ಛಾಯಾಗ್ರಾಹಕನ ರಕ್ಷಿಸಲು ಹೋಗಿ ರಷ್ಯಾ ಸಚಿವ ಸಾವು!
Team Udayavani, Sep 8, 2021, 11:45 PM IST
ಮಾಸ್ಕೊ: ರಷ್ಯಾದ ತುರ್ತು ಪರಿಸ್ಥಿತಿ ನಿಭಾವಣೆ ಸಚಿವ ಯೆವ್ಗೆನಿ ಝಿನಿಚೆವ್ (55), ವ್ಯಕ್ತಿಯೊಬ್ಬನನ್ನು ಸಂರಕ್ಷಿಸುವ ಯತ್ನದಲ್ಲಿ ದುರಂತ ಸಾವಿಗೀಡಾಗಿದ್ದಾರೆ.
ರಷ್ಯಾದ ಆಕ್ಟಿಕ್ ವ್ಯಾಪ್ತಿಯ ನಾರಿಲ್ಸ್ನಲ್ಲಿ ಸೇನಾಸಂಸ್ಥೆಗಳ ತರಬೇತಿ ನಡೆಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. ನಾರಿಲ್ಸ್ ನಲ್ಲಿನ ಕಣಿವೆಯೊಂದರ ಸನಿಹ ಸೇನಾ ತರಬೇತಿ ನಡೆಯುತ್ತಿತ್ತು. ಈ ವೇಳೆ ಕಣಿವೆಯ ಅಂಚಿನಲ್ಲಿ ನಿಂತಿದ್ದ ಛಾಯಾಗ್ರಾಹಕರೊಬ್ಬರು ಕಾಲುಜಾರಿ ಕೆಳಕ್ಕುರುಳಿದರು. ಉಳಿದವರಿಗೆ ಏನಾಗುತ್ತಿದೆ ಎಂದು ಗೊತ್ತಾಗುವ ಮುನ್ನವೇ ಝಿನಿಚೆವ್ ಕಣಿವೆಗೆ ಹಾರಿದರು.
ಛಾಯಾಗ್ರಾಹಕನ ಪ್ರಾಣವುಳಿಯಿತು. ಆದರೆ ಝಿನಿಚೆವ್ ತಲೆ ಅಲ್ಲೇ ಮುಂಚಾಚಿಕೊಂಡಿದ್ದ ಕಲ್ಲುಬಂಡೆಯೊಂದಕ್ಕೆ ಬಡಿದು ಸಾವನ್ನಪ್ಪಿದ್ದಾರೆ. ಇವರು ವ್ಲಾಡಿಮಿರ್ ಪುಟಿನ್ ಅಧ್ಯಕ್ಷರಾಗಿರುವ ರಷ್ಯಾದಲ್ಲಿ ಹಲವು ಮಹತ್ತರ ಹುದ್ದೆಗಳನ್ನು ನಿಭಾಯಿಸಿದ್ದಾರೆ.
ಇದನ್ನೂ ಓದಿ :ಮುಂದಿನ ವರ್ಷ ಇಂಗ್ಲೆಂಡ್ನಲ್ಲಿ ಟಿ20, ಏಕದಿನ ಆಡಲಿದೆ ಭಾರತ