ಎಐಸಿಸಿಗೆ ನೇರ ಸವಾಲು ಹಾಕಿದ ಸಿಎಂ ಬೊಮ್ಮಾಯಿ


Team Udayavani, Dec 16, 2022, 12:25 PM IST

ಎಐಸಿಸಿಗೆ ನೇರ ಸವಾಲು ಹಾಕಿದ ಸಿಎಂ ಬೊಮ್ಮಾಯಿ

ಬೆಂಗಳೂರು: ಕಾಂಗ್ರೆಸ್ ದೇಶ ಭಕ್ತರ ಪರವಾಗಿದೆಯೋ ಇಲ್ಲವೆ ಉಗ್ರರ ಪರವಾಗಿ ಇದೆಯೇ ಎಂಬುದನ್ನು ಜನತೆಯ ಮುಂದೆ ಬಹಿರಂಗ ಪಡಿಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಐಸಿಸಿಗೆ ನೇರ ಸವಾಲು ಹಾಕಿದ್ದಾರೆ.

ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ, ರಾಹುಲ್‍ಗಾಂಧಿ ಅವರುಗಳು ಕಾಂಗ್ರೆಸ್ ದೇಶ ಭಕ್ತರ ಪರವಾಗಿ ಇದೆಯೋ ಇಲ್ಲವೆ ಭಯೋತ್ಪಾದಕರ ಪರವಾಗಿದೆಯೋ ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದರು.

ನಗರದ ರಾಷ್ಟ್ರೀಯ ಮಿಲಿಟರಿ ಸ್ಮಾರಕದಲ್ಲಿ ವಿಜಯ್ ದಿವಸ್ ಆಚರಣೆ ಅಂಗವಾಗಿ ಹುತಾತ್ಮ ಯೋಧರಿಗೆ ಗೌರವಾರ್ಪಣೆ ಸಲ್ಲಿಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸುಖಾಸುಮ್ಮನೆ ಅಥವಾ ಏನೂ ಗೊತ್ತಿಲ್ಲದವರಂತೆ ಈ ಹೇಳಿಕೆ ಕೊಟ್ಟಿಲ್ಲ. ಭಯೋತ್ಪಾದಕನ ಬಗ್ಗೆ ಅನುಕಂಪ ತೋರಿಸಿದರೆ ಅಲ್ಪಸಂಖ್ಯಾತ ಸಮುದಾಯದ ಮತಗಳು ಬರಬಹುದೆಂಬ ಲೆಕ್ಕಾಚಾರದಿಂದಲೇ ಹೇಳಿದ್ದಾರೆ ಎಂದು ಆರೋಪಿಸಿದರು.

ಸಾಕ್ಷಿ ಸಮೇತ ಶಂಕಿತ ಉಗ್ರನನ್ನು ಸಾಕ್ಷಿ ಸಮೇತ ಬಂಸಿದ್ದಾರೆ. ಆತನ ಬಂಧನದಿಂದ ರಾಜ್ಯದಲ್ಲಿ ಉಂಟಾಗಬಹುದಿದ್ದ ದೊಡ್ಡ ಅನಾಹುತವೇ ತಪ್ಪಿದೆ. ಸಂಭವಿಸಬಹುದಾದ ಬಹು ದೊಡ್ಡ ಅನಾಹುತವನ್ನು ತಪ್ಪಿಸಲಾಗಿದೆ. ಭಯೋತ್ಪಾದನೆ ವಿಷಯದಲ್ಲಿ ಕಾಂಗ್ರೆಸ್‍ನ ನಿಲುವೇನು ಎಂದು ಸಿಎಂ ಪ್ರಶ್ನಿಸಿದರು.

