ಇರುಳಿಗರ ನಿವೇಶನದ ಕನಸಿಗೆ ಸ್ಪಂದಿಸಿದ ಜಿಲ್ಪಾಡಳಿತ


Team Udayavani, Dec 20, 2021, 1:16 PM IST

ಇರುಳಿಗರ ನಿವೇಶನದ ಕನಸಿಗೆ ಸ್ಪಂದಿಸಿದ ಜಿಲ್ಪಾಡಳಿತ

ರಾಮನಗರ: ತಾಲೂಕಿನ ಕೂಟಗಲ್‌ ಗ್ರಾಮದ ಸರ್ಕಾರಿ ಆಸ್ಪತ್ರೆಯ ಬಳಿ 4 ದಶಕಗಳಿಂದ ಯಾವುದೇ ಮೂಲ ಸೌಕರ್ಯಗಳು ಇಲ್ಲದೆ ವಾಸವಾಗಿರುವ ಇರುಳಿಗ ಕುಟುಂಬಗಳಿಗೆ ಈಗ ಸ್ವಂತ ನಿವೇಶನ ಹೊಂದುವ ಸಕಾಲ ಪ್ರಾಪ್ತವಾಗಿದೆ.

ಸುಮಾರು 4 ದಶಕಗಳಿಂದ ಸುಮಾರು 40 ರಿಂದ 45 ಇರುಳಿಗ, ಬುಡಕಟ್ಟು ಸಮುದಾಯದ ಕುಟುಂಬಗಳು ಕೂಟಗಲ್‌ ಗ್ರಾಮದಲ್ಲಿ ವಾಸವಾಗಿದ್ದರು. ತೀವ್ರ ನಿರ್ಲಕ್ಷಕ್ಕೆ ಒಳಗಾಗಿದ್ದರು. ಜಿಲ್ಲಾಡಳಿತ,ತಾಲೂಕು ಆಡಳಿತ, ಗ್ರಾಪಂ ಇಲ್ಲಿ ಯಾವ ಮೂಲ ಸೌಕರ್ಯಗಳನ್ನು ಕಲ್ಪಿಸಿರಲಿಲ್ಲ. ಈ ಕುಟುಂಬಗಳಿಗೆಸ್ವಂತ ನಿವೇಶನ ಕಲ್ಪಿಸಿಕೊಡಲು ಸರ್ವೆಸಂಖ್ಯೆ 43ರಲ್ಲಿ 5 ಎಕರೆ ಭೂಮಿಯನ್ನು ಗುರುತಿಸಲಾಗಿದ್ದರೂ ಸಹ ನಿವೇಶನಗಳನ್ನು ವಿಂಗಡಿಸಿ ಕೊಟ್ಟಿರಲಿಲ್ಲ.

ಸರ್ವೆ ಸಂಖ್ಯೆ 94ರಲ್ಲಿ 2 ಎಕರೆ ಭೂಮಿ: ಕಳೆದ ತಿಂಗಳು ಸುರಿದ ಭಾರಿ ಮಳೆಯಲ್ಲಿ ಗುಡಿಸಲುಕುಸಿದು ರತ್ನಗಿರಯ್ಯ ಎಂಬ ವೃದ್ಧರೊಬ್ಬರು ಮೃತಪಟ್ಟಿದ್ದರು. ಈ ಘಟನೆಯಿಂದ ಆಕ್ರೋಶಗೊಂಡ ಸಮುದಾಯದ ಪ್ರಮುಖರು ರತ್ನಗಿರಯ್ಯ ಅವರ ಶವವನ್ನು ಡೀಸಿ ಕಚೇರಿ, ಜಿಪಂ ಕಚೇರಿ ಮುಂಭಾಗ ಇಟ್ಟು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದರು. ಈ ಕಾರಣ ತಕ್ಷಣ ಎಚ್ಚೆತ್ತುಕೊಂಡ ಅಧಿಕಾರಿಗಳು ಕೂಟಗಲ್‌ ಸರ್ವೆ ಸಂಖ್ಯೆ 94ರಲ್ಲಿ 2 ಎಕರೆ ಭೂಮಿಯ ನ್ನು ಗುರುತಿಸಿ, ನಿವಶೇನಗಳನ್ನು ವಿಂಗಡಿಸಿಕೊಡುವುದಾಗಿ ತಿಳಿಸಿದ್ದು, ಭೂಮಿ ಸರ್ವೆ ನಡೆಸಿದ್ದಾರೆ.

