ತೀವ್ರಗೊಂಡ ಮಹಾಲಿಂಗಪುರ ತಾಲೂಕು ಹೋರಾಟ

ಮಹಾಲಿಂಗಪುರ ಹಾಗೂ 9 ಹಳ್ಳಿಗಳನ್ನು ತೇರದಾಳ ತಾಲೂಕಿಗೆ ಸೇರಿಸಬೇಡಿ

Team Udayavani, Apr 6, 2022, 7:56 PM IST

ತೀವ್ರಗೊಂಡ ಮಹಾಲಿಂಗಪುರ ತಾಲೂಕು ಹೋರಾಟ

ಮಹಾಲಿಂಗಪುರ: ನಡೆಯಲಿರುವ ಬಾಗಲಕೋಟೆಯ ಕೆಡಿಪಿ ಸಭೆಯಲ್ಲಿ ಯಾವುದೇ ಕಾರಣಕ್ಕೂ ಮಹಾಲಿಂಗಪುರ ಪಟ್ಟಣ ಮತ್ತು ಸುತ್ತಲಿನ 9 ಹಳ್ಳಿಗಳನ್ನು ನೂತನ ತೇರದಾಳ ತಾಲೂಕಿಗೆ ಸೇರಿಸಬೇಡಿ, ಒಂದು ವೇಳೆ ಸೇರಿಸಿದರೇ ಉಗ್ರಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಮಹಾಲಿಂಗಪೂರ ಹೋರಾಟ ಸಮೀತಿಯ ಸದಸ್ಯರು, ವಿವಿಧ ಪಕ್ಷಗಳ ಮುಖಂಡರುಗಳು ರಾಜ್ಯ ಸರ್ಕಾರ ಮತ್ತು ಸಂಬಂಧಿಸಿದ ಸಚಿವರುಗಳು, ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ಬುಧವಾರ ಮಹಾಲಿಂಗಪುರ ಹಾಗೂ ಸುತ್ತಮುತ್ತಲಿನ 9 ಗ್ರಾಮಗಳ ಹಿರಿಯರು, ವಿವಿಧ ಪಕ್ಷಗಳು ಮುಖಂಡರ ನೇತೃತ್ವದಲ್ಲಿ ಮಹಾಲಿಂಗಪುರ ತಾಲೂಕಿಗೆ ಒತ್ತಾಯಿಸಿ ಹೋರಾಟ ಸಮಿತಿಯು ಕರೆನೀಡಿದ್ದ ಮಹಾಲಿಂಗಪುರ ಬಂದ್ ಹಾಗೂ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ವಿವಿಧ ಪಕ್ಷಗಳ ಮುಖಂಡರು, ರೈತ ಸಂಘದ ಮುಖಂಡರು, ಹೋರಾಟ ಸಮಿತಿಯ ಮುಖಂಡರುಗಳು ಮಾತನಾಡಿ ಕಳೆದ 30 ವರ್ಷಗಳಿಂದ ಹೋರಾಟ ಮಾಡುತ್ತಿದ್ದರು ಸಹ ಸರ್ಕಾರಗಳು ನಮ್ಮ ಬೇಡಿಕೆಗಳಿಗೆ ಸ್ಪಂದಿಸಿಲ್ಲ. ಈ ಬಾರಿಯ ಹೋರಾಟವು ಮಾಡು ಇಲ್ಲವೇ ಮಡಿ ಹೋರಾಟವಾಗಿರುವ ಕಾರಣ, ಈ ಬಾರಿ ಮಹಾಲಿಂಗಪುರ ತಾಲೂಕು ಘೋಷಣೆಯಾಗುವರೆಗೂ ಹೋರಾಟ ನಿರಂತರವಾಗಿ ಮುನ್ನಡೆಯುತ್ತದೆ ಎಂದರು.

ಈಗಿರುವ ಪಕ್ಷಾತೀತ ಮತ್ತು ಜಾತ್ಯಾತೀತ ಹೋರಾಟ ಸಮಿತಿಗೆ ಮಹಾಲಿಂಗಪುರ ಮತ್ತು 9 ಗ್ರಾಮಗಳ ಸಾರ್ವಜನಿಕರು, ಸರ್ವ ಪಕ್ಷಗಳ ಮುಖಂಡರು, ವಿವಿಧ ಸಂಘಟನೆಗಳ ಕಾರ್ಯಕರ್ತರು ಹೋರಾಟದ ಯಶಸ್ವಿಯಾಗಿ ತನು,ಮನ, ಧನದ ಮೂಲಕ ನಿರಂತರವಾಗಿ ಹೋರಾಟಕ್ಕೆ ಬೆಂಬಲಿಸಬೇಕು. ಮಹಾಲಿಂಗಪುರ ಮತ್ತು ಸುತ್ತಮುತ್ತಲಿನ ಗ್ರಾಮಗಳನ್ನು ನೂತನ ತೇರದಾಳ ತಾಲೂಕಿಗೆ ಸೇರಿಸುವದು ಅವೈಜ್ಞಾನಿಕ, ಒಂದು ತಾಲೂಕು(ರಬಕವಿ-ಬನಹಟ್ಟಿ)ನ್ನು ದಾಟಿ ತಾಲೂಕಿಗೆ ಹೋಗಬೇಕಾಗುವದು. ಅದಕ್ಕಾಗಿ ಯಾವುದೇ ಕಾರಣ ಸೇರಿಸಬಾರದು ಎಂದು ಒತ್ತಾಯಿಸಿದರು.

