ಗೋಪೂಜೆಗಳಲ್ಲಿ ಪಾಲ್ಗೊಳ್ಳಲು ಸಚಿವ ಪ್ರಭು ಚವ್ಹಾಣ್‌ ಸೂಚನೆ


Team Udayavani, Oct 20, 2022, 10:30 PM IST

ಗೋಪೂಜೆಗಳಲ್ಲಿ ಪಾಲ್ಗೊಳ್ಳಲು ಸಚಿವ ಪ್ರಭು ಚವ್ಹಾಣ್‌ ಸೂಚನೆ

ಬೆಂಗಳೂರು: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಅ.26ರಂದು ಮುಜರಾಯಿ ದೇವಸ್ಥಾನಗಳಲ್ಲಿ ನಡೆಯಲಿರುವ ಗೋಪೂಜೆ ಕಾರ್ಯಕ್ರಮಗಳಲ್ಲಿ  ಪಶು ಸಂಗೋಪನೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಳ್ಳುವಂತೆ ಸಚಿವ ಪ್ರಭು ಚವ್ಹಾಣ್‌ ಸೂಚನೆ ನೀಡಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಗೋ ರಕ್ಷಣೆಯ ಮಹತ್ವದ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ಮುಜರಾಯಿ ಇಲಾಖೆಯಿಂದ ಗೋ ಮಾತೆಗೆ ಪೂಜೆ ಸಲ್ಲಿಸುವ ಕಾರ್ಯಕ್ರಮ ಮೂಲಕ ನಾಡಿನಾದ್ಯಂತ ದೀಪಾವಳಿ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ರಾಜ್ಯದ ಎಲ್ಲಾ ಹಿಂದೂ ದೇವಾಲಯಗಳಲ್ಲಿ ಗೋಪೂಜೆ ನಡೆಸಲು ಧಾರ್ಮಿಕ ದತ್ತಿ ಇಲಾಖೆ  ಸುತ್ತೋಲೆ ಹೊರಡಿಸಿದೆ. ಅಂದು ಸಂಜೆ 5.30 ರಿಂದ 6.30 ರವರೆಗೆ ಗೋಧೂಳಿ ಲಗ್ನದಲ್ಲಿ ನಡೆಯುವ ಗೋಪೂಜೆ ಕಾರ್ಯಕ್ರಮ ಹಾಗೂ ಪೂಜಾ ಕೈಂಕರ್ಯಗಳಲ್ಲಿ  ಇಲಾಖೆಯ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ಗೋವಿನ ಪೂಜೆ ನಮ್ಮ ಸಂಸ್ಕೃತಿ ಪರಂಪರೆಯ ಅವಿಭಾಜ್ಯ ಅಂಗವಾಗಿದೆ ಆ ಹಿನ್ನೆಲೆಯಲ್ಲಿ ಗೋವುಗಳ ಮಹತ್ವ ಹೇಳುವುದರ ಜತೆಗೆ ಅವುಗಳ ರಕ್ಷಣೆ ಕುರಿತ ಜನಜಾಗೃತಿ ಕೂಡ ಮೂಡಿಸಬೇಕಾದ ಅಗತ್ಯವಿದೆ ಎಂದು ತಿಳಿಸಿದ್ದಾರೆ.ಗೋವುಗಳ ಸಂರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು ಆ ಹಿನ್ನೆಲೆಯಲ್ಲಿ ಜಾನುವಾರು ಪ್ರತಿಬಂಧಕ ಕಾಯ್ದೆ ಜಾರಿಗೆ ತಂದಿದೆ ಎಂದು ಹೇಳಿದ್ದಾರೆ.

ಗೋಶಾಲೆಗಳ ಸ್ಥಾಪನೆ ಮಾಡುವುದರ ಜತೆಗೆ ಗೋವುಗಳ ಆರೋಗ್ಯಕ್ಕಾಗಿ 290 ಆಂಬ್ಯುಲೆನ್ಸ್‌ ಕೂಡ ನೀಡಲಾಗಿದೆ. ಆರೋಗ್ಯ ಸೇವೆಗಾಗಿ 108 ಹೇಗಿದೆಯೋ ಅದೇ ಮಾದರಿಯಲ್ಲಿ ಗೋಮಾತೆ ಸೇವೆಗಾಗಿ 1962 ಸಹಾಯವಾಣಿ ಪ್ರಾರಂಭಿಸಲಾಗಿದೆ. ಗೋ ಸೇವೆಯನ್ನು ಮಾನವೀಯ ಸೇವೆ ಎಂದೇ ಸರ್ಕಾರ ಭಾವಿಸಿದೆ ಎಂದು ತಿಳಿಸಿದ್ದಾರೆ.

ಟಾಪ್ ನ್ಯೂಸ್

Revanna 2

Bail; ಎಚ್.ಡಿ.ರೇವಣ್ಣ ಅವರಿಗೆ ಷರತ್ತು ಬದ್ದ ಜಾಮೀನು ಮಂಜೂರು

1-wewqeqe

Rahul Gandhi ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಲಿಲ್ಲ: ಶಾ ವಾಗ್ದಾಳಿ

