ಜೇಮ್ಸ್ ಡಬ್ಬಿಂಗ್‌ ಮುಗಿಸಿದ ಶಿವರಾಜ್‌ ಕುಮಾರ್‌;ಅಪ್ಪು ವಾಯ್ಸ್ ಉಳಿಸಿಕೊಳ್ಳಲು ಶತಪ್ರಯತ್ನ

ಆದಷ್ಟು ಸಿನಿಮಾದಲ್ಲಿ ಅಪ್ಪು ಅವರ ಧ್ವನಿಯೇ ಇರಬೇಕೆಂದು ಎಲ್ಲರೂ ಬಯಸುತ್ತಿದ್ದಾರೆ.

Team Udayavani, Feb 3, 2022, 1:24 PM IST

ಜೇಮ್ಸ್ ಡಬ್ಬಿಂಗ್‌ ಮುಗಿಸಿದ ಶಿವರಾಜ್‌ ಕುಮಾರ್‌;ಅಪ್ಪು ವಾಯ್ಸ್ ಉಳಿಸಿಕೊಳ್ಳಲು ಶತಪ್ರಯತ್ನ

ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌ ಅಭಿನಯದ “ಜೇಮ್ಸ್‌’ ಚಿತ್ರದಲ್ಲಿ ನಟ ಶಿವರಾಜ ಕುಮಾರ್‌ ಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿರುವುದು ನಿಮಗೆ ಗೊತ್ತಿರಬಹುದು. ತಿಂಗಳ ಹಿಂದಷ್ಟೇ ಶಿವಣ್ಣ “ಜೇಮ್ಸ್‌’ ಚಿತ್ರದಲ್ಲಿ ತಮ್ಮ ಪಾತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು, ಇತ್ತೀಚೆಗಷ್ಟೇ “ಜೇಮ್ಸ್‌’ ಚಿತ್ರತಂಡ ಕೂಡ ಚಿತ್ರೀಕರಣವನ್ನು ಪೂರ್ಣಗೊಳಿಸಿತ್ತು.

ಇದೀಗ “ಜೇಮ್ಸ್‌’ ಚಿತ್ರತಂಡದ ಕಡೆಯಿಂದ ಮತ್ತೂಂದು ಸುದ್ದಿ ಹೊರಬಿದ್ದಿದೆ. ಅದೇನೆಂದರೆ, ಶಿವರಾಜ ಕುಮಾರ್‌ “ಜೇಮ್ಸ್‌’ ಚಿತ್ರದಲ್ಲಿ ತಮ್ಮ ಪಾತ್ರದ ಜೊತೆಗೆ ಪುನೀತ್‌ ರಾಜಕುಮಾರ್‌ ಅವರ ಪಾತ್ರಕ್ಕೂ ಡಬ್ಬಿಂಗ್‌ ಮಾಡಿ ಮುಗಿಸಿದ್ದಾರೆ. ಹೌದು, “ಜೇಮ್ಸ್‌’ ಸಿನಿಮಾದಲ್ಲಿ ಪುನೀತ್‌ ರಾಜಕುಮಾರ್‌ ಧ್ವನಿ ಇರುತ್ತದೆಯಾ? ಅಥವಾ ಪುನೀತ್‌ ಪಾತ್ರಕ್ಕೆ ಬೇರೆ ಯಾರಾದರು ಡಬ್ಬಿಂಗ್‌ ಮಾಡುತ್ತಾರಾ? ಎಂಬ ಕುತೂಹಲ ಸಿನಿಪ್ರಿಯರಲ್ಲಿ ಮತ್ತು ಸಿನಿಮಂದಿಯಲ್ಲಿತ್ತು. ಇದೀಗ ಚಿತ್ರತಂಡದ ಮೂಲಗಳ ಮಾಹಿತಿ ಪ್ರಕಾರ, ಪುನೀತ್‌ ರಾಜಕುಮಾರ್‌ ಪಾತ್ರಕ್ಕೆ ಶಿವರಾಜ ಕುಮಾರ್‌ ಧ್ವನಿಯಾಗಿದ್ದು, ಎರಡೂವರೆ ದಿನಗಳಲ್ಲಿ ಶಿವಣ್ಣ ಇಡೀ ಸಿನಿಮಾದ
ಡಬ್ಬಿಂಗ್‌ ಮಾಡಿ ಮುಗಿಸಿದ್ದಾರೆ.

ಇನ್ನು “ಜೇಮ್ಸ್‌’ ಚಿತ್ರದ ಪೋಸ್ಟ್‌ ಪ್ರೊಡಕ್ಷನ್ಸ್‌ ಮತ್ತು ಡಬ್ಬಿಂಗ್‌ ಬಗ್ಗೆ “ಉದಯವಾಣಿ’ ಜೊತೆ ಮಾತನಾಡಿರುವ ನಿರ್ದೇಶಕ ಚೇತನ್‌ ಕುಮಾರ್‌, “ಶಿವಣ್ಣ “ಜೇಮ್ಸ…’ ಸಿನಿಮಾದಲ್ಲಿ ಒಂದು ಪಾತ್ರ ಮಾಡಿದ್ದಾರೆ. ಅವರ ಆ ಪಾತ್ರದ ಜೊತೆಗೆ ಅಪ್ಪು ಅವರ ಪಾತ್ರಕ್ಕೂ ಕೂಡ ಶಿವಣ್ಣ ಅವರೇ ವಾಯ್ಸ ನೀಡಿದ್ದು, ಇಡೀ ಸಿನಿಮಾಕ್ಕೆ ಡಬ್ಬಿಂಗ್‌ ಮಾಡಿ ಮುಗಿಸಿದ್ದಾರೆ.

