ಲಕ್ನೋ-ಡೆಲ್ಲಿ ಫೈಟ್‌; ಎರಡೂ ತಂಡಗಳು ಇನ್ನಷ್ಟು ಬಲಿಷ್ಠ

ಸ್ಟೋಯಿನಿಸ್‌, ನೋರ್ಜೆ, ವಾರ್ನರ್‌ ಎಂಟ್ರಿ

Team Udayavani, Apr 7, 2022, 8:05 AM IST

ರಾಹುಲ್‌ ಲಕ್ನೋ-ಪಂತ್‌ ಡೆಲ್ಲಿ ನಡುವೆ ಹೋರಾಟ

ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್‌ -ಲಕ್ನೋ ಸೂಪರ್‌ ಜೈಂಟ್ಸ್‌ ತಂಡಗಳ ಗುರುವಾರದ ಮೇಲಾಟ ಹೆಚ್ಚು ಬಲಿಷ್ಠಗೊಳ್ಳಲಿದೆ. ಕಾರಣ, ಎರಡೂ ತಂಡಗಳಿಗೆ ಕೆಲವು ಸ್ಟಾರ್‌ ಆಟಗಾರರ ಸೇರ್ಪಡೆ.

ಲಕ್ನೋ ತಂಡಕ್ಕೆ ಮಾರ್ಕಸ್‌ ಸ್ಟಾಯಿನಿಸ್‌, ಡೆಲ್ಲಿ ತಂಡಕ್ಕೆ ಡೇವಿಡ್‌ ವಾರ್ನರ್‌ ಮತ್ತು ಅನ್ರಿಚ್‌ ನೋರ್ಜೆ ಸೇರಿಕೊಳ್ಳುವುದು ಖಾತ್ರಿಗೊಂಡಿರುವುದರಿಂದ ಇತ್ತಂಡಗಳ ಜೋಶ್‌ ಕೂಡ ಅಷ್ಟೇ ಮಟ್ಟದಲ್ಲಿ ಹೆಚ್ಚುವುದರಲ್ಲಿ ಅನುಮಾನವಿಲ್ಲ. ಹೀಗಾಗಿ ಕೆ.ಎಲ್‌.ರಾಹುಲ್‌-ರಿಷಭ್‌ ಪಂತ್‌ ತಂಡಗಳ ನಡುವಿನ ಮೇಲಾಟ ಅಭಿಮಾನಿಗಳಲ್ಲೂ ಕುತೂಹಲ ಹೆಚ್ಚಿಸಿದೆ.ಇವರಿಬ್ಬರೂ ಸ್ವಂತ ಬ್ಯಾಟಿಂಗ್‌ ಬಲದಿಂದ ಪಂದ್ಯವನ್ನು ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದರೂ ತಾರಾ ಆಟಗಾರರ ಆಗಮನದಿಂದ ಇಡೀ ತಂಡದ ಮನೋಬಲವೇ ಬದಲಾಗುವುದರಲ್ಲಿ ಅನುಮಾನವಿಲ್ಲ.

ಇಲ್ಲಿ ಹೆಚ್ಚಿನ ಲಾಭವಾಗುವುದು ಡೆಲ್ಲಿ ತಂಡಕ್ಕೆ. ಎರಡರಲ್ಲಿ ಒಂದನ್ನಷ್ಟೇ ಗೆದ್ದಿರುವ ಪಂತ್‌ ಪಡೆಗೆ ಕಾಂಗರೂ ನಾಡಿನ ಇನ್‌ಫಾರ್ಮ ಬ್ಯಾಟರ್‌ ವಾರ್ನರ್‌ ಮತ್ತು ಹರಿಣಗಳ ದೇಶದ ಘಾತಕ ವೇಗಿ ನೋರ್ಜೆ ಸೇವೆ ಲಭಿಸಿವುದರಿಂದ ಎರಡೂ ವಿಭಾಗಗಳಲ್ಲೂ ತಂಡ ಬಲಿಷ್ಠಗೊಳ್ಳಲಿದೆ.

“ಡೇವಿಡ್‌ ವಾರ್ನರ್‌ ಅವರ ಕ್ವಾರಂಟೈನ್‌ ಪೂರ್ತಿಗೊಂಡಿದೆ. ಹೀಗಾಗಿ ಆಯ್ಕೆಗೆ ಲಭ್ಯರಾಗಿದ್ದಾರೆ. ಹಾಗೆಯೇ ನೋರ್ಜೆ ಫಿಟ್‌ನೆಸ್‌ ಪರೀಕ್ಷೆಯಲ್ಲಿ ಪಾಸ್‌ ಆಗಿದ್ದಾರೆ. ಅವರೂ ಆಡಲು ಸಜ್ಜಾಗಿದ್ದಾರೆ’ ಎಂಬುದಾಗಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಕೋಚ್‌ ಶೇನ್‌ ವಾಟ್ಸನ್‌ ಹೇಳಿದ್ದಾರೆ. ಆಗ ವಾರ್ನರ್‌ಗಾಗಿ ಟಿಮ್‌ ಸೀಫರ್ಟ್‌, ಹಾಗೆಯೇ ನೋರ್ಜೆಗಾಗಿ ರೋವ¾ನ್‌ ಪೊವೆಲ್‌ ಅಥವಾ ಮುಸ್ತಫಿಜುರ್‌ ರೆಹಮಾನ್‌ ಜಾಗ ಬಿಡಬೇಕಾಗುತ್ತದೆ.

