ಬೋರ್‌ವೆಲ್‌ ನೀರು ಕುಡಿಯಲು ಯೋಗ್ಯವಲ್ಲ  


Team Udayavani, Nov 30, 2022, 11:36 AM IST

ಬೋರ್‌ವೆಲ್‌ ನೀರು ಕುಡಿಯಲು ಯೋಗ್ಯವಲ್ಲ  

ಬೆಂಗಳೂರು: ರಾಜಧಾನಿಯ ವ್ಯಾಪ್ತಿಯಲ್ಲಿರುವ ಕಾರ್ಖಾನೆಗಳ ಕೊಳಚೆ ನೀರು, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಘನತಾಜ್ಯವು ನಗರ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಬೆಂಗಳೂರು ಉತ್ತರ ತಾಲೂಕಿನ ಕೆಲವು ಕೆರೆಗಳನ್ನು ಸೇರುತ್ತಿದ್ದು, ಕೊಳವೆಬಾವಿಗಳಲ್ಲಿ ಕುಡಿಯಲು ಯೋಗ್ಯವಲ್ಲದ ನೀರು ಬರುತ್ತಿದೆ.

ಬೆಂಗಳೂರು ಉತ್ತರ ತಾಲೂಕಿನಲ್ಲಿ 11 ಗ್ರಾಮಪಂಚಾಯ್ತಿಗಳಿವೆ. ಅವುಗಳಲ್ಲಿ ಕಾಚೋಹಳ್ಳಿ, ಮಚೋಹಳ್ಳಿ, ಕೊಡಿಗೆಹಳ್ಳಿ ಸೇರಿದಂತೆ ಮತ್ತಿತರರಗ್ರಾಮ ಪಂಚಾಯ್ತಿಗಳು ಬೃಹತ್‌ ಬೆಂಗಳೂರುಮಹಾನಗರಕ್ಕೆ ತಾಕಿಕೊಂಡಿವೆ. ಈ ಭಾಗದಲ್ಲಿಹಲವು ಸಂಖ್ಯೆಗಳಲ್ಲಿ ಕಾರ್ಖಾನೆಗಳು ತಲೆಎತ್ತಿದ್ದು, ಕಾರ್ಖಾನೆಯ ಕಲುಷಿತ ನೀರು ಆಗ್ರಾಮ ಗಳು ಕೆರೆಗಳನ್ನು ಸೇರಿ ಮಾಲಿನ್ಯ ಉಂಟಾಗಿದೆ. ಹೀಗಾಗಿ ಕೆಲವು ಕೆರೆಗಳು ನೊರೆಯಿಂದ ಉಕ್ಕಿ ಹರಿಯುತ್ತಿವೆ.

ಮಚೋಹಳ್ಳಿಯಲ್ಲಿ ಎರಡು, ಕಾಚೋಹಳ್ಳಿಹಾಗೂ ಕೊಡಿಗೆಹಳ್ಳಿಯಲ್ಲಿ ಒಂದು ಕೆರೆಗಳಿದ್ದು, ಈ ಕೆರೆಗಳ ನೀರು ಪೀಣ್ಯ ಸೇರಿದಂತೆ ಮತ್ತಿತರರ ಭಾಗದಿಂದ ಬರುವ ಕಾರ್ಖಾನೆಗಳ ಕಲುಷಿತ ನೀರು ಸೇರಿ ಮಲಿನಗೊಂಡಿದ್ದು ಪ್ರತಿದಿನ ನೊರೆಯಿಂದ ಉಕ್ಕುತ್ತಿವೆ. ಜತೆಗೆ ಆ ಭಾಗದಕೆರೆಗಳಲ್ಲಿ ಸಂಗ್ರಹವಾದ ನೀರಿನಿಂದ ಗಬ್ಬು ವಾಸನೆಬರುತ್ತಿದ್ದು ಸ್ಥಳೀಯರು ಆರೋಗ್ಯದ ಬಗ್ಗೆ ಆತಂಕಗೊಂಡಿದ್ದಾರೆ.

