ಒಂದು ನಗರ ಒಂದು ಬೀದಿ ಇರ್ಪಿನ್‌


Team Udayavani, Jul 31, 2022, 6:00 AM IST

ಒಂದು ನಗರ ಒಂದು ಬೀದಿ ಇರ್ಪಿನ್‌

ಉಕ್ರೇನಿನ ಒಂದು ನಗರದ ಒಂದು ಅತಿ ಜನನಿಬಿಡ ರಸ್ತೆ ಯುದ್ಧದ ಹಿನ್ನೆಲೆಯಲ್ಲಿ ಅಸ್ತವ್ಯಸ್ತಗೊಂಡಿದೆ. ಅದರ ಮರು ಜೋಡಣೆಯೇ ಈ ಸ್ಟೋರಿ.

ಹೇಗಿತ್ತು?
ಉಕ್ರೇನ್‌ ದೇಶದ ಇರ್ಪಿನ್‌ ಒಂದು ಸುಂದರ ಮತ್ತು ಪ್ರಶಾಂತವಾದ ನಗರ. ಮಧ್ಯಮ ವರ್ಗದವರು ವಾಸಿಸಲು ಬಯಸುವ ಪುಟ್ಟ ಸೊಗಸಾದ ಪಟ್ಟಣ. ಕೈಗೆಟಕುವ ದರದ ನಗರವೂ ಹೌದು. ಬದುಕೂ ಇದೆ, ಬದುಕಲೂ ಇದೆ. ನೆಮ್ಮದಿಯ ಬದುಕಿಗೆ ಅತ್ಯುತ್ತಮ ಸೂರಿನ ಊರಿದು.

ಹೇಗಾಯಿತು?
ಎಲ್ಲೆಲ್ಲೂ ಕಟ್ಟಡಗಳ ಅವಶೇಷಗಳು. ಶ್ಮಶಾನ ಮೌನ. ಕಲ್ಲು, ಮಣ್ಣಿನ ರಾಶಿ, ಅಲಲ್ಲಿ ಕಡಿದು ಬಿದ್ದಿರುವ ವಿದ್ಯುತ್‌ ತಂತಿಗಳು…ಹೀಗೆ ಇಲ್ಲಿನ ಇಂಚಿಂಚೂ ಹೇಳುತ್ತಿರುವುದು ಮನುಷ್ಯನೊಳಗಿನ ರಕ್ಕಸತನದ್ದು. ಯುದ್ಧವೆಂಬುದೇ ಈ ಆಧುನಿಕ ಸಂದರ್ಭದಲ್ಲಿ ಯಾವ ರಾಷ್ಟ್ರವೂ, ಯಾರೂ ಬಯಸಿ ಬಳಿಯಲ್ಲಿ ಇಟ್ಟುಕೊಳ್ಳುವಂಥದ್ದಲ್ಲ. ಕೀವ್‌ ಸ್ಕೂಲ್‌ ಆಫ್ ಎಕನಾಮಿಕ್ಸ್ ವರದಿ ಪ್ರಕಾರ ರಷ್ಯಾದ ಆಕ್ರಮಣದಿಂದ ಉಕ್ರೇನ್‌ನ ಮೂಲ ಸೌಕರ್ಯಕ್ಕೆ 95.5 ಶತಕೋಟಿ ಡಾಲರ್‌ ನಷ್ಟ ಉಂಟಾಗಿದೆ. ಮರು ನಿರ್ಮಾಣಕ್ಕೆ ಅದಕ್ಕಿಂತ ಹೆಚ್ಚಿನ ಹಣ ಬೇಕು.

ಏನಾಯಿತು?
ಇದು ಜನವಸತಿ ಪ್ರದೇಶ. ವಸತಿ ಕಟ್ಟಡಗಳು, ಮನೋರಂಜನ ತಾಣಗಳ ವಿನಾ ಇಲ್ಲಿ ಬೇರೇನೂ ಇಲ್ಲ. ಆದರೆ ರಷ್ಯಾ- ಉಕ್ರೇನ್‌ ಯುದ್ಧದ ಆರಂಭದ ದಿನಗಳಲ್ಲಿ ರಷ್ಯಾ ಪಡೆಗಳಿಗೆ ಕೀವ್‌ಗೆ ಹೋಗುವ ದಾರಿಯಲ್ಲಿ ಮೊದಲು ಸಿಕ್ಕ ಪಟ್ಟಣವೀ ಇರ್ಪಿನ್‌. ಇಲ್ಲಿಯ ಬಹುತೇಕ ಕಟ್ಟಡಗಳು ನಾಶವಾಗಿವೆ. ಇಲ್ಲಿಂದ ಕೆಲವೇ ಮೀಟರ್‌ ದೂರದಲ್ಲಿರುವ ಬುಚಾದಲ್ಲಿ ರಷ್ಯಾ ಪಡೆಗಳು ಸ್ಥಳೀಯರ ಮೇಲೆ ನಡೆಸಿರುವ ಅತ್ಯಾಚಾರ, ಚಿತ್ರಹಿಂಸೆ ನೀಡಿ ಕೊಂದಿರುವ ಕುರುಹುಗಳು ಅನೇಕ. ರಷ್ಯಾ ಸೈನಿಕರ ರಕ್ಕಸ ಕೃತ್ಯಕ್ಕೆ ಸಾಕ್ಷಿಯಾಗಿರುವ ಊರು ಬುಚಾ.

