ಮಳೆ ಕೊರತೆಯಿಂದ ಬಾಡಿದ ಬೆಳೆ

ಗುರಿ ಮುಟ್ಟಿದ ಬೆಳೆಗಳ ಪ್ರಗತಿ, ಒಣಗುತ್ತಿವೆ ರಾಗಿ ಬೆಳೆ, ವರುಣನ ನಿರೀಕ್ಷೆಯಲ್ಲಿ ರೈತರು

Team Udayavani, Sep 23, 2021, 3:05 PM IST

salamanna-620×386

ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಕಾರ್ಯಗಳು ಪೂರ್ಣಗೊಂಡಿವೆ. ಆದರೆ, ತಾಲೂಕಿನಲ್ಲಿ ಈ ತಿಂಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾ ಆಗಿರುವುದರಿಂದ ಮಳೆ ಆಶ್ರಯದ ಮುಖ್ಯ ಬೆಳೆಗಳಾಗಿರುವ ರಾಗಿ, ಮುಸುಕಿನ ಜೋಳ ಮಳೆ ಇಲ್ಲದೆ ಒಣಗಲು ಆರಂಭವಾಗಿವೆ.

ಕೃಷಿ ಇಲಾಖೆ ಅಂಕಿ-ಅಂಶದಂತೆ ಜನವರಿಯಿಂದ ಸೆಪ್ಟೆಂಬರ್‌ ತಿಂಗಳ ಅಂತ್ಯಕ್ಕೆ ಒಟ್ಟಾರೆ ವಾಡಿಕೆ ಮಳೆ
549 ಮಿ.ಮೀ. ಆಗಬೇಕಿದ್ದು, ಈಗ 692 ಮಿ.ಮೀ. ಮಳೆ ಬಿದ್ದಿದೆ. ಆದರೆ, ಸೆಪ್ಟೆಂಬರ್‌ ತಿಂಗಳಲ್ಲಿ 156
ಮಿ.ಮೀ ಆಗಬೇಕಿದ್ದು, ಈಗ 28ಮಿ.ಮೀ. ಮಾತ್ರ ಮಳೆ ಬಿದ್ದಿದೆ. ತಾಲೂಕಿನ ಐದು ಹೋಬಳಿಗಳ ಪೈಕಿ
ಹೆಚ್ಚಿನ ಮಳೆ ತೂಬಗೆರೆ ಹೋಬಳಿಯಲ್ಲಿ 761 ಮಿ.ಮೀ. ಬಿ ದ್ದಿದೆ. ಉಳಿದಂತೆ, ಸಾಸಲು ಹೋಬಳಿ
716 ಮಿ.ಮೀ., ಮಧುರೆ ಹೋಬಳಿ 682ಮಿ.ಮೀ.,ದೊಡ್ಡಬೆಳವಂಗಲ 650 ಮಿ.ಮೀ., ಕಸಬಾ
ಹೋಬಳಿಯಲ್ಲಿ 636ಮಿ.ಮೀ. ಮಳೆ ಬಿದ್ದಿದೆ. ತಾಲೂಕಿನಲ್ಲಿ ಮುಂಗಾರು ಪೂರ್ವ ಮಳೆ ಉಳುಮೆಗೆ ತೊಂದರೆಯಾಗದಂತೆ ಹದವಾಗಿ ಬೀಳುತ್ತಿದೆಯಾದರೂ ಕೆರೆಗಳಿಗೆ ನೀರು ಬಂದಿಲ್ಲ. ಸಾಸಲು ಹೋಬಳಿಯ ಒಂದೆರಡು ಸಣ್ಣ ಪುಟ್ಟ ಕೆರೆಗಳಿಗೆ ಅಲ್ಪಸ್ವಲ್ಪ ನೀರು ಬಂದಿವೆ. ಉಳಿದಂತೆ ಯಾವುದೇ ಕೆರೆಗಳಲ್ಲೂ ನೀರು ಇಲ್ಲದೆ ಬರಿದಾಗಿವೆ. ನೀರಾವರಿ ಹೊಂದಿರುವ ರೈತರು ಮುಸುಕಿನಜೋಳ ಬಿತ್ತನೆ ಮಾಡುತ್ತಿದ್ದಾರೆ.