ಗಂಗೊಂಡನಹಳ್ಳಿ ಕೆರೆಯ ಮಲಿನ ನೀರು ಲಕ್ಕೇನಹಳ್ಳಿ ಕೆರೆಗೆ, ಲಕ್ಕೇ ನಹಳ್ಳಿ ಕೆರೆ ನೀರು ಮಾಚೋಹಳ್ಳಿ ಕೆರೆಗೆ ಹರಿಯುತ್ತದೆ. ಕಾಚೋಹಳ್ಳಿ ಗ್ರಾಮದ ಕೆರೆಯಲ್ಲಿ ಅಂತರಗಂಗೆ ಸಸಿ ಬೆಳೆದಿದ್ದು ನೀರು ಕಲುಷಿತಗೊಂಡಿದೆ. ಆ ಕೆರೆಯ ನೀರು ಕೂಡ ಮಾಚೋಹಳ್ಳಿ ಕೆರೆಗೆ ಬಂದು ಸೇರುತ್ತದೆ. ಮೂರು ಕೆರೆಗಳ ಕಲುಷಿತ ನೀರು ಮಾಚೋಹಳ್ಳಿಕೆರೆಗೆ ಬಂದು ಸೇರುತ್ತಿರುವುದರಿಂದ ಕೃಷಿ ಭೂಮಿಯ ಫಲವತ್ತತೆ ಹಾಳಾಗಿದೆ ಎಂದು ರೈತರ ಆಳಲು ತೋಡಿಕೊಳ್ಳುತ್ತಾರೆ.

ಮಾಚೋಹಳ್ಳಿ ಕೆರೆಯ ಆಸುಪಾಸಿನಲ್ಲಿ ಮೆಕ್ಕೆಜೋಳ, ಅವರೆ, ಟೊಮೆಟೋ ಬೆಳೆಯಲಾಗುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಭವಿಷ್ಯತ್ತಿನ ಈ ಭಾಗದ ಅವರೆ, ಟೊಮೆ ಟೋಬೆಳೆಗಳನ್ನು ಜನರು ಖರೀದಿಸಲು ಹಿಂದೇಟು ಹಾಕಬಹುದು ಎಂದು ಹೇಳುತ್ತಾರೆ.

ಬೋರ್‌ವೆಲ್‌ನಲ್ಲಿ ಕಲುಷಿತ ನೀರು: ಕಾಚೋಹಳ್ಳಿ ವ್ಯಾಪ್ತಿಯಲ್ಲಿ 15 ಸಾವಿರಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಜನರು ನೆಲೆಸಿದ್ದಾರೆ. ಕುಡಿಯುವ ನೀರಿಗಾಗಿ ಕೊರೆದ ಬೋರ್‌ವೆಲ್‌ ನಲ್ಲಿ ಕುಡಿಯಲು ಯೋಗ್ಯವಲ್ಲದ ನೀರು ಬಂದ ಹಿನ್ನೆಲೆಯಲ್ಲಿ ಆ ಬೋರ್‌ವೆಲ್‌ ಸ್ಥಗಿತಗೊಳಿಸಿಲಾಗಿದೆ. ಉತ್ತರ ತಾಲೂಕಿನ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಕೊರೆದ ಬೋರ್‌ವೆಲ್‌ಗಳಲ್ಲಿ ಕಲುಷಿತ ನೀರು ಬಂದಿರುವುದು ಇದೆ ಎಂದು ಬೆಂಗಳೂರು ಉತ್ತರ ತಾಲೂಕಿನ ಅಧಿಕಾರಿಗಳು ಹೇಳುತ್ತಾರೆ.

ಕೊಡಿಗೆಹಳ್ಳಿಯಲ್ಲಿ ಬಿಬಿಎಂಪಿಯ ಘನತ್ಯಾಜ್ಯ ವಿಲೇವಾರಿ ಘಟಕವಿದೆ. ಅಲ್ಲಿ ವೈಜ್ಞಾನಿಕವಾಗಿ ಘನತ್ಯಾಜ್ಯ ವಿಲೇವಾರಿ ಆಗುತ್ತಿಲ್ಲ. ಆ ಹಿನ್ನೆಲೆಯಲ್ಲಿ ಆ ಭಾಗದ ವ್ಯಾಪ್ತಿಯಲ್ಲಿ ನೊಣಗಳು ಸಂಖ್ಯೆ ಅಧಿಕವಿರುವುದರ ಜತೆ ಘನತಾಜ್ಯ ಕೂಡ ನಾರುತ್ತಿದೆ. ಪಾಲಿಕೆಯ ಗಮನಕ್ಕೆ ತರಲಾಗಿದೆ. ಆದರೆ ಈ ಬಗ್ಗೆ ಅಧಿಕಾರಿಗಳು ಯಾವುದೇ ರೀತಿಯ ಗಮನ ನೀಡುತ್ತಿಲ್ಲ ಎಂದು ಸ್ಥಳೀಯರು ದೂರುತ್ತಾರೆ.

