ಮೈಸೂರು: ದಸರೆ ಗಜಪಡೆಯಲ್ಲೊಬ್ಬ ಪರಾಕ್ರಮಿ ವೀರ

ನೀರೆಂದರೆ ಇಷ್ಟ. ಎಲ್ಲಾ ಆನೆಗಳೊಂದಿಗೆ ಬೆರೆಯುವುದು ಮಹೇಂದ್ರ ಆನೆಯ ವೈಶಿಷ್ಟ್ಯ

Team Udayavani, Sep 29, 2022, 6:08 PM IST

ಮೈಸೂರು: ದಸರೆ ಗಜಪಡೆಯಲ್ಲೊಬ್ಬ ಪರಾಕ್ರಮಿ ವೀರ

ಮೈಸೂರು: ಒಂದು ಕಾಲದಲ್ಲಿ ಕಾಡಂಚಿನ ಭಾಗದ ರೈತರಿಗೆ ಉಪಟಳವಾಗಿದ್ದ, ಪುಂಡಾನೆಯಾಗಿ ಬೆಳೆ ಹಾನಿ ಮಾಡುತ್ತಿದ್ದ ಆನೆ ಇಂದು ವಿಧೇಯ ವಿದ್ಯಾರ್ಥಿ. ಗಜ ಗಾಂಭೀರ್ಯಕ್ಕೆ ಮತ್ತೂಂದು ಹೆಸರೇ ನಾನು ಎಂಬಂತೆ ಮತ್ತಿಗೂಡು ಆನೆ ಶಿಬಿರ ಮಹೇಂದ್ರ ಹೆಸರಿನಿಂದ ಬೆಳೆದುನಿಂತಿದೆ.

ಪುಂಡಾನೆ ಸೆರೆ ಕಾರ್ಯಾಚಣೆಯಲ್ಲಿ ಸೆರೆ ಸಿಕ್ಕ ಬಳಿಕ ಮೂರೆ ವರ್ಷದಲ್ಲಿ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಅರ್ಹತೆ ಗಿಟ್ಟಿಸಿಕೊಂಡಿರುವ 39 ವರ್ಷದ ಮಹೇಂದ್ರ ಆನೆಯ ಗಾಂಭೀರ್ಯತೆ ಹಾಗೂ ಪ್ರಬುದ್ಧತೆ ಇದಕ್ಕೆ ಸಾಕ್ಷಿಯಾಗಿದೆ.

ಯಾರಿದು ಮಹೇಂದ್ರ?: 2015-2016ರ ವೇಳೆಯಲ್ಲಿ ರಾಮನಗರದ ಭಾಗದ ಜನರಿಗೆ ತಲೆ ನೋವಾಗಿದ್ದ ಪುಂಡಾನೆಯನ್ನು ಸೆರೆ ಹಿಡಿಯಲು ಆ ಭಾಗದ ರೈತರಾದಿಯಾಗಿ ಜನಪ್ರತಿನಿಧಿಗಳಿಂದ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ವಿಧಿಯಿಲ್ಲದೆ ತೋಟವೊಂದರಲ್ಲಿ ಯಾವುದೇ ಅಳುಕಿಲ್ಲದೇ ಬೀಡುಬಿಟ್ಟಿದ್ದ ಮಹೇಂದ್ರನನ್ನು ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದಲ್ಲಿ ಸೆರೆ ಹಿಡಿದು ನಾಗರಹೊಳೆಯ ಮತ್ತಿಗೋಡು ಶಿಬಿರಕ್ಕೆ ಕರೆತಂದು ಮಹೇಂದ್ರ ಎಂಬ ಹೆಸರಿಡಲಾಯಿತು.