ಎಲ್ಲಿ… ಹೇಗೆ…?
ಈ ಮಾಲ್‌ ಕಥೆ ಕೇಳಿ ಇರ್ಪಿನ್‌ ಪಟ್ಟಣದ ಜಿರಾಫ್ ಮಾಲ್‌ಗೆ ಹೋದರೆ ಒಂದಿಷ್ಟು ಹೊತ್ತು ಆರಾಮವಾಗಿ ಕಳೆಯಬಹುದಿತ್ತು. ಅಂಥ ಮಾಲ್‌ನಲ್ಲಿ ರಷ್ಯಾದ ಸೈನಿಕರೂ ಒಂದಿಷ್ಟು ಸಮಯ ಕಳೆದರು ! ಆದರೆ ಆ ಬಳಿಕ ಅಲ್ಲಿ ಉಳಿದದ್ದು ಬರೀ ಕಟ್ಟಡದ ಅವಶೇಷಗಳು. ಅದನ್ನು ಹೊರತುಪಡಿಸಿ ಬೇರೇನೂ ಉಳಿದಿರಲಿಲ್ಲ.

“ಜಿರಾಫ್ ಮಾಲ್‌ನ ಚೆಕ್‌
ಪಾಯಿಂಟ್‌ನಲ್ಲಿ ಕರ್ತವ್ಯದಲ್ಲಿದ್ದೆ. ರಷ್ಯಾ ಪಡೆಗಳು ದಾಳಿ ನಡೆಸಲು ಪ್ರಾರಂಭಿಸಿದಾಗ ನಾವು ಪ್ರತಿರೋಧಿಸಿದೆವು. ದಾಳಿಯಿಂದ ತಪ್ಪಿಸಲು ಯತ್ನಿಸಿದ ನಾಗರಿಕರ ಮೇಲೂ ಅವರು ಗುಂಡು ಹಾರಿಸಿದರು. ಮಾಲ್‌ನ ಹೊರಗೆ ರಷ್ಯಾದ ಶಸ್ತ್ರ ಸಜ್ಜಿತ ವಾಹನವನ್ನು ಉಕ್ರೇನಿನ ಸೈನಿಕರು ಹೊಡೆದುರುಳಿಸಿದರು. ಹಲವಾರು ತಾಸುಗಳ ಯುದ್ಧದ ಅನಂತರ ಇರ್ಪಿನ್‌ನಿಂದ ರಷ್ಯನ್‌ ಸೈನಿಕರು ಹಿಮ್ಮೆಟ್ಟಿದರು ಎಂದಿದ್ದಾರೆ ಮಾಧ್ಯಮಕ್ಕೆ ಉಕ್ರೇನ್‌ ಸೇನೆಯ ಮುಖ್ಯಸ್ಥರೊಬ್ಬರು.

ಯುದ್ಧದ ಬಳಿಕ
ಇರ್ಪಿನ್‌ನಲ್ಲಿ ಯುದ್ಧ ನಿಂತ ತತ್‌ಕ್ಷಣ ಮಾಲ್‌ನ ಮಾಲಕ ಆ್ಯಂಡಿ ಡುಬ್ಲೆಂಕೊ ಅವರಿಗೆ ದರ್ಶನವಾದದ್ದು ಮಾಲ್‌ನ ಹೊರಗೆ ಶಸ್ತ್ರಸಜ್ಜಿತ ವಾಹನದ ಅವಶೇಷಗಳು, ಕಟ್ಟಡದ ಅಡಿಯಲ್ಲಿ ರಷ್ಯಾದ ಪ್ಯಾರಾಟ್ರೂಪರ್‌ನ ಶವ, ಸುಟ್ಟು ಹೋದ ಮಾಲ್‌ನ ಅವಶೇಷಗಳು. ಇನ್ನೇನು ಉಳಿದಿರಲು ಸಾಧ್ಯ? ಕರಟಿ ಹೋದ ವಾಸನೆ ಎಲ್ಲೆಡೆಯೂ ವ್ಯಾಪಿಸಿತ್ತು.