ಸ್ಪಂದಿಸದ ಮಾಲಿನ್ಯ ಇಲಾಖೆ, ಪರಿಸರ ತಜ್ಞ ಯಲ್ಲಪ್ಪ ರೆಡ್ಡಿ ಮೊರೆ :

ಈ ಸಂಬಂಧ ಕೆಲವು ಗ್ರಾಮ ಪಂಚಾಯ್ತಿಗಳೂ ಕರ್ನಾಟಕ ರಾಜ್ಯ ಮಾಲಿನ್ಯ ಮಂಡಳಿಗೂ ಪತ್ರ ಬರೆಯಲಾಗಿದೆ. ಆದರೆ ಯಾವುದೇ ರೀತಿಯ ಪ್ರಯೋಜನ ವಾಗಿಲ್ಲ. ಹೀಗಾಗಿ, ಬೆಂಗಳೂರು ನಗರ ಉತ್ತರ ತಾಲೂಕಿನ ಹಿರಿಯ ಅಧಿಕಾರಿಗಳು ಈ ಬಗ್ಗೆ ಪರಿಸರ ತಜ್ಞ ಯಲ್ಲಪ್ಪ ರೆಡ್ಡಿ ಅವರ ಸಲಹೆ

ಮೊರೆ ಹೋಗಿದ್ದಾರೆ. ಶೀಘ್ರದಲ್ಲಿ ಯಲ್ಲಪ್ಪ ರೆಡ್ಡಿ ಅವರಿಂದ ಸ್ಥಳ ಪರಿಶೀಲನೆ ನಡೆಸಿ ಈ ಬಗ್ಗೆ ವರದಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ನೀಡುವ ಆಲೋಚನೆ ನಡೆಸಿದ್ದಾರೆ. ಇತ್ತೀಚಿಗೆ ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿಯಲ್ಲಿ ನಡೆದ ದಿಶಾ ಸಭೆಯಲ್ಲೂ ಕೂಡ ಈ ಬಗ್ಗೆ ಬೆಳಕು ಚೆಲ್ಲಲಾಯಿತು

ಕೆಲವು ಗ್ರಾಮ ಪಂಚಾಯ್ತಿಯ ಬೋರ್‌ವೆಲ್‌ಗ‌ಳಲ್ಲಿ ಕುಡಿಯಲು ಯೋಗ್ಯವಲ್ಲದ ನೀರು ಬರುತ್ತಿವೆ ಎಂಬ ಮಾಹಿತಿ ಜಿಪಂ ಗಮನಕ್ಕೆ ಬಂದಿದೆ. ಜತೆಗೆಕಾರ್ಖಾನೆ ಯಿಂದ ಹೊರಹೋಗುವ ಮಲಿನ ನೀರು ಕೂಡ ಗ್ರಾಮಗಳ ಕೆರೆಗಳನ್ನು ಸೇರುತ್ತಿದೆ ಎಂಬ ದೂರು ಇದೆ. ಆ ಹಿನ್ನೆಲೆಯಲ್ಲಿ ಪಾಲಿಕೆ ಹಾಗೂ ಮಾಲಿನ್ಯ ಮಂಡಳಿಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು.-ಸಂಗಪ್ಪ ಸಿಇಒ, ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ

-ದೇವೇಶ ಸೂರಗುಪ್ಪ

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

Bengaluru: ಚೆಕ್‌ ದುರ್ಬಳಕೆ; ಕ್ಯಾಷಿಯರ್‌, ಎಲ್‌ಐಸಿ ಏಜೆಂಟ್‌ಗೆ ಜೈಲು

Bengaluru: ಚೆಕ್‌ ದುರ್ಬಳಕೆ; ಕ್ಯಾಷಿಯರ್‌, ಎಲ್‌ಐಸಿ ಏಜೆಂಟ್‌ಗೆ ಜೈಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.