ಹೈಡ್ರಾಲಿಕ್ ವೈಫಲ್ಯ: 197 ಪ್ರಯಾಣಿಕರಿದ್ದ ವಿಮಾನ ಕೊಚ್ಚಿಯಲ್ಲಿ ತುರ್ತು ಭೂಸ್ಪರ್ಶ
Team Udayavani, Dec 2, 2022, 8:43 PM IST
ಕೊಚ್ಚಿ: ಆರು ಸಿಬಂದಿ ಸೇರಿದಂತೆ 197 ಪ್ರಯಾಣಿಕರೊಂದಿಗೆ ಸೌದಿ ಅರೇಬಿಯಾದ ಜೆಡ್ಡಾದಿಂದ ಕೇರಳದ ಕೋಝಿಕ್ಕೋಡ್ಗೆ ಬರುತ್ತಿದ್ದ ಸ್ಪೈಸ್ಜೆಟ್ ವಿಮಾನವು ಹೈಡ್ರಾಲಿಕ್ ವೈಫಲ್ಯದ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಕೊಚ್ಚಿನ್ ಇಂಟರ್ನ್ಯಾಶನಲ್ ಏರ್ಪೋರ್ಟ್ ನಲ್ಲಿ (ಸಿಐಎಎಲ್) ತುರ್ತು ಭೂಸ್ಪರ್ಶ ಮಾಡಿದೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.
ಕೋಝಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿದ್ದ ಸ್ಪೈಸ್ಜೆಟ್-ಎಸ್ಜಿ 036 ವಿಮಾನವನ್ನು ಕೊಚ್ಚಿಗೆ ತಿರುಗಿಸಿದ ನಂತರ ಸಂಜೆ 6.29 ಕ್ಕೆ ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು ಎಂದು ಅವರು ಹೇಳಿದರು.
ಕೊಚ್ಚಿ ವಿಮಾನ ನಿಲ್ದಾಣದಲ್ಲಿ 6.29 ಗಂಟೆಗೆ ಸಂಪೂರ್ಣ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದ್ದು,ತುರ್ತು ಲ್ಯಾಂಡಿಂಗ್ ಪರಿಸ್ಥಿತಿಯ ನಂತರ ವಿಮಾನವು ರನ್ವೇಯಲ್ಲಿ 07.19 ಕ್ಕೆ ಸುರಕ್ಷಿತವಾಗಿ ಇಳಿಯಿತು” ಎಂದು ಅವರು ಹೇಳಿದ್ದಾರೆ.