ಕಾಬೂಲ್ನಲ್ಲಿ ಮತ್ತೆ ಭಾರೀ ಸ್ಫೋಟ
Team Udayavani, Aug 30, 2021, 7:30 AM IST
ಕಾಬೂಲ್: ಸರಣಿ ಬಾಂಬ್ ಸ್ಫೋಟವು 180ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದ ಮೂರೇ ದಿನಗಳಲ್ಲಿ ಅಫ್ಘಾನ್ ಮತ್ತೂಮ್ಮೆ ಬೆಚ್ಚಿಬಿದ್ದಿದೆ. ರವಿವಾರ ಸಂಜೆ ಕಾಬೂಲ್ ವಿಮಾನ ನಿಲ್ದಾಣದ ಬಳಿ ಮತ್ತೂಂದು ಸ್ಫೋಟ ಸಂಭವಿಸಿದ್ದು, ನಾಲ್ವರು ಮಕ್ಕಳ ಸಹಿತ 6 ಮಂದಿ ಅಸುನೀಗಿದ್ದಾರೆ. ಈ ಸ್ಫೋಟದ ಹಿಂದೆಯೂ ಐಸಿಸ್-ಕೆ ಉಗ್ರ ಸಂಘಟನೆಯ ಕೈವಾಡವಿರುವ ಶಂಕೆಯಿದೆ.
ಇದರ ಬೆನ್ನಲ್ಲೇ ನಡೆಯಲಿದ್ದ ಇನ್ನೊಂದು ಭೀಕರ ಆತ್ಮಾಹುತಿ ದಾಳಿಯನ್ನು ತಡೆಯುವಲ್ಲಿ ಅಮೆರಿಕದ ಪಡೆ ಯಶಸ್ವಿಯಾಗಿದೆ. 6 ಆತ್ಮಾಹುತಿ ದಾಳಿಕೋರರು ಮತ್ತು ಭಾರೀ ಪ್ರಮಾಣದ ಸ್ಫೋಟಕ ಹೊತ್ತು ವಿಮಾನ ನಿಲ್ದಾಣದ ಕಡೆಗೆ ಬರುತ್ತಿದ್ದ ವಾಹನದ ಮೇಲೆ ಅಮೆರಿಕವು ಪೈಲಟ್ ರಹಿತ ವಾಯುದಾಳಿ ನಡೆಸಿದೆ. ಅಮೆರಿಕದ ಸೈನಿಕ ರನ್ನು ಗುರಿಯಾಗಿಸಿ ದಾಳಿ ಉಗ್ರರ ಸಂಚಾಗಿತ್ತು.
ಮತ್ತೂಂದು ದಾಳಿ ಸಂಭವಿಸುವ ಸಾಧ್ಯತೆಯಿದೆ ಎಂದು ಅಮೆರಿಕದ ಅಧ್ಯಕ್ಷ ಬೈಡೆನ್ ಎಚ್ಚರಿಕೆ ನೀಡಿದ ಬೆನ್ನಲ್ಲೇ ಈ ಬೆಳವಣಿಗೆಗಳು ನಡೆದಿವೆ.
ಕಟ್ಟಡಕ್ಕೆ ಅಪ್ಪಳಿಸಿದ ರಾಕೆಟ್ :
ರವಿವಾರ ಸಂಜೆ ವೇಳೆಗೆ ವಿಮಾನ ನಿಲ್ದಾಣಕ್ಕೆ ಸಮೀಪದ ಕಟ್ಟಡವೊಂದರ ಮೇಲೆ ರಾಕೆಟ್ ಅಪ್ಪಳಿಸಿದೆ. ಸ್ಫೋಟದ ತೀವ್ರತೆಯಿಂದ ವಿಮಾನ ನಿಲ್ದಾಣದ ಸುತ್ತಲೂ ದಟ್ಟ ಹೊಗೆ ಆವರಿಸಿತ್ತು. ದಾಳಿಯಲ್ಲಿ ನಾಲ್ವರು ಮಕ್ಕಳ ಸಹಿತ 6 ಮಂದಿ ಸಾವಿಗೀಡಾಗಿದ್ದು, ಹಲವರು ಗಾಯಗೊಂಡಿದ್ದಾರೆ.
