ಹಳೆಯ ರಾಯಲ್ ಎನ್ ಫೀಲ್ಡ್ ಅನ್ನೇ ಎಲೆಕ್ಟ್ರಿಕ್ ಬೈಕ್ ಆಗಿ ಪರಿವರ್ತಿಸಿದ 15ರ ಬಾಲಕ!
ರಾತ್ರಿಯ ಸಮಯವನ್ನು ವ್ಯಯಿಸಿ ಇ – ಸೈಕಲ್ ವೊಂದನ್ನು ತಯಾರಿಸಿಯೇ ಬಿಟ್ಟ ರಾಜನ್
ಸುಹಾನ್ ಶೇಕ್
ಅಪ್ಪನ ಮಾತಿಗೆ ಬಗ್ಗೆ ಅಷ್ಟಾಗಿ ಯೋಚಿಸದ ರಾಜನ್ ಗೆ, ಯೋಚನೆ ಇದದ್ದು ಒಂದೇ ಮುಂದೆ ಇ ಬೈಕ್ ತಯಾರಿಸಬೇಕೆನ್ನುವುದು. ಅದೊಂದು ದಿನ ಅಪ್ಪನ ಬಳಿ ತನಗೆ ಶಾಲೆಯಲ್ಲಿ ಇ – ಬೈಕ್ ಮಾಡುವ ಪ್ರಾಜೆಕ್ಟ್ ವೊಂದನ್ನು ಕೊಟ್ಟಿದ್ದಾರೆ ಎಂದು ಸುಳ್ಳು ಹೇಳಿ, ಅಪ್ಪನ ಮನಸ್ಸನ್ನು ಒಪ್ಪಿಸುತ್ತಾನೆ. ಮಧ್ಯಮ ವರ್ಗದ ಕುಟುಂಬವಾಗಿರುವುದರಿಂದ ತಿಂಗಳಾಂತ್ಯಕ್ಕೆ ಹಣ ಉಳಿಸಿ, ಮಡದಿ ಮಕ್ಕಳ ಬೇಡಿಕೆಗೆ ಸ್ಪಂದಿಸುವುದು ದಶರಥ್ ಶರ್ಮಾ ಅವರಿಗೆ ಅಷ್ಟು ಸುಲಭವಾಗಿರಲಿಲ್ಲ. ಬೈಕ್ ಏನೋ ಬಂತು ಆದರೆ, ಅದು ಗುಜರಿ ಅಂಗಡಿಯಲ್ಲಿದ್ದ ಅರೆ ಜೀವ ಕಳೆದುಕೊಂಡಿದ್ದ ಬೈಕ್. ಅದಕ್ಕಾಗಿ ಬೇಕಿದ್ದ ಸರಕುಗಳನ್ನು ಹುಡುಕಾಡುವುದು ರಾಜನ್ ನ ಉತ್ಸಾಹಕ್ಕೆ ಒಂದು ದೊಡ್ಡ ಸಾಹಸವೇ ಆಯಿತು...