ಮುಂದೇನು?
ಅದೃಷ್ಟವಶಾತ್‌ ಮಾಲ್‌ನ ಮೊದಲ ಮಹಡಿಯ ಜೀವ ಸ್ವಲ್ಪ ಉಳಿದಿತ್ತು. ಆದರೆ ಎರಡನೇ ಮಹಡಿಯನ್ನು ಸಂಪೂರ್ಣವಾಗಿ ಪುನರ್‌ ನಿರ್ಮಿಸುವ ಸ್ಥಿತಿಯಲ್ಲಿತ್ತು. ಒಟ್ಟು 2 ದಶಲಕ್ಷ ಡಾಲರ್‌ ನಷ್ಟವಾಗಿರಬಹುದಂತೆ. ಇದನ್ನು ಪುನಃ ಸ್ಥಾಪಿಸಲು ಹಣ ಎಲ್ಲಿದೆ? ಪುನಃ ನಿರ್ಮಿಸಲು ಪಾಶ್ಚಾತ್ಯ ರಾಷ್ಟ್ರಗಳ ಅಥವಾ ಹೂಡಿಕೆದಾರರ ನೆರವು ಬೇಕಿದೆ. ಅದರತ್ತ ಗಮನಹರಿದಿದೆಯಂತೆ.

ಏನು ಉಳಿದಿತ್ತೋ ಅದಷ್ಟೇ..
ತನಗೆ ಬರುತ್ತಿದ್ದ ಅಲ್ಪ ಪಿಂಚಣಿಯಿಂದ 80 ವರ್ಷದ ಮಹಿಳೆಯೊಬ್ಬರು ಸ್ಥಳೀಯ ಫ‌ುಟ್ಬಾಲ್‌ ಕ್ರೀಡಾಂಗಣದಲ್ಲಿ ನೀರಿನ ಬಾಟಲ್‌, ತಿಂಡಿಗಳನ್ನು ಮಾರುತ್ತಿದ್ದಳು. ಮಾರ್ಚ್‌ನಲ್ಲಿ ಒಂದು ದಿನ ಅವಳಿಗೆ ಮನೆ ಅಂಗಳದಲ್ಲಿದ್ದಾಗ ಸ್ಫೋಟದ ಸದ್ದು ಕೇಳಿತಂತೆ. ನೋಡನೋಡುತ್ತಿದ್ದಂತೆಯೇ ಅವಳ ಮನೆಯ ಗೇಟ್‌, ನೆಲ ಮಹಡಿಯ ಬಹುಭಾಗ ನಾಶವಾಯಿತು. ತನ್ನಲ್ಲಿದ್ದ ಒಂದಿಷ್ಟು ಹಣವನ್ನು ಬಚ್ಚಿಟ್ಟು, ಅಡಗುದಾಣಕ್ಕೆ ಹೋದಳಂತೆ. ವಾರದ ಬಳಿಕ ಫಿರಂಗಿ ದಾಳಿಗೆ ಮನೆ ಸಂಪೂರ್ಣ ನಾಶವಾಯಿತಂತೆ. ಪಡೆಗಳು ಅಲ್ಲಿಂದ ಕಾಲ್ಕಿತ್ತಾಗ ಮನೆಯ ಅರ್ಧ ಭಾಗ ಮಾತ್ರ ಉಳಿದಿತ್ತು. ಒಂದು ಸ್ಟೂಲ್‌, 2 ಮಡಿಕೆ, ಒಂದು ಕೆಟಲ್‌ ಮತ್ತು ಬಕೆಟ್‌ ಮಾತ್ರ ಸದ್ಯದ ಆಸ್ತಿ. ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದಾಳೆ.

