ಬೀದಿಯಲ್ಲಿ ನಿಂತು ನಮಗೆ ಪಾಠ ಮಾಡಬೇಡಿ: ಪ್ರತಾಪ ಸಿಂಹಗೆ ಬಿಜೆಪಿ ಶಾಸಕ ನಾಗೇಂದ್ರ ತಿರುಗೇಟು


Team Udayavani, Jan 30, 2022, 3:40 PM IST

nagendra-vs-pratap-simha-war-continues-in-mysore

ಮೈಸೂರು: ಗ್ಯಾಸ್ ಪೈಪ್ ಲೈನ್ ವಿಚಾರದಲ್ಲಿ ಆರಂಭವಾದ ಮೈಸೂರು ಬಿಜೆಪಿ ಶಾಸಕರು ಹಾಗು ಸಂಸದರ ನಡುವಿನ ವಾಕ್ಸಮರ ಇನ್ನೂ ಮುಂದುವರಿದದೆ. ಸಂಸದ ಪ್ರತಾಪ್ ಸಿಂಹ ಆರೋಪಗಳಿಗೆ ಶಾಸಕ ಎಲ್ ನಾಗೇಂದ್ರ ತಿರುಗೇಟು ನೀಡಿದ್ದು, “ಬೀದಿಯಲ್ಲಿ ನಿಂತು ನಮಗೆ ಪಾಠ ಮಾಡಬೇಡಿ” ಎಂದಿದ್ದಾರೆ.

ಶಾಸಕ ನಾಗೇಂದ್ರಗೆ ತನ್ನ ಹುಟ್ಟೂರಲ್ಲೇ ಮುನ್ನಡೆ ಸಿಕ್ಕಿಲ್ಲವೆಂಬ ಸಂಸದ ಪ್ರತಾಪ ಸಿಂಹ ಹೇಳಿಕೆಗೆ ತಿರುಗೇಟು ನೀಡಿದ ನಾಗೇಂದ್ರ, “ಸಂಸದರು ತಮ್ಮ ವ್ಯಾಪ್ತಿಯಲ್ಲಿ ಎಷ್ಟು ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಸದಸ್ಯರನ್ನು ಗೆಲ್ಲಿಸಿದ್ದಾರೆ. 7 ವರ್ಷದಿಂದ ನೀವೇ ಸಂಸದರಾಗಿದ್ದೀರಾ, ಮೊದಲು ಅದನ್ನು ಹೇಳಿ. ನಾನು ನನ್ನ ಹುಟ್ಟೂರಿನಲ್ಲಿ ಪಾಲಿಕೆ ಸದಸ್ಯನಾಗಿದ್ದೆ. ನೀವು ನಮ್ಮ ಊರಲ್ಲಿ ಜಿಲ್ಲಾ ಪಂಚಾಯ್ತಿ ಗೆದ್ದು ಬಂದಿದ್ದರೆ ನಿಮಗೆ ಶರಣಾಗುತ್ತೇನೆ. ನಾನು ನಿಮ್ಮ ರೀತಿ ದಿಢೀರ್ ಅಂತಾ ಬಂದು ಪದವಿ ಪಡೆದವನಲ್ಲ‌. 25 ವರ್ಷದಿಂದ ಜನಪ್ರತಿನಿಧಿಯಾಗಿದ್ದೇನೆ” ಎಂದರು.

ನನ್ನ ಲೀಡ್‌ ಕಡಿಮೆಯಾಗಲು ಒಂದೇ ಊರಿನ ಇಬ್ಬರು ಅಭ್ಯರ್ಥಿಗಳು ಕಾರಣ. ಮುಂದಿನ ಚುನಾವಣೆಯಲ್ಲಿ ಅತಿ ಹೆಚ್ಚು ಲೀಡ್ ಪಡೆಯುತ್ತೇನೆ. ನಿಮ್ಮ ಚುನಾವಣೆಯಲ್ಲಿ ನನ್ನ ಮುಖ, ನನ್ನ ಅಭಿವೃದ್ಧಿ ನೋಡಿ ನಿಮಗೆ ಲೀಡ್ ಕೊಟ್ಟಿದ್ದು ಎಂದು ತಿರುಗೇಟು ನೀಡಿದರು.