ರೈತ ಸಂಘದ ಮುಖಂಡರಾದ ಸುಭಾಸ ಶಿರಬೂರ, ಗಂಗಾಧರ ಮೇಟಿ, ಬಂದು ಪಕಾಲಿ, ಜಿಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ, ಎಂ.ಎಸ್.ಉಳ್ಳೇಗಡ್ಡಿ, ಸಿದ್ದು ಕೊಣ್ಣುರ, ಸಂಗಪ್ಪ ಹಲ್ಲಿ, ಡಾ| ಎ.ಆರ್.ಬೆಳಗಲಿ, ಮನೋಹರ ಶಿರೋಳ, ಮಹಾದೇವ ಮಾರಾಪೂರ, ಯಲ್ಲನಗೌಡ ಪಾಟೀಲ, ಬಸವನಗೌಡ ಪಾಟೀಲ, ಧರೆಪ್ಪ ಸಾಂಗ್ಲಿಕರ್, ಎಂ.ಆಯ್.ಕೋಳಿಗುಡ್ಡ, ನಿಂಗಪ್ಪ ಬಾಳಿಕಾಯಿ, ಚನಬಸು ಹುರಕಡ್ಲಿ ಅವರು ಮಾತನಾಡಿ ಮಹಾಲಿಂಗಪುರ ಹಾಗೂ ಸುತ್ತಮುತ್ತಲಿನ 9 ಗ್ರಾಮಗಳನ್ನು ಯಾವುದೇ ಕಾರಣಕ್ಕೂ ನೂತನ ತೇರದಾಳ ತಾಲೂಕಿಗೆ ಸೇರಿಸಬಾರದು, ಮುಧೋಳ ತಾಲೂಕಿನ ರನ್ನಬೆಳಗಲಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳನ್ನು ಸೇರಿಸಿ ಮಹಾಲಿಂಗಪುರ ನೂತನ ತಾಲೂಕನ್ನು ಘೋಷಿಸಬೇಕೆಂದು ಒತ್ತಾಯಿಸಿದರು.

ಬೃಹತ್ ಪ್ರತಿಭಟನಾ ಮೇರವಣಿಗೆ : ಮಹಾಲಿಂಗಪುರ ತಾಲೂಕಾ ಘೋಷಣೆಗೆ ಒತ್ತಾಯಿಸಿ ತಾಲೂಕಾ ಹೋರಾಟ ಸಮಿತಿ ಸದಸ್ಯರು ಪಟ್ಟಣದ ಬಸವವೃತ್ತದಿಂದ ಡಬಲ್ ರಸ್ತೆ, ನಡಚೌಕಿ, ಜವಳಿಬಜಾರ, ಗಾಂಧಿವೃತ್ತ ಮಾರ್ಗವಾಗಿ ಚನ್ನಮ್ಮ ವೃತ್ತಕ್ಕೆ ಬಂದು ಟೈಯರ್‌ಗೆ ಬೆಂಕಿ ಹಚ್ಚಿ, ಮಾನವ ಸರಪಳಿ ನಿರ್ಮಿಸಿ ಅರ್ಧಗಂಟೆಗಳ ಕಾಲ ಮುಧೋಳ-ನಿಪ್ಪಾಣಿ ರಾಜ್ಯ ಹೆದ್ದಾರಿಯನ್ನು ಬಂದ ಮಾಡಿ, ಘೋಷಣೆಗಳನ್ನು ಕೂಗಿ, ಪ್ರತಿಭಟನೆ ನಡೆಸಿದರು.

