ಶೀಘ್ರದಲ್ಲೇ ಅತ್ಯಾಧುನಿಕ ವಿನ್ಯಾಸದ ಎಲೆಕ್ಟ್ರಿಕ್ ವಾಹನ ಬಿಡುಗಡೆ: ಹೋಂಡಾ


Team Udayavani, Oct 18, 2021, 4:21 PM IST

ELECRIC CARS

ನವದೆಹಲಿ: ಹೋಂಡಾ ಇತ್ತೀಚೆಗೆ ಚೀನಾದಲ್ಲಿ ತನ್ನ ಇಲೆಕ್ಟ್ರಿಕ್ ವಾಹನಗಳ ಕುರಿತು ವರ್ಚುವಲ್ ಪತ್ರಿಕಾಗೋಷ್ಠಿಯನ್ನು ನಡೆಸಿತ್ತು. ಸಮ್ಮೇಳನದ ಸಮಯದಲ್ಲಿ, ಹೋಂಡಾ ತನ್ನ ಹೊಸ ಪರಿಸರ ಸ್ನೇಹಿ ಮತ್ತು ಸುರಕ್ಷತಾ ಉಪಕ್ರಮಗಳನ್ನು ಹೊಂದಿದ ತನ್ನ ಭವಿಷ್ಯದ ಇ.ವಿ(ಇಲೆಕ್ಟ್ರಿಕ್) ವಾಹನಗಳ ಬಗ್ಗೆ ಘೋಷಿಸಿತು.

ಎರಡು ಯೋಜಿತ ಉತ್ಪಾದನಾ ಮಾದರಿಗಳು ಮತ್ತು ಮೂರು ಪರಿಕಲ್ಪನೆ ಮಾದರಿಗಳ ಹೋಂಡಾ-ಬ್ರಾಂಡ್ ಎಲೆಕ್ಟ್ರಿಕ್ ವಾಹನಗಳ (EV) ವಿಶ್ವ ಪ್ರೀಮಿಯರ್ ಕಾರ್ಯಕ್ರಮವನ್ನು ಹೋಂಡಾ ಕಂಪನಿ ನಡೆಸಿತ್ತು.

ಹೋಂಡಾ 2030 ರ ನಂತರ ಚೀನಾದಲ್ಲಿ ಪರಿಚಯಿಸುವ ಎಲ್ಲಾ ಹೊಸ ಮಾದರಿಗಳು ಹೈಬ್ರಿಡ್ (HEVs) ಮತ್ತು ಎಲೆಕ್ಟ್ರಿಕ್‌ ವಾಹನಗಳ(EV)ಗಳಾಗಿರುತ್ತವೆ ಎಂದು ತಿಳಿಸಿದೆ. ಮುಂದಿನ ಐದು ವರ್ಷಗಳಲ್ಲಿ ಹೋಂಡಾ ಚೀನಾದಲ್ಲಿ ಮೊದಲ 10 ಹೋಂಡಾ-ಬ್ರಾಂಡ್ ಇವಿ ಮಾದರಿಗಳನ್ನು ಪರಿಚಯಿಸುತ್ತದೆ, ಅವುಗಳೆಂದರೆ “ಇ: ಎನ್ ಸರಣಿ” ಗಳಾಗಿರಲಿವೆ ಮತ್ತು ಹೋಂಡಾ ಈ ಮಾದರಿಗಳನ್ನು ಭವಿಷ್ಯದಲ್ಲಿ ಚೀನಾದಿಂದ ರಫ್ತು ಮಾಡಲಿದೆ ಎಂದು ತಿಳಿಸಿದೆ.

ಮೊದಲ ಹಂತದಲ್ಲಿ ಕ್ರಮವಾಗಿ ಇ:ಎನ್‌ ಸರಣಿಯ ಮಾದರಿಗಳಾದ ಇ:ಎನ್‌ ಎಸ್1‌ ಮತ್ತು ಈ:ಎನ್ ಪಿ1 ಮಾದರಿಗಳನ್ನು ಕ್ರಮವಾಗಿ ಡಾಂಗ್ಫಾಂಗ್‌ ಹೋಂಡಾ(Dongfeng Honda) ಮತ್ತು ಜಿಎಸಿ (GAC Honda) ಹೋಂಡಾ ಹೆಸರಿನಲ್ಲಿ 2022ಕ್ಕೆ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದೆ.

