ಕುದುರೆ ಮೇಲೆ ಶಾಲೆಗೆ ಹೋಗುವ ಚಿಣ್ಣರು!

Team Udayavani, Jun 20, 2022, 10:44 AM IST

3

ಯಳಂದೂರು: ಪ್ರತಿನಿತ್ಯ ಮಕ್ಕಳು ಶಾಲೆಗೆ ಬೈಕ್‌, ಕಾರು, ಸೈಕಲ್‌, ಬಸ್‌, ರೈಲುಗಳ ಮೂಲಕ ಹೋಗುವುದನ್ನು ಕೇಳಿದ್ದೀವಿ, ನೋಡಿದ್ದೀವಿ. ಆದರೆ ಕುದುರೆ ಮೂಲಕ ಹೋಗುವುದನ್ನು ನೋಡಿದ್ದೀರ, ಕೇಳಿದ್ದೀರ?

ಇಂಥದ್ದೊಂದು ವಿದ್ಯಮಾನ ತಾಲೂಕಿನ ಕಂದಹಳ್ಳಿಯಲ್ಲಿ ನಿತ್ಯ ನಡೆಯುತ್ತಿದೆ. ಕುದುರೆ ನಾಗೇಂದ್ರ ಎಂದೇ ಪ್ರಸಿದ್ಧಿಯಾದ ನಾಗೇಂದ್ರ ಅವರು ತಮ್ಮ ಮಕ್ಕಳಾದ ಸನ್ನಿಧಿ, ಸುದೀಪ್‌ ಅವರನ್ನು ಪ್ರತಿನಿತ್ಯ ಕುದುರೆ ಮೇಲೆ ಶಾಲೆಗೆ ಕರೆದುಕೊಂಡು ಹೋಗುತ್ತಾರೆ. ಆ ಸಮಯದಲ್ಲಿ ಶಾಲೆ ಬಿಟ್ಟಮಕ್ಕಳು ಇಲ್ಲವೇ ಶಾಲೆಗೆ ಹೋಗದೆ ಹಠ ಮಾಡುವ ಮಕ್ಕಳನ್ನು ಮನವೊಲಿಸಿ ಕುದುರೆ ಮೂಲಕ ಕರೆದುಕೊಂಡು ಹೋಗಿ ಮತ್ತೆ ಶಾಲೆ ಮೆಟ್ಟಿಲು ಹತ್ತುವಂತೆ ಮಾಡುತ್ತಿದ್ದಾರೆ.

ಪ್ರಾಣಿ ಪ್ರೀತಿಯಿಂದ ಕುದುರೆ ಸಾಕಿರುವ ನಾಗೇಂದ್ರ ಅವರು, ಶಾಲೆಗೆ ಹೋಗಲ್ಲ ಎನ್ನುವ ಮಕ್ಕಳನ್ನು ಪ್ರೀತಿಯಿಂದ ಕುದುರೆ ಮೇಲೆ ಕರೆದೊಯ್ಯುವ ಕೆಲಸಕ್ಕೆ ಗ್ರಾಮಸ್ಥರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ನಾಗೇಂದ್ರ ಅವರು ನಿತ್ಯವೂ ಸಮೀಪದ ಕಾರಾಪುರ ವಿರಕ್ತ ಮಠದ ನಿರಂಜನ ವಿದ್ಯಾಸಂಸ್ಥೆಗೆ ತನ್ನ ಮಕ್ಕಳು, ಸಂಬಂಧಿಕರ ಮಕ್ಕಳನ್ನು ಕುದುರೆ ಮೂಲಕವೇ ಕರೆದೊಯ್ಯುತ್ತಾರೆ. ಈ ವೇಳೆ ಶಾಲೆಗೆ ಹೋಗದಂತಹ ಮಕ್ಕಳ ಬಗ್ಗೆ ಮಾಹಿತಿ ಸಿಕ್ಕರೆ, ಆ ಮಕ್ಕಳನ್ನೂ ಶಾಲೆಗೆ ಕರೆದುಕೊಂಡು ಹೋಗುತ್ತಾರೆ.

