ಬೋನಸ್ಗಾಗಿ 600 ಕೋಟಿ!
Team Udayavani, Dec 5, 2021, 7:10 AM IST
ಕೋಪನ್ಹೇಗ್: ವಿಶ್ವದ ಅತೀ ದೊಡ್ಡ ಶಿಪ್ಪಿಂಗ್ ಕಂಪೆನಿ ಎನ್ನುವ ಹೆಗ್ಗಳಿಕೆ ಪಡೆದಿರುವ ” ಮಯೆರ್ಸ್ಕಾ ಸಂಸ್ಥೆ ತನ್ನ ಸಿಬಂದಿಗೆ ಖುಷಿಯ ವಿಚಾರವೊಂದನ್ನು ನೀಡಿದೆ. ವಿಶ್ವಾದ್ಯಂತ ಕೆಲಸ ಮಾಡುತ್ತಿರುವ ಮಯೆರ್ಸ್ಕಾ ಸಿಬಂದಿಗೆ ತಲಾ 1,000 ಡಾಲರ್ ಅಂದರೆ ಸರಿ ಸುಮಾರು 75,000 ರೂಪಾಯಿ ಬೋನಸ್ ನೀಡುವುದಾಗಿ ಘೋಷಿಸಲಾಗಿದೆ.
ಈ ಸಂಸ್ಥೆಯಲ್ಲಿ ಒಟ್ಟು 80,000 ಕೆಲಸಗಾರರಿದ್ದು, ಅವರೆಲ್ಲರಿಗೂ ಈ ಬೋನಸ್ ನೀಡಲಾಗುವುದು. ಅದಕ್ಕೆಂದೇ ಸಂಸ್ಥೆ ಬರೋಬ್ಬರಿ 80 ಮಿಲಿಯನ್ ಡಾಲರ್(600 ಕೋಟಿ ರೂ.) ಎತ್ತಿಟ್ಟಿದೆ. ಸಂಸ್ಥೆಯ ಹಿರಿಯ ಮ್ಯಾನೇಜರ್ ಸ್ಥಾನದಲ್ಲಿ ರುವ 400 ಸಿಬಂದಿಗೆ ಮಾತ್ರ ಬೋನಸ್ ನೀಡಲಾಗುವುದಿಲ್ಲ ಎಂದು ತಿಳಿಸಲಾಗಿದೆ.
ಏಕೆ ಈ ಬೋನಸ್?: ಮಯೆರ್ಸ್ಕಾ ಸಂಸ್ಥೆಗೆ 117 ವರ್ಷ ಗಳ ಇತಿಹಾಸವಿದೆ. ಇಷ್ಟು ದೀರ್ಘ ಇತಿಹಾಸವಿರುವ ಕಂಪೆನಿ ಕಳೆದ ತ್ತೈಮಾಸಿಕದಲ್ಲಿ ಅತೀ ಹೆಚ್ಚು ಲಾಭ ಗಳಿಸಿದೆಯಂತೆ. ಒಂದೇ ತ್ತೈಮಾಸಿಕದಲ್ಲಿ 5.9 ಬಿಲಿಯನ್ ಡಾಲರ್(44,000 ಕೋಟಿ ರೂ.) ಲಾಭ ವರದಿಯಾಗಿದೆ. ಆ ಹಿನ್ನೆಲೆಯಲ್ಲಿ ಎಲ್ಲ ಸಿಬಂದಿಗೆ ಬೋನಸ್ ನೀಡುವ ನಿರ್ಧಾರ ಮಾಡಲಾಗಿದೆ. ಈಗಿನ ತ್ತೈಮಾಸಿಕದಲ್ಲೂ ಸಂಸ್ಥೆ ಅದೇ ಪ್ರಮಾಣದಲ್ಲಿ ಲಾಭ ಗಳಿಸುವ ಸಾಧ್ಯತೆಯಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ. ಅಂದ ಹಾಗೆ ಕಳೆದ ವರ್ಷವೂ ತ್ತೈಮಾಸಿಕವೊಂದರಲ್ಲಿ 2.9 ಬಿಲಿಯನ್ ಡಾಲರ್(21 ಸಾವಿರ ಕೋಟಿ ರೂ.) ಲಾಭ ಆಗಿದ್ದರ ಹಿನ್ನೆಲೆಯಲ್ಲಿ ಸಂಸ್ಥೆ ಸಿಬಂದಿಗೆ ತಲಾ 1,000 ಡಾಲರ್ ಬೋನಸ್ ನೀಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !
ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ
ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ
Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ
ವಚನ ಬದುಕು ಚಂದಾಗಿಸುವ ಕಾಲಾತೀತ ದಿವ್ಯ ಸಂದೇಶ: ಶಿವಾಚಾರ್ಯರು