ಸ್ಯಾಮ್ಸಂಗ್ ಸಂಸ್ಥೆಯ ಮುಖ್ಯಸ್ಥ ಲೀ ಜೇ ಯಾಂಗ್ಗೆ ಕ್ಷಮಿಸಿದ ದಕ್ಷಿಣ ಕೊರಿಯಾ ಅಧ್ಯಕ್ಷ
Team Udayavani, Aug 12, 2022, 8:00 PM IST
ಸಿಯೋಲ್: ಲಂಚ ಮತ್ತು ಭ್ರಷ್ಟಾಚಾರದ ಆರೋಪಗಳಿಗೆ ಗುರಿಯಾಗಿ, 2020ರಿಂದ ಜೈಲಲ್ಲಿರುವ ಸ್ಯಾಮ್ಸಂಗ್ ಸಂಸ್ಥೆಯ ಮುಖ್ಯಸ್ಥ ಲೀ ಜೇ ಯಾಂಗ್ ಅವರನ್ನು ಕ್ಷಮಿಸಿರುವುದಾಗಿ ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸೂಕ್ ಯೋಲ್ ಶುಕ್ರವಾರ ಘೋಷಿಸಿದ್ದಾರೆ.
18 ತಿಂಗಳುಗಳ ಶಿಕ್ಷೆಯ ನಂತರ, ಅವರು 2021ರ ಆಗಸ್ಟ್ನಲ್ಲಿ ಪೆರೋಲ್ ಪಡೆದು ಹೊರಬಂದಿದ್ದರು. ಅವರನ್ನು ಇದೀಗ ಅಧ್ಯಕ್ಷರು ಕ್ಷಮಿಸಿ, ಎಲ್ಲ ರೀತಿಯ ನಿರ್ಬಂಧಗಳಿಂದ ಮುಕ್ತ ಮಾಡಿದ್ದಾರೆ.
ಮೊದಲಿಗೆ ಶಿಕ್ಷೆಯ ಕಾಲಾವಧಿ ನಂತರ 5 ವರ್ಷಗಳ ಕಾಲಕ್ಕೆ ನಿರ್ಬಂಧಗಳನ್ನು ವಿಧಿಸಲಾಗಿತ್ತಾದರೂ ಇದೀಗ ಅದೂ ಕೂಡ ರದ್ದಾಗಿದೆ. ಜಗತ್ತಿನ ಸಿರಿವಂತರ ಪಟ್ಟಿಯಲ್ಲಿ 278ನೇ ಸ್ಥಾನದಲ್ಲಿದ್ದಾರೆ.