ಶೀಘ್ರ ದೇಗುಲ  ಸ್ವತಂತ್ರ: ದೇವಾಲಯಗಳನ್ನು ನಿಯಂತ್ರಣ ಕಾಯ್ದೆಗಳಿಂದ ಮುಕ್ತಗೊಳಿಸಲು ಚಿಂತನೆ

ಬಜೆಟ್‌ಗೆ ಮುಂಚೆಯೇ ಕಾನೂನು ತರಲಾಗುವುದೆಂದ ಮುಖ್ಯಮಂತ್ರಿ

Team Udayavani, Dec 30, 2021, 7:00 AM IST

ಶೀಘ್ರ ದೇಗುಲ  ಸ್ವತಂತ್ರ: ದೇವಾಲಯಗಳನ್ನು ನಿಯಂತ್ರಣ ಕಾಯ್ದೆಗಳಿಂದ ಮುಕ್ತಗೊಳಿಸಲು ಚಿಂತನೆ

ಹುಬ್ಬಳ್ಳಿ/ಬೆಂಗಳೂರು: ಮತಾಂತರ ನಿಷೇಧ ಕಾಯ್ದೆ ಬೆನ್ನಲ್ಲೇ ಹಿಂದೂ ದೇವಾಲಯಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಡಲು ಸರಕಾರ ಮುಂದಾಗಿದೆ.

ಬಹುದಿನಗಳ ಬೇಡಿಕೆಯಂತೆ ದೇಗುಲಗಳನ್ನು ನಿಯಂತ್ರಣ ಕಾಯ್ದೆಗಳಿಂದ ಮುಕ್ತಗೊಳಿ ಸಲು ಕಾನೂನು ತರಲು ಚಿಂತನೆ ನಡೆಸಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹುಬ್ಬಳ್ಳಿಯ ಬಿಜೆಪಿ ಕಾರ್ಯಕಾರಿಣಿ ಸಮಾರೋಪದಲ್ಲಿ ಈ ಕುರಿತು ಹೇಳಿಕೆ ನೀಡಿದ್ದು, ದೇಗುಲಗಳನ್ನು ಸ್ವತಂತ್ರಗೊಳಿಸಲು ಬಜೆಟ್‌ ಪೂರ್ವದಲ್ಲಿಯೇ ಕಾನೂನು ತರಲಾಗುವುದು ಎಂದು ಹೇಳಿದ್ದಾರೆ.

ದೇಗುಲಗಳ ಅಭಿವೃದ್ಧಿಗೆ ನಿಯಂತ್ರಣ ಕಾಯ್ದೆ ಅಡ್ಡಿಯಾಗುತ್ತಿರುವುದು ಗಮನಕ್ಕೆ ಬಂದಿದೆ. ಇತರ ಪ್ರಾರ್ಥನಾ ಮಂದಿರಗಳಿಗೆ ಇಲ್ಲದ ಕಾಯ್ದೆ, ನಿಯಂತ್ರಣ ಹಿಂದೂ ದೇವಸ್ಥಾನಗಳಿಗೆ ಮಾತ್ರ ಯಾಕೆ ಎಂಬ ನಿಟ್ಟಿನಲ್ಲಿ ಅನೇಕ ಹಿರಿಯರ ಅನಿಸಿಕೆಗೆ ಪೂರಕವಾಗಿ ಬಜೆಟ್‌ ಮಂಡನೆ ಪೂರ್ವದಲ್ಲಿಯೇ ದೇವಸ್ಥಾನಗಳನ್ನು ನಿಯಂತ್ರಣ ಕಾಯ್ದೆಯಿಂದ ಮುಕ್ತವಾಗಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದರು.

ರಾಜ್ಯದ ಅಂಜನಾದ್ರಿ ಬೆಟ್ಟವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಪಡಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟಿಸಲಾಗುವುದು ಎಂದರು.