ಗುರಿ ಮುಟ್ಟಿದ ಬಿತ್ತನೆ
ತಾಲೂಕಿನ ಹೋಬಳಿಗಳಲ್ಲಿ 2021-22ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆಯ ಬೆಳೆ ಪ್ರಗತಿಯನ್ವಯ ಏಕದಳ ಧಾನ್ಯಗಳ ಬಿತ್ತನೆಯಲ್ಲಿ ಶೇ.101ರಷ್ಟು ತನ್ನ ಗುರಿಯನ್ನು ಮುಟ್ಟಿದೆ. ರಾಗಿ, ಮುಸುಕಿನ ಜೋಳ, ಭತ್ತ, ತೃಣಧಾನ್ಯ, ಮೇವಿನ ಜೋಳ, ಪಾಪ್‌ಕಾರ್ನ್(ಏಕದಳ) ತೊಗರಿ, ಅಲಸಂದೆ, ಅವರೆ, ಉದ್ದು,
ಹೆಸರು, ಹುರುಳಿ(ದ್ವಿದಳ), ನೆಲೆಗಡಲೆ, ಹರಳು, ಸಾಸುವೆ, ಹುಚ್ಚೆಳ್ಳು (ಎಣ್ಣೆಕಾಳು) ಸೇರಿದಂತೆ ಎಲ್ಲ
ಬೆಳೆಗಳ 22,210 ಹೆಕ್ಟೇರ್‌ಗಳ ಗುರಿಗೆ 23,883 ಹೆಕ್ಟೇರ್‌ಗಳ ಗುರಿ ತಲುಪಿದೆ. 13,793 ಹೆಕ್ಟೇರ್‌ಗಳ
ಗುರಿಯನ್ನು ಹೊಂದಿದ್ದ ರಾಗಿ ಬೆಳೆ 16,710 ಹೆಕ್ಟೇರ್‌ ಗಳಲ್ಲಿ ಬಿತ್ತನೆಯಾಗಿದೆ. 7,270 ಹೆಕ್ಟೇರ್‌ಗಳ
ಗುರಿಯನ್ನು ಹೊಂದಿದ್ದ ಮುಸುಕಿನ ಜೋಳದ ಬೆಳೆ 5,415 ಹೆಕ್ಟೇರ್‌ಗಳಲ್ಲಿ ಬಿತ್ತನೆಯಾಗಿದೆ.

ಒಣಗಿದ ಬೆಳೆ

ಉತ್ತರೆ ಮಳೆ ವೇಳೆಗೆ ರಾಗಿ ಹೊಲಗಳಿಗೆ ಹಸು, ಕುರಿ, ಮೇಕೆಗಳನ್ನು ಬಿಟ್ಟು ಗರಿ ಮೇಯಿಸಿ
ಹಿಂದಕ್ಕೆ ಹಿಡಿದುಕೊಳ್ಳಬೇಕಿತ್ತು. ಆದರೆ, ತಾಲೂಕಿನ ಕೆಲವೇ ಗ್ರಾಮಗಳಲ್ಲಿ ಮುಂಚಿತವಾಗಿ ಬಿತ್ತನೆಯಾಗಿದ್ದ
ರಾಗಿ ಹೊಲಗಳಲ್ಲಿ ಮಾತ್ರ ಗರಿ ಮೇಯಿಸಲಾಗಿದೆ. ಉಳಿದಂತೆ ರಾಗಿ ಹೊಲಗಳು ಒಣಗುತ್ತಿವೆ. ಕಳೆದ
ಮೂರು ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ಬಾರಿ ರಾಗಿ ಬೆಳೆಯ ಪ್ರದೇಶ ಹೆಚ್ಚಾಗಿದೆ. ಮುಸುಕಿನಜೋಳಕ್ಕೆ
ರೋಗ, ಹುಳುಗಳ ಬಾಧೆ ಹೆಚ್ಚಾಗಿದ್ದರಿಂದ ಹಾಗೂ ರಾಗಿಯನ್ನು ಸರ್ಕಾರ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಖರೀದಿಸಲು ಆರಂಭಿಸಿದ್ದರಿಂದ ರೈತರು ಈ ಬಾರಿ ರಾಗಿ ಬೆಳೆಯ ಕಡೆಗೆ ಹೆಚ್ಚಿನ ಆಸಕ್ತಿ ತೋರಿ¨ªಾರೆ. ಸಾಸಲು ಹಾಗೂ ಕಸಬಾ ಹೋಬಳಿಯಲ್ಲಿ ಮುಸುಕಿನ ಜೋಳ ಬೆಳೆಯುವ ಪ್ರದೇಶ ಹೆಚ್ಚಾಗಿದೆ.ಅಗತ್ಯ ದಾಸ್ತಾನಿದೆ: ತಾಲೂಕಿನಲ್ಲಿ ರೈತರಿಗೆ ಅಗತ್ಯವಾಗಿ ರುವ ರಸಗೊಬ್ಬರಗಳು ಅಗತ್ಯ ದಾಸ್ತಾನಿದೆ. ಕಾಂಫ್ಲೆಕ್ಸ್‌ 706 ಟನ್‌, ಅಮೋನಿಯಂ ಸಲ್ಪೇಟ್‌ 5.55 ಟನ್‌ ಅಮೋನಿಯಂ ಸಲ್ಪೇಟ್‌ , ಡಿಎಪಿ68 ಟನ್‌, ಆಮದು ಕಾಂಫ್ಲೆಕ್ಸ್‌ 76 ಟನ್‌, ಎಂಒಪಿ77.2ಟನ್‌, ಯೂರಿಯ ಬೇವು ಲೇಪಿತ 230ಟನ್‌, ಎಸ್‌ಎಸ್‌ಪಿ 51.65 ಟನ್‌ ಸೇರಿ ಒಟ್ಟು 1239.6 ಟನ್‌ ರಸಗೊಬ್ಬರಗಳ ದಾಸ್ತಾನಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮಳೆ ಅಗತ್ಯವಿದೆ

