ಉಳ್ಳಾಲ: ಬುರ್ದುಗೋಳಿ ಗುಳಿಗಜ್ಜ ಕ್ಷೇತ್ರಕ್ಕೆ ಹುಂಜ ಹರಕೆ ನೀಡಿದ ‘ಕರಿ ಹೈದ ಕರಿಯಜ್ಜ’ ಚಿತ್ರತಂಡ

ನಟಿ ಶೃತಿ, ಭವ್ಯ ಸೇರಿದಂತೆ ತಂಡದಿಂದ ವಿಶೇಷ ಪ್ರಾರ್ಥನೆ

Team Udayavani, Jan 13, 2023, 3:23 PM IST

7-mangaluru1

ಉಳ್ಳಾಲ: ಕೊರಗಜ್ಜನ ಕುರಿತಾದ ಬಹು ಬಾಷಾ ಚಿತ್ರ “ಕರಿ ಹೈದ ಕರಿಯಜ್ಜ” ದ ಯಶಸ್ಸಿಗೆ ಕಲ್ಲಾಪು ಬುರ್ದುಗೋಳಿಯ ಕೊರಗಜ್ಜ-ಗುಳಿಗಜ್ಜ ಉದ್ಭವ ಶಿಲೆಯ ಆದಿಸ್ಥಳಕ್ಕೆ ಭೇಟಿ ನೀಡಿದ ನಟಿಯರಾದ ಭವ್ಯ, ಶೃತಿ ಸೇರಿದಂತೆ ಚಿತ್ರ ತಂಡ ಗುಳಿಗನಿಗೆ ಹರಕೆಯಾಗಿ ಹುಂಜವನ್ನು ಸಮರ್ಪಿಸಿದ್ದಾರೆ.

ತ್ರಿವಿಕ್ರಮ ಸಪಲ್ಯ ಅವರು 5 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ “ಕರಿ ಹೈದ ಕರಿಯಜ್ಜ” ಚಿತ್ರದ ಚಿತ್ರೀಕರಣದ ಆರಂಭದಲ್ಲೇ ನಿರ್ದೇಶಕ ಸುಧೀರ್ ರಾಜ್ ಉರ್ವ ಅವರ ಸಲಹೆಯಂತೆ ಬುರ್ದುಗೋಳಿ ಕ್ಷೇತ್ರದ ಗುಳಿಗಜ್ಜನಿಗೆ ಹುಂಜ ಮತ್ತು ಮಂಗಳೂರಿನ‌ ನಂದಿಗುಡ್ಡೆಯ ಕೊರಗಜ್ಜನ ಕ್ಷೇತ್ರದಲ್ಲಿ ಕೋಲ ಸೇವೆ ನೀಡುತ್ತೇನೆಂದು ಹರಕೆ ಹೊತ್ತಿದ್ದರಂತೆ.

ಅದರಂತೆ ಬುರ್ದುಗೋಳಿ ಕ್ಷೇತ್ರಕ್ಕೆ ಹುಂಜವನ್ನು ಹರಕೆ ನೀಡಿದ್ದು, ಗುಳಿಗ-ಕೊರಗಜ್ಜನ ಉದ್ಭವ ಶಿಲೆ ಸಮ್ಮುಖದಲ್ಲಿ ಚಿತ್ರತಂಡದವರು ಪ್ರಾರ್ಥನೆ ಸಲ್ಲಿಸಿದ್ದಾರೆ.

ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿರುವ ತೊಂಭತ್ತರ ದಶಕದ ಜನಪ್ರಿಯ ನಾಯಕಿ ನಟಿಯರಾದ ಭವ್ಯ ಮತ್ತು ಶೃತಿ ಅವರು ಕೊರಗಜ್ಜ-ಗುಳಿಗಜ್ಜನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಇಂದು ನಟಿ ಭವ್ಯ ಅವರ ಜನುಮ ದಿನ. ಈ ಸಂದರ್ಭದಲ್ಲೇ ಕೊರಗಜ್ಜನ ಕ್ಚೇತ್ರಕ್ಕೆ ಮೊದಲ ಬಾರಿ ಭೇಟಿ ನೀಡಿದ್ದು, ನಿಜಕ್ಕೂ ನನಗೆ ಸಿಕ್ಕಿದ ಭಾಗ್ಯ ಎಂದು ಅವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ʼಕರಿ ಹೈದ ಕರಿಯಜ್ಜʼ ಚಿತ್ರದ 99 ಶೇಕಡಾ ಚಿತ್ರೀಕರಣ ಸಂಪೂರ್ಣಗೊಂಡಿದ್ದು, ಏಪ್ರಿಲ್, ಮೇ ತಿಂಗಳಲ್ಲಿ ಬಿಡುಗಡೆಗೊಳಿಸಲಾಗುವುದು. ತುಳು, ಕನ್ನಡ, ಮಳಯಾಳಂ ಬಾಷೆಗಳಲ್ಲಿ ಚಿತ್ರ ಮೂಡಿ ಬರಲಿದೆ. ದಕ್ಷಿಣ ಕನ್ನಡದ ಬಂಗಾಡಿ, ಮಡಂತ್ಯಾರ್, ಸೋಮೇಶ್ವರ, ಉಳ್ಳಾಲ ಪ್ರದೇಶಗಳಲ್ಲಿ ಚಿತ್ರೀಕರಣ ನಡೆದಿದ್ದು, ಕೊರಗಜ್ಜನ 800 ವರ್ಷಗಳ ಐತಿಹ್ಯದ ಕಥೆಯನ್ನೇ ಚಿತ್ರದಲ್ಲಿ ಅಳವಡಿಸಲಾಗಿದೆ ಎಂದು ನಿರ್ಮಾಪಕ ತ್ರಿವಿಕ್ರಮ ಸಫಲ್ಯ ಹೇಳಿದ್ದಾರೆ.

