ಮೇವಾನಿಗೆ ಜಾಮೀನು: ಇಂದು ತೀರ್ಪು?
Team Udayavani, Apr 29, 2022, 6:24 AM IST
ಬಾರ್ಪೆಟಾ: ಮಹಿಳಾ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ನಡೆಸಿ ಬಂಧನದಲ್ಲಿರುವ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಅವರ ಜಾಮೀನು ಅರ್ಜಿಯ ವಿಚಾರಣೆ ಪೂರ್ಣಗೊಂಡಿದೆ.
ಅಸ್ಸಾಂನ ಬಾರ್ಪೆಟಾದಲ್ಲಿರುವ ಸ್ಥಳೀಯ ನ್ಯಾಯಾಲಯ ತೀರ್ಪನ್ನು ಶುಕ್ರವಾರದ ವರೆಗೆ ಕಾಯ್ದಿರಿಸಿದೆ ಎಂದು ಅವರ ವಕೀಲ ಅಂಶುಮಾನ್ ಬೋರಾ ಹೇಳಿದ್ದಾರೆ.
ಮೇವಾನಿ ಬಂಧನ ಖಂಡಿಸಿ, ಕಾಂಗ್ರೆಸ್ ಅಸ್ಸಾಂನಾದ್ಯಂತ ಗುರುವಾರ ಪ್ರತಿಭಟನೆ ನಡೆಸಿದೆ.