ಶಿಮ್ಲಾ: ಬಲವಂತವಾಗಿ ಮತಾಂತರ ಮಾಡಿದರೆ 10 ವರ್ಷ ಶಿಕ್ಷೆ
Team Udayavani, Aug 13, 2022, 7:40 AM IST
ಶಿಮ್ಲಾ: ಬಲವಂತವಾಗಿ ಮತ್ತು ಆಮಿಷ ಒಡ್ಡುವ ಮೂಲಕ ಮತಾಂತರ ಮಾಡುವುದನ್ನು ತಡೆಯುವ ತಿದ್ದುಪಡಿ ವಿಧೇಯಕವನ್ನು ಹಿಮಾಚಲ ಪ್ರದೇಶ ವಿಧಾನಸಭೆಯಲ್ಲಿ ಶುಕ್ರವಾರ ಮಂಡಿಸಲಾಗಿದೆ.
ಅದರಲ್ಲಿ ವಿಶೇಷವಾಗಿ ಸಾಮೂಹಿಕ ಮತಾಂತರ ಎಂಬ ಅಂಶವನ್ನು ವಿಶೇಷವಾಗಿ ಉಲ್ಲೇಖಿಸಲಾಗಿದೆ. ಬಲವಂತ ಮತಾಂತರಕ್ಕೆ ಸದ್ಯ ಇರುವ ಜೈಲು ಶಿಕ್ಷೆ ಅವಧಿಯನ್ನು 7ರಿಂದ 10ಕ್ಕೆ ಏರಿಕೆ ಮಾಡಲು ಪ್ರಸ್ತಾಪಿಸಲಾಗಿದೆ.
ದಾಖಲಾಗಿರುವ ಪ್ರಕರಣವನ್ನು ಸಬ್-ಇನ್ಸ್ಪೆಕ್ಟರ್ ಶ್ರೇಣಿಯ ಅಧಿಕಾರಿ ತನಿಖೆ ನಡೆಸಬೇಕು ಮತ್ತು ಆ ಪ್ರಕರಣದ ವಿಚಾರಣೆಯನ್ನು ಸೆಷನ್ಸ್ ಕೋರ್ಟ್ನಲ್ಲಿಯೇ ವಿಚಾರಣೆ ನಡೆಸಬೇಕು ಎಂದು ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ.