ಕಾಶ್ಮೀರ, ಲಡಾಖ್ ಪ್ರತಿಭೆಗಳಿಗೆ ಉಚಿತ ಶಿಕ್ಷಣ
ಆರ್ಮಿ ವೆಲ್ಫೇರ್ ಸೊಸೈಟಿಯಿಂದ ಆಪರೇಷನ್ ಸದ್ಭಾವನಾ ಯೋಜನೆ
Team Udayavani, Aug 21, 2021, 10:30 PM IST
ನವದೆಹಲಿ: ದೇಶದ ಹಲವೆಡೆ ಇರುವ ಆರ್ಮಿ ವೆಲ್ಫೇರ್ ಸೊಸೈಟಿ (ಎಡಬ್ಲ್ಯೂಇಎಸ್) ಶಾಲೆಗಳು ಹಾಗೂ ಪದವಿ ಹಂತದ ವಿದ್ಯಾಸಂಸ್ಥೆ ಗಳಲ್ಲಿ ಕಲಿಯುತ್ತಿರುವ, ಜಮ್ಮು ಕಾಶ್ಮೀರ ಹಾಗೂ ಲಡಾಖ್ಗೆ ಸೇರಿದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಖರ್ಚು ವೆಚ್ಚವನ್ನು ತಾನೇ ಭರಿಸುವುದಾಗಿ ಎಡಬ್ಲ್ಯೂಇಎಸ್ ತಿಳಿಸಿದೆ. “ಆಪರೇಷನ್ ಸದ್ಭಾವನಾ ಯೋಜನೆ’ಯಡಿ ಇದು ಅನುಷ್ಠಾನಕ್ಕೆ ಬರಲಿದೆ.
ಪ್ರೌಢಶಿಕ್ಷಣದಲ್ಲಿ 100 ಮಂದಿಗೆ ಅವಕಾಶ
8 ಮತ್ತು 9ನೇ ತರಗತಿಗಳಲ್ಲಿ ಕಲಿಯುತ್ತಿರುವ 100 ಬಾಲಕ, ಬಾಲಕಿಯರಿಗೆ ಪ್ರಾಯೋಜಕತ್ವದ ಅವಕಾಶ ಸಿಗಲಿದೆ. ಈ ಎರಡೂ ತರಗತಿ ಗಳಿಂದ ತಲಾ 50 ಪ್ರತಿಭಾನ್ವಿತರಿಗೆ ಈ ಅವಕಾಶ ಸಿಗಲಿದೆ. 2022-23ರಿಂದ ಈ ಯೋಜನೆ ಅನುಷ್ಠಾನಗೊಳ್ಳಲಿದ್ದು, ಧುಲೌ ಕೌನ್ (ದೆಹಲಿ), ನೊಯ್ಡಾ (ಉತ್ತರ ಪ್ರದೇಶ) ಹಾಗೂ ದಗ್ಶಾಯ್ನಲ್ಲಿರುವ (ಹಿಮಾಚಲ ಪ್ರದೇಶ) ಆರ್ಮಿ ಪಬ್ಲಿಕ್ ಶಾಲೆಗಳಲ್ಲಿ ಪ್ರಾಯೋಜಕತ್ವದ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡಲಾಗುತ್ತದೆ.
ಇದನ್ನೂ ಓದಿ:ಉಡುಪಿ : ಸಾಲ ನೀಡುವುದಾಗಿ ನಂಬಿಸಿ ವೈದ್ಯಾಧಿಕಾರಿಗೆ 67,650 ರೂ. ವಂಚನೆ
ಪದವಿಯಲ್ಲಿ ಆರು ಮಂದಿಗೆ ಅವಕಾಶ
ಹೋಟೆಲ್ ಮ್ಯಾನೇಜ್ಮೆಂಟ್ ಆ್ಯಂಡ್ ಕೇಟರಿಂಗ್ ಮತ್ತು ಆರ್ಮಿ ಇನ್ಸ್ಟಿಟ್ಯೂಟ್ ಆಫ್ ಫ್ಯಾಶನ್ ಡಿಸೈನ್, ಗುವಾಹಟಿ, ಜಲಂಧರ್ನಲ್ಲಿರುವ ಆರ್ಮಿ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್, ಆರ್ಮಿ ಕಾಲೇಜ್ ಆಫ್ ನರ್ಸಿಂಗ್ನಲ್ಲಿ ಈ ಯೋಜನೆ 2021-22ರ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರಲಿದೆ. ಈ ಎಲ್ಲಾ ಕಾಲೇಜುಗಳಲ್ಲಿ ತಲಾ ಇಬ್ಬರಿಗೆ ಇಂಥ ಅವಕಾಶ ಸಿಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
MUST WATCH
ಹೊಸ ಸೇರ್ಪಡೆ
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!
LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ
Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ
Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು