ಮೊದಲ ಅಧಿವೇಶನ ಪರೀಕ್ಷೆ ಗೆದ್ದ  ಮುಖ್ಯಮಂತ್ರಿ ಬೊಮ್ಮಾಯಿ

Team Udayavani, Sep 25, 2021, 6:50 AM IST

ಮೊದಲ ಅಧಿವೇಶನ ಪರೀಕ್ಷೆ ಗೆದ್ದ  ಮುಖ್ಯಮಂತ್ರಿ ಬೊಮ್ಮಾಯಿ

ಬೆಂಗಳೂರು: ಅನಿರೀಕ್ಷಿತ ವಾಗಿ ದೊರೆತ ನಾಯಕತ್ವವನ್ನು ಸಮರ್ಥವಾಗಿ ನಿಭಾಯಿಸಿ, ಹತ್ತು ದಿನಗಳ ಮೊದಲ ಅಧಿವೇಶನವನ್ನು ಸದ್ದುಗದ್ದಲವಿಲ್ಲದೆ ನಡೆಸುವಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯಶಸ್ವಿಯಾಗಿದ್ದಾರೆ.

ಬೊಮ್ಮಾಯಿ ತಮ್ಮ ಸರಳ ನಡೆ ಹಾಗೂ ಚುರುಕಿನ ಆಡಳಿತದಿಂದ ಜನರ ವಿಶ್ವಾಸ ಗಳಿಸುತ್ತಿದ್ದು,  ಅಧಿವೇಶನ ದಲ್ಲೂ ವಿಪಕ್ಷಗಳನ್ನು ಯಶಸ್ವಿಯಾಗಿ ಎದುರಿಸಿ, ನಾಯಕತ್ವದ ಬಗ್ಗೆ ಬಿಜೆಪಿ ನಾಯಕರಿಗಿದ್ದ ಆತಂಕವನ್ನು ದೂರ ಮಾಡುವ ಪ್ರಯತ್ನ ಮಾಡಿದ್ದಾರೆ.

ದಾಖಲೆಗಳ ಮೂಲಕವೇ ಉತ್ತರ:

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬೆಲೆ ಏರಿಕೆ ವಿಚಾರದಲ್ಲಿ  ರಾಜ್ಯ ಹಾಗೂ ಕೇಂದ್ರ ಸರಕಾರಗಳ ವಿರುದ್ಧ ಮಾಡಿದ ಆರೋಪಗಳಿಗೆ  ದಾಖಲೆಗಳ ಸಮೇತ ತಿರುಗೇಟು ನೀಡಿದ್ದಾರೆ. ಹಿಂದಿನ ಯುಪಿಎ ಸರಕಾರದ ಅವಧಿಯಲ್ಲಿ  ಆಗಿರುವ ಬೆಲೆ ಏರಿಕೆ, ಹಣದುಬ್ಬರ ಹೆಚ್ಚಳ, ಅಂತಾರಾಷ್ಟ್ರೀಯ ಮಟ್ಟದ ತೈಲ ಬೆಲೆ ಏರಿಕೆ, ಆಗಿನ ಸಂದರ್ಭದಲ್ಲಿ ಸರಕಾರಗಳು ತೆಗೆದುಕೊಂಡ ನಿಲುವುಗಳನ್ನು ಉಲ್ಲೇಖೀಸಿ ವಿಪಕ್ಷಗಳ ಆಕ್ರೋಶದ ತೀವ್ರತೆಯನ್ನು ಕಡಿಮಾ ಮಾಡುವಲ್ಲಿ ಸಫ‌ಲರಾಗಿದ್ದಾರೆ.

ಕಾವ್ಯಾತ್ಮಕ ಉತ್ತರ:

ವಿಪಕ್ಷ ನಾಯಕ ಸಿದ್ದರಾಮಯ್ಯ ಬೆಲೆ ಏರಿಕೆ ವಿಷಯದ ಚರ್ಚೆಯಲ್ಲಿ ಕುಮಾರವ್ಯಾಸನ  ಕಾವ್ಯದ ಮೂಲಕ ನಾಯಕನಾದವನು ಹೇಗಿರಬೇಕು ಎಂದು ತಿಳಿಸಿದ್ದರು. ಅದೇ ಕುಮಾರ ವ್ಯಾಸನ ಕಾವ್ಯದ ಮೂಲಕವೇ ತಮ್ಮ ನಾಯಕತ್ವ ಹೇಗಿದೆ ಎನ್ನುವುದನ್ನು ಸಮರ್ಥಿಸಿಕೊಳ್ಳುವ ಮೂಲಕ  ವಿಪಕ್ಷ ನಾಯಕರಿಗೆ ತಕ್ಕ ಉತ್ತರ ಕೊಡಬಲ್ಲೆ ಎಂಬ ಸಂದೇಶ ರವಾನಿಸಿದರು.

ವಿಪಕ್ಷ ನಾಯಕರಿಗೆ ಮುಖ್ಯ ಮಂತ್ರಿ  ರಾಜಕೀಯವಾಗಿಯೂ ಸಮರ್ಥವಾಗಿಯೇ ಉತ್ತರ ನೀಡಿರು ವುದು  ಮೆಚ್ಚುಗೆಗೆ ಪಾತ್ರವಾಗಿದೆ.

