ಸುರಕ್ಷತೆ ಇಲದ್ಲ ರಾಷ್ಟ್ರೀಯ ಹೆದ್ದಾರಿ 75ರ ತಂಗುದಾಣ

ಮಳೆ ಬಂದರೆ ನೆನೆಯಬೇಕು, ಗಾಳಿ ಬಂದರೆ ಸಹಿಸಿಕೊಳ್ಳಬೇಕು; ನಿಲುಗಡೆ ಒಂದು ಕಡೆಯಾದರೆ ತಂಗುದಾಣ ಮತ್ತೊಂದು ಕಡೆ

Team Udayavani, Sep 3, 2021, 4:18 PM IST

ಸುರಕ್ಷತೆ ಇಲದ್ಲ ರಾಷ್ಟ್ರೀಯ ಹೆದ್ದಾರಿ 75ರ ತಂಗುದಾಣ

ಮುಳಬಾಗಿಲು: ನಗರದ ಅಂಚಿನಿಂದ ಕರ್ನಾಟಕ ಗಡಿ ಭಾಗದವರೆಗೆ ರಾಷ್ಟ್ರೀಯ ಹೆದ್ದಾರಿ 75ರ ವಿವಿಧ ಹಳ್ಳಿಗಳ ಗೇಟ್‌ನಲ್ಲಿ ನಿರ್ಮಿಸಿರುವ ಬಸ್‌ ಶೆಲ್ಟರ್‌ ಗಳು ಜನರ ಉಪಯೋಗಕ್ಕೆ ಬಾರದಂತಾಗಿದೆ.

ಹೆದ್ದಾರಿ ಸಂಪರ್ಕ: ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಹಾಗೂ ಭಾರತ ಸರ್ಕಾರದ ಆದೇಶದ ಅನುಸಾರ ಜೆಎಸ್‌ಆರ್‌ ಟೋಲ್‌ವೇಸ್‌ ಪ್ರೈವೇಟ್ ಕಂಪನಿ 2015ರಲ್ಲಿ ಮುಳಬಾಗಿಲು ನಗರದ ಅಂಚಿನಿಂದ ಕರ್ನಾಟಕ ಗಡಿ ಭಾಗದವರೆಗೆ ಸುಮಾರು 15 ಕಿ.ಮೀ.
ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಪಥ ರಸ್ತೆಯನ್ನು ನೂರಾರು ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿದ್ದಾರೆ. ಇದರಿಂದ ತಾಲೂಕಿನ ಜನತೆ ಆಂಧ್ರದ ಚೆನ್ನೈ, ತಿರುಪತಿ ಮತ್ತು ಬೆಂಗಳೂರು ಸೇರಿ ಯಾವುದೇ ಮೂಲೆಗೆ ಹೋಗಬೇಕಾದರೂ ಇದೇ ಹೆದ್ದಾರಿ ಸಂಪರ್ಕ ಕಲ್ಪಿಸಲಿದೆ.

2015ರಲ್ಲಿ ನಿರ್ಮಾಣ: ತಾಲೂಕಿನ ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ. ಅಂತೆಯೇ ಎನ್‌. ಯಲುವಹಳ್ಳಿ ಬಳಿ ಟೋಲ್‌ ಪ್ಲಾಜಾ ನಿರ್ಮಿಸಲಾಗಿದೆ. ಸದರಿ ಟೋಲ್‌ ಅನ್ನು 2015 ರ ಜೂ.13 ರಂದು ಅಂದಿನ ಮುಳಬಾಗಿಲು ಶಾಸಕ ಜಿ. ಮಂಜುನಾಥ್‌ ಮತ್ತು ಶ್ರೀನಿವಾಸಪುರ ಶಾಸಕರಾದ ಕೆ.ಆರ್‌.ರಮೇಶ್‌ಕುಮಾರ್‌, ಜೆಎಸ್‌ಆರ್‌ ಕಂಪನಿ ಛೇರ್ಮನ್‌ ಜೆ.ಶ್ರೀನಿವಾಸರೆಡ್ಡಿ, ವ್ಯವಸ್ಥಾಪಕ ನಿರ್ದೇಶಕ ಭಕ್ತವತ್ಸಲರೆಡ್ಡಿ ಚಾಲನೆ ನೀಡಿದ್ದರು. ಈ ವೇಳೆ,ಕಾರು, ಜೀಪ್‌ ಹಾದು ಹೋಗಲು 20- 25 ರೂ.,ಟೆಂಪೋ 30-45 ರೂ., ಬಸ್‌ 60-90 ರೂ., 3 ಆ್ಯಕ್ಸಲ್‌ ವಾಹನಕ್ಕೆ 65-100 ರೂ., 4 ಆ್ಯಕ್ಸಲ್‌ 95-140 ರೂ.,7 ಆ್ಯಕ್ಸಲ್‌ ವಾಹನಕ್ಕೆ115 ರೂ. ಶುಲ್ಕ ವಸೂಲಿ ಮಾಡಲಾಗುತ್ತಿದೆ. ಆದರೆ, ಈ ಮಾರ್ಗದಲ್ಲಿ ಹಲವಾರು ಗ್ರಾಮಗಳಿದ್ದು ಪ್ರಯಾಣಿಕರು ಹಳ್ಳಿಗಳಿಂದ ಹೊರ ಊರುಗಳಿಗೆ ತೆರಳಲು ಬಸ್‌ ಗೇಟ್‌ಗೆ ಬಂದಾಗ ಪ್ರಯಾಣಿಕರು ಕುಳಿತುಕೊಂಡು ದಣಿವಾರಿಸಿಕೊಳ್ಳಲು ಮತ್ತು ಬಿಸಿಲು, ಮಳೆ, ಗಾಳಿಯಿಂದ ಪಾರಾಗಲು ಅಸಾಧ್ಯವಾಗಿದೆ.

