ವಾಯುಪಡೆಗೆ 56 ಹೊಸ ವಿಮಾನ
Team Udayavani, Sep 9, 2021, 6:09 AM IST
ಹೊಸದಿಲ್ಲಿ: ಭಾರತೀಯ ವಾಯುಪಡೆಗಾಗಿ ಅತ್ಯಾಧುನಿಕ “ಸಿ-295 ಎಂ.ಡಬ್ಲ್ಯು’ ಮಾದರಿಯ 56 ಯುದ್ಧ ವಿಮಾನಗಳನ್ನು ಖರೀದಿ ಮಾಡಲು, ಕೇಂದ್ರ ಸರಕಾರ ಒಪ್ಪಿಗೆ ನೀಡಿದೆ.
ಈ ಕುರಿತಂತೆ, ಸ್ಪೇನ್ನ “ಏರ್ಬಸ್ ಡಿಫೆನ್ಸ್ ಆ್ಯಂಡ್ ಸ್ಪೇಸ್’ ಎಂಬ ಸಂಸ್ಥೆಯ ಜತೆಗೆ 22 ಸಾವಿರ ಕೋ. ರೂ.ಗಳ ಒಪ್ಪಂದ ಮಾಡಿಕೊಳ್ಳಲಾಗಿದೆ. ಹೊಸ ವಿಮಾನಗಳು, 1961 ರಿಂದ ಐಎಎಫ್ನಲ್ಲಿ ಸೇವೆ ಸಲ್ಲಿಸುತ್ತಿರುವ ಅವ್ರೋಸ್ 748 ಮಾದರಿಯ ವಿಮಾನಗಳನ್ನು ನೇಪಥ್ಯಕ್ಕೆ ಸರಿಸಲಿವೆ.
“ಮೇಕ್ ಇನ್ ಇಂಡಿಯಾ‘ ಅಡಿ ಉತ್ಪಾದನೆ: ಒಪ್ಪಂದ ಏರ್ಪಟ್ಟ ನಾಲ್ಕು ವರ್ಷದೊಳಗೆ 16 ವಿಮಾನಗಳನ್ನು ಏರ್ಬಸ್ ಕಂಪೆನಿಯು ಪೂರ್ಣ ಪ್ರಮಾಣದಲ್ಲಿ ಉತ್ಪಾದಿಸಿ ಭಾರತಕ್ಕೆ ಹಸ್ತಾಂತರಿಸಬೇಕಿದೆ. ಉಳಿದ 40 ವಿಮಾನಗಳು ಭಾರತದಲ್ಲಿ ಟಾಟಾ ಸಮೂಹ ಸಂಸ್ಥೆಗಳ ಸಹಕಾರದೊಡನೆ “ಮೇಕ್ ಇನ್ ಇಂಡಿಯಾ’ ಯೋಜನೆಯಡಿ ತಯಾರಾಗಲಿವೆ. ಸೇನೆಯಲ್ಲಿ ಬಳಸಲಾಗುವ ಅತ್ಯಂತ ಪ್ರಮುಖ ವಿಮಾನವೊಂದು ಭಾರತದಲ್ಲಿ ಖಾಸಗಿ ಕಂಪೆನಿಯಿಂದ ಉತ್ಪಾದನೆಯಾಗುತ್ತಿರುವುದು ಇದೇ ಮೊದಲು.
ವಿವಿಧ ಸವಾಲುಗಳನ್ನು ಎದುರಿಸಲು ಭಾರತ ಸ್ವಾವಲಂಬಿಯಾಗುತ್ತಿದೆ. ಮುಂದಿನ ಎರಡು ದಶಕಗಳಲ್ಲಿ ದೇಶವು 350 ಯುದ್ಧ ವಿಮಾನಗಳನ್ನು ಸೇನೆಗೆ ಸೇರಿಸಿಕೊಳ್ಳುವ ಉದ್ದೇಶ ಹೊಂದಿದೆ.-ಆರ್ಕೆಎಸ್ ಭಧೂರಿಯಾ, ವಾಯುಪಡೆ ಮುಖ್ಯಸ್ಥ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?