ನಟಿ ಶೃತಿಯವರ ಸುಪುತ್ರಿ ಗೌರಿ ಚಿತ್ರತಂಡದ ಜತೆಯಲ್ಲಿದ್ದರು. ಬಳಿಕ ಚಿತ್ರತಂಡವು ನಂದಿಗುಡ್ಡೆ ಕೊರಗಜ್ಜನ ಕ್ಷೇತ್ರಕ್ಕೆ ಹರಕೆಯ ಕೋಲ ನೀಡಲು ತೆರಳಿತು.

ಬುರ್ದುಗೋಳಿ ಕ್ಷೇತ್ರದ ಅಧ್ಯಕ್ಷ ವಿಶ್ವನಾಥ್ ನಾಯ್ಕ್ ಕಲ್ಲಾಪು, ಭಂಡಾರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಪ್ರಮುಖರಾದ ಪ್ರಶಾಂತ್ ಗಟ್ಟಿ ಕಾಯಂಗಳ, ಪುರುಷೋತ್ತಮ ಕಲ್ಲಾಪು, ಪ್ರವೀಣ್ ಎಸ್. ಕುಂಪಲ ಮೊದಲಾದವರು ಉಪಸ್ಥಿತರಿದ್ದರು.

ಪವಾಡಗಳೇ ನಡೆಯಿತು!

ನೇತ್ರಾವತಿ ನದಿ ತಟದಲ್ಲಿ ನಡೆಯುತ್ತಿದ್ದ ಶೂಟಿಂಗ್ ಸೆಟ್ ಗೆ ಹರೇಕಳದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದ ಷೋಲೈಟ್ ಅಡ್ಡಿಯುಂಟು ಮಾಡುತಿತ್ತು. ಎಲ್ಲರೂ ಮೇಕಪ್ ಮಾಡಿ, ದೋಣಿಗಳ ಮೂಲಕ ಶೂಟಿಂಗ್ ನಡೆಸುವಾಗ ಅಡಚಣೆಗಳೇ ಜಾಸ್ತಿಯಾಯಿತು.  ಅಂದು ಶೂಟಿಂಗ್ ನಿಲ್ಲಿಸುತ್ತಿದ್ದಲ್ಲಿ ಲಕ್ಷಾಂತರ ನಷ್ಟವುಂಟಾಗುತಿತ್ತು. ಆದರೆ ಕೊರಗಜ್ಜನನ್ನು ಸ್ಮರಿಸಿದಾಗ ಪವಾಡವೆಂಬಂತೆ ಷೋಲೈಟ್ ಗೆ ಅಡ್ಡವಾಗಿ ದೋಣಿಯೊಂದು ಬಂದು ನಿಂತು ಸೀನ್ ಶೂಟಿಂಗ್ ಅಡಚಣೆಯಿಲ್ಲದೆ ನಡೆಯಿತು. ಇಂತಹ ಪವಾಡಗಳು ಜಿಲ್ಲೆಯ ವಿವಿದೆಡೆ ನಡೆದುಕೊಂಡೇ ಯಶಸ್ವಿಯಾಗಿ ಶೂಟಿಂಗ್ ನಡೆದಿದೆ ಎಂದು ನಿರ್ದೇಶಕ ಅತ್ತಾವರ್ ಪ್ರಾರ್ಥನೆ ವೇಳೆ ತಿಳಿಸಿದರು.

 

ಟಾಪ್ ನ್ಯೂಸ್

1-wrerwer

Shivamogga:ಮಳೆ ಬಂತೆಂದು ಖುಷಿಪಡುತ್ತಿದ್ದ ರೈಲು ಪ್ರಯಾಣಿಕರಿಂದಲೇ ಹಿಡಿಶಾಪ!

