School

 • ಶಾಲೆಯಲ್ಲಿರಬೇಕಾದ ಈ ಮಕ್ಕಳಿರುವುದು ಅರಣ್ಯದಲ್ಲಿ

  ಶ್ರೀನಿವಾಸಪುರ (ಕೋಲಾರ): ತಾಲೂಕಿನ ದೊಡಮಲ ದೊಡ್ಡಿ ಮಾರ್ಗದಲ್ಲಿ ಸಿಗುವ ಅರಣ್ಯದಲ್ಲಿ ಶಿವಮೊಗ್ಗ, ಕಲಬುರಗಿ ಜಿಲ್ಲೆಯಿಂದ ವಲಸೆ ಬಂದಿರುವ ಕೂಲಿ ಕಾರ್ಮಿಕರು ನೀಲಗಿರಿ ಮರ ಕಟಾವು ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಇವರೊಂದಿಗೆ ಸುಮಾರು 15 ಮಕ್ಕಳೂ ಬಂದಿದ್ದು, ಶಾಲೆಗೆ ಹೋಗದೆ 2…

 • ಅಜ್ಜಿಯರ ಪಾಠ ಶಾಲೆ

  ಶಾಲೆ ಎಂದಕೂಡಲೇ ಮೊದಲು ನೆನಪಾಗೋದು, ಮಕ್ಕಳು. ಜುಟ್ಟು ಕಟ್ಟಿದ ಹುಡುಗಿಯರು, ಯೂನಿಫಾರ್ಮ್ ಚಡ್ಡಿ ತೊಟ್ಟ ಸಣ್ಣ ಹುಡುಗರು. ಆದರೆ, ಅಜ್ಜಿಯರೇ ವಿದ್ಯಾರ್ಥಿಗಳಾಗಿರುವ ಶಾಲೆಯ ಬಗ್ಗೆ ಗೊತ್ತಾ? ಅದು ಇರುವುದು ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಪಂಗಾನ್‌ ಗ್ರಾಮದಲ್ಲಿ. ಅದರ ಹೆಸರು,…

 • ಶಾಲೆಯಲ್ಲೇ ಶಿಕ್ಷಕರು ಬಿಸಿಯೂಟ ಸೇವಿಸಿ

  ಎಚ್‌.ಡಿ.ಕೋಟೆ: ಪಟ್ಟಣದ ಆದರ್ಶ ಶಾಲೆಯಲ್ಲಿ ಬಿಸಿಯೂಟದಲ್ಲಿ ಹುಳುಬಿದ್ದ ಆಹಾರ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರ್ಷಿಕ ಪರೀಕ್ಷೆ ಮುಗಿಯುತ್ತಿದ್ದಂತೆಯೇ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಅನಿಲ್‌ ಚಿಕ್ಕಮಾದು ಎಚ್ಚರಿಕೆ ನೀಡಿದರು. ಅಲ್ಲದೇ ಶಾಲೆಯಲ್ಲಿ…

 • ಕಲಿ-ನಲಿ!

  “ಆಲೂಗಡ್ಡೆ ಎಲ್ಲಿ ಬೆಳೆಯುತ್ತದೆ ? “ಮರದ ಮೇಲೆ ಸಾರ್‌’, ” ಹಾಲಿನ ಮೂಲ ಎಲ್ಲಿದೆ ?’ ” ಅಂಗಡಿಯಲ್ಲಿ ಸಾರ್‌’ ಎಂದು ಉತ್ತರಿಸುವ ಮಕ್ಕಳು ಇರುವ ಈ ಕಾಲದಲ್ಲಿ. ಶಿರಸಿಯ ಒಂದಷ್ಟು ಶಾಲೆಗಳ ವಿದ್ಯಾರ್ಥಿಗಳು ಸದ್ದಿಲ್ಲದೇ ಕಿಚನ್‌ ಗಾರ್ಡನ್‌…