ಇತ್ತ ಸ್ಟಾಯಿನಿಸ್‌ ಅವರಿಗಾಗಿ ಆಂಡ್ರ್ಯೂ ಟೈ ಅಥವಾ ಎವಿನ್‌ ಲೆವಿಸ್‌ ಲಕ್ನೋ ತಂಡದಿಂದ ಹೊರಗುಳಿಯಬೇಕಾಗಬಹುದು. ಸ್ಟಾಯಿನಿಸ್‌ ಯಾವುದಾದರೊಂದು ವಿಭಾಗದಲ್ಲಿ ಕ್ಲಿಕ್‌ ಆದರೂ ರಾಹುಲ್‌ ಬಳಗಕ್ಕೆ ಅದರಿಂದ ಲಾಭವೇ ಆಗಲಿದೆ. ಕಳೆದ ಪಂದ್ಯದ ಮೂಲಕ ಜೇಸನ್‌ ಹೋಲ್ಡರ್‌ ಆಡಲಾರಂಭಿಸಿದ್ದು ಕೂಡ ಲಕ್ನೋದ ಅದೃಷ್ಟ ವನ್ನು ತೆರೆದಿರಿಸಿದೆ.

ಇದನ್ನೂ ಓದಿ:ಐಪಿಎಲ್‌ : ಏಕಪಕ್ಷೀಯವಾಗಿ ಗೆದ್ದ ಕೋಲ್ಕತ್ತ ನೈಟ್ ರೈಡರ್ಸ್

ಲಕ್ನೋಗೆ ಒಲಿಯುತ್ತಿದೆ ಲಕ್‌
ಮೊದಲ ಪಂದ್ಯದಲ್ಲಿ ಮತ್ತೊಂದು ನೂತನ ತಂಡವಾದ ಗುಜರಾತ್‌ಗೆ ಶರಣಾಗಿದ್ದ ಲಕ್ನೋ, ಅನಂತರದ ಎರಡೂ ಮುಖಾಮುಖಿಗಳಲ್ಲಿ ತನ್ನ ಲಕ್‌ ಸಾಬೀತುಪಡಿಸಲಾರಂಭಿಸಿದೆ. ಚೆನ್ನೈ ವಿರುದ್ಧ 6 ವಿಕೆಟ್‌ ಹಾಗೂ ಕಳೆದ ಪಂದ್ಯದಲ್ಲಿ ಹೈದರಾಬಾದ್‌ ವಿರುದ್ಧ 12 ರನ್ನುಗಳ ರೋಚಕ ಜಯ ಸಾಧಿಸಿದೆ. ಆದರೆ ಡೆಲ್ಲಿ ಸವಾಲು ಇವೆರಡಕ್ಕಿಂತ ಮಿಗಿಲಾದುದು!

ಲಕ್ನೋಗೆ ಬ್ಯಾಟಿಂಗ್‌ ಚಿಂತೆ
ಲಕ್ನೋ ಬ್ಯಾಟಿಂಗ್‌ ವಿಭಾಗ ಕೆ.ಎಲ್‌. ರಾಹುಲ್‌, ದೀಪಕ್‌ ಹೂಡಾ ಮತ್ತು ಯುವ ಬ್ಯಾಟರ್‌ ಆಯುಷ್‌ ಬದೋನಿ ಅವರನ್ನು ಹೆಚ್ಚು ಅವಲಂಬಿಸಿದೆ. ಚೆನ್ನೈ ವಿರುದ್ಧ ಸಿಡಿದ ಡಿ ಕಾಕ್‌, ಲೆವಿಸ್‌ ಸ್ಥಿರ ಪ್ರದರ್ಶನ ನೀಡಬೇಕಾದ ಅಗತ್ಯವಿದೆ. ಆದರೆ ಮನೀಷ್‌ ಪಾಂಡೆ ಅವರ ಸತತ ವೈಫಲ್ಯ ಚಿಂತಿಸುವಂತೆ ಮಾಡಿದೆ. ಕೃಣಾಲ್‌ ಪಾಂಡ್ಯ ಬ್ಯಾಟ್‌ ಕೂಡ ಮುಷ್ಕರ ಹೂಡಿದೆ. ಒಟ್ಟಾರೆ ಲಕ್ನೋ ಬ್ಯಾಟಿಂಗ್‌ ಯೂನಿಟ್‌ ನೂತನ ಜೋಶ್‌ ಪಡೆದರೆ ಸ್ಪರ್ಧೆ ಹೆಚ್ಚು ರೋಚಕಗೊಳ್ಳಲಿದೆ.

