ವರ್ಕ್ ಫ್ರಂ ಹೋಂ ಬೋರು
Team Udayavani, Sep 17, 2021, 7:10 AM IST
ಹೊಸದಿಲ್ಲಿ: ವರ್ಕ್ ಫ್ರಂ ಹೋಂ ಆರಂಭವಾದಾಗ ಖುಷಿಯಲ್ಲಿ ಕುಣಿದಾಡಿದ್ದ ಉದ್ಯೋಗಿಗಳು ಈಗ “ಸಾಕಪ್ಪಾ ಸಾಕು ಈ ವರ್ಕ್ ಫ್ರಂ ಹೋಂ ಸಹವಾಸ’ ಎನ್ನಲಾರಂಭಿಸಿದ್ದಾರೆ.
ವರ್ಕ್ ಫ್ರಂ ಹೋಂನಲ್ಲಿರುವ ಬಹುಪಾಲು ಉದ್ಯೋಗಿಗಳು ಆಫೀಸಿಗೆ ಬರೋದಕ್ಕೆ ತುದಿಗಾಲಿನಲ್ಲಿದ್ದಾರೆ ಎನ್ನುತ್ತದೆ ಲಿಂಕ್ಡ್ ಇನ್ ನಡೆಸಿರುವ ಸಮೀಕ್ಷೆಯ ವರದಿ. ದೇಶದ ವಿವಿಧ ಭಾಗದ 1000 ಉದ್ಯೋಗಿಗಳನ್ನು ಸಮೀಕ್ಷೆಗೆ ಒಳಪಡಿಸಿದೆ. ಅದರಲ್ಲಿ ಶೇ. 72 ಉದ್ಯೋಗಿಗಳು ವರ್ಕ್ ಫ್ರಂ ಹೋಂನಿಂದ ವೃತ್ತಿ ಜೀವನಕ್ಕೆ ಪೆಟ್ಟು ಬಿದ್ದಿದೆ ಎಂದಿದ್ದಾರೆ. ಶೇ. 71 ಮಂದಿ ಆಫೀಸಿನಲ್ಲಿದ್ದರೆ ಬಾಸ್ನ್ನು ಮೆಚ್ಚಿಸುವುದು ಸುಲಭವೆಂದರೆ, ಶೇ. 72 ಉದ್ಯೋಗಿಗಳು ಆಫೀಸಿನಲ್ಲಿದ್ದರೆ ಮೋಜು ಮಸ್ತಿ ಮಾಡಿಕೊಂಡು ಅರಾಮವಾಗಿರುತ್ತಿದ್ದೆವು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಆಫೀಸಿನಲ್ಲಿದ್ದರೆ ಸಹೋದ್ಯೋಗಿಗಳಿಂದ ಸಾಕಷ್ಟು ಒಳ್ಳೆ ವಿಚಾರ ಕಲಿಯುತ್ತೇವೆ ಎಂದು ಶೇ. 55 ಉದ್ಯೋಗಿಗಳು ಹೇಳಿದ್ದಾರೆ. ವರ್ಕ್ ಫ್ರಂ ಹೋಂ ಆರಂಭವಾದಾಗಿನಿಂದ ಕೆಲಸ ಹೆಚ್ಚಾಗಿದೆ ಎಂದು ಶೇ. 35 ಮಂದಿ ಹೇಳಿದರೆ, ಶೇ. 34 ಮಂದಿಗೆ ಅದರಿಂದ ಚಿಂತೆಯೂ ಹೆಚ್ಚಿದೆಯಂತೆ.
ಹೈಬ್ರಿಡ್ಗೆ ಬೇಡಿಕೆ: ಸಮೀಕ್ಷೆಯ ಪ್ರಕಾರ ಶೇ. 86 ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ಜತೆಗೆ ಆಫೀಸಿನಿಂದ ಕೆಲಸ ಮಾಡುವ ಸೌಲಭ್ಯವೂ ಬೇಕಿದೆ. ಈ ರೀತಿ ಹೈಬ್ರಿಡ್ ಮಾಡೆಲ್ ಅನುಸರಿಸುವುದರಿಂದ ಕಂಪನಿಗಳ ಉತ್ಪಾದಕತೆಯೂ ಹೆಚ್ಚಲಿದೆ ಎನ್ನುತ್ತಾರೆ ಹೊಸದಿಲ್ಲಿಯ ಖಾಸಗಿ ಆಸ್ಪತ್ರೆಯ ಮನೋವೈದ್ಯೆ ಡಾ| ರುಚಿ ಶರ್ಮಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್