ಡೇವಿಸ್ ಕಪ್: ಇಂದು ಭಾರತಕ್ಕೆ ಫಿನ್ಲಂಡ್ ಸವಾಲು
Team Udayavani, Sep 17, 2021, 6:51 AM IST
ಎಸ್ಪೂ (ಫಿನ್ಲಂಡ್): ಡೇವಿಸ್ ಕಪ್ ಗ್ರೂಪ್ 1 ಟೆನಿಸ್ ಪಂದ್ಯಾವಳಿಯಲ್ಲಿ ಭಾರತ ಶುಕ್ರವಾರದಿಂದ ಆತಿಥೇಯ ಫಿನ್ಲಂಡ್ ವಿರುದ್ಧ ಸೆಣೆಸಲಿದೆ. ಕೆಲವು ಉನ್ನತ ಶ್ರೇಯಾಂಕಿತ ಆಟಗಾರರನ್ನು ಹೊಂದಿರುವ ಫಿನ್ಲಂಡ್ ಸವಾಲನ್ನು ಭಾರತ ಹೇಗೆ ನಿಭಾಯಿಸಲಿದೆ ಎಂಬುದೊಂದು ಕುತೂಹಲ.
ಪ್ರಜ್ಞೇಶ್ ಗುಣೇಶ್ವರನ್, ರಾಮ್ಕುಮಾರ್ ರಾಮನಾಥನ್ ದೊಡ್ಡ ಪಂದ್ಯಗಳನ್ನಾಡಿದ ಅನುಭವಿ ಆಟಗಾರರಾಗಿದ್ದಾರೆ. ತಂಡದ ಭಾರ ಇವರಿಬ್ಬರ ಹೆಗಲ ಮೇಲಿದೆ. ಕ್ರೊವೇಷ್ಯಾ ಎದುರಿನ ಹಿಂದಿನ ಪಂದ್ಯದಲ್ಲಿ ಮರಿನ್ ಸಿಲಿಕ್ ವಿರುದ್ಧ ರಾಮ್ಕುಮಾರ್ ಉತ್ತಮ ಪ್ರದರ್ಶನ ನೀಡಿದ್ದರು.
ಇಲ್ಲಿ ಫಿನ್ಲಂಡಿನ ಎಮಿಲ್ ರೊಸೊರಿ ವಿರುದ್ಧ ಮೊದಲ ಸಿಂಗಲ್ಸ್ ಆಡಲಿದ್ದಾರೆ. ಗೆದ್ದರೆ ಭಾರತದ ಮೇಲಿನ ಅಷ್ಟೂ ಒತ್ತಡ ನಿವಾರಣೆಯಾಗುವುದರಲ್ಲಿ ಅನುಮಾನವಿಲ್ಲ. ಇದರಿಂದ ದ್ವಿತೀಯ ಸಿಂಗಲ್ಸ್ ಆಡಲಿರುವ ಪ್ರಜ್ಞೆàಶ್ ಗುಣೇಶ್ವರನ್ಗೂ ಲಾಭವಾಗಲಿದೆ. 165ನೇ ರ್ಯಾಂಕಿಂಗ್ ಆಟಗಾರನಾಗಿರುವ ಪ್ರಜ್ಞೆàಶ್, 419ನೇ ರ್ಯಾಂಕಿಂಗ್ನ ಓಟೊ ವಿರ್ಟಾನೆನ್ ಅವರನ್ನು ಎದುರಿಸುವ ಸಾಧ್ಯತೆ ಇದೆ. ಪ್ರಜ್ಞೇಶ್ ಕ್ರೊವೇಷ್ಯಾದ ಬೋರ್ನಾ ಕೊರಿಕ್ ವಿರುದ್ಧ ಸ್ವಲ್ಪದರಲ್ಲೇ ಗೆಲುವು ತಪ್ಪಿಸಿಕೊಂಡಿದ್ದರು.