ಸಾಕ್ಷಿ ಸಮೇತ ಪೊಲೀಸರು ಆರೋಪಿಯನ್ನು ಬಂಧಿಸಿದ್ದರೂ ಕಾಂಗ್ರೆಸ್‍ ನವರಿಗೆ ಟೀಕೆ ಮಾಡುವುದೇ ಕಾಯಕವಾಗಿದೆ. ಈ ಮೂಲಕ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ. ಇವರ ಮಾತು ನಂಬಲು ಜನ ಮೂರ್ಖರಲ್ಲ ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ:ಗ್ವಾಲಿಯರ್: ನಾಲ್ಕು ಕಾಲುಗಳಿರುವ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ; ವೈದ್ಯರ ತಂಡದಿಂದ ಪರಿಶೀಲನೆ

ಬಂಧಿತ ಉಗ್ರನಿಗೆ ಭಯೋತ್ಪಾದನೆ ಸಂಘಟನೆ ಮತ್ತು ಕೆಲ ಉಗ್ರರ ಸಂಪರ್ಕವಿರುವುದು ತನಿಖೆಯಿಂದ ತಿಳಿದು ಬಂದಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಓರ್ವ ಹಿರಿಯ ರಾಜಕಾರಣಿ. ಏನೇ ಮಾತನಾಡಬೇಕಾದರೂ ಮೊದಲು ವಿಷಯ ತಿಳಿದುಕೊಂಡು ಮಾತನಾಡಲಿ. ಅಲ್ಪಸಂಖ್ಯಾತರ ಓಲೈಕೆಗಾಗಿ ಭಯೋತ್ಪಾದಕನ ಬಗ್ಗೆ ಅನುಕಂಪ ಬೇಡ. ಅವರ ಹೇಳಿಕೆ ಶೋಭೆ ತರುವುದಿಲ್ಲ ಎಂದು ಕಿಡಿಕಾರಿದರು.

ಭಯೋತ್ಪಾದಕರಿಗೆ ಬೆಂಬಲ ಕೊಟ್ಟು ಚುನಾವಣೆಯಲ್ಲಿ ಹೆಚ್ಚಿನ ಮತ ಪಡೆಯಬಹುದೆಂಬ ನಿಮ್ಮ ಲೆಕ್ಕಾಚಾರ ಈಡೇರುವುದಿಲ್ಲ. ಇನ್ನು ಎಷ್ಟು ದಿನ ಈ ರೀತಿ ಓಲೈಕೆ ರಾಜಕಾರಣ ಮಾಡುತ್ತೀರಿ ಎಂದು ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು.

ಮತದಾರರ ಪಟ್ಟಿ ಅಕ್ರಮವನ್ನು ಮರೆಮಾಚಲು ಕುಕ್ಕರ್ ಬಾಂಬ್ ಸೃಷ್ಟಿಸಿದೆ ಎಂಬ ಡಿಕೆಶಿ ಹೇಳಿಕೆಗೆ ತಿರುಗೇಟ್ಟು ಕೊಟ್ಟ ಸಿಎಂ, 2017ರಲ್ಲಿ ಆ ಸಂಸ್ಥೆಗೆ ಕೊಟ್ಟವರು ಯಾರು ಎಂದು ತರಾಟೆಗೆ ತೆಗೆದುಕೊಂಡರು.

ಚಿಲುಮೆ ಸಂಸ್ಥೆಗೆ ಕೊಟ್ಟಿದ್ದು ಇದೇ ಕಾಂಗ್ರೆಸ್ ಸರ್ಕಾರ. ಅಕ್ರಮವಾಗಿ ನೀಡಿದ್ದೇ ಇವರು. ಈಗ ನಾವು ತನಿಖೆಗೆ ವಹಿಸಿದ್ದೇವೆ. ಎಲ್ಲಾ ಸತ್ಯಾಂಶವೂ ಹೊರ ಬರಲಿದೆ. ಯಾರನ್ನೂ ರಕ್ಷಣೆ ಮಾಡುವುದಿಲ್ಲ. ಪ್ರಕರಣದಲ್ಲಿ ಈಗಾಗಲೇ ಹಲವರನ್ನು ಬಂಸಲಾಗಿದೆ. ತನಿಖೆಯಿಂದ ಎಲ್ಲವೂ ಬಹಿರಂಗಗೊಳ್ಳಲಿದೆ. ನಮ್ಮ ನಿಲುವು ಇದರಲ್ಲಿ ಸ್ಪಷ್ಟವಾಗಿದೆ ಎಂದರು.

