ತೈಲಗೆರೆಯಲ್ಲಿ ಅಕ್ರಮ ಗಣಿಗಾರಿಕೆ: ಆಕ್ರೋಶ

ಗಣಿಗಾರಿಕೆ ಪ್ರದೇಶಕ್ಕೆ ಅಧಿಕಾರಿಗಳ ದೌಡು; ಅಧಿಕಾರಿಗಳ ಬಳಿ ದೂರು ನೀಡಿದ ಗ್ರಾಮಸ್ಥರು

Team Udayavani, Sep 2, 2021, 3:33 PM IST

ತೈಲಗೆರೆಯಲ್ಲಿ ಅಕ್ರಮ ಗಣಿಗಾರಿಕೆ: ಆಕ್ರೋಶ

ದೇವನಹಳ್ಳಿ: ಗಣಿಗಾರಿಕೆ ನಡೆಯುವ ಪ್ರದೇಶಕ್ಕೆ ಸ್ಥಳೀಯರು ಮತ್ತು ರೈತರು ಏಕಾಏಕೀ ಮುತ್ತಿಗೆ ಹಾಕಿ ಗಣಿಗಾರಿಕೆ ನಡೆಸದಂತೆ ಎಚ್ಚರಿಕೆ ನೀಡಿದರು.

ಗಣಿ ಅಧಿಕಾರಿಗಳ ಭೇಟಿ: ತೈಲಗೆರೆ ಗ್ರಾಮದ ಸರ್ವೇ ನಂ.110ರಲ್ಲಿ ನಡೆಯುತ್ತಿದ್ದ ಗಣಿ ಗಾರಿಕೆ ಖಂಡಿಸಿ ರೈತರು ಪ್ರತಿಭಟನೆ ತೀವ್ರ ಗೊಳಿಸುತ್ತಿದ್ದಂತೆ ಸ್ಥಳಕ್ಕೆ ತಾಲೂಕಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಆಡಳಿತ ಉಪನಿರ್ದೇಶಕಿ ಡಾ.ಲಕ್ಷ್ಮಮ್ಮ ಭೇಟಿ ನೀಡಿ ಗಣಿಗಾರಿಕೆ ಪ್ರದೇಶದ ಸ್ಥಳ ಪರಿಶೀಲಿಸಿದರು.

ಗಣಿಗಾರಿಕೆ ವಿರುದ್ಧ ಕಿಡಿ: ತಾಲೂಕಿನ ಸುತ್ತಮುತ್ತ ಇರುವ ಗ್ರಾಮಗಳಲ್ಲಿ ರೈತರು ಬೆಳೆದ ಬೆಳೆಗಳಿಗೆ ಧೂಳು, ಅಂತರ್ಜಲ ಕೊರತೆ ಹೀಗೆಹಲವು ರೀತಿಯ ತೊಂದರೆಯಾಗುತ್ತಿದೆ. ಇದರಿಂದ ನಷ್ಟವನ್ನು ಅನು ಭವಿಸುತ್ತಿದ್ದೇವೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಗಣಿಗಾರಿಕೆ ನಡೆಸಬಾರದು ಎಂದು ಅಧಿಕಾರಿಗಳಿಗೆ ಒತ್ತಾಯಿಸಿದರು.

ಪೊಲೀಸರ ರಾಜಿ ಸಂಧಾನ: ಕೆಲ ಕಾಲ ರೈತರು ಮತ್ತು ಗಣಿ (ಕ್ರಷರ್‌ ಮಾಲಿಕರು) ಮತ್ತು ಸಿಬ್ಬಂದಿಗಳೊಂದಿಗೆ ಮಾತಿನ ಚಕಮಕಿನಡೆಯಿತು. ಸ್ಥಳಕ್ಕೆವಿಶ್ವನಾಥಪುರ ಪೊಲೀಸರುಮತ್ತುವಿಜಯಪುರ ವೃತ್ತ ನಿರೀಕ್ಷಕ ಟಿ.ಶ್ರೀನಿವಾಸ್‌ ಭೇಟಿ ನೀಡಿ, ಗಣಿಗಾರಿಕೆಗೆಸಂಬಂಧಿಸಿದಂತೆ ಪದೇ ಪದೇ ನಡೆಯುತ್ತಿರುವುದಕ್ಕೆ ತೆರೆ ಎಳೆಯಬೇಕೆಂದು ಸಭೆ ಕರೆಯುವ ಸಲಹೆ ನೀಡಿದರು.

