಾತನಾಡಲ್ಲ: ಪ್ರಿಯಾಂಕಾ ಗಾಂಧಿ

1-wewqewewq

H.D. Revanna ಬಂಧಿಸಿದ ಎಸ್ ಐಟಿ; ನಿರೀಕ್ಷಣಾ ಜಾಮೀನು ನಿರಾಕರಿಸಿದ ಕೋರ್ಟ್

Prajwal R case: ಪ್ರಜ್ವಲ್‌ ವಿರುದ್ಧ ಬ್ಲೂ ಕಾರ್ನರ್‌ ನೋಟಿಸ್‌ ಜಾರಿಗೆ SIT ಮನವಿ: ಏನಿದು?

Prajwal R case: ಪ್ರಜ್ವಲ್‌ ವಿರುದ್ಧ ಬ್ಲೂ ಕಾರ್ನರ್‌ ನೋಟಿಸ್‌ ಜಾರಿಗೆ SIT ಮನವಿ: ಏನಿದು?

ಶಿವರಾಮೇಗೌಡ

Pendrive; ಪ್ರಜ್ವಲ್ ದೌರ್ಜನ್ಯ ಮಾಡುವಾಗ ಅಪ್ಪ,ಅಮ್ಮ ಕತ್ತೆ ಕಾಯುತ್ತಿದ್ದರೆ..: ಶಿವರಾಮೇಗೌಡ

mangalore international airport

Mangaluru; ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಪೋಟ ಬೆದರಿಕೆ; ಪೊಲೀಸ್ ಭದ್ರತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Vitla: ಚಲಿಸುತ್ತಿದ್ದ ಬಸ್ಸಿನ ಗಾಜು ಹೊಡೆದು ಮೂವರಿಗೆ ಗಾಯ

Vitla: ಚಲಿಸುತ್ತಿದ್ದ ಬಸ್ಸಿನ ಗಾಜು ಹೊಡೆದು ಮೂವರಿಗೆ ಗಾಯ

1-qweqwqew

Congress ಪಕ್ಷವನ್ನು ಎರಡನೇ ಬಾರಿ ತೊರೆದ ಲವ್ಲಿ; ಮತ್ತೆ ಬಿಜೆಪಿ ಸೇರ್ಪಡೆ

Why Modi doesn’t talk about ladies now: Priyanka Gandhi

Davanagere; ಮೋದಿ ಯಾಕೆ ಬಲಾತ್ಕಾರಕ್ಕೊಳಗಾದ ಮಹಿಳೆಯರ ಬಗ್ಗೆ ಮಾತನಾಡಲ್ಲ: ಪ್ರಿಯಾಂಕಾ ಗಾಂಧಿ

kejriwal 2

AAP ಚುನಾವಣ ಪ್ರಚಾರ ಹಾಡನ್ನು ಅನುಮೋದಿಸಿದ ಆಯೋಗ; ಕೆಲ ಮಾರ್ಪಾಡು

1-wewqewewq

H.D. Revanna ಬಂಧಿಸಿದ ಎಸ್ ಐಟಿ; ನಿರೀಕ್ಷಣಾ ಜಾಮೀನು ನಿರಾಕರಿಸಿದ ಕೋರ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.