ಇನ್ನು 5 ವರ್ಷದ ಒಳಗೆ ಮಾರಾಟವನ್ನು ಆರಂಭಿಸುವ ಗುರಿಯೊಂದಿಗೆ ಮೂರು ಪರಿಕಲ್ಪನೆಯ ಮಾದರಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಹೋಂಡಾ ಚೀನಾದಲ್ಲಿ ತನ್ನ ಮಾರಾಟ ಜಾಲವನ್ನು ಹೆಚ್ಚಿಸಲು ಆರಂಭಿಸಿದ್ದು, ಪೂರ್ಣ ಪ್ರಮಾಣದ ಎಲೆಕ್ಟ್ರಿಕ್ ವಾಹನಗಳ ವ್ಯಾಪಾರ ಆರಂಭಕ್ಕೆ ತಯಾರಿ ನಡೆಸುತ್ತಿದೆ. ಸದ್ಯಕ್ಕೆ ಇವುಗಳ ಮಾರಾಟವನ್ನು ಈಗಿರುವ ಮಾರುಕಟ್ಟೆಗಳ ವ್ಯಾಪ್ತಿಯಲ್ಲಿ ನಡೆಸಲಾಗುವುದು. ಆದರೆ, ಭವಿಷ್ಯದಲ್ಲಿ ಇ: ಎನ್ ಸರಣಿ ಮಾರಾಟ ವ್ಯಾಪ್ತಿಯನ್ನು ಇತರ ಪ್ರದೇಶಗಳಿಗೆ ವಿಸ್ತರಿಸಲಾಗುವುದು ಮತ್ತು ಪ್ರಮುಖ ನಗರಗಳಲ್ಲಿ ಇ: ಎನ್ ಡೀಲರ್‌ಶಿಪ್ ಸ್ಥಳಗಳನ್ನು ಪ್ರಾರಂಭಿಸಲಾಗುವುದು ಎಂದು ಕಂಪನಿ ತಿಳಿಸಿದೆ.

ಡಾಂಗ್ಫಾಂಗ್‌ ಹೋಂಡಾ(Dongfeng Honda) ಮತ್ತು ಜಿಎಸಿ (GAC Honda) ವಾಹನಗಳ ಉತ್ಪಾದನೆಯನ್ನು 2024ರಲ್ಲಿ ಪ್ರಾರಂಭಿಸುವ ಉದ್ದೇಶಗಳೊಂದಿಗೆ ಇವುಗಳ ಉತ್ಪಾದನೆಗಾಗಿಯೇ ಹೊಸ ಉತ್ಪಾದನಾ ಘಟಕಗಳನ್ನು ನಿರ್ಮಿಸಲಾಗುವುದು ಎಂದು ತಿಳಿಸಿದೆ.

ಹೋಂಡಾ ಸೆನ್ಸಿಂಗ್ 360, ಓಮ್ನಿಡೈರೆಕ್ಷನಲ್ ಅಡ್ವಾನ್ಸ್ಡ್ ಡ್ರೈವರ್-ಅಸಿಸ್ಟೆನ್ಸ್ ಸಿಸ್ಟಮ್ (ADAS)ಅನ್ನು  2022ಕ್ಕೆ ಚೀನಾದಲ್ಲಿ ಆರಂಭಿಸಲಿದೆ. ಹೋಂಡಾ ಅಪ್ಲಿಕೇಶನ್ ಅನ್ನು ಜಾಗತಿಕವಾಗಿ ವಿಸ್ತರಿಸುವುದನ್ನು ಮುಂದುವರಿಸುತ್ತದೆ ಮತ್ತು ಎಲ್ಲಾ ಆಟೋಮೊಬೈಲ್ ಮಾದರಿಗಳಿಗೆ ಅನ್ವಯಿಸಲು ಆಗುವಂತೆ ಆ ಅಪ್ಲಿಕೇಷನ್ ಗಳನ್ನು ಅಬಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು. 2030 ರ ವೇಳೆಗೆ ಚೀನಾ ಸೇರಿದಂತೆ ವಿಶ್ವದ ಪ್ರಮುಖ ಅಟೋಮೊಬೈಲ್‌ ಮಾರುಕಟ್ಟೆಗಳು ಈ ಅಪ್ಲಿಕೇಷನ್‌ ಮಾದರಿಗಳನ್ನು ಹೊಂದಲಿವೆ ಎಂದು ಕಂಪನಿ ತಿಳಿಸಿದೆ.

ಈ ವರ್ಷದ ಏಪ್ರಿಲ್‌ನಲ್ಲಿ, ಹೋಂಡಾ ತನ್ನ ಇಲೆಕ್ಟ್ರಿಕ್‌ ವಾಹನಗಳನ್ನು ಉತ್ಪಾದಿಸುವ ಗುರಿಯನ್ನು ಘೋಷಿಸಿದೆ, ಇದರಲ್ಲಿ ಎಲೆಕ್ಟ್ರೈಫಿಕೇಶನ್‌ನ ಎಲ್ಲಾ ಪ್ರಮುಖ ಮಾರುಕಟ್ಟೆಗಳೂ ಸೇರಿವೆ, ಇದು ಇವಿಗಳು ಮತ್ತು ಎಫ್‌ಸಿವಿಗಳ ಅನುಪಾತವನ್ನು 2030 ರ ವೇಳೆಗೆ ಶೇ.40 ಕ್ಕೆ ಮತ್ತು 2035 ರ ವೇಳೆಗೆ ಶೇ.80 ಕ್ಕೆ ಹೆಚ್ಚಿಸುವುದು ಗುರಿಯನ್ನು ಹೊಂದಿದೆ. 2040 ರ ವೇಳೆಗೆ 100% ಗೆ ಈ ಗುರಿಗಳನ್ನು ತ್ವರಿತವಾಗಿ ಮತ್ತು ಸ್ಥಿರವಾಗಿ ಸಾಧಿಸಲು ಕಂಪನಿ ಮುಂದಾಗಿದೆ.

ಟಾಪ್ ನ್ಯೂಸ್

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.