ಕಾಲ್ನಡಿಗೆಯಲ್ಲಿ ಬ್ರಹ್ಮಾವರ ಟು ಜಮ್ಮು ಕಾಶ್ಮೀರ: 55 ದಿನಗಳಲ್ಲಿ ಜಮ್ಮು ತಲುಪಿದ ಯುವಕ

Team Udayavani, Nov 19, 2021, 8:00 AM IST

ಕಾಲ್ನಡಿಗೆಯಲ್ಲಿ ಬ್ರಹ್ಮಾವರ ಟು ಜಮ್ಮು ಕಾಶ್ಮೀರ: 55 ದಿನಗಳಲ್ಲಿ ಜಮ್ಮು ತಲುಪಿದ ಯುವಕ

ಉಡುಪಿ: ಇದು ಬ್ರಹ್ಮಾವರ ಟು ಜಮ್ಮು ಕಾಶ್ಮೀರ ಏಕಾಂಗಿ ಪಯಣದ ಕಥನ… ನಡಿಗೆ ಮೂಲಕ 55 ದಿನಗಳಲ್ಲಿ ತಲುಪಿ, ಅಲ್ಲಿನ ಜನರಿಗೆ ತುಳುನಾಡಿನ ಹೆಮ್ಮೆಯ ಜಾನಪದ ಕಲೆ ಹುಲಿವೇಷವನ್ನು ಪ್ರದರ್ಶಿಸಿದ್ದಾರೆ ಬ್ರಹ್ಮಾವರ ತಾಲೂಕು ಪೇತ್ರಿ ಸಮೀಪದ ಮುಂಡ್ಕಿನಜಡ್ಡು ನಿವಾಸಿ 22ರ ಹರೆಯದ ಹರ್ಷೇಂದ್ರ.

ಸೆ. 19ರಂದು ಬ್ರಹ್ಮಾವರದಿಂದ ಹೊರಟು ಗೋವಾ, ಮಹಾರಾಷ್ಟ್ರ, ಗುಜರಾತ್‌, ರಾಜಸ್ಥಾನ, ಹರಿಯಾಣ, ಪಂಜಾಬ್‌ ಮೂಲಕ 2,800 ಕಿ.ಮೀ. ದೂರದ ಜಮ್ಮು ಕಾಶ್ಮೀರದ ಪಠಾಣ್‌ಕೋಟ್‌ಗೆ ಸೋಮವಾರ ತಲುಪಿದ್ದಾರೆ. ಮಳೆ, ಬಿಸಿಲಿನ ನಡುವೆ ಪ್ರತೀದಿನ ಗಂಟೆಗೆ ಐದಾರು ಕಿ.ಮೀ.ಯಂತೆ 50 ಕಿ.ಮೀ. ಕ್ರಮಿಸುತ್ತಿದ್ದೆ ಎಂದು ಅವರು ಹೇಳುತ್ತಾರೆ.

ಲಾಡ್ಜ್  ನಲ್ಲಿ ತಂಗಿಲ್ಲ, ಲಘು ಆಹಾರ:

ಕಡಿಮೆ ಬಜೆಟ್‌ನಲ್ಲಿ ಕನಸಿನ ಪಯಣಕ್ಕೆ ಮುನ್ನುಡಿ ಬರೆದ ಹಷೇìಂದ್ರ ಲಾಡ್ಜ್ ನಲ್ಲಿ ಎಲ್ಲಿಯೂ ತಂಗಿಲ್ಲ. ರಾತ್ರಿ ವೇಳೆ ಪೆಟ್ರೋಲ್‌ ಬಂಕ್‌, ಡಾಬಾ, ಪೊಲೀಸ್‌ ಠಾಣೆ, ರೈಲ್ವೇ ಸ್ಟೇಶನ್‌, ದೇವಸ್ಥಾನ, ಮಠಗಳಲ್ಲಿ ಉಳಿದುಕೊಂಡಿದ್ದಾರೆ. ಮಹಾರಾಷ್ಟ್ರ, ಪಂಜಾಬ್‌ಗಳಲ್ಲಿ ಕೆಲವು ಮನೆಯವರು ಆತಿಥ್ಯ ನೀಡಿದ್ದಾರೆ. ಹೊಟೇಲ್‌ಗ‌ಳಲ್ಲಿ ಲಘು ಸಸ್ಯಾಹಾರ ಊಟ, ಉಪಾಹಾರ ಸೇವಿಸಿದ್ದಾರೆ. ದಿನಕ್ಕೆ 5 ಲೀಟರ್‌ ನೀರು ಸೇವನೆ, 12 ಗಂಟೆ ನಡಿಗೆ, 8 ಗಂಟೆ ನಿದ್ರೆ ಮಾಡುತ್ತಿದ್ದೆ. ಹೆಚ್ಚು ಭಾರದ ಲಗೇಜ್‌ ಹೊಂದಿರದೆ ಕೆಲವೇ ಬಟ್ಟೆಗಳು, ಮ್ಯಾಟ್‌, ಬೆಡ್‌ಶೀಟ್‌, ಟೆಂಟ್‌ಸೆಟ್‌, ನೀರಿನ ಬಾಟಲ್‌, ಪ್ರಾಥಮಿಕ ಚಿಕಿತ್ಸಾ ಕಿಟ್‌ಗಳನ್ನು ಹೊಂದಿದ್ದೆ ಎನ್ನುತ್ತಾರೆ ಹರ್ಷೇಂದ್ರ.

