ಅ.1ರಿಂದ 10ರ ವರೆಗೆ ಇಲೆಕ್ಟೋರಲ್ ಬಾಂಡ್ ಖರೀದಿಗೆ ಅವಕಾಶ
Team Udayavani, Sep 29, 2022, 9:50 PM IST
ನವದೆಹಲಿ: ವರ್ಷಾಂತ್ಯದಲ್ಲಿ ಹಿಮಾಚಲ ಪ್ರದೇಶ ಮತ್ತು ಗುಜರಾತ್ ವಿಧಾನಭೆಗಳಿಗೆ ಚುನಾವಣೆ ನಡೆಯಲಿರುವಂತೆಯೇ ಕೇಂದ್ರ ಸರಕಾರ 22ನೇ ಆವೃತ್ತಿಯ ಇಲೆಕ್ಟೋರಲ್ ಬಾಂಡ್‌ಗಳನ್ನು ಮಾರಾಟಕ್ಕೆ ಮುಂದಾಗಿದೆ.
ಅ.1ರಿಂದ 10ರ ವರೆಗೆ ಅದನ್ನು ಖರೀದಿಸಲು ಅವಕಾಶ ನೀಡಲಾಗಿದೆ. ಭಾರತೀಯ ಸ್ಟೇಟ್ ಬ್ಯಾಂಕ್‌ನ ಆಯ್ದ ಶಾಖೆಗಳಲ್ಲಿ ಇಲೆಕ್ಟೋರಲ್ ಬಾಂಡ್‌ಗಳನ್ನು ಖರೀದಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಕೇಂದ್ರ ವಿತ್ತ ಸಚಿವಾಲಯ ಗುರುವಾರ ಹೇಳಿದೆ.
ಇಲೆಕ್ಟೋರಲ್ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ಸಾರ್ವಜನಿಕರಿಗೆ ಅವಕಾಶ ಇದೆ. ಜತೆಗೆ ಕಾರ್ಪೊರೇಟ್ ಸಂಸ್ಥೆಗಳಿಗೂ ಅದನ್ನು ಖರೀದಿಸಲು ಅವಕಾಶ ಇದೆ. ಜು.1ರಿಂದ10ರ ವರೆಗೆ 21ನೇ ಆವೃತ್ತಿಯ ಇಲೆಕ್ಟೋರಲ್ ಬಾಂಡ್‌ಗಳನ್ನು ಸರ್ಕಾರ ಬಿಡುಗಡೆ ಮಾಡಿತ್ತು.