ಇದು ಪಾರ್ಟಿ ಪೋಸ್ಟರ್ ಅಲ್ಲ.. ಮದುವೆ ಆಮಂತ್ರಣ!
Team Udayavani, Nov 15, 2021, 7:26 PM IST
ಲಕ್ನೋ: ರಾಜಕೀಯ ಕಾರ್ಯಕ್ರಮಗಳು, ಸರ್ಕಾರಿ ಕಾರ್ಯಕ್ರಮಗಳ ಆಮಂತ್ರಣಗಳಲ್ಲಿ ರಾಜಕೀಯ ನಾಯಕರ ಫೋಟೋಗಳಿರುತ್ತವೆ. ಆದರೆ ಉತ್ತರ ಪ್ರದೇಶದಲ್ಲಿ ವ್ಯಕ್ತಿಯೊಬ್ಬರ ಮದುವೆ ಆಮಂತ್ರಣದಲ್ಲೂ ಬರೀ ರಾಜಕಾರಣಿಗಳ ಫೋಟೋ ಹಾಕಲಾಗಿದೆ!
ಪ್ರತಾಪಗಢ ಜಿಲ್ಲೆಯ ಅಭಿಷೇಕ್ ಸರೋಜ್ ನ.20ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದು, ಆಮಂತ್ರಣ ಪತ್ರವೂ ಸಿದ್ಧವಾಗಿದೆ. ಆದರೆ ಅಭಿಷೇಕ್ರ ಸಹೋದರ ಸಮಾಜವಾದಿ ಪಕ್ಷದ ಅಖೀಲೇಶ್ ಯಾದವ್ರ ಅಭಿಮಾನಿಯಾಗಿರುವ ಕಾರಣ ಆಮಂತ್ರಣ ಪತ್ರವನ್ನು ವಿಶೇಷವಾಗಿ ಮಾಡಿಸಲಾಗಿದೆ.
ಪಕ್ಷದ ಬಣ್ಣವಾದ ಕೆಂಪು, ಹಸಿರು ಬಣ್ಣದಲ್ಲೇ ಇರುವ ಆಮಂತ್ರಣ ಪತ್ರಿಕೆಯಲ್ಲಿ ಅಖೀಲೇಶ್, ಮುಲಾಯಂ ಸಿಂಗ್ ಫೋಟೋ, ಅವರ ಆಡಳಿತಾವಧಿಯಲ್ಲಿ ಜಾರಿಯಾದ ಯೋಜನೆಗಳ ಫೋಟೋಗಳನ್ನು ಮುದ್ರಿಸಲಾಗಿದೆ.
ಇದನ್ನೂ ಓದಿ:ಗಡಿಯಲ್ಲಿ ವಿಫಲ: ಭಾರತದ ವಿರುದ್ಧ ಪಿತೂರಿಗೆ ಚೀನಾ ಹೊಸ ಮಾರ್ಗ?
ಕೊನೆಯಲ್ಲಿ “ಕೆಲಸ ಮಾತನಾಡುತ್ತದೆ’ ಎಂದೂ ಬರೆಯಲಾಗಿದೆ. ವಿಶೇಷವೆಂದರೆ ಈ ಆಮಂತ್ರಣವನ್ನು ಸ್ಥಳೀಯ ಬಿಜೆಪಿ ನಾಯಕರಿಗೂ ನೀಡಲಾಗಿದ್ದು, ಅವರೆಲ್ಲರೂ ಅದನ್ನು ನಗುತ್ತಾ ಸ್ವೀಕರಿಸಿದ್ದಾರಂತೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
MUST WATCH
ಹೊಸ ಸೇರ್ಪಡೆ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