ಐಷಾರಾಮಿ ಜೀವನಕ್ಕಾಗಿ ದುಷ್ಕೃತ್ಯ: ಯುಟ್ಯೂಬ್‌ನಲ್ಲಿ ಕಳ್ಳತನ ಕಲಿತು ಲಕ್ಷ ಲಕ್ಷ ಲೂಟಿ


Team Udayavani, Apr 23, 2022, 1:13 PM IST

Untitled-1

ಬೆಂಗಳೂರು: ಐಷಾರಾಮಿ ಜೀವನ ನಡೆಸುವುದಕ್ಕಾಗಿ ಹಣ ಹಾಗೂ ಚಿನ್ನಾಭರಣದ ಜತೆಗೆ ವಿದೇಶಕ್ಕೆ ಹೋಗಿ ನೆಲೆಸಬೇಕು ಎಂಬ ದುರುದ್ದೇಶದಿಂದ ಯೂಟ್ಯೂಬ್‌ ನೋಡಿ ಮನೆಗಳ ಕಿಟಕಿ ಸರಳುಗಳ ಕತ್ತರಿಸಿ ಒಳನುಸುಳಿ ಕಳವು ಮಾಡುತ್ತಿದ್ದ ಇಬ್ಬರನ್ನು ಸಂಜಯ್‌ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹೈದರಾಬಾದ್‌ ಮೂಲದ ವಿನೋದ್‌ಕುಮಾರ್‌ (34) ಹಾಗೂ ಪಶ್ಚಿಮ ಬಂಗಾಳದ ರೋಹಿತ್‌ ಮಂಡಲ್‌ (28) ಬಂಧಿತರು. ಆರೋಪಿಗಳಿಂದ 79.64 ಲಕ್ಷ ರೂ. ಮೌಲ್ಯದ 792 ಗ್ರಾಂ ಚಿನ್ನಾಭರಣ, 3 ಲ್ಯಾಪ್‌ಟಾಪ್‌, 10 ಮೊಬೈಲ್‌, 6 ಐ-ಪ್ಯಾಡ್‌ಗಳು, 30 ದುಬಾರಿ ಬೆಲೆಯ ವಾಚ್‌ಗಳು, 2 ಕೆನಾನ್‌ ಕ್ಯಾಮರಾ, ಏಳು ಗಾಗಲ್ಸ್‌ಗಳು, ಒಂದು ಪ್ಲೇ ಸ್ಟೇಷನ್‌, 2 ದ್ವಿಚಕ್ರ ವಾಹನಗಳು ಹಾಗೂ 2 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳ ಬಂಧನದಿಂದ ಒಟ್ಟಾರೆ 22 ಪ್ರಕರಣಗಳು ಪತ್ತೆಯಾಗಿವೆ ಎಂದು ನಗರ ಪೊಲೀಸ್‌ ಆಯುಕ್ತ ಕಮಲ್‌ಪಂತ್‌ ತಿಳಿಸಿದರು.

ಜಾಮೀನಿನ ಮೇಲೆ ಹೊರಬಂದು ಕೃತ್ಯ: ಹೈದರಾಬಾದ್‌ ಮೂಲದ ವಿನೋದ್‌ಕುಮಾರ್‌ 2015ರಲ್ಲಿ 6 ಮನೆಗಳವು ಹಾಗೂ ದ್ವಿಚಕ್ರ ವಾಹನ ಕಳವು ಪ್ರಕರಣದಲ್ಲಿ ಜೈಲು ಸೇರಿದ್ದ. ಜೈಲಿನಿಂದ ಹೊರಬಂದ ಬಳಿಕ ಪೋಷಕರು ಈತನನ್ನು ಮನೆಗೆ ಸೇರಿಸಲಿಲ್ಲ. ಹಾಗಾಗಿ, 2016ರಲ್ಲಿ ಕೋಲ್ಕತ್ತಾಗೆ ಹೋಗಿ ಚಾಲಕನ ವೃತ್ತಿ ಮಾಡುತ್ತಿದ್ದ. ಆ ವೇಳೆ ಬಾಂಗ್ಲಾಮೂಲದ ಯುವತಿಯೊಬ್ಬಳು ಈತನಿಗೆ ಪರಿಚಯವಾಗಿ ಅವಳ ಮೂಲಕ ರೋಹಿತ್‌ ಮಂಡಲ್‌ ಪರಿಚಯವಾಗಿದ್ದ. 2019ರಲ್ಲಿ ಮೂವರು ಬಾಂಗ್ಲಾದೇಶಕ್ಕೆ ಹೋಗಿ ತಮ್ಮ ಹೆಸರುಗಳನ್ನು ಬದಲಾಯಿಸಿಕೊಂಡು ಒಂದು ವರ್ಷ ನೆಲೆಸಿದ್ದರು. ಅಲ್ಲಿಯೇ ಢಾಕಾದಲ್ಲಿ ಪರಿಚಿತಳಾಗಿದ್ದ ಯುವತಿಯನ್ನು ವಿನೋದ್‌ ವಿವಾಹವಾಗಿದ್ದ. ಆದರೆ, ಅಲ್ಲಿ ಯಾವುದೇ ಕೆಲಸವಿಲ್ಲದೇ ಜೀವನ ಮಾಡುವುದು ಕಷ್ಟವಾಗಿದ್ದರಿಂದ ವಾಪಸ್‌ ಭಾರತಕ್ಕೆ ಬಂದು ಪಶ್ಚಿಮ ಬಂಗಾಳದಲ್ಲಿ ನೆಲೆಸಿದ್ದರು. ಕೆಲವು ದಿನಗಳ ಬಳಿಕ ವಿನೋದ್‌ ತನ್ನ ಪತ್ನಿಯೊಂದಿಗೆ ಬೆಂಗಳೂರಿಗೆ ಬಂದಿದ್ದನು.