ಆರಂಭದ ದಿನಗಳಲ್ಲಿ ರೋಷಾವೇಶದಿಂದ ವರ್ತಿಸುತ್ತಿದ್ದ ಮಹೇಂದ್ರ ದಿನಕಳೆದಂತೆ ಶಿಬಿರದ ವಾತಾವರಣಕ್ಕೆ ಒಗ್ಗಿದ. ಮೊದಲಿಗೆ ವಿನೋದ್‌ ರಾಜ್‌ ಎಂಬಾತ ನೀಡಿದ ಅತ್ಯುತ್ತಮ ತರಬೇತಿಯಿಂದಾಗಿ ಆರೇಳು ತಿಂಗಳಲ್ಲೇ ಮೃದು ಸ್ವಭಾದ ಆನೆಯಾಗಿ ಮಾರ್ಪಟ್ಟಿದ್ದು ವಿಶೇಷ. ಸದ್ಯಕ್ಕೆ 2.74 ಮೀಟರ್‌ ಎತ್ತರ, 4450 ಕೆಜಿ ತೂಕ ಇರುವ ಮಹೇಂದ್ರನನ್ನು ರಾಜಣ್ಣ ಎಂಬ ಮಾವುತರು ನೋಡಿಕೊಳ್ಳುತ್ತಿದ್ದಾನೆ.

ಎಷ್ಟು ಸೌಮ್ಯ ಸ್ವಭಾವವೋ ಅಷ್ಟೇ ಧೈರ್ಯಶಾಲಿ ಮತ್ತು ಧಿಟ್ಟ ಮನೋಭಾವ ಹೊಂದಿರುವ ಮಹೇಂದ್ರ, ಹೇಳಿದ ಮಾತನ್ನು ಚಾಚೂ ತಪ್ಪದೆ ಪಾಲಿಸುತ್ತಾನೆ. ಯಾರ ಬಳಿಗೂ ಒರಟಾಗಿ ನಡೆದುಕೊಳ್ಳುವುದಿಲ್ಲ. ನೀರೆಂದರೆ ಇಷ್ಟ. ಎಲ್ಲಾ ಆನೆಗಳೊಂದಿಗೆ ಬೆರೆಯುವುದು ಮಹೇಂದ್ರ ಆನೆಯ ವೈಶಿಷ್ಟ್ಯ.

ಹುಲಿ, ಆನೆ ಕಾರ್ಯಾಚರಣೆಯಲ್ಲಿ ಎತ್ತಿದ ಕೈ: ಪುಂಡಾನೆಯಾಗಿದ್ದ ಮಹೇಂದ್ರ ಇದೀಗ ಪಳಗಿದ ಮೇಲೆ ಬೇರೆ ಪುಂಡಾನೆಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲೂ ಭಾಗವಹಿಸುತ್ತಿದ್ದಾನೆ. ಹುಲಿ ಹಾಗೂ ಕಾಡಾನೆಗಳ ಸೆರೆ ಕಾರ್ಯದಲ್ಲೂ ಇವನನ್ನು ಬಳಸಿಕೊಳ್ಳಲಾಗುತ್ತಿದೆ. ಕೂಬಿಂಗ್‌ ಸ್ಪೆಷಲಿಸ್ಟ್‌ ಎಂದೆ ಖ್ಯಾತಿ ಪಡೆದಿರುವ ಅಂಬಾರಿ ಆನೆ ಅಭಿಮನ್ಯು ಸ್ಥಾನವನ್ನು ಈ ಮಹೇಂದ್ರ ತುಂಬವ ಎಲ್ಲಾ ಲಕ್ಷಗಳನ್ನು ಹೊಂದಿದ್ದಾನೆ. ಕಾಡಾನೆ ಅಥವಾ ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಒಂದಿಷ್ಟೂ ಅಂಜದೆ ಧೈರ್ಯದಿಂದ ಮುನ್ನುಗ್ಗಿ ಎದುರಾಳಿ ಒಡ್ಡುವ ಸವಾಲನ್ನು ಭೇದಿಸುವ ಚಾತಿಯನ್ನು ಕರಗತ ಮಾಡಿಕೊಂಡಿರುವ ಮಹೇಂದ್ರ ಗಜಪಡೆಗೆ ಪರಾಕ್ರಮಿ ಎಂದರೆ ತಪ್ಪಾಗಲಾರದು.