ಅಲ್ಲಿಂದ ಪುರಸಭೆಗೆ ಆಗಮಿಸಿ ರಬಕವಿ-ಬನಹಟ್ಟಿ ಉಪ ತಹಶೀಲ್ದಾರ ಎಸ್.ಎಲ್.ಕಾಗಿಯವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ನಂತರ ಮಹಾಲಿಂಗಪುರ ಹಾಗೂ ಸುತ್ತಲಿನ 9 ಗ್ರಾಮಗಳಿಂದ 20ಕ್ಕೂ ಹೆಚ್ಚು ವಾಹನಗಳ ಮೂಲಕ ಬಾಗಲಕೋಟೆ ಕೆಡಿಪಿ ಸಭೆಗೆ ಹೋಗಿ, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಸಚಿವರು, ಶಾಸಕರು, ಅಧಿಕಾರಿಗೆ ಮುತ್ತಿಗೆ ಹಾಕಿ ಯಾವುದೇ ಕಾರಣಕ್ಕೂ ಮಹಾಲಿಂಗಪುರ ಹಾಗೂ 9 ಗ್ರಾಮಗಳನ್ನು ನೂತನ ತೇರದಾಳ ತಾಲೂಕಿಗೆ ಸೇರಿಸದಂತೆ ಪ್ರತಿಭಟನೆ ನಡೆಸಲು ತೀರ್ಮಾಣಿಸಲಾಯಿತು. ಗುರುವಾರ ಬಾಗಲಕೋಟೆಯಲ್ಲಿ ನಡೆಯುವ ಬೆಳವಣಿಗೆಯನ್ನು ನೋಡಿಕೊಂಡು, ಬರುವ ಶನಿವಾರ ಏ.9ರಂದು ಮುಂಜಾನೆ 10-30 ಕ್ಕೆ ತಾಲೂಕಾ ಹೋರಾಟದ ಮುಂದಿನ ರೂಪರೇಶೆಗಳ ಕುರಿತು ಬೃಹತ್ ಸಭೆ ನಡೆಸಲು ನಿರ್ಣಯಿಸಿ, ಸಭೆಯಲ್ಲಿ ಪಟ್ಟಣ ಹಾಗೂ ಗ್ರಾಮೀಣ ಭಾಗ ಸೇರಿ ಬೃಹತ್ ಸಂಖ್ಯೆಯಲ್ಲಿ ಸಾರ್ವಜನಿಕರು, ಮುಖಂಡರು ಭಾಗವಹಿಸಲು ತಿಳಿಸಲಾಯಿತು.

ತಾಲೂಕಾ ಹೋರಾಟಕ್ಕೆ ಪಟ್ಟಣದ ಅಂಗಡಿಕಾರರು ಅಂಗಡಿ ಮುಗ್ಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಬಂದ ಮಾಡಿದ್ದರು. ಹೋರಾಟದಲ್ಲಿ ತಾಲೂಕಾ ಹೋರಾಟ ಸಮಿತಿ ಸದಸ್ಯರು, ಸರ್ವ ಪಕ್ಷಗಳ ಮುಖಂಡರು, ಕಾರ್ಯಕರ್ತರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿದ್ದರು. ಠಾಣಾಧಿಕಾರಿ ವಿಜಯ ಕಾಂಬಳೆ ಮತ್ತು ಪೊಲೀಸ್ ಸಿಬ್ಬಂದಿ ಸೂಕ್ತಬಂದೋಬಸ್ತ್ ಒದಗಿಸಿದ್ದರು.