ಇದನ್ನೂ ಓದಿ:ವಾಹನ ಟೋಯಿಂಗ್ ಮಾಡುವಾಗ ನಿಯಮಾವಳಿ ಪಾಲಿಸಿ: ಪೊಲೀಸರಿಗೆ ಗೃಹ ಸಚಿವರ ತಾಕೀತು

ಡೀಸಿ ಕ್ರಮ ಕೈಗೊಳ್ಳಲಿ: ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಿರುವಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಯಾವುದೇ ಸೌಲಭ್ಯಗಳಿಲ್ಲದೇ ಇರು ವುದರಿಂದ ಪ್ರತಿಯೊಂದು ಗೇಟ್‌ನ ಎರಡೂ ಕಡೆ ಸುರಕ್ಷತೆಯುಳ್ಳ ತಂಗುದಾಣ ನಿರ್ಮಿಸಬೇಕು. ಸರ್ಕಾರ ಜನರ ತೆರಿಗೆ ಹಣದಿಂದ ಜನರಿಗಾಗಿ ನಿರ್ಮಿಸಿರುವ ರಸ್ತೆಯಲ್ಲಿ ಜನರಿಂದ ಶುಲ್ಕ ವಸೂಲಿ ಮಾಡಿದರೂ ಸುರಕ್ಷತಾ ಕ್ರಮಕೈಗೊಂಡಿಲ್ಲ. ಈ ಕುರಿತು ಜಿಲ್ಲಾಧಿಕಾರಿಗಳು ಇತ್ತ ಕಡೆ ಗಮನಹರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಬಿಸಿಲು-ಮಳೆಗೆ ತಂಗುದಾಣ ಆಶ್ರಯಿಸಿದರೂ ಪ್ರಯೋಜನವಿಲ್ಲ
ಈಗಾಗಲೇ ಸೊನ್ನವಾಡಿ ಬೈಪಾಸ್‌ ಸಮೀಪ, ನರಸಿಂಹತೀರ್ಥ, ಸೀಗೇನಹಳ್ಳಿ, ಅಲ್ಲಾಲಸಂದ್ರ ಗೇಟ್‌, ಕಪ್ಪಲಮಡಗು, ಶ್ರೀರಂಗಪುರ, ವೆಂಕಟಾಪುರ, ಎನ್‌.ವಡ್ಡಹಳ್ಳಿ, ಪದ್ಮಘಟ್ಟ, ತಾತಿಕಲ್‌, ಹಳೆಕುಪ್ಪ, ನಂಗಲಿ,ಮುದಿಗೆರೆ, ಗಡೂxರು ಗೇಟ್‌ಗಳಲ್ಲಿ ಬಸ್‌ ಶೆಲ್ಟರ್‌ ನಿರ್ಮಿಸಲಾಗಿದೆ.ಆದರೆ, ಬಸ್‌ ನಿಲುಗಡೆ ಒಂದುಕಡೆಯಾದರೆ, ಶೆಲ್ಟರ್‌ ನಿರ್ಮಿಸಿರುವುದು ಮತ್ತೂಂದುಕಡೆ. ಇದರಿಂದಾಗಿ ಸದರಿ ಶೆಲ್ಟರ್‌ಗಳು ಜನರ ಉಪಯೋಗಕ್ಕೆ ಬಾರದಂತಾಗಿದೆ. ಅಲ್ಲದೇ ಈ ಬಸ್‌ ಗೇಟ್‌ಗಳಲ್ಲಿ ಪ್ರಯಾಣಿಕರು ಬಿಸಿಲು, ಮಳೆ, ಗಾಳಿಯಿಂದ ಪಾರಾಗಲು ತಂಗುದಾಣಗಳನ್ನು ಆಶ್ರಯಿಸಿದರೂ ಸುರಕ್ಷತೆ ಇಲ್ಲದೇ ಪ್ರಯಾಣಿಕರು ಪರದಾಡುವಂತಹ ಸನ್ನಿವೇಶ ಎದುರಾಗಿದೆ.

ರಾ. ಹೆ.75ರಲ್ಲಿ ನಿರ್ಮಿ ಸಿರುವ ತಂಗುದಾಣಗಳಿಂದ ಜನರಿಗೆ ಆಗುತ್ತಿರುವ ಅನಾನುಕೂಲದ ಬಗ್ಗೆ ಜಿಲ್ಲಾಧಿ ಕಾರಿಗಳ ಗಮನಕ್ಕೆ ತರಲಾಗುವುದು. ನಂತರಕ್ರಮ ಕೈಗೊಳ್ಳಲಾಗುವುದು.
– ರಾಜಶೇಖರ್‌, ತಹಶೀಲ್ದಾರ್‌

ರಾ.ಹೆ.75ರ ಮುಳಬಾಗಿಲಿನಿಂದ ಕರ್ನಾಟಕ ಗಡಿವರೆಗೂ ಜೆಎಸ್‌ಆರ್‌ ಕಂಪನಿ ಆಯಾ ಗೇಟ್‌ಗಳಲ್ಲಿ ಸುರಕ್ಷತೆಯುಳ್ಳ ಬಸ್‌ ಶೆಲ್ಟರ್‌ ನಿರ್ಮಿಸಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳುಕ್ರಮಕೈಗೊಳ್ಳಬೇಕು.
-ಕಸವಿರೆಡ್ಡಿಹಳ್ಳಿ ರಾಜು, ಮುಖಂಡ

-ಎಂ.ನಾಗರಾಜಯ್ಯ

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

Kolar; ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

DR SUDHA

Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.