ತಾಲೂಕಿನ ತೂಬಗೆರೆ ಹೋಬಳಿಯಲ್ಲಿ ಜುಲೈ ತಿಂಗಳಲ್ಲಿ ಹೆಚ್ಚಿನ ಮಳೆ ದಾಖಲಾಗಿದೆ. ಆದರೆ, ಆಗಸ್ಟ್‌ ಹಾಗೂ ಸೆಪ್ಟೆಂಬರ್‌ ನಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು, ರಾಗಿ,ತೊಗರಿ ಮೊದಲಾದ ಬೆಳೆಗಳು ಒಣಗುತ್ತಿವೆ. ರೈತರು ಮಳೆ ನಿರೀಕ್ಷೆಯಲ್ಲಿದ್ದು, ಇನ್ನೆರಡು ಹದ ಮಳೆಯಾದರೆ ಉತ್ತಮ ಇಳುವರಿಯಾಗಲಿದೆ ಎನ್ನುತ್ತಾರೆ ತೂಬಗೆರೆ ಹೋಬಳಿಯ ಲಕ್ಷ್ಮೀದೇವಪುರದ ರೈತ ಹರೀಶ್‌.

ಯೂರಿಯಾ ಗೊಬ್ಬರ ಖರೀದಿ ಹೆಚ್ಚಳ
ಒಂದು ಕಡೆ ಮಳೆ ಇಲ್ಲದೆ ರಾಗಿ, ಮುಸುಕಿನಜೋಳ ಒಣಗುತ್ತಿದೆ. ಆದರೆ, ಇದೇ ವೇಳೆ ತೆನೆ ಬರುವುದಕ್ಕು
ಮುನ್ನ ರಾಗಿ, ಜೋಳದ ಬೆಳೆಗಳಿಗೆ ಮಳೆ ಬರುತ್ತಿದ್ದಂತೆ ಯೂರಿಯ ಹಾಕಲು ರೈತರು ರಸಗೊಬ್ಬರ
ಮಾರಾಟ ಮಳಿಗೆಗಳ ಮುಂದೆ ಯೂರಿಯ ಖರೀದಿಗೆ ಸಾಲುಗಟ್ಟಿ ನಿಂತಿರುವ ದೃಶ್ಯ
ಸಾಮಾನ್ಯವಾಗಿದೆ. ಖಾಸಗಿ ಅಂಗಡಿಗಳಿಗಿಂತಲು ವ್ಯವಸಾಯ ಸೇವಾ ಸಹಕಾರ ಸಂಘಗಳಲ್ಲಿ
ಯೂರಿಯ ಬೆಲೆ 20 ರೂ.ವರೆಗೂ ಬೆಲೆ ಕಡಿಮೆ ಇದೆ. ಹೀಗಾಗಿ ಹೆಚ್ಚಿನ ರೈತರು ಸಹಕಾರಿ ಸಂಘಗಳ
ಮೂಲಕವೇ ಯೂರಿಯ ಖರೀದಿಗೆ ಮುಗಿಬೀಳುತ್ತಿದ್ದಾರೆ.