ದೇಶದ ಗಡಿ ರಕ್ಷಣೆ ಮಾಡುವ ವಿಷಯದಲ್ಲಿ ಹಲವಾರು ಯುದ್ಧಗಳು ನಡೆದಾಗ ಕರ್ನಾಟಕದ ಅನೇಕ ಯೋಧರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಇನ್ನು ಕೆಲವು ಯೋಧರು ಗಾಯಗೊಂಡಿದ್ದಾರೆ. ಅವರ ಪರಿಶ್ರಮದ ಫಲದಿಂದಲೇ ನಮಗೆ ಜಯ ಸಿಕ್ಕಿದೆ ಎಂದು ಯೋಧರ ಗುಣಗಾನ ಮಾಡಿದರು.

ರಕ್ಷಣಾ ಸೇವೆ ಶ್ರೇಷ್ಠವಾದ ಕಾಯಕವಾಗಿದೆ. ಬೇರೆ ಯಾವುದೇ ಸೇವೆಯೂ ಈ ರೀತಿ ಇರುವುದಿಲ್ಲ. ದೇಶ ರಕ್ಷಣೆಗಾಗಿಯೇ ಇರುವುದು ಈ ಪಡೆ. ದೇಶಕ್ಕೋಸ್ಕರ ಎಲ್ಲವನ್ನು ತ್ಯಾಗ ಮಾಡಿ ಹೋರಾಡಿದ್ದಾರೆ. ವಿಜಯಕ್ಕಾಗಿ ಯಾರು ಹೋರಾಟ ಮಾಡಿರುತ್ತಾರೋ ಗೆದ್ದ ನಂತರ ಅವರೇ ಇರುವುದಿಲ್ಲ. ಕೊರೆಯುವ ಚಳಿ, ಮಳೆ, ಗಾಳಿಯನ್ನು ಲೆಕ್ಕಿಸದೆ ಸೈನಿಕರು ಹೋರಾಟ ಮಾಡುತ್ತಾರೆ. ಅಂತಹ ವೀರ ಯೋಧರಿಗೆ ನನ್ನದೊಂದು ಸಲಾಮ್ ಎಂದು ಭಾವುಕವಾಗಿ ನುಡಿದರು.

ನಮ್ಮ ಭಾರತೀಯ ಸೈನಿಕರು ಶಿಸ್ತಿನ ಸಿಪಾಯಿಗಳು. ಹಲವಾರು ಸವಾಲುಗಳ ನಡುವೆಯೇ ಹೋರಾಡುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶ ಮುನ್ನುಗ್ಗುತ್ತಿದೆ. ಅದಕ್ಕೆ ಪೂರಕವಾಗಿ ನಾಗರಿಕರು ಕೂಡ ಕೈ ಜೋಡಿಸುತ್ತಿದ್ದಾರೆ. ಸೈನಿಕ ಪರಿವಾರಕ್ಕೆ ಎಲ್ಲಾ ರೀತಿಯ ಸಹಾಯವನ್ನು ಸರ್ಕಾರ ನೀಡಲಿದೆ ಎಂದು ಸಿಎಂ ಭರವಸೆ ನೀಡಿದರು.

ಸಮಾರಂಭದಲ್ಲಿ ಗೃಹ ಸಚಿವ ಆರಗ ಜ್ಞಾನೆಂದ್ರ, ಸೇನಾಪಡೆಯ ಅಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ: ಬೇಳೂರು