ಶ್ರೀರಂಗಪಟ್ಟಣ ದಸರಾ ಯಶಸ್ವಿಗೊಳಿಸಿದ ಮಹೇಂದ್ರ
ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಡೆಯುವ ದಸರಾದಲ್ಲಿ ಅಂಬಾರಿ ಹೊರುವ ಜವಾಬ್ದಾರಿಯನ್ನು ಮಹೇಂದ್ರ ಯಶಸ್ವಿಯಾಗಿ ನಿಭಾಯಿಸಿದ್ದಾನೆ. ಇದೇ ಮೊದಲ ಬಾರಿಗೆ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಮಹೇಂದ್ರ ನಾಡಿನ ವಾತಾವರಣಕ್ಕೆ ಹೊಂದಿಕೊಂಡಿರುವುದಲ್ಲದೇ, ಮಾವುತ, ಕಾವಾಡಿಗಳ ಆಜ್ಞೆಯ ಪರಿಪಾಲಕನಾಗಿ, ತಾಲೀಮಿನ ವೇಳೆ ಆತ ತೋರಿದ ಪ್ರಬುದ್ಧ ನಡೆಯಿಂದಾಗಿ ಮೊದಲ ವರ್ಷದಲ್ಲೇ ಮಹತ್ತರವಾದ ಜವಾಬ್ದಾರಿ ನಿಬಾಯಿಸಿರುವುದು ವಿಶೇಷ.

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಗೆ ಒಳಪಡುವ ಮತ್ತಿಗೂಡು ಆನೆ ಶಿಬಿರದಲ್ಲಿ ವಾಸ್ತವ್ಯ ಹೂಡಿರುವ ಮಹೇಂದ್ರ ದಸರಾ ಗಜಪಡೆಯ ಮೊದಲ ತಂಡದಲ್ಲಿಯೇ ಸ್ಥಾನಗಿಟ್ಟಿಸಿಕೊಂಡು, ಆ.7ರಂದು ಗಜಪಯಣದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮೈಸೂರಿಗೆ ಆಗಮಿಸಿತ್ತು.

ಮೈಸೂರಿಗೆ ಬಂದಾಗ 4250 ಕೆಜಿ ಹೊಂದಿತ್ತು. ಪೌಷ್ಟಿಕ ಆಹಾರ ನೀಡಿ ಆರೈಕೆ ಮಾಡಿದ್ದರಿಂದ ಮೈಸೂರು ಅರಮನೆಗೆ ಬಂದ ಒಂದೇ ತಿಂಗಳಲ್ಲಿ 200 ಕೆಜಿ ತೂಕ ಹೆಚ್ಚಿಸಿಕೊಂಡಿತ್ತು. ತಾಲೀಮಿನ ವೇಳೆ ಮರಳು ಮೂಟೆ ಹೊತ್ತು, ಮರದ ಅಂಬಾರಿ ಹೊತ್ತು ಸಾಗಿತ್ತು. ಸುಮಾರು 750 ಕೆಜಿ ಭಾರ ಹೊತ್ತು ಸರಾಗವಾಗಿ ಸಾಗಿದ್ದ ಮಹೇಂದ್ರ ಅರಣ್ಯ ಇಲಾಖೆಯ ಅಧಿಕಾರಿಗಳಲ್ಲಿ ವಿಶ್ವಾಸ ಮೂಡಿಸಿತ್ತು. ವಾಹನ ಸಂಚಾರ, ಮಬ್ಬುಗತ್ತಲು, ಜನರ ಓಡಾಟದ ನಡುವೆಯೂ ಭಾರ ಹೊತ್ತು ಶಾಂತಿಯಿಂದ ಹೆಜ್ಜೆ ಹಾಕಿದ್ದ ಮಹೇಂದ್ರ ಈ ಬಾರಿ ಶ್ರೀರಂಗಪಟ್ಟಣದ ದಸರಾದಲ್ಲಿ ಅಂಬಾರಿ ಹೊತ್ತು ಸೈ ಎನಿಸಿಕೊಂಡಿದ್ದಾನೆ.

*ಸತೀಶ್‌ ದೇಪುರ

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.