 • ಹಾಡಿಯ ಶಾಲೆಗೆ ಹೊಸ ರೂಪ ನೀಡಿದ ಎನ್‌ಎಸ್‌ಎಸ್‌

  ಹುಣಸೂರು: ಎನ್‌ಎಸ್‌ಎಸ್‌ ಶಿಬಿರಾರ್ಥಿಗಳು ತಾಲೂಕಿನ ಕೆಂಡಗಣ್ಣಸ್ವಾಮಿ ಗದ್ದಿಗೆ ಸಮೀಪ‌ ದತ್ತು ಪಡೆದಿರುವ ತಕ್ಕಲು ಹಾಡಿಯ ಸರ್ಕಾರಿ ಶಾಲಾ ಮಕ್ಕಳಿಗೆ ಕಂಪ್ಯೂಟರ್‌ ಬಳಸುವುದನ್ನು ಕಲಿ ಕೊಟ್ಟರು. ಶಾಲೆಯ ಕೊಠಡಿಗಳಿಗೆ ಸುಣ್ಣ ಬಣ್ಣ ಬಳಿದು, ನಲಿ-ಕಲಿ ಚಪ್ಪರವನ್ನು ನಿರ್ಮಿಸಿದರಲ್ಲದೇ ಸಸಿ ನೆಟ್ಟು…

 • ಕಲಬುರಗಿ: ಶಾಲಾ ಪ್ರವಾಸ ಬಸ್ ಮರಕ್ಕೆ ಡಿಕ್ಕಿ: ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ

  ಕಲಬುರಗಿ:  ಶಾಲಾ ಮಕ್ಕಳು ಪ್ರವಾಸಕ್ಕೆಂದು ಹೊರಟಿದ್ದ ಖಾಸಗಿ  ಬಸ್ ಮರಕ್ಕೆ ಹೊಡೆದ ಪರಿಣಾಮ ಹತ್ತಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿರುವ ಘಟನೆ ಕಲಬುರಗಿ ನಗರದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ನಗರದ ವೆಂಕಟಗಿರಿ ಹೋಟೆಲ್ ಬಳಿ ಈ ಘಟನೆ ನಡೆದಿದ್ದು, ಚನ್ನವೀರ…

 • ಶಾಲಾ-ಕಾಲೇಜು ಬಂದ್‌ ನಿರ್ಧಾರ ಕೈಬಿಡಿ

  ಬೆಂಗಳೂರು: ರಾಜ್ಯದ ಅನುದಾನ ರಹಿತ ಶಾಲಾ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸುವುದು ಸೇರಿದಂತೆ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಮತ್ತು ಶಿಕ್ಷಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಜ.17ರಂದು ಶಾಲಾ, ಕಾಲೇಜು ಬಂದ್‌ ಮಾಡುವ ಕುರಿತು ವಿಧಾನ ಪರಿಷತ್‌ ಸದಸ್ಯ…

 • ಹೆಸರು ಉಂಡೆ ಆಸೆಗೆ ಶಾಲೆಗೆ ಹೋಗುತ್ತಿದ್ದೆ!

  ಬೆಂಗಳೂರು: “ಅಮ್ಮ ಮಾಡುತ್ತಿದ್ದ ಹೆಸರು ಉಂಡೆ ಅಂದರೆ ನನಗೆ ಬಹಳ ಇಷ್ಟ. ಆ ಹೆಸರು ಉಂಡೆ ಮೇಲಿನ ಆಸೆಯೇ ನನ್ನ ಶಾಲೆಗೆ ಹೋಗುವಂತೆ ಮಾಡಿತು’. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶನಿವಾರ ನಯನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ “ಮನೆಯಂಗಳದಲ್ಲಿ ಮಾತುಕತೆ’…

