ಅಪಹರಣಕ್ಕೆ ಬಂದರೆಂದು ಹಲ್ಲೆ


Team Udayavani, Sep 21, 2022, 2:18 PM IST

ಅಪಹರಣಕ್ಕೆ ಬಂದರೆಂದು ಹಲ್ಲೆ

ಶ್ರೀರಂಗಪಟ್ಟಣ: ಅಪ್ರಾಪ್ತರನ್ನು ಅಪಹರಿಸಿ ಅಂಗಾಂಗಗಳನ್ನು ಕಿತ್ತುಕೊಳ್ಳುವ ಬೆಚ್ಚಿ ಬೀಳಿಸುವ ದೃಶ್ಯಾ ವಳಿಗಳು ಹರಿದಾಡುತ್ತಿರುವ ಬೆನ್ನಲ್ಲೇ ಬಾಲಕ ನೋ ರ್ವನನ್ನು ಅಪಹರಿಸಲಾಗುತ್ತಿದೆ ಎಂದು ಆರೋಪಿಸಿ ಮೂವರು ಅಪ್ರಾಪ್ತ ಬಾಲಕರನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ತಾಲೂಕಿನ ಕಿರಂ ಗೂರು ಗ್ರಾಮದ ಬಳಿ ಸೋಮವಾರ ತಡ ರಾತ್ರಿ ನಡೆದಿದೆ.

ಘಟನೆ ಏನು?: ಕಿರಂಗೂರು ಗ್ರಾಮದ ಮನೆ ಯೊಂ ದರ ಮುಂದೆ ಮಗು ಸೋಮವಾರ ತಡ ರಾತ್ರಿ ಆಟವಾಡುತ್ತಿತ್ತು. ಈ ವೇಳೆ ಚಾಕ್ಲೆಟ್‌ ನೀಡುವ ನೆಪದಲ್ಲಿ ಬಾಲಕನನ್ನು ಕರೆದು ಮೂವರು ಅಪ್ರಾಪ್ತ ಬಾಲಕರು ಅಪಹರಿಸಲು ಯತ್ನಿಸಿದರು ಎನ್ನಲಾಗಿದೆ. ಈ ವೇಳೆ ಪೋಷಕರು ಹಾಗೂ ಸ್ಥಳೀಯರು ಗಮನಿಸಿ ಬೆನ್ನಟ್ಟಿ ಮೂರು ಮಂದಿ ಬಾಲಕರನ್ನು ಹಿಡಿದು ವಿಚಾರಿಸಿದಾಗ, ಮಾತು ಬದಲಾಯಿಸಿ ದರು. ಈ ಹಿನ್ನೆಲೆಯಲ್ಲಿ ಬಾಲಕರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ, ಮಂಡ್ಯ ಬೆಸಗರಳ್ಳಿ ಹಾಗೂ ನಾಗಮಂಗಲ ಬಳಿಯ ಸ್ಲಂ ಪ್ರದೇಶದಲ್ಲಿನ ಚಿಂದಿ ಹಾಯುವ ನಿವಾಸಿಗಳೆಂದು ಬಾಲಕರು ಮಾಹಿತಿ ನೀಡಿದ್ದಾರೆ.

ಬಾಲಮಂದಿರಕ್ಕೆ: ಸ್ಥಳೀಯರ ದೂರವಾಣಿ ಕರೆ ಯಿಂದ ಸ್ಥಳಕ್ಕೆ ಶಿಶು ಅಭಿವೃದ್ಧಿ ಅಧಿಕಾರಿಗಳು ಅಪ ಹರಣ ಯತ್ನಕ್ಕೆ ಒಳಗಾಗಿದ್ದ ಮಕ್ಕಳ ಪೋಷಕರೊಂ ದಿಗೆ ಚರ್ಚೆ ನಡೆಸಿದರು. ಅಲ್ಲದೇ, ಅಪಹರಣ ಮಾಡಲು ಯತ್ನ ಮಾಡಿದ ಮೂರು ಅಪ್ರಾಪ್ತ ಬಾಲಕರ ಬಗ್ಗೆ ತನಿಖೆ ಕೈಗೊಳ್ಳಲು ಶಿಶು ಅಭಿವೃದ್ಧಿ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಮುನ್ನವೇ ಪೊಲೀಸರು ಮೂವರು ಬಾಲಕರನ್ನು ತಡ ರಾತ್ರಿಯೇ ಮಂಡ್ಯದ ಬಾಲ ಮಂದಿರದ ವಶಕ್ಕೆ ಒಪ್ಪಿಸಿದ್ದರು. ಮತ್ತೆ ಸಿಪಿಐ ಪ್ರಕಾಶ್‌ ನೇತೃತ್ವದಲ್ಲಿ ಮಂ ಗಳವಾರ ಬೆಳಗ್ಗೆ ಬಾಲ ಮಂದಿರದಿಂದ ಅಪ್ರಾ ಪ್ತ ಬಾಲಕರನ್ನು ಕರೆ ತಂದು ತನಿಖೆ ಕೈಗೊಂಡಿದ್ದಾರೆ.