ಬ್ಯಾಟಿಂಗ್‌ಗೆ ಹೋಲಿಸಿದರೆ ಲಕ್ನೋ ಬೌಲಿಂಗ್‌ ದುರ್ಬಲ. ಭರವಸೆಯ ದಾಳಿ ಸಂಘಟಿಸುತ್ತಿರುವುದು ರವಿ ಬಿಷ್ಣೋಯಿ ಮಾತ್ರ.

ಟಾಪ್ ನ್ಯೂಸ್

Vijayendra (2)

JDS ಪ್ರಜ್ವಲ್ ಗೆ ಮೋದಿ ನೆರವು; ದಾರಿ ತೋಚದೆ ಟೀಕಿಸುತ್ತಿದ್ದಾರೆ: ವಿಜಯೇಂದ್ರ ತಿರುಗೇಟು

1-wdsad

I.N.D.I.A ಕೂಟದಲ್ಲಿ ವರ್ಷಕ್ಕೆ ಒಬ್ಬರನ್ನು ಪ್ರಧಾನಿಯನ್ನಾಗಿಸಲು ಚಿಂತನೆ: ಅಣ್ಣಾಮಲೈ

1-wwwqe

HSC PARALI; ಲಕ್ಷದ್ವೀಪದಿಂದ ಮಂಗಳೂರಿಗೆ ಆಗಮಿಸಿದ ಹೈ ಸ್ಪೀಡ್ ಪರಲಿ

1-qweqweq

CNG ಇಂಧನ ನಿರಂತರ ಪೂರೈಕೆಗೆ ಕೇಂದ್ರಕ್ಕೆ ಯಶ್ ಪಾಲ್ ಸುವರ್ಣ ಮನವಿ

ಸಿ.ಟಿ.ರವಿ

Belagavi; ಪ್ರಜ್ವಲ್ ಪ್ರಕರಣವು ಚುನಾವಣೆಗೆ ಪ್ರಭಾವ ಬೀರುತ್ತದೆ: ಸಿ.ಟಿ.ರವಿ

1-wqqweqwe

BJP 200 ಸೀಟು ದಾಟುವುದು ಕಷ್ಟ: ಗೋವಾದಲ್ಲಿ ಶಶಿ ತರೂರ್

1-aaa

Prajwal Revanna ವಿದೇಶಕ್ಕೆ ತೆರಳಲು ಕ್ಲಿಯರೆನ್ಸ್ ಕೇಳಿಲ್ಲ: ವಿದೇಶಾಂಗ ಸಚಿವಾಲಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CSKvsPBKS; ”ಇದು ಟೀಮ್ ಗೇಮ್….”: ಧೋನಿ ನಡೆಗೆ ಇರ್ಫಾನ್ ಪಠಾಣ್ ಟೀಕೆ

CSKvsPBKS; ”ಇದು ಟೀಮ್ ಗೇಮ್….”: ಧೋನಿ ನಡೆಗೆ ಇರ್ಫಾನ್ ಪಠಾಣ್ ಟೀಕೆ

SUNIPL ಸನ್‌ರೈಸರ್ ಹೈದರಾಬಾದ್‌ ಎದುರಾಳಿ ರಾಜಸ್ಥಾನ್‌ ಪ್ಲೇ ಆಫ್ ಗೆ ಒಂದೇ ಮೆಟ್ಟಿಲು

IPL ಸನ್‌ರೈಸರ್ ಹೈದರಾಬಾದ್‌ ಎದುರಾಳಿ ರಾಜಸ್ಥಾನ್‌ ಪ್ಲೇ ಆಫ್ ಗೆ ಒಂದೇ ಮೆಟ್ಟಿಲು

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Vijayendra (2)

JDS ಪ್ರಜ್ವಲ್ ಗೆ ಮೋದಿ ನೆರವು; ದಾರಿ ತೋಚದೆ ಟೀಕಿಸುತ್ತಿದ್ದಾರೆ: ವಿಜಯೇಂದ್ರ ತಿರುಗೇಟು

Uppinangady: ತೀವ್ರ ಜ್ವರ; ಅರ್ಚಕ ಸಾವು

Uppinangady: ತೀವ್ರ ಜ್ವರ; ಅರ್ಚಕ ಸಾವು

Ajekar: ಟೆರೇಸಿನಿಂದ ಬಿದ್ದ ಮುಖ್ಯ ಶಿಕ್ಷಕ ಸಾವು

Ajekar: ಟೆರೇಸಿನಿಂದ ಬಿದ್ದ ಮುಖ್ಯ ಶಿಕ್ಷಕ ಸಾವು

Kamalapur: ಜಾತಿ ನಿಂದನೆ ಕೇಸ್‌ಗೆ ಹೆದರಿ ಯುವಕ ಆತ್ಮಹತ್ಯೆ

Kamalapur: ಜಾತಿ ನಿಂದನೆ ಕೇಸ್‌ಗೆ ಹೆದರಿ ಯುವಕ ಆತ್ಮಹತ್ಯೆ

1-wqqwqw

Congress ಸರಕಾರದಿಂದ ದಲಿತರ ಮತ ಮತ್ತು ಯೋಜನೆ ದುರುಪಯೋಗ: ನಾರಾಯಣಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.