●ಡಿ. ಶ್ರೀಕಾಂತ

ಟಾಪ್ ನ್ಯೂಸ್

Prajwal Revanna ವಿದೇಶಕ್ಕೆ ಹಾರಲು ರಾಜ್ಯ ಸರಕಾರದ ವೈಫ‌ಲ್ಯ ಕಾರಣ: ಅಶೋಕ್‌

Prajwal Revanna ವಿದೇಶಕ್ಕೆ ಹಾರಲು ರಾಜ್ಯ ಸರಕಾರದ ವೈಫ‌ಲ್ಯ ಕಾರಣ: ಅಶೋಕ್‌

Prajwal Revanna ಬಂಧನಕ್ಕೆ ಸಹಕರಿಸುವಂತೆ ಪ್ರಧಾನಿಗೆ ಸಿಎಂ ಪತ್ರ

Prajwal Revanna ಬಂಧನಕ್ಕೆ ಸಹಕರಿಸುವಂತೆ ಪ್ರಧಾನಿಗೆ ಸಿಎಂ ಪತ್ರ

ದೇವರ ಮೊರೆ ಹೋದ ಶಾಸಕ ಎಚ್‌.ಡಿ. ರೇವಣ್ಣ

ದೇವರ ಮೊರೆ ಹೋದ ಶಾಸಕ ಎಚ್‌.ಡಿ. ರೇವಣ್ಣ

Belthangady ತಾಯಿ, ಮಗನ ಮೇಲೆ ಸಂಬಂಧಿಕರಿಂದ ಹಲ್ಲೆ

Belthangady ತಾಯಿ, ಮಗನ ಮೇಲೆ ಸಂಬಂಧಿಕರಿಂದ ಹಲ್ಲೆ

Sasthan Toll Plaza; ಗುಂಡ್ಮಿಯಲ್ಲಿ ಸ್ಥಳೀಯರಿಗೆ ಟೋಲ್‌ ಭೀತಿ

Sasthan Toll Plaza; ಗುಂಡ್ಮಿಯಲ್ಲಿ ಸ್ಥಳೀಯರಿಗೆ ಟೋಲ್‌ ಭೀತಿ

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Devanahalli: ಬೇಸಿಗೆ ಬಿಸಿ; ಹುರುಳಿಕಾಯಿ ದರ ದುಬಾರಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Prajwal Revanna ವಿದೇಶಕ್ಕೆ ಹಾರಲು ರಾಜ್ಯ ಸರಕಾರದ ವೈಫ‌ಲ್ಯ ಕಾರಣ: ಅಶೋಕ್‌

Prajwal Revanna ವಿದೇಶಕ್ಕೆ ಹಾರಲು ರಾಜ್ಯ ಸರಕಾರದ ವೈಫ‌ಲ್ಯ ಕಾರಣ: ಅಶೋಕ್‌

Prajwal Revanna ಬಂಧನಕ್ಕೆ ಸಹಕರಿಸುವಂತೆ ಪ್ರಧಾನಿಗೆ ಸಿಎಂ ಪತ್ರ

Prajwal Revanna ಬಂಧನಕ್ಕೆ ಸಹಕರಿಸುವಂತೆ ಪ್ರಧಾನಿಗೆ ಸಿಎಂ ಪತ್ರ

ದೇವರ ಮೊರೆ ಹೋದ ಶಾಸಕ ಎಚ್‌.ಡಿ. ರೇವಣ್ಣ

ದೇವರ ಮೊರೆ ಹೋದ ಶಾಸಕ ಎಚ್‌.ಡಿ. ರೇವಣ್ಣ

Gangolli ಕಾರಿನಲ್ಲಿ ಬಂದು ದನ ಕಳವಿಗೆ ಯತ್ನ

Gangolli ಕಾರಿನಲ್ಲಿ ಬಂದು ದನ ಕಳವಿಗೆ ಯತ್ನ

Kundapura ಬುದ್ಧಿವಾದ ಹೇಳಿದ್ದಕ್ಕೆ ಬಾಲಕರಿಂದ ಹಲ್ಲೆ !

Kundapura ಬುದ್ಧಿವಾದ ಹೇಳಿದ್ದಕ್ಕೆ ಬಾಲಕರಿಂದ ಹಲ್ಲೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.