ಯೂಟ್ಯೂಬ್‌ ನೋಡಿ ಕಳ್ಳತನ ಕಲಿತ: ಯೂಟ್ಯೂಬ್‌ ನೋಡಿ ಮನೆಗಳ ಕಿಟಕಿಯ ಸರಳುಗಳನ್ನು ಕತ್ತರಿಸಿ ಮನೆ ಗಳವು ಮಾಡುವ ವಿಧಾನವನ್ನು ವಿನೋದ್‌ ಕಲಿತಿದ್ದ. ಅದಕ್ಕಾಗಿ ಬೇಕಾಗುವ ಎಲ್ಲ ಪರಿಕರಗಳು ಹಾಗೂ ಒಂದು ಬೈಕ್‌ ಖರೀದಿಸಿ ಅದರ ಜತೆಗೆ ಮತ್ತೂಂದು ಬೈಕ್‌ ಕಳವು ಮಾಡಿದ್ದಾನೆ. ಹಗಲಿನಲ್ಲಿ ಖರೀದಿಸಿದ್ದ ಬೈಕ್‌ನಲ್ಲಿ ಸುತ್ತಾಡಿ ಬೀಗ ಹಾಕಿರುವ ಮನೆಗಳನ್ನು ಗುರು ತಿಸಿ ರಾತ್ರಿ ವೇಳೆ ಕದ್ದ ಬೈಕ್‌ನಲ್ಲಿ ಬಂದು ಮನೆಗಳ್ಳತನ ಮಾಡುವ ವೃತ್ತಿಯನ್ನು ಅಳವಡಿಸಿಕೊಂಡಿದ್ದ. ಪತ್ನಿ ಗರ್ಭಿಣಿಯಾದ ಬಳಿಕ ಆಕೆಯನ್ನು ಪಶ್ಚಿಮ ಬಾಂಗ್ಲಾದಲ್ಲಿ ಬಿಟ್ಟುಬಂದು ರೋಹಿತ್‌ ಮಂಡಲ್‌ ನನ್ನು ಬೆಂಗಳೂರಿಗೆ ಕರೆತಂದಿದ್ದ. ಹಗಲಿನಲ್ಲಿ ಬೀಗ ಹಾಕಿರುವ ಮನೆಗಳನ್ನು ಗುರುತಿಸುತ್ತಿದ್ದ ವಿನೋದ್‌, ಆ ಮನೆಯ ಲೋಕೇಷನ್‌ ಅನ್ನು ಮಂಡಲ್‌ಗೆ ಕಳುಹಿಸುತ್ತಿದ್ದ.

ರಾತ್ರಿ ವೇಳೆ ಆ ಸ್ಥಳಕ್ಕೆ ಹೋಗಿ ಮನೆಗಳವು ಮಾಡುತ್ತಿದ್ದ ಎಂದು ವಿವರಿಸಿದರು. ಕಳ್ಳತನ ಮಾಡಿದ್ದರಲ್ಲಿ ಕೆಲವು ಆಭರಣಗಳನ್ನು ತನ್ನ ಪತ್ನಿಗೆ ತೆಗೆದಿಟ್ಟು ಉಳಿದಿದ್ದನ್ನು ಮಾರಾಟ ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದ. ಅಂತಾರಾಷ್ಟ್ರೀಯ ಕಂಪನಿ ವಸ್ತುಗಳನ್ನು ಖರೀದಿಸಿ ಭೋಗದ ಜೀವನ ನಡೆಸುತ್ತಿದ್ದ. ಮಾರ್ಚ್‌ನಲ್ಲಿ ಸಂಜಯ್‌ನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾದ ಪ್ರಕರಣದ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.

