ಮುಂದಿನ ವಾರ ಎಲ್ಪಿಜಿ ಬೆಲೆ ಹೆಚ್ಚಳ?
Team Udayavani, Oct 28, 2021, 6:48 AM IST
ಹೊಸದಿಲ್ಲಿ: ಮುಂದಿನ ವಾರ ಅಡುಗೆ ಅನಿಲ ಸಿಲಿಂಡರ್ ಬೆಲೆ 100 ರೂ. ಏರಿಕೆಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಸ್ಪಷ್ಟನೆ ನೀಡಿದ ಕೇಂದ್ರ ಸರಕಾರದ ಹಿರಿಯ ಅಧಿಕಾರಿಯೊಬ್ಬರು ಸರಕಾರ ಅನುಮತಿ ನೀಡಿದರೆ ಮಾತ್ರ ನಿರ್ಣಯ ಜಾರಿಯಾಗಲಿದೆ.
ತೈಲ ಕ್ಷೇತ್ರದಲ್ಲಿ ಉಂಟಾದ ನಷ್ಟದ ಹಿನ್ನೆಲೆಯಲ್ಲಿ ಬೆಲೆ ಹೆಚ್ಚಳಕ್ಕೆ ಯೋಚಿಸಲಾಗುತ್ತಿದೆ. ಒಂದು ವೇಳೆ, ಬೆಲೆ ಏರಿಕೆಗೆ ಅನುಮತಿ ನೀಡಿದ್ದೇ ಆದ ರೆ ಸಬ್ಸಿಡಿ ರಹಿತ ಮತ್ತು ಸಬ್ಸಿಡಿ ರಹಿತ ವಿಭಾಗಗಳಲ್ಲಿ ಇತ್ತೀಚಿನ ದಿನಗಳಲ್ಲಿ 5ನೇ ಏರಿಕೆಯಾಗಲಿದೆ.
ಅ.6ರಂದು ಅಡುಗೆ ಅನಿಲ ಸಿಲಿಂಡರ್ಗೆ 15 ರೂ. ಏರಿಕೆ ಮಾಡಲಾಗಿತ್ತು. ಸದ್ಯ ಬೆಂಗಳೂರಿನಲ್ಲಿ 14 ಕೆಜಿ ತೂಕದ ಅಡುಗೆ ಅನಿಲ ಸಿಲಿಂಡರ್ ಬೆಲೆ 902.50 ರೂ. ಆಗಿದೆ. ಜುಲೈ ಬಳಿಕ ಇದುವರೆಗೆ 90 ರೂ. ವರೆಗೆ ಏರಿಕೆಯಾದಂತಾಗಿದೆ.
ಇದನ್ನೂ ಓದಿ:ಪಶ್ಚಿಮ ಬಂಗಾಳದಲ್ಲಿ ಪಟಾಕಿ ಬ್ಯಾನ್
ಬೆಲೆ ಏರಿಕೆ
2 ದಿನಗಳ ವಿರಾಮದ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆ ಪ್ರತೀ ಲೀಟರ್ಗೆ ಬುಧವಾರ 35 ಪೈಸೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಪ್ರತೀ ಲೀಟರ್ ಪೆಟ್ರೋಲ್ಗೆ 36 ಪೈಸೆ ಏರಿಕೆಯಾಗಿ 111.70 ರೂ., ಪ್ರತೀ ಲೀಟರ್ ಡೀಸೆಲ್ಗೆ 37 ಪೈಸೆ ಏರಿಕೆಯಾಗಿ 102.60 ರೂ. ಏರಿಕೆಯಾಗಿದೆ. ಹೊಸ ದಿ ಲ್ಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ಗೆ 107.94 ರೂ., ಡೀಸೆಲ್ಗೆ 96.67 ರೂ. ಆಗಿದೆ.