 • ಶಾಲೆ ಬಿಟ್ಟ ಮಕ್ಕಳಿಗೆ ಸರ್ಕಾರದಿಂದ ಪ್ರತ್ಯೇಕ ನೀತಿ

  ಬೆಂಗಳೂರು: ರಾಜ್ಯದಲ್ಲಿ ಶಾಲೆಯಿಂದ ಹೊರಗುಳಿದ, ಗೈರು ಹಾಜರಾದ ಮತ್ತು ವಲಸೆ ಮಕ್ಕಳನ್ನು ಗುರುತಿಸಿ ಅವರನ್ನು ಶಾಲಾ ಶಿಕ್ಷಣದ ಮುಖ್ಯ ವಾಹಿನಿಗೆ ತರಲು ಪ್ರತ್ಯೇಕ ನೀತಿ ರೂಪಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಹೇಳಿದೆ. ರಾಜ್ಯದಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಾಲೆಯಿಂದ…

 • ಪರವಾನಗಿ ಇಲ್ಲದ ಶಾಲೆ ಮೇಲೆ ದಾಳಿ

  ಕುಣಿಗಲ್‌: ಅನುಮತಿ ಪಡೆಯದೆ ಹಲವು ವರ್ಷಗಳಿಂದ ಶಾಲೆ ನಡೆಸಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷ ಹರೀಶ್‌ನಾಯ್ಕ ಹಾಗೂ ಬಿಇಒ ತಿಮ್ಮರಾಜು ನಿಸರ್ಗ ವಿದ್ಯಾಸಂಸ್ಥೆ ಮೇಲೆ ದಿಢೀರ್‌ ದಾಳಿ ನಡೆಸಿ ದಾಖಲೆ ಪರಿಸೀಲಿಸಿದರು. ಹುಲಿಯೂರುದರ್ಗ ಹೋಬಳಿ ಉಜ್ಜನಿ…

 • ಸ್ಕೂಲ್‌ ಇದೆ ನಂಗೆ, ಬೇಗ ಏಳಮ್ಮಾ…

  ಬೆಳಗ್ಗಿನ ಹೊಸ ವೇಳಾಪಟ್ಟಿಗೆ ಅಡ್ಜಸ್ಟ್‌ ಆಗಲು ಅಮ್ಮ-ಮಗಳಿಗೆ ಒಂದು ತಿಂಗಳೇ ಬೇಕಾಯ್ತು. ಏಳು ಗಂಟೆಗೆ ಏಳುತ್ತಿದ್ದ ನಾನು ಆರಕ್ಕೂ, ಎಂಟೂವರೆಗೆ ಏಳುತ್ತಿದ್ದ ಅವಳು ಆರೂ ಮುಕ್ಕಾಲಿಗೂ ಏಳುವ ಅನಿವಾರ್ಯವನ್ನು ಸೃಷ್ಟಿಸಿದ “ಒಂದನೇ ತರಗತಿಗೆ’ ಇಬ್ಬರೂ ಹಿಡಿ ಶಾಪ ಹಾಕಿದೆವು….

 • ಜಗತ್ತು ಈ ಶಾಲೆಯಲ್ಲಿ…

  ಈ ಶಾಲೆಗೆ ಬಂದರೆ ಇಡೀ ಜಗತ್ತು ಇದರೊಳಗೇ ಇದೆಯೇನೋ ಅನಿಸುತ್ತದೆ. ವಿದ್ಯಾರ್ಥಿಗಳು ಶಾಲೆಗೆ ಬಂದು ಕೂತರೆ ಸಾಕು, ಕಣ್ಣ ಮುಂದೆ ಪಾಠ ನಡೆಯುತ್ತಿರುತ್ತದೆ. ಅದು ಹೇಗೆ ಅಂದಿರಾ? ಇಡೀ ಶಾಲೆಯ ಗೋಡೆಗಳು ಯಾವುದೂ ಖಾಲಿ ಇಲ್ಲ. ಎಲ್ಲ ಕಡೆ…