ಪ್ರಾಣಿಗಳು ಎಂದರೆ ಅಚ್ಚುಮೆಚ್ಚು: ನಾಗೇಂದ್ರ ಅವರಿಗೆ ಬಾಲ್ಯದಿಂದಲೂ ಪ್ರಾಣಿಗಳ ಮೇಲೆ ತುಂಬಾ ಆಸಕ್ತಿ. ವಿವಿಧ ಜಾತಿಯ ನಾಯಿ, ಬಾತುಕೋಳಿ, ಪಾರಿವಾಳ, ಗಿಳಿ, ಮೊಲದ ಮರಿ, ಕೋಳಿ ಸೇರಿ ಪ್ರಾಣಿಗಳನ್ನು ಪೋಷಿಸುತ್ತಿದ್ದಾರೆ. ಅದಕ್ಕೆಂದೇ ಪ್ರತ್ಯೇಕವಾಗಿ ಕೊಠಡಿ ಸಹ ನಿರ್ಮಿಸಿದ್ದಾರೆ. ಏಳು ವರ್ಷದ ಹಿಂದೆ ಕುದುರೆ ಸಾಕುವ ಹಂಬಲದಿಂದ ಮೈಸೂರಿನ ರೇಸ್‌ಕೋರ್ಸ್‌ನಲ್ಲಿ ಒಂದು ಕುದುರೆ ತಂದು ಸಾಕುತ್ತಿದ್ದಾರೆ.

ಶಾಲೆಗೆ ಬರುವ ಮಕ್ಕಳು ಹಠ ಮಾಡಿದರೆ ಕುದುರೆ ಮೇಲೆ ಒಂದು ಸುತ್ತು ಕರೆದುಕೊಂಡು ಬರುವುದರಿಂದ ಮಕ್ಕಳು ಖುಷಿಯಾಗುವುದರ ಜತೆಗೆ, ಶಾಲೆಗೆ ಪ್ರತಿ ನಿತ್ಯ ಆಗಮಿಸುವುದಕ್ಕೆ ಹೆಚ್ಚು ಅನುಕೂಲವಾಗಿದೆ. ● ಶಮಂತ್‌ ಮಣಿ, ಮುಖ್ಯಶಿಕ್ಷಕಿ, ನಿರಂಜನ್‌ ಕಾನ್ವೆಂಟ್‌ ಯಳಂದೂರು

● ಫೈರೋಜ್‌ ಖಾನ್‌

ಟಾಪ್ ನ್ಯೂಸ್

ಯುವತಿಯ ಅಪಹರಣ; ಯುವಕನ ತಾಯಿಯನ್ನು ಕಂಬಕ್ಕೆ ಕಟ್ಟಿ ಥಳಿತ

Haveri; ಯುವತಿಯ ಅಪಹರಣ ಆರೋಪ; ಯುವಕನ ತಾಯಿಯನ್ನು ಕಂಬಕ್ಕೆ ಕಟ್ಟಿ ಥಳಿತ

5-fir

Bengaluru: ಠಾಣೆಯಲ್ಲೇ ಮಹಿಳಾ ಪಿಎಸ್‌ಐಗೆ ಕಪಾಳಮೋಕ್ಷ, ಪೊಲೀಸರ ಮೇಲೆ ಹಲ್ಲೆ

Tragedy: ಮೊಬೈಲ್ ಬೆಳಕಿನಲ್ಲಿ ಸಿಸೇರಿಯನ್ ಹೆರಿಗೆಗೆ ಮುಂದಾದ ವೈದ್ಯರು.. ತಾಯಿ, ಮಗು ಮೃತ್ಯು

Tragedy: ಮೊಬೈಲ್ ಬೆಳಕಿನಲ್ಲಿ ಸಿಸೇರಿಯನ್ ಹೆರಿಗೆಗೆ ಮುಂದಾದ ವೈದ್ಯರು.. ತಾಯಿ, ಮಗು ಮೃತ್ಯು

Harassment: ಪಶ್ಚಿಮ ಬಂಗಾಳದ ರಾಜ್ಯಪಾಲರಿಂದ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ

Harassment: ಪಶ್ಚಿಮ ಬಂಗಾಳದ ರಾಜ್ಯಪಾಲರಿಂದ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ

4-sampaje

Aranthodu: ಚಾಲಕನ ನಿಯಂತ್ರಣ ತಪ್ಪಿ ಹೋಟೆಲ್ ಗೆ ಢಿಕ್ಕಿ ಹೊಡೆದ ಕಾರು

3-vijayapura

Vijayapura: ಸೀಟಿಗಾಗಿ ಮಹಿಳೆಯರ ಕಿತ್ತಾಟ: ರಸ್ತೆಯಲ್ಲೇ ನಿಂತ ಬಸ್

Lok Sabha Election: ರಾಯ್​ಬರೇಲಿಯಿಂದ ರಾಹುಲ್,​ ಅಮೇಥಿಯಿಂದ ಕೆ.ಎಲ್​. ಶರ್ಮ ಕಣಕ್ಕೆ

Lok Sabha Election: ರಾಯ್​ಬರೇಲಿಯಿಂದ ರಾಹುಲ್,​ ಅಮೇಥಿಯಿಂದ ಕೆ.ಎಲ್​. ಶರ್ಮ ಕಣಕ್ಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಯುವತಿಯ ಅಪಹರಣ; ಯುವಕನ ತಾಯಿಯನ್ನು ಕಂಬಕ್ಕೆ ಕಟ್ಟಿ ಥಳಿತ

Haveri; ಯುವತಿಯ ಅಪಹರಣ ಆರೋಪ; ಯುವಕನ ತಾಯಿಯನ್ನು ಕಂಬಕ್ಕೆ ಕಟ್ಟಿ ಥಳಿತ

5-fir

Bengaluru: ಠಾಣೆಯಲ್ಲೇ ಮಹಿಳಾ ಪಿಎಸ್‌ಐಗೆ ಕಪಾಳಮೋಕ್ಷ, ಪೊಲೀಸರ ಮೇಲೆ ಹಲ್ಲೆ

Lok Sabha Polls: ದಾವಣಗೆರೆ ಮಾದರಿ ಕ್ಷೇತ್ರವನ್ನಾಗಿಸುವ ಕನಸಿದೆ: ಗಾಯತ್ರಿ ಸಿದ್ದೇಶ್ವರ

Lok Sabha Polls: ದಾವಣಗೆರೆ ಮಾದರಿ ಕ್ಷೇತ್ರವನ್ನಾಗಿಸುವ ಕನಸಿದೆ: ಗಾಯತ್ರಿ ಸಿದ್ದೇಶ್ವರ

Tragedy: ಮೊಬೈಲ್ ಬೆಳಕಿನಲ್ಲಿ ಸಿಸೇರಿಯನ್ ಹೆರಿಗೆಗೆ ಮುಂದಾದ ವೈದ್ಯರು.. ತಾಯಿ, ಮಗು ಮೃತ್ಯು

Tragedy: ಮೊಬೈಲ್ ಬೆಳಕಿನಲ್ಲಿ ಸಿಸೇರಿಯನ್ ಹೆರಿಗೆಗೆ ಮುಂದಾದ ವೈದ್ಯರು.. ತಾಯಿ, ಮಗು ಮೃತ್ಯು

Harassment: ಪಶ್ಚಿಮ ಬಂಗಾಳದ ರಾಜ್ಯಪಾಲರಿಂದ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ

Harassment: ಪಶ್ಚಿಮ ಬಂಗಾಳದ ರಾಜ್ಯಪಾಲರಿಂದ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.