ಮಂಡ್ಯದ ಮುಸ್ಕಾನ್ ಹಾಡಿ ಹೊಗಳಿದ ಮೋಸ್ಟ್ ವಾಂಟೆಡ್ ಅಲ್ ಖೈದಾ ಉಗ್ರ !
ಹಿಜಾಬ್ ವಿವಾದಕ್ಕೆ ಧುಮುಕಿದ ಅಲ್ ಖೈದಾ
Team Udayavani, Apr 6, 2022, 2:14 PM IST
ಬೆಂಗಳೂರು: ರಾಜ್ಯದಲ್ಲಿ ಆರಂಭವಾಗಿದ್ದ ಹಿಜಾಬ್ ವಿವಾದಕ್ಕೆ ಭಯೋತ್ಪಾದಕ ಸಂಘಟನೆ ಅಲ್ ಖೈದಾ ಕೂಡ ಧುಮುಕಿದ್ದು, ”ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ವಿಶ್ವದಾದ್ಯಂತ ಮುಸ್ಲಿಮರು ಅದನ್ನು ಧರಿಸಲು ಹೋರಾಡುತ್ತಿರುವ ಹುಡುಗಿಯರನ್ನು ಬಹಿರಂಗವಾಗಿ ಬೆಂಬಲಿಸಬೇಕು” ಎಂದು ಅಲ್-ಖೈದಾ ನಾಯಕ, ವಿಶ್ವದ ಮೋಸ್ಟ್ ವಾಂಟೆಡ್ ಉಗ್ರ ಅಲ್-ಜವಾಹಿರಿ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾನೆ.
ಡೈಲಿ ಮೇಲ್ನ ವೆಬ್ಸೈಟ್ನಲ್ಲಿ ಪ್ರಸ್ತುತಪಡಿಸಲಾದ ಈ 9 ನಿಮಿಷಗಳ ವೀಡಿಯೊದಲ್ಲಿ ಜವಾಹಿರಿ ”ಭಾರತದ ಹಿಂದೂ ಪ್ರಜಾಪ್ರಭುತ್ವದಲ್ಲಿ ಮುಸ್ಲಿಮರು ಕಿರುಕುಳಕ್ಕೊಳಗಾಗಿದ್ದಾರೆ”.ಎಂದಿದ್ದು ಹಿಜಾಬ್ ವಿವಾದದ ಸಮಯದಲ್ಲಿ ಬೆಳಕಿಗೆ ಬಂದ ಮಂಡ್ಯದ ಮುಸ್ಕಾನ್ ಳನ್ನು ‘ಮಹಾನ್ ಹುಡುಗಿ’ ಎಂದು ಕರೆದಿದ್ದಾನೆ.
ದಿ ನೋಬಲ್ ವುಮನ್ ಆಫ್ ಇಂಡಿಯಾ ಎಂಬ ಶೀರ್ಷಿಕೆಯಿರುವ ವೀಡಿಯೋದಲ್ಲಿ ಮುಸ್ಕಾನ್ಳನ್ನು ಹೊಗಳಿ ರಚಿಸಿದ ಶಾಹಿರಿಯಲ್ಲಿ, ಮುಸ್ಕಾನ್ ಕುರಿತು ವೀಡಿಯೋಗಳನ್ನು ನೋಡಿ ತಿಳಿದುಕೊಂಡಿದ್ದೇನೆ. ಇವಳಿಂದ ತುಂಬಾ ಪ್ರಭಾವಿತರಾಗಿದ್ದೇವೆ ಎಂದು ಹೇಳಲಾಗಿದೆ. ಇದೆ ವೇಳೆ ಹಿಜಾಬ್ ನಿಷೇಧಿಸಿದ ದೇಶಗಳ ಮೇಲೆ ಆಕ್ರೋಶ ಹೊರ ಹಾಕಿದ್ದಾನೆ.
ಮುಸ್ಕಾನ್ ಹಿಜಾಬ್ ವಿವಾದದ ವೇಳೆ ಕಾಲೇಜ್ ಆವರಣದಲ್ಲಿ ಹಿಂದೂ ವಿದ್ಯಾರ್ಥಿಗಳು ಜೈ ಶ್ರೀರಾಮ್ ಕೂಗುತ್ತಿದ್ದಾಗ ಅಲ್ಲಾ ಹೂ ಅಕ್ಬರ್ ಎಂದು ಘೋಷಣೆ ಕೂಗಿ ವಿದ್ಯಾರ್ಥಿಗಳ ಗುಂಪಿನತ್ತ ಮುನ್ನುಗ್ಗಿ ವಿಶ್ವಾದ್ಯಂತ ಸುದ್ದಿಯಾಗಿದ್ದಳು. ಆಕೆಗೆ ಭಾರಿ ಪ್ರಮಾಣದಲ್ಲಿ ಪ್ರಶಂಸೆಗಳು ಮತ್ತು ಹಣವನ್ನು ಬಹುಮಾನಗಳ ರೂಪದಲ್ಲಿ ನೀಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Revanna ಮಧ್ಯಂತರ ನಿರೀಕ್ಷಣಾ ಜಾಮೀನು ಮೇ 20 ರ ವರೆಗೆ ವಿಸ್ತರಿಸಿದ ಕೋರ್ಟ್
Governor ಸಹಿ ನಕಲಿ ; ಕೋಟ್ಯಂತರ ರೂ. ವಂಚನೆ: ಕೊರಟಗೆರೆಯ ಜುಬೇರ್ ಅರೆಸ್ಟ್
Belagavi,ಚಿಕ್ಕೋಡಿ ಸೇರಿ 14 ರಿಂದ 17 ಸೀಟು ಕಾಂಗ್ರೆಸ್ ಗೆಲ್ಲಲಿದೆ: ಸತೀಶ್ ಜಾರಕಿಹೊಳಿ
Prajwal Revanna ಬಂಧನಕ್ಕೆ ಕೇಂದ್ರ ಸರಕಾರದಿಂದ ಅಸಹಕಾರ: ಸಚಿವ ತಂಗಡಗಿ
ಲೈಂಗಿಕ ದೌರ್ಜನ್ಯ: ಸಾಕ್ಷ್ಯ ಸಂಗ್ರಹಕ್ಕೆ ಇನ್ಮುಂದೆ ಸುರಕ್ಷಿತ ಕಿಟ್ ಬಳಕೆ
MUST WATCH
ಹೊಸ ಸೇರ್ಪಡೆ
Revanna ಮಧ್ಯಂತರ ನಿರೀಕ್ಷಣಾ ಜಾಮೀನು ಮೇ 20 ರ ವರೆಗೆ ವಿಸ್ತರಿಸಿದ ಕೋರ್ಟ್
Governor ಸಹಿ ನಕಲಿ ; ಕೋಟ್ಯಂತರ ರೂ. ವಂಚನೆ: ಕೊರಟಗೆರೆಯ ಜುಬೇರ್ ಅರೆಸ್ಟ್
Gopal Krishna Belur ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ
Sandalwood: ದರ್ಶನ್ ʼಡೆವಿಲ್ʼಗೆ ಕರಾವಳಿ ಬೆಡಗಿ ರಚನಾ ರೈ ನಾಯಕಿ; ಫಸ್ಟ್ ಪೋಸ್ಟರ್ ಔಟ್
Dr.G. Parameshwara ಹೆಸರು ದುರ್ಬಳಕೆ: ಕಾಂಗ್ರೆಸ್ ನಿಂದ ಮೊಹಮ್ಮದ್ ಜುಬೇರ್ ಉಚ್ಛಾಟನೆ