 • ಶಾಲೆಗಳಲ್ಲಿ ಸಂವಿಧಾನ ಪೀಠಿಕೆ ಕಡ್ಡಾಯ

  ಬೆಂಗಳೂರು: ವಿದ್ಯಾರ್ಥಿಗಳಿಗೆ ಸಂವಿಧಾನದ ಮೂಲ ಆಶಯ ತಿಳಿಸುವ ಮತ್ತು ಸಂವಿಧಾನವನ್ನು ಎಲ್ಲೆಡೆ ಪ್ರಚಾರ ಮಾಡುವ ಉದ್ದೇಶದಿಂದ ಶಾಲೆಗಳಲ್ಲಿರುವ ಮುಖ್ಯ ಶಿಕ್ಷಕರ ಕಚೇರಿ ಅಥವಾ ಮುಖ್ಯಸ್ಥರ ಕಚೇರಿಗಳಲ್ಲಿ ಭಾರತ ಸಂವಿಧಾನದ ಪೀಠಿಕೆಯನ್ನು ತೂಗು ಹಾಕುವುದು ಕಡ್ಡಾಯ ಎಂದು ಸಾರ್ವಜನಿಕ ಶಿಕ್ಷಣ…

 • ಶಿಬಾಜೆ: ಪೆರ್ಲ ಸರಕಾರಿ ಶಾಲೆಗೆ ಬಾರದ ವಿದ್ಯಾರ್ಥಿಗಳು

  ಉಪ್ಪಿನಂಗಡಿ: ಶಿಬಾಜೆ ಗ್ರಾಮದ ಪೆರ್ಲ ಸರಕಾರಿ ಶಾಲೆಯ ಬಾವಿಗೆ ಡಿ. 2ರಂದು ವಿಷ ಹಾಕಿದ ಪ್ರಕರಣ ನಡೆದು 10 ದಿನಗಳಾದರೂ ಆರೋಪಿಗಳ ಪತ್ತೆಯ ಕಾರ್ಯ ನಡೆಯದೇ ಇರುವ ಕಾರಣ ಬುಧವಾರ ಪೆರ್ಲ ಶಾಲೆಗೆ ಮತ್ತು ಅಂಗನವಾಡಿಗೆ ಹೆತ್ತವರು ತಮ್ಮ…

 • ಶಾಲೆಯಿಂದ ಹೊರಗುಳಿದ ಮಕ್ಕಳು: ಉಡುಪಿಗೆ 8, ದ.ಕ.ಕ್ಕೆ 27ನೇ ಸ್ಥಾನ!

  ಉಡುಪಿ: ವಿದ್ಯಾರ್ಥಿಗಳನ್ನು ಆಕರ್ಷಿಸಲು ಶಿಕ್ಷಣ ಇಲಾಖೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ ರಾಜ್ಯದಲ್ಲಿ 56,739 ಮತ್ತು ಅವಿಭಜಿತ ದ.ಕ. ಜಿಲ್ಲೆಯಲ್ಲಿ 3,128 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. 2018-19ನೇ ಸಾಲಿನಲ್ಲಿ ಶಿಕ್ಷಣ ಇಲಾಖೆ ನಡೆಸಿದ ಸಮೀಕ್ಷೆಯಿಂದ ಈ ಅಂಶ ತಿಳಿದುಬಂದಿದೆ. ಸಮೀಕ್ಷೆಯ ಮಾಹಿತಿಯಂತೆ,…

 • ಶಾಲೆಯಲ್ಲಿ ಜೈವಿಕ ಗೊಬ್ಬರ ತಯಾರಿಕೆ ಘಟಕ ಸ್ಥಾಪನೆ

  ಶಿರೂರ: ಸ್ಥಳೀಯ ಶ್ರೀ ಸಿದ್ದೇಶ್ವರ ಪ್ರೌಢಶಾಲೆಯಲ್ಲಿ ಗ್ರಾಮ ಪಂಚಾಯತ್‌ ವತಿಯಿಂದ ಜೈವಿಕ ಗೊಬ್ಬರ ತಯಾರಿಕೆಯ ತ್ಯಾಜ್ಯ ಘಟಕ ಸ್ಥಾಪನೆ ಮಾಡಲಾಯಿತು. ಜೈವಿಕ ಗೊಬ್ಬರ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದ ಪಿಡಿಒ ಅಮರೇಗೌಡ ಜಾರಡ್ಡಿ, ಶಾಲಾ ಆವರಣದ ಆಳೆತ್ತರ ಗುಂಡಿ…