ಸಚಿವರ ಬೆನ್ನಿಗೆ:

ಪ್ರಶ್ನೋತ್ತರ ಕಲಾಪ, ನಿಲುವಳಿ ಸೂಚನೆ ಮೇಲಿನ ಉತ್ತರ, ಮಸೂ ದೆಗಳ ಮೇಲಿನ ಚರ್ಚೆ ಸಂದರ್ಭ ದಲ್ಲಿ ಸಂಬಂಧಪಟ್ಟ ಇಲಾಖೆಗಳ ಸಚಿವರು  ಉತ್ತರಿಸಲು ಪರದಾಡ ಬೇಕಾಗಿ ಬಂದಾಗ ಅವರ ಸಹಾಯಕ್ಕೆ ಬಂದಿರುವುದೂ ಗಮನ ಸೆಳೆದಿದೆ.

ಧಾರ್ಮಿಕ ಕಟ್ಟಡಗಳ ಸಂರಕ್ಷಣೆ ಮಸೂದೆಯನ್ನು ಮುಜರಾಯಿ ಸಚಿವರ ಬದಲಾಗಿ ತಾನೇ ಮಂಡಿಸಿ,   ಅತ್ಯಂತ ಸೂಕ್ಷ್ಮ ಮಸೂದೆಗೂ   ಗೊಂದಲವಿಲ್ಲದೆ ಅಂಗೀಕಾರ ಪಡೆದು ಕೊಳ್ಳುವಲ್ಲಿ   ಜಾಣ್ಮೆ ತೋರಿದ್ದಾರೆ.

ವಿಪಕ್ಷಗಳ ಸಹಕಾರವೇ ಶ್ರೀರಕ್ಷೆ :

ನಾಯಕತ್ವ ಬದಲಾವಣೆ ಬಳಿಕ ಕಂಡುಬಂದಿದ್ದ ಬಿಜೆಪಿ  ಶಾಸಕರ ಅಸಮಾ ಧಾನ  ತಣ್ಣಗಾದಂತೆ ಕಾಣಿಸುತ್ತಿದೆ.  ನಿರೀಕ್ಷಿತ  ಪ್ರಮಾಣದಲ್ಲಿ ಅನುದಾನ ದೊರೆಯದಿದ್ದರೂ, ಹದಿನೈದು ದಿನಗಳಲ್ಲಿ ಎರಡು ಶಾಸಕಾಂಗ ಸಭೆಗಳನ್ನು ಕರೆದಿದ್ದರೂ ನಾಯಕತ್ವದ ವಿರುದ್ಧ ಬಹಿರಂಗವಾಗಿ ಯಾರೂ ಮಾತಾಡಿಲ್ಲ. ಇದು ಬೊಮ್ಮಾಯಿಗೆ ಹೆಚ್ಚು ಅನುಕೂಲವಾಯಿತು. ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಜೆಡಿಎಸ್‌ ನಾಯಕರ ಪರೋಕ್ಷ ಸಹಕಾರವೂ  ಸಿಕ್ಕಿತ್ತು.

ಬಸವರಾಜ ಬೊಮ್ಮಾಯಿ ಅವರು ಆರೆಸ್ಸೆಸ್‌ ಮೂಲದವರಾಗಿರದೆ ಜನತಾ ಪರಿವಾರದ ಮೂಲಕ ಸಮಾಜವಾದಿ ಚಿಂತನೆಯ ಹಿನ್ನೆಲೆಯಿಂದ ಬಂದವರಾಗಿರುವುದರಿಂದ ಹಾಗೂ ಮಾಜಿ ಸಿಎಂ ಎಸ್‌.ಆರ್‌. ಬೊಮ್ಮಾಯಿ ಅವರ ಪುತ್ರರೆಂಬ ಕಾರಣಕ್ಕೆ  ಸಿದ್ದರಾಮಯ್ಯ ಕೂಡ  ಸುಗಮ ಕಲಾಪ ನಡೆಯಲು ಸಹಕಾರ ನೀಡಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.  ಸಿದ್ದರಾಮಯ್ಯ ವಿಷಯಾಧಾರಿತ ಆರೋಪ ಮಾಡಿದರೂ, ಸುಗಮ ಕಲಾಪಕ್ಕೆ ಅಡ್ಡಿಯಾಗದಂತೆ ಎಲ್ಲ ಕಾರ್ಯಕಲಾಪಗಳಲ್ಲಿ ಭಾಗವಹಿಸುವ ಮೂಲಕ  ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸದಸ್ಯರು ಪರೋಕ್ಷವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಹಕಾರ ತೋರಿಸಿದ್ದಾರೆ ಎನ್ನಲಾಗುತ್ತಿದೆ.

ಟಾಪ್ ನ್ಯೂಸ್

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್‌ ತೀರ್ಪು

ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್‌ ತೀರ್ಪು

ಅಂತೂ ಬಂತು ಬರ ಪರಿಹಾರ: ರಾಜ್ಯಕ್ಕೆ 3,454 ಕೋ.ರೂ. ಬರ ಪರಿಹಾರ ಬಿಡುಗಡೆ

ಅಂತೂ ಬಂತು ಬರ ಪರಿಹಾರ: ರಾಜ್ಯಕ್ಕೆ 3,454 ಕೋ.ರೂ. ಬರ ಪರಿಹಾರ ಬಿಡುಗಡೆ

Hassan ವೀಡಿಯೋ ಪ್ರಕರಣ ಎಸ್‌ಐಟಿ ತನಿಖೆಗೆ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.