ಇರ್ಪಿನ್‌ ಹೌಸ್‌
ಎರಡನೇ ವಿಶ್ವ ಯುದ್ಧದ ಅನಂತರ 1954ರಲ್ಲಿ ಉಕ್ರೇನ್‌ನಲ್ಲಿ ನಿರ್ಮಿಸಲಾದ ಮೊದಲ ಕಟ್ಟಡ ಇರ್ಪಿನ್‌ ಹೌಸ್‌ ಆಫ್ ಕಲ್ಚರ್‌. ಜಿರಾಫ್ ಮಾಲ್‌ನಿಂದ ಕೆಲವೇ ಮೀಟರ್‌ ದೂರದಲ್ಲಿದೆ. ಇಲ್ಲಿನ ನಿಯೋಕ್ಲಾಸಿಕಲ್‌ ಸೋವಿಯತ್‌ ಕನ್ಸರ್ಟ್‌ ಹಾಲ್‌ನಲ್ಲಿ ಸಂಗೀತ ಕಛೇರಿಗಳು, ಪ್ರದರ್ಶನಗಳು, ಶಾಲಾ ಕಾರ್ಯಕ್ರಮಗಳು, ಮಕ್ಕಳ ನೃತ್ಯ ತರಗತಿಗಳು… ಹೀಗೆ ನಿತ್ಯವೂ ಒಂದಲ್ಲ ಒಂದು ಕಾರ್ಯಕ್ರಮ ನಡೆಯುತ್ತಿತ್ತು. ಆದರೆ ಈಗ ಅದ್ಯಾವುದೂ ಇಲ್ಲವಾಗಿದೆ.

ರಷ್ಯಾ ಸೇನೆ ಊರು ಬಿಟ್ಟ ಬಳಿಕ
ಟ್ರಾಫಿಕ್‌ ಸೇವೆಯಲ್ಲಿದ್ದವರೊಬ್ಬರು ರಷ್ಯಾ ಪಡೆ ಊರು ಬಿಟ್ಟ ಮರುದಿನವೇ ಕರ್ತವ್ಯಕ್ಕೆ ಹಾಜರಾದರು. ಅವರು ಮತ್ತವರ ಅಳಿಯ ಬಹು ಅಂತಸ್ತಿನ ಕಟ್ಟಡದ ಮೇಲಿನ ಮಹಡಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ಮೊದಲು ವಾಸವಾಗಿದ್ದರು. ರಷ್ಯನ್ನರ ದಾಳಿಗೆ ತುತ್ತಾಗಿ ಅವರಿದ್ದ ವಸತಿಗೃಹದ ಛಾವಣಿ ಕುಸಿದಿದೆ. ಬಳಿಕ ಸುರಿದ ಮಳೆಗೆ ನೆಲದ ಮೇಲೆ ಅರ್ಧದಷ್ಟು ನೀರು ತುಂಬಿಕೊಂಡಿತಂತೆ. ಮೊದಲ ಒಂದು ರಾತ್ರಿ ಅಲ್ಲೇ ಕಳೆದ ಅವರು ಬಳಿಕ ಪಟ್ಟಣ ಸುತ್ತಿದರು. ಈಗ ಟಾರ್ಪಾಲು ಹೊಂದಿಸಿಕೊಂಡು ಬದುಕನ್ನು ಕಟ್ಟಿಕೊಳ್ಳಲು ಆರಂಭಿಸಿದ್ದಾರೆ. ನಗರದಲ್ಲಿ ಚಟುವಟಿಕೆಗಳು ಆರಂಭವಾಗುತ್ತಿವೆ.

ಬದುಕೇನೋ ಆರಂಭವಾಗಿದೆ
ಬೇಕರಿ ಇಟ್ಟುಕೊಂಡಿದ್ದ ಮಹಿಳೆಯೊಬ್ಬಳು ತನ್ನ ಪತಿಯೊಂದಿಗೆ ಮೊದಲ ದಿನವೇ ಸುರಕ್ಷಿತ ಸ್ಥಳಕ್ಕೆ ಓಡಿ ಹೋದರು. ರಷ್ಯಾದ ಪಡೆಗಳು ನಗರದಿಂದ ಹೊರಟ ಮೇಲೆ ಬಂದು ನೋಡಿದರೆ ಬೀದಿ ತುಂಬಾ ತ್ಯಾಜ್ಯದ ರಾಶಿ. ಹೇಗೋ ತಮ್ಮ ಜಾಗವನ್ನು ಸ್ವಚ್ಛಗೊಳಿಸಿ ಮತ್ತೆ ಬೇಕರಿ ತೆರೆಯು ವಷ್ಟರಲ್ಲಿ ನೀರು ಪೂರೈಕೆ ಆರಂಭವಾಯಿತು. ವಿದ್ಯುತ್‌ ಸಂಪರ್ಕವೂ ಬಂದಿತು. ವ್ಯಾಪಾರ ಆರಂಭವಾಯಿತು. ಆದರೆ ಹಿಂದಿನಂತಿಲ್ಲ. ಸರಕಾರದ ಆಶ್ರಯ ಬೇಕೇಬೇಕು. ಗ್ರಾಹಕರು ಹಾಗೂ ವ್ಯಾಪಾರಿಗಳಿಬ್ಬರೂ ನಷ್ಟದಲ್ಲಿದ್ದಾರೆ. ಹಾಗಾಗಿ ಹೆಚ್ಚಿನ ದರದಲ್ಲಿ ಮಾರಲೂ ಸಾಧ್ಯವಾಗದು.