Satish Jarkiholi ಫಲಿತಾಂಶ ನಂತರ ಸಂಪುಟ ವಿಸ್ತರಣೆ ಆಗಲ್ಲ

Satish Jarkiholi ಫಲಿತಾಂಶ ನಂತರ ಸಂಪುಟ ವಿಸ್ತರಣೆ ಆಗಲ್ಲ

1-wqewqwqe

Bhatkal;ವೆಂಕಟಾಪುರ ನದಿಯಲ್ಲಿ ಮುಳುಗಿ ಇಬ್ಬರು ಮೃತ್ಯು

1-xdx

Revanna ಮಧ್ಯಂತರ ನಿರೀಕ್ಷಣಾ ಜಾಮೀನು ಮೇ 20 ರ ವರೆಗೆ ವಿಸ್ತರಿಸಿದ ಕೋರ್ಟ್

ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ: ಬೇಳೂರು

Gopal Krishna Belur ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ

20

Sandalwood: ದರ್ಶನ್‌ ʼಡೆವಿಲ್‌ʼಗೆ ಕರಾವಳಿ ಬೆಡಗಿ ರಚನಾ ರೈ ನಾಯಕಿ; ಫಸ್ಟ್‌ ಪೋಸ್ಟರ್‌ ಔಟ್

satish jarakiholi

Belagavi,ಚಿಕ್ಕೋಡಿ ಸೇರಿ 14 ರಿಂದ 17 ಸೀಟು ಕಾಂಗ್ರೆಸ್ ಗೆಲ್ಲಲಿದೆ: ಸತೀಶ್ ಜಾರಕಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

ಲಕ್ಷದ್ವೀಪ ಪ್ರವಾಸೋದ್ಯಮದ ಅವಕಾಶ ಬಳಸಿಕೊಳ್ಳುವಲ್ಲಿ ಮಂಗಳೂರು ಹಿನ್ನಡೆ

Mangaluru: ನಾಪತ್ತೆಯಾಗಿದ್ದ ಮಹಿಳೆ ವಿಮಾನ ನಿಲ್ದಾಣದಲ್ಲಿ ಪ್ರತ್ಯಕ್ಷ!

Mangaluru: ನಾಪತ್ತೆಯಾಗಿದ್ದ ಮಹಿಳೆ ವಿಮಾನ ನಿಲ್ದಾಣದಲ್ಲಿ ಪ್ರತ್ಯಕ್ಷ!

Theft Case: ಮನೆಯಿಂದ ಚಿನ್ನಾಭರಣ ಕಳವು

Theft Case: ಮನೆಯಿಂದ ಚಿನ್ನಾಭರಣ ಕಳವು

Ullal; ಸ್ಕೂಟರ್ ಗಳ ಢಿಕ್ಕಿ; ಸಹಸವಾರ ಮೃತ್ಯು

Ullal; ಸ್ಕೂಟರ್ ಗಳ ಢಿಕ್ಕಿ; ಸಹಸವಾರ ಮೃತ್ಯು

“ಫೆಡೆಕ್ಸ್‌ ಪಾರ್ಸೆಲ್‌’ ಹೆಸರಲ್ಲಿ ಸೈಬರ್‌ ವಂಚಕರಿಂದ “ಗಾಳ’

“ಫೆಡೆಕ್ಸ್‌ ಪಾರ್ಸೆಲ್‌’ ಹೆಸರಲ್ಲಿ ಸೈಬರ್‌ ವಂಚಕರಿಂದ “ಗಾಳ’

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

1-wrerwer

Shivamogga:ಮಳೆ ಬಂತೆಂದು ಖುಷಿಪಡುತ್ತಿದ್ದ ರೈಲು ಪ್ರಯಾಣಿಕರಿಂದಲೇ ಹಿಡಿಶಾಪ!

Satish Jarkiholi ಫಲಿತಾಂಶ ನಂತರ ಸಂಪುಟ ವಿಸ್ತರಣೆ ಆಗಲ್ಲ

Satish Jarkiholi ಫಲಿತಾಂಶ ನಂತರ ಸಂಪುಟ ವಿಸ್ತರಣೆ ಆಗಲ್ಲ

1-wqewqwqe

Bhatkal;ವೆಂಕಟಾಪುರ ನದಿಯಲ್ಲಿ ಮುಳುಗಿ ಇಬ್ಬರು ಮೃತ್ಯು

1-xdx

Revanna ಮಧ್ಯಂತರ ನಿರೀಕ್ಷಣಾ ಜಾಮೀನು ಮೇ 20 ರ ವರೆಗೆ ವಿಸ್ತರಿಸಿದ ಕೋರ್ಟ್

1-qwewqewqe

Governor ಸಹಿ ನಕಲಿ ; ಕೋಟ್ಯಂತರ ರೂ. ವಂಚನೆ: ಕೊರಟಗೆರೆಯ ಜುಬೇರ್ ಅರೆಸ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.