ನಾಯಕನ ಸ್ಮರಿಸಿದ ತಾತ್ಕಾಲಿಕ ಗುಡಿಸಲು:

ತಾಲೂಕು ಆಡಳಿತ ಸರ್ವೆ ಸಂಖ್ಯೆ 94ರಲ್ಲಿ ಖಚಿತವಾಗಿ ಸ್ಥಳ ಗುರುತಿಸಿರುವ ಕಾರಣ ಕೂಟಗಲ್‌ ಗ್ರಾಮದ ಸರ್ಕಾರಿ ಆಸ್ಪತ್ರೆಯ ಬಳಿ ವಾಸವಿರುವಇರುಳಿಗ ಕುಟುಂಬಗಳು ತಾ ತ್ಕಾಲಿಕ ಗುಡಿಸಲುಗಳನ್ನು ನಿರ್ಮಿಸಿಕೊಳ್ಳಲಾರಂಭಿಸಿದ್ದಾರೆ. ಇರುಳಿಗ, ಬುಡಕಟ್ಟು ಜನಾಂಗದ ನಾಯಕ ಬಿರ್ಸಾಮುಂಡಅವರ ಭಾವಚಿತ್ರವನ್ನು ಇಟ್ಟು ಪೂಜೆ ಸಲ್ಲಿಸಿ, ತಮ್ಮ ಸ್ವಂತ ನೆಲಕ್ಕೆ ರತ್ನಗಿರಿ ಹಾಡಿ ಎಂದು ನಾಮಕರಣಮಾಡಿ ತಾತ್ಕಾಲಿಕ ವಾಗಿ ಗುಡಿಸಲುಗಳನ್ನು ನಿರ್ಮಿಸಿಕೊಳ್ಳಲಾರಂಭಿಸಿದ್ದಾರೆ. ತಾಲೂಕು ಆಡಳಿತ ತಮಗೆ ನಿವೇಶನಗಳನ್ನು ವಿಂಗಡಿಸಿ, ಖಾತೆ ಮಾಡಿಕೊಟ್ಟ ನಂತರ ಸ್ವಂತ ಮನೆ ನಿರ್ಮಿಸಿಕೊಳ್ಳಲು ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಸಮುದಾಯದ ಮುಖಂಡರು ತಿಳಿಸಿದ್ದಾರೆ.

45 ಕುಟುಂಬದ ಆಸರೆಗೆ 5 ಎಕರೆ ಬೇಡಿಕೆ: ಈ ವೇಳೆ ಪತ್ರಿಕೆಯೊಂದಿಗೆ ಮಾತನಾಡಿದ ಇರುಳಿಗಸಂಘಟನೆಯ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ಇರುಳಿಗ, 40 ವರ್ಷಗಳಿಂದ ಈ ಭಾಗದ ಇರುಳಿಗ ಕುಟುಂಬಗಳು ಅನುಭವಿಸಿದ ಯಾತನೆಗೆ ಸ್ಪಲ್ಪ ಮಟ್ಟಿಗೆ ಪರಿಹಾರ ಸಿಕ್ಕಂತಾಗಿದೆ. ತಮ್ಮೊಂದಿಗೆ ರಾಜು, ಬಾಲರಾಜ್ ಮಹದೇವಯ್ಯ, ಶಿವರಾಜ್ ಜೆ.ಎಲ್., ಸಂಶೋಧನಾ ವಿದ್ಯಾರ್ಥಿ ಎಸ್‌.ರುದ್ರೇಶ್ವರ, ಡಾ. ಕೆ.ವಿ.ಕೃಷ್ಣಮೂರ್ತಿ ಮುಂತಾದವರು ಜಿಲ್ಲಾಡಳಿತ, ಜಿಪಂ ಮೇಲೆ ಒತ್ತಡ ಹೇರಲು ನೆರವಾಗಿದ್ದಾರೆ. ಜಿಲ್ಲಾಡಳಿತ, ಜಿಪಂ ಸಹ ತಮ್ಮ ಮನವಿಗೆ ಸ್ಪಂದಿಸಿದೆ. ನಿವೇಶನ ವಿತರಿಸಲು ಮುಂದಾಗಿದ್ದಾರೆ.

ಆದರೆ 45 ಕುಟುಂಬಗಳಿಗೆ ನಿವೇಶನಗಳನ್ನು ವಿತರಿಸಬೇಕಾಗಿದೆ. ಈ ಹಿಂದೆ ಸರ್ವೆ ಸಂಖ್ಯೆ 43ರಲ್ಲಿ 5 ಎಕರೆ ಗುರುತಿಸಲಾಗಿತ್ತು. ತಾಲೂಕು ಆಡಳಿತ ಈಗ ಸರ್ವೆ ಸಂಖ್ಯೆ 94ರಲ್ಲಿ ಕೇವಲ 2 ಎಕರೆ ಭೂಮಿ ಕೊಟ್ಟಿದೆ. ಎಲ್ಲ 45 ಕುಟುಂಬಗಳಿ ಗೂ ನಿವೇಶನಬೇಕಾಗಿದ್ದು, 5 ಎಕರೆ ಭೂಮಿ ಮಂಜೂರು ಮಾಡ ಬೇಕು ಎಂದು ಒತ್ತಾಯಿಸಿದ್ದಾರೆ.