ಪುನರ್‌ ನಿರ್ಮಾಣ ಸುಲಭವಲ್ಲ
ರಷ್ಯಾ ಮತ್ತು ಉಕ್ರೇನ್‌ ನಡುವಿನ ಯುದ್ಧ ಸಮಾಪ್ತಿಯಾಗಿಲ್ಲ. ಹೀಗಾಗಿ ಪುನರ್‌ ನಿರ್ಮಾಣ ಕಾರ್ಯ ಸುಲಭವೂ ಅಲ್ಲ. ಆದರೂ ಇರ್ಪಿನ್‌ನಲ್ಲಿ ಪುನರ್‌ ನಿರ್ಮಾಣ ಕಾರ್ಯಗಳು ಪ್ರಾರಂಭಗೊಂಡಿವೆ. ನಗರದ 60 ಸಾವಿರ ಜನಸಂಖ್ಯೆಯ ಅರ್ಧದಷ್ಟು ಮಂದಿ ಮಾತ್ರ ನಗರಕ್ಕೆ ಮರಳಿದ್ದಾರೆ. ಜಿರಾಫ್ ಮಾಲ್‌ನಿಂದ ಬೀದಿಯಲ್ಲಿ ಅಡ್ಡವಾಗಿ ಬಿದ್ದಿರುವ ಕಲ್ಲಿನ ತ್ಯಾಜ್ಯಗಳನ್ನು ತೆರವು ಮಾಡಲಾಗಿದೆ. ಹಾನಿಗೊಳಗಾದ ವಸತಿ ಕಟ್ಟಡಗಳ ಮರು ನಿರ್ಮಾಣ ಆರಂಭವಾಗುತ್ತಿದೆ. ಮಾಲ್‌, ಸಾಂಸ್ಕೃತಿಕ ಕೇಂದ್ರ, ಕ್ರೀಡಾಂಗಣ ಮರು ನಿರ್ಮಾಣಕ್ಕೆ ಕೆಲವು ವರ್ಷ ಬೇಕಾದೀತು. ಸೊಬೋರ್ನಾ ಬೀದಿಯನ್ನು ವಾಸ ಯೋಗ್ಯ ಮಾಡಲು ತುರ್ತು ಸೇವಾ ಕಾರ್ಯಗಳನ್ನು ನಡೆಸಲಾಗುತ್ತಿದೆ. ಮತ್ತೆ ಬದುಕು ಕಟ್ಟಿಕೊಳ್ಳಲು ಜನರಿಗೆ ಯಾವ ಕೆಲಸ ಸಿಕ್ಕಿದರೂ ಪರವಾಗಿಲ್ಲ. ಹಾಗಾಗಿ ಆಧಿಕಾರಿಗಳೊಂದಿಗೆ ಪುನರ್‌ ನಿರ್ಮಾಣ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ.

ಹಾನಿಗೊಳಗಾದ ಪ್ರದೇಶದಲ್ಲಿ ನೆಲ ಬಾಂಬ್‌ಗಳ ಪತ್ತೆ ಹಚ್ಚುವ ಕಾರ್ಯವೂ ನಡೆಯುತ್ತಿದೆ. ಇದು ಸುದೀರ್ಘ‌ ಪ್ರಕ್ರಿಯೆ ಮತ್ತು ಅತ್ಯಂತ ಶ್ರಮದಾಯಕ. ಒಬ್ಬ ದಿನಕ್ಕೆ ಸರಾಸರಿ 10 ಚ. ಮೀಟರ್‌ ಪರೀಕ್ಷಿಸಬಹುದು. ಈ ಕಾರ್ಯಕ್ಕೇ ಒಂದಿಷ್ಟು ದಿನ ತಗಲಬಹುದು.

ಮಾಹಿತಿ : ಫೈನಾನ್ಸಿಯಲ್‌ ಟೈಮ್ಸ್‌

ಟಾಪ್ ನ್ಯೂಸ್

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

1-wewewqe

Beauty; ಈ 60ರ ಚೆಲುವೆ ಬ್ಯೂನಸ್‌ ಐರಿಸ್‌ ಮಿಸ್‌ ಯುನಿವರ್ಸ್‌!

1-cuba

Cuba ನಗದು ಕೊರತೆ: ಎಟಿಎಂ ಮುಂದೆ ಜನರ ಕ್ಯೂ

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.