ಇದನ್ನೂ ಓದಿ:ಬೆಲೆ ಏರಿಕೆಯನ್ನು ಸಮರ್ಥನೆ ಮಾಡಿದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್

ದೂರುಗಳ ಸರಮಾಲೆ: ಕಲ್ಲುಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ತಂಡದ ಬಳಿ ಸ್ಥಳೀಯರು ಸಮಸ್ಯೆ ಹೇಳಿಕೊಂಡರು. ಇತ್ತೀಚೆಗೆ ನಂದಿಬೆಟ್ಟದಲ್ಲಿ ಭೂ ಕುಸಿತವಾಗಿದೆ. ತೈಲಗೆರೆ ಮೇಲೆ ಗಣಿಗಾರಿಕೆ ದುಷ್ಪರಿಣಾಮ ಬೀರಿದೆ. ಕಲ್ಲು ಗಣಿಗಾರಿಕೆಯಿಂದ ನಮ್ಮ ಬೆಳೆಗಳು ಹಾನಿಗೀಡಾಗಿದೆ. ಬಂಡೆ ಸಿಡಿಸಲು ಸಿಡಿಮದ್ದು, ಗ್ರಾನೆಡ್‌ ಕಡ್ಡಿಯಂತಹ ಸ್ಫೋಟಕ ಬಳಕೆ ಮಾಡುತ್ತಿದ್ದಾರೆ. ಇದರಿಂದ ಮನೆಗಳು ಬಿರುಕು ಬಿಟ್ಟಿವೆ.ಕಲ್ಲುಗಣಿಗಾರಿಕೆಗೆಅನುಮತಿ ಕೊಡಬಾರದು. ಕಲ್ಲು ಸಾಗಾಣಿಕೆ ಮಾಡುತ್ತಿರುವ ವಾಹನಗಳ ಸಂಚಾರದಿಂದಾಗಿ ಇಲ್ಲಿನ ರಸ್ತೆಗಳು ಹದಗೆಟ್ಟಿವೆ ಎಂದು ಅಧಿಕಾರಿಗಳಿಗೆ ದೂರು ನೀಡಿದರು.

ಈ ವೇಳೆ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕಿ ರೇಣುಕಾ, ಭೂ ವಿಜ್ಞಾನಿಗಳಾದ ವಿಕ್ರಮ್‌, ಮೂರ್ತಿ, ಎಇಇ ರಾಜಶೇಖರ್‌, ತಾಲೂಕು ಸಹಾಯಕಿ ಸವಿತಾ, ವಿಶ್ವನಾಥಪುರ ಠಾಣೆಯ ಪಿಎಸ್‌ಐ ವೆಂಕಟೇಶ್‌, ಚನ್ನರಾಯಪಟ್ಟಣ ಠಾಣೆಯ ಪಿಎಸ್‌ಐ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಿಬ್ಬಂದಿ, ಆರ್‌ಐ ಚಿದಾನಂದ್‌, ಕ್ರಷರ್‌ ಮಾಲಿಕರು,ಸಿಬ್ಬಂದಿ, ರೈತ ಮುಖಂಡರು, ಸ್ಥಳೀಯರು ಇದ್ದರು.