ಗಡಿಯಲ್ಲಿ ಗುಂಡಿನ ಚಕಮಕಿ:
ಅಫ್ಘಾನ್ ಮತ್ತು ಪಾಕ್ ಗಡಿಯಲ್ಲಿ ರವಿವಾರ ರಾತ್ರಿ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಪಾಕಿಸ್ಥಾನದ ಇಬ್ಬರು ಸೈನಿಕರು ಮೃತಪಟ್ಟಿದ್ದಾರೆ. ಮೂವರು ಉಗ್ರರನ್ನು ಹತ್ಯೆಗೈದಿರುವುದಾಗಿ ಪಾಕ್ ಸೇನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
27 ವರ್ಷಗಳ ಹಿಂದೆ ನಾಪತ್ತೆಯಾದವ ನೆರೆಮನೆಯ ನೆಲಮಾಳಿಗೆಯಲ್ಲಿ ಪತ್ತೆ!!: ವಿಡಿಯೋ ವೈರಲ್
Viral Video: ಭಾರತ ಚಂದ್ರನ ಮೇಲೆ ಕಾಲಿಟ್ಟಿದೆ; ಆದರೆ ನಾವು….: ಪಾಕ್ ನಾಯಕನ ಮಾತು
Slovak PM: ದುಷ್ಕರ್ಮಿಯಿಂದ ಸ್ಲೊವಾಕ್ ಪ್ರಧಾನಿ ರಾಬರ್ಟ್ ಮೇಲೆ ಗುಂಡಿನ ದಾಳಿ…
London: ಭಾರತೀಯ ಮೂಲದ ಮಹಿಳೆಗೆ ಬಸ್ ನಿಲ್ದಾಣದಲ್ಲಿ ಚೂರಿ ಇರಿದು ಹತ್ಯೆ
Rafah; ಇಸ್ರೇಲ್ ಗೆ 1 ಬಿಲಿಯನ್ ಡಾಲರ್ ನ ಶಸ್ತ್ರಾಸ್ತ್ರ ಕಳುಹಿಸುತ್ತಿರುವ ಅಮೆರಿಕ
MUST WATCH
ಹೊಸ ಸೇರ್ಪಡೆ
Mistake; ಮಗುವಿನ ಬೆರಳಿಗೆ ಶಸ್ತ್ರಚಿಕಿತ್ಸೆ ಬೇಕಿತ್ತು: ವೈದ್ಯರು ಮಾಡಿದ್ದು ನಾಲಗೆಗೆ!
J’khand; ಬಂಧಿತ ಸಚಿವ ಅಲಂಗೀರ್ ಆಲಂ 6 ದಿನಗಳ ಕಾಲ ಇಡಿ ಕಸ್ಟಡಿಗೆ
Naveen Patnaik ಅವರಿಗೆ ಬೀಳ್ಕೊಡುಗೆ ನೀಡಲು ಒಡಿಶಾ ಜನ ಸಜ್ಜು: ಜೆ.ಪಿ.ನಡ್ಡಾ
Money Laundering Case; ಇಡಿ ಸುಮ್ಮನೆ ಬಂಧಿಸುವಂತಿಲ್ಲ..: ಮಹತ್ವದ ತೀರ್ಪು ನೀಡಿದ ಸುಪ್ರೀಂ
ಬರಲಿದೆ ಮತ್ತೊಂದು ಸ್ಕ್ಯಾಮ್ ಸಿರೀಸ್: ʼಸ್ಕ್ಯಾಮ್ 2010: ಸುಬ್ರತಾ ರಾಯ್ʼ ಅನೌನ್ಸ್