ಪಂಜಾಬ್ ಕಿಂಗ್ಸ್ ಕೋಚ್ ಸ್ಥಾನ ಕಳೆದುಕೊಳ್ಳುವರೇ ಅನಿಲ್ ಕುಂಬ್ಳೆ ?
Team Udayavani, Aug 26, 2022, 11:59 PM IST
ಮೊಹಾಲಿ: ಐಪಿಎಲ್ ಫ್ರಾಂಚೈಸಿ ಪಂಜಾಬ್ ಕಿಂಗ್ಸ್ ಕೋಚ್ ಸ್ಥಾನದಲ್ಲಿ ಅನಿಲ್ ಕುಂಬ್ಳೆ ಅವರನ್ನು ಮುಂದುವರಿಸದಿರಲು ನಿರ್ಧರಿಸಿದೆ ಎಂದು ವರದಿಯಾಗಿದೆ.
2020ರಲ್ಲಿ ಕುಂಬ್ಳೆ ಪಂಜಾಬ್ ಕೋಚ್ ಸ್ಥಾನವನ್ನು ವಹಿಸಿಕೊಂಡಿದ್ದರು. ಬಾಲಿವುಡ್ ನಟಿ ಪ್ರೀತಿ ಜಿಂಟಾ, ಉದ್ಯಮಿಗಳಾದ ಮೋಹಿತ್ ಬರ್ಮನ್, ನೆಸ್ ವಾಡಿಯಾ ಅವರಿದ್ದ ಪಂಜಾಬ್ ಕಿಂಗ್ಸ್ ಸಭೆಯಲ್ಲಿ ಈ ನಿರ್ಧಾರ ಮಾಡಲಾಗಿದೆ. ಹಾಗೆಯೇ ಹೊಸ ಕೋಚ್ಗಾಗಿ ಹುಡುಕಾಟ ಆರಂಭವಾಗಿದೆ ಎಂದೂ ವರದಿಯಾಗಿದೆ.
ಈ ಮಾಹಿತಿ ಖಚಿತವಾದರೆ, 2014ರಿಂದೀಚೆ ಪಂಜಾಬ್ 5ನೇ ತರಬೇತುದಾರನನ್ನು ಕೆಳಗಿಳಿಸಿದಂತಾಗುತ್ತದೆ. ಕುಂಬ್ಳೆ ಅವರ ಕೋಚಿಂಗ್ ಅವಧಿಯಲ್ಲಿ ಪಂಜಾಬ್ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ನೀಡಿಲ್ಲ. 2020, 2021ರಲ್ಲಿ 5ನೇ ಸ್ಥಾನ, 2022ರಲ್ಲಿ 6ನೇ ಸ್ಥಾನಿಯಾಗಿತ್ತು.
ಒಟ್ಟು 42 ಪಂದ್ಯಗಳಲ್ಲಿ ಅನಿಲ್ ಕುಂಬ್ಳೆ ಕೋಚ್ ಆಗಿದ್ದರು. ಇದರಲ್ಲಿ ಪಂಜಾಬ್ 18 ಗೆದ್ದರೆ, 22 ಪಂದ್ಯಗಳನ್ನು ಸೋತಿದೆ. 2 ಪಂದ್ಯಗಳು ಟೈ ಆಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kannada Cinema; ರಂಗಮಂಟಪ ಸುತ್ತ ‘ರಂಗಸ್ಥಳ’; ಹೊಸ ಚಿತ್ರದ ಟೈಟಲ್ ಲಾಂಚ್
BJP 200 ಸೀಟು ದಾಟುವುದು ಕಷ್ಟ: ಗೋವಾದಲ್ಲಿ ಶಶಿ ತರೂರ್
Prajwal Revanna ವಿದೇಶಕ್ಕೆ ತೆರಳಲು ಕ್ಲಿಯರೆನ್ಸ್ ಕೇಳಿಲ್ಲ: ವಿದೇಶಾಂಗ ಸಚಿವಾಲಯ
ರೈತರಿಗೆ ತಂತ್ರಜ್ಞಾನದ ಕೊಡುಗೆ ಕೊಟ್ಟರೆ ಪ್ರಗತಿ ಸಾಧ್ಯ: ಹಂದೆ
UP; ಬ್ರಿಜ್ ಭೂಷಣ್ ಪುತ್ರನನ್ನು ಕಣಕ್ಕಿಳಿಸಿದ ಬಿಜೆಪಿ: ರಾಯ್ ಬರೇಲಿಯಿಂದ ಸಚಿವ