ಬೈಕಂಪಾಡಿ: ಸೀಫುಡ್ ಕಂಪೆನಿಯಲ್ಲಿ ಅಮೋನಿಯಾ ಸೋರಿಕೆ; ಪೊಲೀಸರ ಬಿಗಿ ಬಂದೋಬಸ್ತ್
Team Udayavani, Jan 11, 2022, 11:48 AM IST
ಸಾಂದರ್ಭಿಕ ಚಿತ್ರ
ಬೈಕಂಪಾಡಿ: ಸೀಫುಡ್ ಕಂಪೆನಿಯೊಂದರಲ್ಲಿ ಅಮೋನಿಯಾ ಸೋರಿಕೆ ಆಗಿರುವ ಘಟನೆ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
ಯಾವುದೇ ರೀತಿ ಜೀವಾಪಾಯ ಆಗದಂತೆ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಲಾಗಿದ್ದು, ಸ್ಥಳಕ್ಕೆ ಕದ್ರಿ ಅಗ್ನಿಶಾಮಕ ಹಾಗೂ ಪಾಂಡೇಶ್ವರ ಅಗ್ನಿಶಾಮಕ ಸಿಬ್ಬಂದಿಗಳು ದೌಡಾಯಿಸಿದ್ದಾರೆ.
ಸುತ್ತಮುತ್ತಲಿನ ಕಂಪನಿಗಳ ಜನರನ್ನು ಕಾರ್ಮಿಕರನ್ನು ತೆರವುಗೊಳಿಸಲಾಗುತ್ತಿದ್ದು, ಪಣಂಬೂರು ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.