ಅಕ್ರಮ ನಡೆದಿದ್ದರೇ ಕ್ರಮ ಜರುಗಿಸುವೆ
ತೈಲಗೆರೆ ಸರ್ವೆ ನಂಬರ್‌ 110ರಲ್ಲಿ 55 ಎಕರೆ ಪ್ರದೇಶದಲ್ಲಿ 14 ಮಂದಿ ಗಣಿಗಾರಿಕೆ ಗುತ್ತಿಗೆ ಪಡೆದಿದ್ದುಕಾನೂನು ಬದ್ಧವಾಗಿ ಗಣಿಗಾರಿಕೆ ಮಾಡ್ತಿದ್ದಾರೆ. ಗಣಿಗಾರಿಕೆ ಪ್ರದೇಶದ ಸುತ್ತಲು ಫೆನ್ಸಿಂಗ್‌ಅಳವಡಿಸಿ,ನಾಮಫ‌ಲಕಹಾಕಲಾಗಿದೆ.ಗಣಿಗಾರಿಕೆಯಿಂದತೊಂದರೆಯಾಗಿದ್ದರೇ ತಾಂತ್ರಿಕ ವರದಿ ಪಡೆದು ಪರಿಶೀಲಿಸಲಾಗುತ್ತದೆ. ಲೀಸ್‌ನಿಂದ ರಾಜಧನ ಕಳೆದ ವರ್ಷ 11ಕೋಟಿ 50ಲಕ್ಷ , ಈ ವರ್ಷ 2ಕೋಟಿ 70ಲಕ್ಷ ರೂ. ರಾಜಧನ ಹರಿದು ಬಂದಿದೆ. ಡಿಸ್ಟ್ರಿಕ್ಟ್ ಮಿನರಲ್‌ ಫೌಂಡೇಷನ್‌ ಟ್ರಸ್ಟ್‌ ಮೂಲಕ ಪ್ರತಿ ಟನ್‌ಗೆ ಇಂತಿಷ್ಟು ಹಣ ನಿಗದಿ ಮಾಡಲಾಗಿದೆ. ಕಳೆದ ವರ್ಷ 16ಲಕ್ಷ ಈ ವರ್ಷ 5ಲಕ್ಷ ರೂ.ಬಂದಿರುತ್ತದೆ. ಅಕ್ರಮ ಗಣಿಗಾರಿಕೆ ನಡೆಸಿದ್ದರೇ ಕ್ರಮ ಜರುಗಿಸುತ್ತೇವೆ ಎಂದು ಗಣಿ ಮತ್ತು ಭೂ ವಿಜ್ಞಾನ
ಇಲಾಖೆಯ ಆಡಳಿತ ಉಪನಿರ್ದೇಶಕಿ ಡಾ.ಲಕ್ಷ್ಮಮ್ಮ ಹೇಳಿದರು

ಅಕ್ರಮ ಗಣಿಗಾರಿಕೆ ಮಾಡಿಲ್ಲ
ಗಣಿಗಾರಿಕೆಯಲ್ಲಿ ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ಸ್ಫೋಟಕ ಬಳಸಲಾಗುತ್ತಿದೆ. ಇದಕ್ಕೆ ತಾಂತ್ರಿಕ ತಜ್ಞರನ್ನು ನೇಮಿಸಲಾಗಿದೆ. ಸ್ಫೋಟಿಸುವ ಮುನ್ನಾ ಎಲ್ಲ ರೀತಿಯ ಸುರಕ್ಷಾಕ್ರಮ ಅನುಸರಿಸಲಾಗುತ್ತಿದೆ. ಸರ್ಕಾರದಿಂದ ಅಧಿಕೃತವಾಗಿ ಅನುಮತಿ ಪಡೆದುಕೊಂಡು ಮಾಡಲಾಗುತ್ತಿದೆ. ಸ್ಫೋಟಕ ಬಳಕೆಗೆ 4 ವರ್ಷದ ಹಿಂದೆ ಕೇಂದ್ರ ಅನುಮತಿ ನೀಡಿದೆ. ಅಕ್ರಮ ಗಣಿಗಾರಿಕೆ ಮಾಡಿಲ್ಲ. ಎಲ್ಲಾ ದಾಖಲೆ ಇಟ್ಟು ಕೊಂಡೇ ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಕಲ್ಲುಗಣಿಗಾರಿಕೆ ಮತ್ತು ಕ್ರಷರ್‌ ಮಾಲಿಕರ ರಾಜ್ಯ ಘಟಕದ ಕಾರ್ಯದರ್ಶಿ ಕಿರಣ್‌ ಜೈನ್‌ ಸ್ಪಷ್ಟನೆ ನೀಡಿದರು.

ಟಾಪ್ ನ್ಯೂಸ್

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Devanahalli: ಬೇಸಿಗೆ ಬಿಸಿ; ಹುರುಳಿಕಾಯಿ ದರ ದುಬಾರಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

police

Bidar; ಹಣ ಹಂಚುವ ದೂರು: ನಾಗಮಾರಪಳ್ಳಿ‌ ಮನೆಯಲ್ಲಿ ಪರಿಶೀಲನೆ

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.