ಟಾಪ್ ನ್ಯೂಸ್

1-xdx

Revanna ಮಧ್ಯಂತರ ನಿರೀಕ್ಷಣಾ ಜಾಮೀನು ಮೇ 20 ರ ವರೆಗೆ ವಿಸ್ತರಿಸಿದ ಕೋರ್ಟ್

ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ: ಬೇಳೂರು

Gopal Krishna Belur ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ

20

Sandalwood: ದರ್ಶನ್‌ ʼಡೆವಿಲ್‌ʼಗೆ ಕರಾವಳಿ ಬೆಡಗಿ ರಚನಾ ರೈ ನಾಯಕಿ; ಫಸ್ಟ್‌ ಪೋಸ್ಟರ್‌ ಔಟ್

satish jarakiholi

Belagavi,ಚಿಕ್ಕೋಡಿ ಸೇರಿ 14 ರಿಂದ 17 ಸೀಟು ಕಾಂಗ್ರೆಸ್ ಗೆಲ್ಲಲಿದೆ: ಸತೀಶ್ ಜಾರಕಿಹೊಳಿ

Shivraj tangadagi

Prajwal Revanna ಬಂಧನಕ್ಕೆ ಕೇಂದ್ರ ಸರಕಾರದಿಂದ ಅಸಹಕಾರ: ಸಚಿವ ತಂಗಡಗಿ

1-qwewe

Odisha ಜನರು ನಿಂದನೀಯ ಭಾಷೆ ಮೆಚ್ಚಿಕೊಳ್ಳುವುದಿಲ್ಲ:ಬಿಜೆಪಿಗೆ ಪಟ್ನಾಯಕ್ ತಿರುಗೇಟು

6-rabakavi

Rabkavi Banhatti: ಶತಮಾನದ ಸೋಮವಾರಪೇಟೆ ಸಮಸ್ತ ದೈವ ಮಂಡಳಿಯ ಗರಡಿ ಮನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬೆದರಿಸಲು ನೇಣಿಗೆ ಕೊರಳೊಡ್ಡಿದ ಪತಿ ದಿಢೀರ್‌ ಕುಣಿಕೆ ಬಿಗಿದು ಸಾವು

Bengaluru: ಬೆದರಿಸಲು ನೇಣಿಗೆ ಕೊರಳೊಡ್ಡಿದ ಪತಿ ದಿಢೀರ್‌ ಕುಣಿಕೆ ಬಿಗಿದು ಸಾವು

Fraud: ಗೃಹ ಸಚಿವರ ಆಪ್ತ ಎಂದು ನಂಬಿಸಿ ಹಲವರಿಗೆ ವಂಚನೆ

Fraud: ಗೃಹ ಸಚಿವರ ಆಪ್ತ ಎಂದು ನಂಬಿಸಿ ಹಲವರಿಗೆ ವಂಚನೆ

Beans Price: ರಾಂಚಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಬೀನ್ಸ್‌ !

Beans Price: ರಾಂಚಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಬೀನ್ಸ್‌!

Crime: ಕೈ, ಕತ್ತು ಕೊಯ್ದ ಸ್ಥಿತಿಯಲ್ಲಿ ಯುವತಿ ಶವ ಪತ್ತೆ

Crime: ಕೈ, ಕತ್ತು ಕೊಯ್ದ ಸ್ಥಿತಿಯಲ್ಲಿ ಯುವತಿ ಶವ ಪತ್ತೆ

8-bng

17 ಕೋಟಿ ರೂ. ವಿದ್ಯುತ್‌ ಬಿಲ್‌ ಕಂಡು ಮನೆ ಮಾಲೀಕನಿಗೆ ಶಾಕ್‌!

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

1-xdx

Revanna ಮಧ್ಯಂತರ ನಿರೀಕ್ಷಣಾ ಜಾಮೀನು ಮೇ 20 ರ ವರೆಗೆ ವಿಸ್ತರಿಸಿದ ಕೋರ್ಟ್

1-qwewqewqe

Governor ಸಹಿ ನಕಲಿ ; ಕೋಟ್ಯಂತರ ರೂ. ವಂಚನೆ: ಕೊರಟಗೆರೆಯ ಜುಬೇರ್ ಅರೆಸ್ಟ್

ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ: ಬೇಳೂರು

Gopal Krishna Belur ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ

20

Sandalwood: ದರ್ಶನ್‌ ʼಡೆವಿಲ್‌ʼಗೆ ಕರಾವಳಿ ಬೆಡಗಿ ರಚನಾ ರೈ ನಾಯಕಿ; ಫಸ್ಟ್‌ ಪೋಸ್ಟರ್‌ ಔಟ್

1——-qweweqw

Dr.G. Parameshwara ಹೆಸರು ದುರ್ಬಳಕೆ: ಕಾಂಗ್ರೆಸ್ ನಿಂದ ಮೊಹಮ್ಮದ್ ಜುಬೇರ್ ಉಚ್ಛಾಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.