ಆದಷ್ಟು ಸಿನಿಮಾದಲ್ಲಿ ಅಪ್ಪು ಅವರ ಧ್ವನಿಯೇ ಇರಬೇಕೆಂದು ಎಲ್ಲರೂ ಬಯಸುತ್ತಿದ್ದಾರೆ. ನಾವು ಕೂಡ ಅವರ ಧ್ವನಿಯನ್ನೇ ಇಟ್ಟುಕೊಳ್ಳಲು ಸಾಕಷ್ಟು ಪರಿಶ್ರಮ ಹಾಕುತ್ತಿದ್ದೇವೆ. ಅದಕ್ಕಾಗಿ ಟೆಕ್ನಿಕಲ್‌ ಎಕ್ಸ್‌ಪರ್ಟ್ಸ್ ತುಂಬ ಕೆಲಸ ಮಾಡುತ್ತಿದ್ದಾರೆ. ಆದರೆ ಅದು ಎಷ್ಟರ ಮಟ್ಟಿಗೆ ವರ್ಕೌಟ್ ಆಗಲಿದೆ ಎನ್ನುವುದನ್ನ ಫೈನಲ್‌ ಔಟ್‌ಪುಟ್‌ ಬರದೆ ಹೇಳಲಾಗುವುದಿಲ್ಲ. ಫೆ. 12ರ ವೇಳೆಗೆ ಈ ಬಗ್ಗೆ ನಮಗೆ ಸ್ಪಷ್ಟತೆ ಸಿಗಬಹುದು. ಒಂದು ವೇಳೆ ಅಪ್ಪು ಅವರ ಪಾತ್ರಕ್ಕೆ ಅವರ ಧ್ವನಿಯನ್ನು ಬಳಸಲು ಸಾಧ್ಯವಾಗದಿದ್ದರೆ, ಶಿವಣ್ಣ ಅವರ ಧ್ವನಿಯನ್ನು ಬಳಸಲು ಯೋಚಿಸಿದ್ದೇವೆ. ಹೀಗಾಗಿ ಸಿನಿಮಾದ ಕೆಲಸಗಳು ತಡವಾಗಬಾರದು ಎಂದು ಸ್ವತಃ ಶಿವಣ್ಣ ಅವರೇ ಬೇಗ ಡಬ್ಬಿಂಗ್‌ ಮುಗಿಸಿದ್ದಾರೆ’ ಎಂದು ತಿಳಿಸಿದ್ದಾರೆ.

ಅಂದಹಾಗೆ, ನಟ ಪುನೀತ್‌ ರಾಜಕುಮಾರ್‌ ಹುಟ್ಟುಹಬ್ಬದಂದು “ಜೇಮ್ಸ್‌’ ಸಿನಿಮಾ ರಿಲೀಸ್‌ ಮಾಡಲು ಚಿತ್ರತಂಡ ತಯಾರಿ ಮಾಡಿಕೊಳ್ಳುತ್ತಿದೆ. “ಈಗಿನ ನಮ್ಮ ಪ್ಲಾನ್‌ನಂತೆ, ಮಾರ್ಚ್‌ 17ಕ್ಕೆ “ಜೇಮ್ಸ್’ ತೆರೆಗೆ ತರಬೇಕು. ಅದಕ್ಕಾಗಿ ಇಡೀ ಚಿತ್ರತಂಡ ಬಿಡುವಿಲ್ಲದೆ ಕೆಲಸ ಮಾಡುತ್ತಿದೆ. ಫೆ. ಮೂರನೇ ವಾರ ಚಿತ್ರದ ಟೀಸರ್‌, ಆನಂತರ ಲಿರಿಕಲ್‌ ವಿಡಿಯೋ, ಅದಾದ ಬಳಿಕ ಟ್ರೇಲರ್‌ ರಿಲಿಸ್‌ ಮಾಡಲು ಯೋಚಿಸಿದ್ದೇವೆ’ ಎಂದಿದ್ದಾರೆ ಚೇತನ್‌.

ಟಾಪ್ ನ್ಯೂಸ್

Modi (2)

PM Modi ಸ್ಪರ್ಧೆಗೆ ನಿರ್ಬಂಧ: ದಿಲ್ಲಿ ಹೈಕೋರ್ಟ್‌ ನಕಾರ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Modi (2)

PM Modi ಸ್ಪರ್ಧೆಗೆ ನಿರ್ಬಂಧ: ದಿಲ್ಲಿ ಹೈಕೋರ್ಟ್‌ ನಕಾರ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

kejriwal 2

CM ‘ಅಲಂಕಾರಿಕವಲ್ಲ’: ಕೇಜ್ರಿಗೆ ಮತ್ತೆ ಕೋರ್ಟ್‌ ಗುದ್ದು

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.