Gopal Krishna Belur ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ

20

Sandalwood: ದರ್ಶನ್‌ ʼಡೆವಿಲ್‌ʼಗೆ ಕರಾವಳಿ ಬೆಡಗಿ ರಚನಾ ರೈ ನಾಯಕಿ; ಫಸ್ಟ್‌ ಪೋಸ್ಟರ್‌ ಔಟ್

satish jarakiholi

Belagavi,ಚಿಕ್ಕೋಡಿ ಸೇರಿ 14 ರಿಂದ 17 ಸೀಟು ಕಾಂಗ್ರೆಸ್ ಗೆಲ್ಲಲಿದೆ: ಸತೀಶ್ ಜಾರಕಿಹೊಳಿ

Shivraj tangadagi

Prajwal Revanna ಬಂಧನಕ್ಕೆ ಕೇಂದ್ರ ಸರಕಾರದಿಂದ ಅಸಹಕಾರ: ಸಚಿವ ತಂಗಡಗಿ

1-qwewe

Odisha ಜನರು ನಿಂದನೀಯ ಭಾಷೆ ಮೆಚ್ಚಿಕೊಳ್ಳುವುದಿಲ್ಲ:ಬಿಜೆಪಿಗೆ ಪಟ್ನಾಯಕ್ ತಿರುಗೇಟು

6-rabakavi

Rabkavi Banhatti: ಶತಮಾನದ ಸೋಮವಾರಪೇಟೆ ಸಮಸ್ತ ದೈವ ಮಂಡಳಿಯ ಗರಡಿ ಮನೆ

Ramanagara: ಈಜಲು ಹೋಗಿ‌ದ್ದ ಮೂವರು ಮಕ್ಕಳು ನೀರುಪಾಲು

Ramanagara: ಈಜಲು ಹೋಗಿ‌ದ್ದ ಮೂವರು ಮಕ್ಕಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qwewqewqe

Governor ಸಹಿ ನಕಲಿ ; ಕೋಟ್ಯಂತರ ರೂ. ವಂಚನೆ: ಕೊರಟಗೆರೆಯ ಜುಬೇರ್ ಅರೆಸ್ಟ್

satish jarakiholi

Belagavi,ಚಿಕ್ಕೋಡಿ ಸೇರಿ 14 ರಿಂದ 17 ಸೀಟು ಕಾಂಗ್ರೆಸ್ ಗೆಲ್ಲಲಿದೆ: ಸತೀಶ್ ಜಾರಕಿಹೊಳಿ

Shivraj tangadagi

Prajwal Revanna ಬಂಧನಕ್ಕೆ ಕೇಂದ್ರ ಸರಕಾರದಿಂದ ಅಸಹಕಾರ: ಸಚಿವ ತಂಗಡಗಿ

ಲೈಂಗಿಕ ದೌರ್ಜನ್ಯ: ಸಾಕ್ಷ್ಯ ಸಂಗ್ರಹಕ್ಕೆ ಇನ್ಮುಂದೆ ಸುರಕ್ಷಿತ ಕಿಟ್‌ ಬಳಕೆ

ಲೈಂಗಿಕ ದೌರ್ಜನ್ಯ: ಸಾಕ್ಷ್ಯ ಸಂಗ್ರಹಕ್ಕೆ ಇನ್ಮುಂದೆ ಸುರಕ್ಷಿತ ಕಿಟ್‌ ಬಳಕೆ

ರೈಲಿನಲ್ಲಿ ಮಹಿಳೆಯೊಂದಿಗೆ ಕಿರಿಕ್; ಚಾಕು ಇರಿತ; ಅಂಜಲಿ ಹಂತಕ ಸಿಕ್ಕಿ ಬಿದ್ದಿದ್ಹೇಗೆ?

ರೈಲಿನಲ್ಲಿ ಮಹಿಳೆಯೊಂದಿಗೆ ಕಿರಿಕ್; ಚಾಕು ಇರಿತ; ಅಂಜಲಿ ಹಂತಕ ಸಿಕ್ಕಿ ಬಿದ್ದಿದ್ಹೇಗೆ?

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

1-qwewqewqe

Governor ಸಹಿ ನಕಲಿ ; ಕೋಟ್ಯಂತರ ರೂ. ವಂಚನೆ: ಕೊರಟಗೆರೆಯ ಜುಬೇರ್ ಅರೆಸ್ಟ್

ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ: ಬೇಳೂರು

Gopal Krishna Belur ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ

20

Sandalwood: ದರ್ಶನ್‌ ʼಡೆವಿಲ್‌ʼಗೆ ಕರಾವಳಿ ಬೆಡಗಿ ರಚನಾ ರೈ ನಾಯಕಿ; ಫಸ್ಟ್‌ ಪೋಸ್ಟರ್‌ ಔಟ್

1——-qweweqw

Dr.G. Parameshwara ಹೆಸರು ದುರ್ಬಳಕೆ: ಕಾಂಗ್ರೆಸ್ ನಿಂದ ಮೊಹಮ್ಮದ್ ಜುಬೇರ್ ಉಚ್ಛಾಟನೆ

satish jarakiholi

Belagavi,ಚಿಕ್ಕೋಡಿ ಸೇರಿ 14 ರಿಂದ 17 ಸೀಟು ಕಾಂಗ್ರೆಸ್ ಗೆಲ್ಲಲಿದೆ: ಸತೀಶ್ ಜಾರಕಿಹೊಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.