ರತ್ನಗಿರಿ ಹಾಡಿ ಎಂದು ನಾಮಕರಣ: ಇರುಳಿಗರ

ಭವಣೆಯನ್ನು ಕಂಡ ಜಿಲ್ಲಾಧಿಕಾರಿ ಡಾ.ರಾಕೇಶ್‌ ಕುಮಾರ್‌ ಮತ್ತು ಸಿಇಒ ಇಕ್ರಮ್‌ ಸ್ಪಂದಿಸಿದ್ದಾರೆ.ಭೂಮಿ ಗುರುತಿಸಿದ್ದಾರೆ. ಇರುಳಿಗ ಕುಟುಂಬಗಳುಗುರುತಿಸಿರುವ ಭೂಮಿಯಲ್ಲೇ ತಾತ್ಕಾಲಿಕವಾಗಿ ಗುಡಿಸಲುಗಳನ್ನು ನಿರ್ಮಿಸಿಕೊಳ್ಳಲಾರಂಭಿದ್ದಾರೆ. ತಮ್ಮದೇಆದ ಸ್ಥಳಕ್ಕೆ ಕುಟುಂ ಬಗಳು ರತ್ನಗಿರಿ ಹಾಡಿ ಎಂದು ನಾಮಕರಣ ಮಾಡಿದ್ದಾರೆ. ಊರಿನ ಪ್ರಮುಖರಾದಸಂಜೀವಯ್ಯ, ಮಂಜುನಾಥ್‌.ಕೆ.ಎಚ್‌ ಸೇರಿದಂತೆಹಲವರು ಸಹ ಸಹಕಾರ ಕೊಟ್ಟಿದ್ದಾರೆ. ಜಿಲ್ಲಾಡಳಿತ ನೂತನವಾಗಿ ನಿವೇಶನಗಳನ್ನು ವಿಂಗಡಿಸಿದ ನಂತರ ಅಗತ್ಯ ಮೂಲಭೂತ ಸೌಕರ್ಯಗಳನ್ನು ಸಹ ಕಲ್ಪಿಸಿಕೊಡಬೇಕು ಎಂದು ಅವರು ಜಿಲ್ಲಾಧಿಕಾರಿಗಳು ಹಾಗು ಸಿಇಒ ಅವರನ್ನು ಆಗ್ರಹಿಸಿದ್ದಾರೆ.

ಸಿಇಒ ಭೇಟಿ ಪರಿಶೀಲನೆ :

ಕೂಟಗಲ್‌ ಗ್ರಾಮದಲ್ಲಿ ಇರುಳಿಗ ಕುಟುಂಬಗಳಿಗೆ ನಿವೇಶನ ವಿತರಿಸಲು ಗುರುತಿಸಿರುವ ಸ್ಥಳಕ್ಕೆ ಜಿಪಂಸಿಇಒ ಇಕ್ರಮ್‌ ಇತ್ತೀಚಿಗಷ್ಟೇ ಭೇಟಿ ಕೊಟ್ಟಿದ್ದರು.ಭೂಮಿ ಸರ್ವೆ, ನಿವೇಶನಗಳ ವಿಂಗಡಣೆಗೆ ಕೈಗೊಂಡಿರುವ ಕ್ರಮಗಳು ಇತ್ಯಾದಿ ವಿಚಾರಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಇದೇ ವೇಳೆಅವರು ಇರುಳಿಗ ಕುಟುಂಬಗಳು ಮತ್ತು ಕೂಟಗಲ್‌ ಗ್ರಾಮಸ್ಥರ ಅಹವಾಲು ಆಲಿಸಿದರು.

ಕೂಟಗಲ್‌ ಗ್ರಾಮದ ಸರ್ವೆ ಸಂಖ್ಯೆ 94ರಲ್ಲಿ 2 ಎಕರೆ ಭೂಮಿ ಯನ್ನು ಇರುಳಿಗರ ವಸತಿ ಲೇಔಟ್‌ಗೆಂದು ಜಿಲ್ಲಾಧಿಕಾರಿಗಳು ಸೂಚಿಸಿ ಆದೇಶಿಸಿದ್ದಾರೆ. ಇನ್ನು ಸಾಕಷ್ಟು ಪ್ರಕ್ರಿಯೆಗಳು ನಡೆಯಬೇಕಾಗಿದೆ. ಅರ್ಹ ಕುಟುಂಬಗಳಿಂದ ಅಗತ್ಯ ದಾಖಲೆ ಪಡೆದುಕೊಂಡು, 30×40 ಅಳತೆಯ ನಿವಶೇನಗಳನ್ನು ವಿಂಗಡಿಸಲಾಗುವುದು. ಮುನಿಯಪ್ಪ, ಪಿಡಿಒ, ಕೂಟಗಲ್‌ ಗ್ರಾಪಂ

ಬಿ.ವಿ.ಸೂರ್ಯ ಪ್ರಕಾಶ್‌

ಟಾಪ್ ನ್ಯೂಸ್

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

police

Bidar; ಹಣ ಹಂಚುವ ದೂರು: ನಾಗಮಾರಪಳ್ಳಿ‌ ಮನೆಯಲ್ಲಿ ಪರಿಶೀಲನೆ

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.