 • ಶಾಲೆ ಅಂಗಳದಲ್ಲಿ ವಿದ್ಯಾರ್ಥಿಗಳೇ ಬೆಳೆದ ಭತ್ತದ ಪೈರು ಕಟಾವು

  ಬೆಳ್ಳಾರೆ: ಗ್ರಾಮೀಣ ಪ್ರದೇಶದಿಂದ ದೂರ ಸರಿಯುತ್ತಿರುವ ಕೃಷಿ ಸಂಸ್ಕೃತಿಯನ್ನು ಮಕ್ಕಳಿಗೆ ಕಲಿಸುವ ವಿಶೇಷ ಪ್ರಯತ್ನವೊಂದು ಬಾಳಿಲ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿದ್ದು, ಶಾಲೆಯ ಅಂಗಳದಲ್ಲಿ ತಾವೇ ನಾಟಿ ಮಾಡಿದ ಭತ್ತದ ಗದ್ದೆಯಲ್ಲಿ ಮಕ್ಕಳು ಕೊಯ್ಲು ಮಾಡಿ ಸಂಭ್ರಮಿಸಿದ್ದಾರೆ….

 • ಸಾವಿರ ಗುರುತಿನ ಸಮವಸ್ತ್ರ

  ಪುಟಾಣಿ ಮಕ್ಕಳಿಗೆ ಬಣ್ಣ ಬಣ್ಣದ ಬಟ್ಟೆಗಳನ್ನ ಹಾಕಿಕೊಂಡು ಶಾಲೆಗೆ ಹೋಗುವುದೆಂದರೆ ತುಂಬಾ ಇಷ್ಟ. ಅದರಲ್ಲೂ ಚಂದದ ಬಟ್ಟೆ ಹಾಕಿಕೊಂಡು ಎಲ್ಲರಿಗೂ ಕಾಣಿಸುವಂತೆ ಮುಂದೆ ಬಂದು ನಿಂತಾಗ ಯಾರಾದರೂ “ನೀನು ಈ ಡ್ರೆಸ್‌ನಲ್ಲಿ ನೀನು ತುಂಬಾ ಚಂದ ಕಾಣಿ¤’ ಎಂದು…

 • ತಗಡಿನ ತಾತ್ಕಾಲಿಕ ಶೆಡ್‌ನ‌ಲ್ಲೇ ಶಾಲೆ

  ನರಗುಂದ: ಲಕ್ಷಾಂತರ ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸಿದ, ಸುದೀರ್ಘ‌ 155 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಶಾಲೆಯ ಕಟ್ಟಡ ಪ್ರವಾಹದ ಹೊಡೆತಕ್ಕೆ ಸಿಲುಕಿ ವಿನಾಶದ ಅಂಚಿಗೆ ತಲುಪಿದ್ದು, ತಗಡಿನ ತಾತ್ಕಾಲಿಕ ಶೆಡ್‌ನ‌ಲ್ಲೇ ಅಕ್ಷರ ದಾಸೋಹ ಮುಂದುವರಿಸಿದೆ. 1864ರಲ್ಲೇ ನಿರ್ಮಾಣಗೊಂಡ ತಾಲೂಕಿನ…

 • ಮನೆಯ ಚಾವಡಿಯಲ್ಲಿ ಆರಂಭಗೊಂಡ ಶಾಲೆಗೀಗ 115ರ ಸಂಭ್ರಮ

  19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು…

ಹೊಸ ಸೇರ್ಪಡೆ