ರಷ್ಯಾದಿಂದ ಕಚ್ಚಾ ತೈಲ : 30 ಲಕ್ಷ ಬ್ಯಾರೆಲ್ ತೈಲ ಖರೀದಿಗೆ ಐಒಸಿ ಒಪ್ಪಂದ
Team Udayavani, Mar 20, 2022, 8:10 AM IST
ಹೊಸದಿಲ್ಲಿ: ಭಾರತದ ಅತೀ ದೊಡ್ಡ ತೈಲ ಕಂಪೆನಿಯಾಗಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿ. (ಐಒಸಿ) 30 ಲಕ್ಷ ಬ್ಯಾರೆಲ್ ತೈಲ ಖರೀ ದಿಗೆ ರಷ್ಯಾ ಜತೆ ಒಪ್ಪಂದ ಮಾಡಿಕೊಂಡಿದೆ.
“ಇಂಧನ ವಹಿವಾಟಿಗೆ ಸಂಬಂಧಿಸಿ ಯಾವುದೇ ದೇಶವು ರಾಜಕೀಯ ಮಾಡ ಬಾರದು’ ಎಂದು ಕೇಂದ್ರ ಸರಕಾರ ಹೇಳಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಹಲವು ರಾಷ್ಟ್ರಗಳು ರಷ್ಯಾಕ್ಕೆ ನಿರ್ಬಂಧವಿಧಿಸಿವೆ. ಆದರೆ ಭಾರತದ ಕಂಪೆನಿಗಳು ರಷ್ಯಾದಿಂದ ತೈಲ ಖರೀದಿಸುವುದಕ್ಕೆ ಯಾವುದೇ ನಿರ್ಬಂಧಗಳಿಲ್ಲ. ನಿರ್ಬಂಧ ದಿಂದಾಗಿ ರಷ್ಯಾದ ಆರ್ಥಿಕತೆಗೆ ಹೊಡೆತ ಬಿದ್ದಿ ರುವ ಕಾರಣ, ಭಾರತ ಸಹಿತ ದೊಡ್ಡ ಮಟ್ಟದ ಆಮದುದಾರರಿಗೆ ರಿಯಾಯಿತಿ ದರದಲ್ಲಿ ತೈಲ ಮಾರಾಟ ಕೊಡುಗೆಯನ್ನು ರಷ್ಯಾ ನೀಡಿತ್ತು.
4 ಪಟ್ಟು ಹೆಚ್ಚು ಆಮದು :
ಭಾರತದ ಇನ್ನೂ ಹಲವು ಕಂಪೆನಿಗಳು ತೈಲ ಖರೀದಿಸಲು ಮುಂದಾಗಿವೆ. ಮಾರ್ಚ್ ಮೊದಲಾ ರ್ಧದಲ್ಲಿ ಭಾರತವು ರಷ್ಯಾದಿಂದ ದಿನಕ್ಕೆ 3.60 ಲಕ್ಷ ಬ್ಯಾರೆಲ್ ತೈಲವನ್ನು ಖರೀದಿಸಿದೆ. ಕಳೆದ ಮಾರ್ಚ್ಗೆ ಹೋಲಿಸಿದರೆ ಈ ಬಾರಿ ಭಾರತವು ರಷ್ಯಾದಿಂದ 4 ಪಟ್ಟು ಅಧಿಕ ಕಚ್ಚಾ ತೈಲ ಆಮದು ಮಾಡಿಕೊಂಡಿದೆ.