Gangavathi ಖಾಸಗಿ ಶಾಲೆಗಳಿಂದ ಪ್ರವೇಶ ನೆಪದಲ್ಲಿ ಲಕ್ಷಾಂತರ ರೂ.ವಸೂಲಿ ಖಂಡಿಸಿ ಪ್ರತಿಭಟನೆ

Gangavathi ಖಾಸಗಿ ಶಾಲೆಗಳಿಂದ ಪ್ರವೇಶ ನೆಪದಲ್ಲಿ ಲಕ್ಷಾಂತರ ರೂ.ವಸೂಲಿ ಖಂಡಿಸಿ ಪ್ರತಿಭಟನೆ

siddanna

Eknath Shinde ಭ್ರಮೆಯಲ್ಲಿದ್ದಾರೆ, ನಮ್ಮ ಶಾಸಕರು ಮಾರಾಟವಾಗಲು ಸಿದ್ದರಿಲ್ಲ: ಸಿದ್ದರಾಮಯ್ಯ

Kharge (2)

Modi ಗೆದ್ದರೆ ಭವಿಷ್ಯದಲ್ಲಿ ಚುನಾವಣೆಗಳೇ ಇರುವುದಿಲ್ಲ: ಖರ್ಗೆ ವಾಗ್ದಾಳಿ

ಟೀಂ ಇಂಡಿಯಾದಲ್ಲೂ ರೋಹಿತ್ ಕೆರಿಯರ್ ಮುಗಿಸಿದ್ರಾ ಹಾರ್ದಿಕ್ ಪಾಂಡ್ಯ? ಏನಿದು ವರದಿ

ಟೀಂ ಇಂಡಿಯಾದಲ್ಲೂ ರೋಹಿತ್ ಕೆರಿಯರ್ ಮುಗಿಸಿದ್ರಾ ಹಾರ್ದಿಕ್ ಪಾಂಡ್ಯ? ಏನಿದು ವರದಿ

cbsc

CBSE Results:10ನೇ ತರಗತಿಯಲ್ಲಿ 93%,12 ರಲ್ಲಿ ಶೇ 87.98 ವಿದ್ಯಾರ್ಥಿಗಳು ಉತ್ತೀರ್ಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Revanna 2

Bail; ಎಚ್.ಡಿ.ರೇವಣ್ಣ ಅವರಿಗೆ ಷರತ್ತು ಬದ್ದ ಜಾಮೀನು ಮಂಜೂರು

siddanna

Eknath Shinde ಭ್ರಮೆಯಲ್ಲಿದ್ದಾರೆ, ನಮ್ಮ ಶಾಸಕರು ಮಾರಾಟವಾಗಲು ಸಿದ್ದರಿಲ್ಲ: ಸಿದ್ದರಾಮಯ್ಯ

police

Vijayapura: ಕಾಣೆಯಾಗಿದ್ದ ಮೂವರು ಮಕ್ಕಳು ಶವವಾಗಿ ಪತ್ತೆ

MLC Election; ಬಿಜೆಪಿ ಟಿಕೆಟ್ ಕೈತಪ್ಪಿದ್ದಕ್ಕೆ ಪಕ್ಷೇತರ ಸ್ಪರ್ಧೆಗೆ ರಘುಪತಿ ಭಟ್ ನಿರ್ಧಾರ

MLC Election; ಬಿಜೆಪಿ ಟಿಕೆಟ್ ಕೈತಪ್ಪಿದ್ದಕ್ಕೆ ಪಕ್ಷೇತರ ಸ್ಪರ್ಧೆಗೆ ರಘುಪತಿ ಭಟ್ ನಿರ್ಧಾರ

Sirsi: ಸಣ್ಣಕೇರಿಯ ದೊಡ್ಡ‌ಕೆರೆಗೆ‌ ಕಾಯಕಲ್ಪ… ಕೆರೆ ಅಭಿವೃದ್ಧಿಗೆ ಚಾಲನೆ

Sirsi: ಕೆರೆ ಅಭಿವೃದ್ದಿ ಮಾಡಿದರೆ ಮಾತ್ರ ಜಲ ಸಂರಕ್ಷಣೆ ಸಾಧ್ಯ… :ಶ್ರೀನಿವಾಸ ಹೆಬ್ಬಾರ್

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

Revanna 2

Bail; ಎಚ್.ಡಿ.ರೇವಣ್ಣ ಅವರಿಗೆ ಷರತ್ತು ಬದ್ದ ಜಾಮೀನು ಮಂಜೂರು

qpl

Queen Premier League; ಸಿನಿಮಾ ಸೀರಿಯಲ್ ನಟಿಯರ ಕ್ರಿಕೆಟ್ ಪಂದ್ಯಾವಳಿ

1-wewqeqe

Rahul Gandhi ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಲಿಲ್ಲ: ಶಾ ವಾಗ್ದಾಳಿ

Gangavathi ಖಾಸಗಿ ಶಾಲೆಗಳಿಂದ ಪ್ರವೇಶ ನೆಪದಲ್ಲಿ ಲಕ್ಷಾಂತರ ರೂ.ವಸೂಲಿ ಖಂಡಿಸಿ ಪ್ರತಿಭಟನೆ

Gangavathi ಖಾಸಗಿ ಶಾಲೆಗಳಿಂದ ಪ್ರವೇಶ ನೆಪದಲ್ಲಿ ಲಕ್ಷಾಂತರ ರೂ.ವಸೂಲಿ ಖಂಡಿಸಿ ಪ್ರತಿಭಟನೆ

Bidar: ಕಳ್ಳತನವಾಗಿದ್ದ 52 ಮೊಬೈಲ್ ಗಳನ್ನು ಪತ್ತೆ ಮಾಡಿದ ಜಿಲ್ಲಾ ಪೊಲೀಸ್

Bidar: ಕಳ್ಳತನವಾಗಿದ್ದ 52 ಮೊಬೈಲ್ ಗಳನ್ನು ಪತ್ತೆ ಮಾಡಿದ ಜಿಲ್ಲಾ ಪೊಲೀಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.