ಆಶಾದಾಯಕ ಬಜೆಟ್‌
ಬಜೆಟ್‌ಗಳು ತಮ್ಮ ನಿರೀಕ್ಷೆಗಳಿಗೆ ಆಶಾ ದಾ ಯಕ ವಾಗಿಲ್ಲ ಎಂಬ ನೋವು ಜನತೆ ಯದ್ದಾಗಿದೆ. ಯಾರಿಗಾಗಿ ನಾವು ಬಜೆಟ್‌ ಮಾಡು ತ್ತೇವೆಯೋ ಅವರಲ್ಲಿ ಆಶಾಭಾವನೆ ಮೂಡಿ ಸುವ, ಅವರಿಗೆ ತೃಪ್ತಿ ತರುವ ನಿಟ್ಟಿನಲ್ಲಿ ಬಜೆಟ್‌ಗೆ ಹೊಸರೂಪ ನೀಡಲು ಯೋಜಿಸಿದ್ದೇನೆ. ಇದ ಕ್ಕಾಗಿ ಅಧಿಕಾರಿಗಳೊಂದಿಗೆ ಸುದೀರ್ಘ‌ವಾಗಿ ಚರ್ಚಿಸಿದ್ದೇನೆ. ಸಚಿವರು, ಶಾಸಕರೊಂದಿಗೆ ಚರ್ಚಿಸಿ ಬಜೆಟ್‌ ಸಿದ್ಧಪಡಿಸುತ್ತೇನೆ ಎಂದರು.

ಸಾಮಾಜಿಕ ನ್ಯಾಯ ಎಂಬುದು ರಾಜಕೀಯ ಬಂಡವಾಳವಾಗಿ ಬಳಕೆ ಆಗುತ್ತಿದೆ. ಸಾಮಾಜಿಕ ನ್ಯಾಯಕ್ಕೆ ಸಕಾರಾತ್ಮಕತೆ ನೀಡುವ ಚಿಂತನೆ ನಡೆದಿದೆ. ಸಾಮಾಜಿಕ ಸಮಾನತೆ-ಅವಕಾಶಗಳು ನೀಡಲಾಗಿದೆ. ಆಡಳಿತಾತ್ಮಕ ನ್ಯೂನತೆಗಳ ನಿವಾ ರಣೆಗೆ ಯತ್ನಿಸಲಾಗುವುದು. ನಾಲ್ಕೆ „ದು ತಿಂಗಳುಗಳಿಂದ ಸರಕಾರದಲ್ಲಿ ಭದ್ರ ಬುನಾದಿ ಕಾರ್ಯ ಮಾಡಿದ್ದು, ಜನವರಿಯಿಂದ ಎರಡನೇ ಆಯಾಮ ನೀಡುತ್ತೇನೆ. ಆಡಳಿತಾತ್ಮಕವಾಗಿ ಗಟ್ಟಿತನದ ನಿಲುವು ಕೈಗೊಳ್ಳುವೆ. ಇರುವ ವ್ಯವಸ್ಥೆ ಸರಿಪಡಿಸುವ, ಭ್ರಷ್ಟಾಚಾರ ಇಲ್ಲದೆ ಪಾರದರ್ಶಕ ಆಡಳಿತ ನೀಡುವುದಕ್ಕೆ ಒತ್ತು ನೀಡುವೆ. ಅಭಿವೃದ್ಧಿ, ರಾಜ್ಯದ ಹಿತ ಕಾಯುವ ವಿಚಾರದಲ್ಲಿ ಯಾವುದೇ ರಾಜಿಗೆ ಸಿದ್ಧನಿಲ್ಲ ಎಂದು ಅತ್ಯಂತ ಜವಾಬ್ದಾರಿ ಯುತವಾಗಿ ಹೇಳುತ್ತಿದ್ದೇನೆ ಎಂದರು.