ಟಾಪ್ ನ್ಯೂಸ್

1-qweqwew

IPL ಭಾರಿ ಮಳೆಯಿಂದ ಪಂದ್ಯ ರದ್ದು; ಹೈದರಾಬಾದ್ ಪ್ಲೇ ಆಫ್ ಗೆ ಪ್ರವೇಶ

H. D. Kumaraswamy: ಸಂಸದನಾಗಿದ್ದಾಗಲೇ ನನಗೆ ಸಿಗದ ಪ್ರಜ್ವಲ್‌ ಈಗ ಸಿಗುತ್ತಾರಾ?; ಎಚ್‌ಡಿಕೆ

H. D. Kumaraswamy: ಸಂಸದನಾಗಿದ್ದಾಗಲೇ ನನಗೆ ಸಿಗದ ಪ್ರಜ್ವಲ್‌ ಈಗ ಸಿಗುತ್ತಾರಾ?; ಎಚ್‌ಡಿಕೆ

22

Politics: ಗೃಹ ಸಚಿವರು ಕೂಡಲೇ ರಾಜೀನಾಮೆ ಕೊಡಲಿ: ಅಶ್ವತ್ಥನಾರಾಯಣ 

India alliance: ದಕ್ಷಿಣ ಭಾರತದಲ್ಲಿ ಇಂಡಿಯಾ ಮೈತ್ರಿಕೂಟ ಕ್ಲೀನ್‌ ಸ್ವೀಪ್‌; ಡಿಕೆಶಿ

India alliance: ದಕ್ಷಿಣ ಭಾರತದಲ್ಲಿ ಇಂಡಿಯಾ ಮೈತ್ರಿಕೂಟ ಕ್ಲೀನ್‌ ಸ್ವೀಪ್‌; ಡಿಕೆಶಿ

Politics: ರಘುಪತಿ ಭಟ್ಟರ ಜತೆ ಮುಖಂಡರು ಮಾತನಾಡುತ್ತಾರೆ; ಬಿ. ವೈ. ರಾಘವೇಂದ್ರ

Politics: ರಘುಪತಿ ಭಟ್ಟರ ಜತೆ ಮುಖಂಡರು ಮಾತನಾಡುತ್ತಾರೆ; ಬಿ. ವೈ. ರಾಘವೇಂದ್ರ

1-qwewqewqe

Kejriwal ನಿವಾಸದಲ್ಲಿ ಹಲ್ಲೆ; ಕೊನೆಗೂ ದೂರು ದಾಖಲಿಸಿದ ಸ್ವಾತಿ ಮಲಿವಾಲ್

train-track

Belagavi: ರೈಲಿನಲ್ಲಿ ಮುಸುಕುಧಾರಿಯಿಂದ ಚಾಕು ಇರಿತ: ವ್ಯಕ್ತಿ ಸಾವು,ಇಬ್ಬರಿಗೆ ಗಾಯ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqwewqe

Rabkavi Banhatti: ಪ್ರಾಚೀನ ದೇವಸ್ಥಾನಕ್ಕೆ ಬೇಕಿದೆ ರಕ್ಷಣೆ

ಆನ್‌ಲೈನ್‌ ವಂಚನೆ: 6 ವರ್ಷದಲ್ಲಿ 4 ಕೋಟಿ ರೂ. ಕಳೆದುಕೊಂಡ ವಿದ್ಯಾವಂತರು!

ಆನ್‌ಲೈನ್‌ ವಂಚನೆ: 6 ವರ್ಷದಲ್ಲಿ 4 ಕೋಟಿ ರೂ. ಕಳೆದುಕೊಂಡ ವಿದ್ಯಾವಂತರು!

Online ವಂಚಕರಿದ್ದಾರೆ ಹುಷಾರ್‌..!”ಉದಯವಾಣಿ’ ಇಂದಿನಿಂದ ಸರಣಿ ವರದಿ ಆರಂಭಿಸಿದೆ

Online ವಂಚಕರಿದ್ದಾರೆ ಹುಷಾರ್‌..!”ಉದಯವಾಣಿ’ ಇಂದಿನಿಂದ ಸರಣಿ ವರದಿ ಆರಂಭಿಸಿದೆ

1-pV

Bagalkote; ಅಬ್ಬರದ ಮಳೆ: ಸಿಡಿಲು ಬಡಿದು ಯುವಕ ಸಾವು

1-eqwewqeqw

Bagalkote; ಕಾರಿಗೆ ಬೆಂಕಿ ಹೊತ್ತಿಕೊಂಡು ವ್ಯಕ್ತಿ ಸಜೀವ ದಹನ!

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

baby 2

Ballari: ತಿಪ್ಪೆಗುಂಡಿಯಲ್ಲಿ ಸಿಕ್ಕಿದ್ದ ಹೆಣ್ಣುಮಗುವನ್ನು ದತ್ತು ಪಡೆದ ವಿದೇಶಿ ದಂಪತಿ

1-wqewqewqe

MLC Election; ಕೊರಿಯರ್‌ ಕಚೇರಿಯಲ್ಲಿ ಅಪಾರ ಗಿಫ್ಟ್ ಬಾಕ್ಸ್‌!!

school

RTE; ಶಿಕ್ಷಣ ಹಕ್ಕು ಕಾಯ್ದೆ ಅರ್ಜಿ ಅವಧಿ ವಿಸ್ತರಣೆ

crime (2)

Belagavi: ಇರಿದು ಯುವಕನ ಕೊಲೆ; ಆರೋಪಿಯ ಸೋದರಿಯನ್ನು ಪ್ರೀತಿಸುತ್ತಿದ್ದುದು ಕಾರಣ

Thailand Open Super 500: ಸಾತ್ವಿಕ್‌ – ಚಿರಾಗ್‌ ಕ್ವಾರ್ಟರ್‌ಫೈನಲಿಗೆ

Thailand Open Super 500: ಸಾತ್ವಿಕ್‌ – ಚಿರಾಗ್‌ ಕ್ವಾರ್ಟರ್‌ಫೈನಲಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.