ಹುಲಿವೇಷಕ್ಕೆ ಮಾರುಹೋದ ಕಾಶ್ಮೀರಿಗರು :

ಹರ್ಷೇಂದ್ರ ಅವರ ಪಯಣದ ಮೂಲ ಉದ್ದೇಶ ಡ್ರೀಮ್‌ವಾಕ್‌ ಪರಿಕಲ್ಪನೆ ಅಡಿಯಲ್ಲಿ ತುಳುನಾಡು ಬಾವುಟದ ಜತೆಗೆ ಕಾಶ್ಮೀರ ತಲುಪುವುದು ಮತ್ತು ಅಲ್ಲಿ ಹುಲಿವೇಷ ತೊಟ್ಟು ಪ್ರದರ್ಶಿಸುವುದಾಗಿತ್ತು. ಅದರಂತೆ ಮಂಗಳವಾರ ಉತ್ಥಾನದ್ವಾದಶಿ ದಿನ ಅವರ ಕನಸು ಈಡೇರಿದ್ದು, ಜಮ್ಮು ಕಾಶ್ಮೀರ ಗಡಿ ಭಾಗ ಲಕನ್‌ಪುರ್‌ ಎಂಬಲ್ಲಿ ಸ್ಥಳೀಯ ಪೈಂಟರ್‌ಗಳನ್ನು ಹುಡುಕಿ ಹುಲಿವೇಷ ತೊಟ್ಟಿದ್ದಾರೆ. ಹುಲಿವೇಷಕ್ಕೆ ಬೇಕಾದ ಪರಿಕರಗಳನ್ನು ಇವರು ಮನೆಯಿಂದಲೇ ಕೊಂಡೊಯ್ದಿದ್ದರು. ನೂರಾರು ಮಂದಿ ಸ್ಥಳೀಯರು ಒಟ್ಟುಗೂಡಿ ಹುಲಿವೇಷ ಕಂಡು ಅಚ್ಚರಿ ಜತೆಗೆ ಹರ್ಷ ವ್ಯಕ್ತಪಡಿಸಿದರು.

ಡ್ರೀಮ್‌ವಾಕ್‌ ಥೀಂನಲ್ಲಿ ತುಳುನಾಡಿನ ಧ‌Ìಜದೊಂದಿಗೆ ಕಾಶ್ಮೀರಕ್ಕೆ ನಡೆದುಕೊಂಡು ಸಾಗುವುದು ಮತ್ತು ಕರಾವಳಿ ಹೆಮ್ಮೆಯ ಕಲೆ ಹುಲಿವೇಷ ತೊಟ್ಟು ಪ್ರದರ್ಶಿಸುವುದು ನನ್ನ ಕನಸಾಗಿತ್ತು. ಹುಲಿವೇಷ ಪ್ರದರ್ಶನಕ್ಕೆ  ನೂರಾರು ಮಂದಿ ಸ್ಥಳೀಯರು ಸೇರಿದ್ದರು. ಮೆಚ್ಚುಗೆಯ ಮಹಾಪೂರವೇ ಸಿಕ್ಕಿತು. ಈ ಕಾರ್ಯಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವೆ. ನ.18ಕ್ಕೆ ವಿಮಾನದ ಮೂಲಕ ಮಂಗಳೂರು ತಲುಪಿ, ಊರಿಗೆ ಮರಳಲಿದ್ದೇನೆ. -ಹರ್ಷೇಂದ್ರ., ಮುಂಡ್ಕಿನಜಡ್ಡು

ಟಾಪ್ ನ್ಯೂಸ್

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.