ನನ್ನ ಕ್ಷೇತ್ರದಲ್ಲಿ ಪಾಲಿಕೆ ಸದಸ್ಯರು ಸೋಲಲು ಕಾರಣ ನೀವು. ನೀವೇ ಅದರ ಜವಾಬ್ದಾರಿ ಪಡೆದು ಟಿಕೆಟ್ ನೀಡಿದ್ದೀರಿ‌. ಅದರಲ್ಲಿ ಎಷ್ಟು ಜನರನ್ನು ಗೆಲ್ಲಿಸಿದ್ದೀರಾ? ಎಂ‌.ಎಲ್.ಸಿ ಚುನಾವಣೆಯ ಉಸ್ತುವಾರಿಯನ್ನು ನೀವೇ ವಹಿಸಿದ್ದಿರಿ. ಅದನ್ನು ಗೆಲ್ಲಿಸಿದ್ದೀರಾ? ನಾನು‌ ನಿಮ್ಮಷ್ಟು ವಿದ್ಯಾವಂತ ಬುದ್ದಿವಂತ ಅಲ್ಲ. ಆದರೆ ಬೀದಿಯಲ್ಲಿ ನಿಂತು ನಮಗೆ ಪಾಠ ಮಾಡಬೇಡಿ ಎಂದು ಶಾಸಕ ಎಲ್ ನಾಗೇಂದ್ರ ಗುಡುಗಿದರು.

ಇದನ್ನೂ ಓದಿ:ರಸ್ತೆ ಅಗಲೀಕರಣ, ಪೊಲೀಸ್ ಬಿಗಿ ಬಂದೋಬಸ್ತ್ : ಜೆಸಿಬಿಯಿಂದ 60 ಅಕ್ರಮ ಕಟ್ಟಡಗಳ ತೆರವು

ಗ್ಯಾಸ್ ಪೈಪ್ ಲೈನ್ ಅಳವಡಿಕೆ ವಿಚಾರದಲ್ಲಿ ಕಂಪನಿಯವರು ವೈಯಕ್ತಿಕವಾಗಿ ಭೇಟಿ ಮಾಡಿಲ್ಲದಿರಬಹುದು. ಅದಕ್ಕಾಗಿ ವಿರೋಧ ವ್ಯಕ್ತಪಡಿಸುತ್ತಿರಬಹುದು. ಸಂಸದ ಪ್ರತಾಪಸಿಂಹ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ನಾಗೇಂದ್ರ, “ ಚಾಮುಂಡೇಶ್ವರಿಯ ಆಣೆಯಾಗಿಯೂ ಇದು ಕಮಿಷನ್‌ ಗಾಗಿ ಅಲ್ಲ. ಜನರ ಹಿತದೃಷ್ಟಿಯಿಂದಾಗಿ ನಾನು ಮಾತನಾಡುತ್ತಿದ್ದೇನೆ. ನನಗೆ ಕಮಿಷನ್ ವಿಚಾರ ಗೊತ್ತಿಲ್ಲ. ಇದು ನನ್ನೂರು, ಇಲ್ಲಿನ ಸಮಸ್ಯೆಗಳು ನನಗೆ ಚೆನ್ನಾಗಿ ಗೊತ್ತಿವೆ. ಗ್ಯಾಸ್ ಪೈಪ್ ಲೈನ್ ಅಳವಡಿಕೆ ಯೋಜನೆ ಕಾಮಗಾರಿ ವೇಳೆ ಅನಾಹುತವಾದರೆ ಯಾರು ಜವಾಬ್ದಾರಿ? ಬೇರೆ ಬೇರೆ ಕಡೆ ಅನಾಹುತಗಳಾಗಿವೆ. ಆಗುವ ಅನಾಹುತಕ್ಕೆ ಯಾರು ಹೊಣೆ ಎಂದು ಕೇಳಿದರೆ ತಪ್ಪಾ? ಸಂಸದ ಪ್ರತಾಪ ಸಿಂಹಗೆ ಯಾಕೆ ಆ ಕಂಪನಿಯ ಮೇಲೆ ಒಲವು? ಕಂಪನಿಯವರು ನೇರವಾಗಿ ನಗರಪಾಲಿಕೆ ಅಧಿಕಾರಿಗಳ ಜೊತೆ ಮಾತನಾಡಲಿ ಎಂದರು.

ಟಾಪ್ ನ್ಯೂಸ್

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.