ಮೂವರೂ ಚಿಂದಿ ಆಯುವರು: ಈ ಮೂವರು ಬಾಲಕರಿಗೆ ಪೋಷಕರಿಲ್ಲದೆ ವಿವಿಧೆಡೆ ಚಿಂದಿ ಹಾಯುವ ಕೆಲಸ ಮಾಡಿಕೊಂಡಿದ್ದರು. ಸೆಲ್ಯೂಷನ್‌ ಮೂಸುವ ಖಯಾಲಿ ಇದ್ದು ರಾತ್ರಿ ಸಮಯದಲ್ಲಿ ಊಟ ಕೇಳಲು ಹೋಗಿರುವುದಾಗಿ ಬಾಲಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ, ಮನೆ ಬಳಿ ಮಕ್ಕಳು ಆಟವಾಡುವ ವೇಳೆ ಅವರಿಗೆ ಚಾಕ್ಲೆಟ್‌ ನೀಡಿ ಅವರನ್ನು ಕರೆದು ಮಾತನಾಡಿಸಿರುವುದು ಬಹಿರಂಗ ಗೊಂಡಿದೆ. ಹೆದರಿದ ಮಕ್ಕಳು ಪೋಷ ಕರನ್ನು ಕೂಗಿ ಕೊಂಡಿದ್ದು ಸ್ಥಳಕ್ಕೆ ಸಾರ್ವಜನಿಕರು ಆಗಮಿಸಿದ್ದಾರೆ. ಇದರಿಂದ ನಿಶೆಯಲ್ಲಿದ್ದ ಮೂವರು ಬಾಲಕರನ್ನು ಹಿಡಿದು ತನಿಖೆಗೆ ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.

ತನಿಖೆ ಕೈಗೊಳ್ಳಲು ಸೂಚಿಸಲಾಗಿದೆ: ಕಿರಂಗೂರಿನ ಹನುಮಂತಪ್ಪ ಎಂಬವರ ಮಕ್ಕಳನ್ನು ಅಪಹರಣ ಮಾಡಲು ಮೂವರು ಅಪ್ರಾಪ್ತ ಬಾಲಕರು ಬಂದಿರುವ ಬಗ್ಗೆ ಮಾಹಿತಿ ಪಡೆದು ಅವರ ಮನೆಯ ಮಕ್ಕಳನ್ನು ವಿಚಾರಿಸ ಲಾಗಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು ತನಿಖೆ ಕೈಗೊಂಡಿದ್ದಾರೆ. ಮಂಡ್ಯ ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿಗಳೂ ತನಿಖೆಗೆ ಒಳಪಡಿಸಿ ಮಾಹಿತಿ ಸಂಗ್ರಹಿಸಲು ತಿಳಿಸಲಾಗಿದೆ. ಬಳಿಕ, ಇನ್ನಷ್ಟು ಮಾಹಿತಿ ತಿಳಿದು ಬರಲಿದೆ ಎಂದು ಶಿಶು  ಅಭಿವೃದ್ಧಿ ಅಧಿಕಾರಿ ಪಿ.ಅಶೋಕ್‌ ತಿಳಿಸಿದ್ದಾರೆ.

ಹಲವು ದಿನಗಳಿಂದ ಮಕ್ಕಳ ಕಳ್ಳರ ಬಗ್ಗೆ ವದಂತಿ ಹರಡಿತ್ತು. ಘಟನೆ ಬಗ್ಗೆ ಸೂಕ್ತ ತನಿಖೆ ಆಗಬೇಕು. ಚಿಂದಿ ಆಯಲು ಬರುವ ಅಪ್ರಾಪ್ತರ ಕುರಿತು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಯಾವ ಕ್ರಮ ಕೈಗೊಂಡಿದ್ದಾರೆ. ಈ ಕೂಡಲೇ ಅಗತ್ಯ ಶಿಕ್ಷಣ ನೀಡಿ ಸೌಲಭ್ಯ ಕಲ್ಪಿಸಬೇಕು. ಶಂಕರ್‌ಬಾಬು, ಮಂಡ್ಯ ರಕ್ಷಣಾ ವೇದಿಕೆ ಅಧ್ಯಕ್ಷ

ಟಾಪ್ ನ್ಯೂಸ್

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.