ಇದನ್ನೂ ಓದಿ:ದಲಿತರ ರಕ್ಷಣೆಗೆ ಸರಕಾರ ಬದ್ಧ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಪ್ರತಿಷ್ಠೆ, ಸ್ವ ಹಿತಾಸಕ್ತಿ ಇಲ್ಲ
ನನಗೆ ಯಾವುದೇ ಪ್ರತಿಷ್ಠೆ, ಸ್ವ ಹಿತಾಸಕ್ತಿ ಇಲ್ಲ. ನನಗೇನಿದ್ದರೂ ಪಕ್ಷ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಷ್ಠೆ, ರಾಜ್ಯದ ಜನರ ಹಾಗೂ ಪಕ್ಷದ ಕಾರ್ಯಕರ್ತರ ಹಿತ ಮುಖ್ಯವಾಗಿದೆ. ಪಕ್ಷದ ವರಿಷ್ಠರು, ಹಿರಿಯರಾದ ಯಡಿಯೂ ರಪ್ಪ, ಜಗದೀಶ ಶೆಟ್ಟರ್‌, ಸದಾನಂದ ಗೌಡರ ಮಾರ್ಗದರ್ಶನದಲ್ಲಿ ಸಂಪುಟ ಸಹೋದ್ಯೋಗಿ ಗಳು, ಶಾಸಕರು, ಕಾರ್ಯಕರ್ತರ ಸಹಕಾರ ಹಾಗೂ ಅಭಿವೃದ್ಧಿಯ ರಿಪೋರ್ಟ್‌ ಕಾರ್ಡ್‌ ನೊಂದಿಗೆ 2023ರ ಚುನಾವಣೆಗೆ ಜನರ ಮುಂದೆ ಹೋಗುತ್ತೇನೆ ಎಂದು ಬೊಮ್ಮಾಯಿ ಹೇಳಿದರು.

ಕನಸು ತೆರೆದಿಟ್ಟ ಸಿಎಂ
ಕಾರ್ಯಕಾರಿಣಿ ಸಮಾರೋಪವನ್ನು ಸಿಎಂ ರಾಜ್ಯದ ಅಭಿವೃದ್ಧಿಗೆ ಭವಿಷ್ಯದಲ್ಲಿ ತಮ್ಮ ಯೋಜನೆ, ಬದ§ತೆ ಹಾಗೂ ನೀಲನಕ್ಷೆ ಏನು ಎಂಬುದರ ಬಗ್ಗೆ ಜನತೆ ಹಾಗೂ ಪಕ್ಷದ ನಾಯಕರಿಗೆ ಸಂದೇಶ ರವಾನಿಸಲು ವೇದಿಕೆಯಾಗಿಸಿಕೊಂಡರು. ನರೇಂದ್ರ ಮೋದಿ ಮಾರ್ಗದರ್ಶನದಲ್ಲಿ ರಾಜ್ಯದ ನಾಯಕರನ್ನು ಜತೆಗೂಡಿಸಿಕೊಂಡು ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಶಕ್ತಿ ತನಗಿದೆ ಎಂಬುದನ್ನು ಮನವರಿಕೆ ಮಾಡಿದರು.

ಮತಾಂತರ ತಡೆಗೆ ಕಾರ್ಯಪಡೆ
ಯುಕೆಪಿಗೆ ವರ್ಷಕ್ಕೆ 10 ಸಾವಿರ ಕೋಟಿ ರೂ. ನೀಡುತ್ತೇವೆಂದು 5 ವರ್ಷಗಳಲ್ಲಿ ಕೇವಲ 7,500 ಕೋ. ರೂ. ನೀಡಿ ಯೋಜನೆ ಕೃಷ್ಣಾರ್ಪಣೆ ಮಾಡಿದ್ದ ಕಾಂಗ್ರೆಸ್‌ ಮೇಕೆದಾಟಿಗಾಗಿ ಪಾದಯಾತ್ರೆ ಮಾಡಿ ಕಾವೇರಿಯರ್ಪಣಕ್ಕೆ ಮುಂದಾಗಿದೆ.
– ಬಸವರಾಜ ಬೊಮ್ಮಾಯಿ, ಸಿಎಂ

 

ಟಾಪ್ ನ್ಯೂಸ್

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.