ಹಡಗು ಮುಳಗಡೆ: ಇಬ್ಬರು ಸಾವು; 9 ಮಂದಿ ಪ್ರಜ್ಞಾಹೀನ ಸ್ಥಿತಿ

ದ.ಕೊರಿಯಾ-ಜಪಾನ್‌ ದ್ವೀಪದಲ್ಲಿ ಘಟನೆ

Team Udayavani, Jan 25, 2023, 8:39 PM IST

ಹಡಗು ಮುಳಗಡೆ: ಇಬ್ಬರು ಸಾವು; 9 ಮಂದಿ ಪ್ರಜ್ಞಾಹೀನ ಸ್ಥಿತಿ

ಸಿಯೋಲ್‌ : ದಕ್ಷಿಣ ಕೊರಿಯಾ ಹಾಗೂ ಜಪಾನ್‌ ನಡುವಿನ ಜೆಜು ದ್ವೀಪ ಪ್ರದೇಶದಲ್ಲಿ ಸಂಚರಿಸುತ್ತಿದ್ದ ಸರಕು-ಸಾಗಣೆ ಹಡಗೊಂದು ಮುಳುಗಡೆಗೊಂಡಿದ್ದು, 22 ಸಿಬ್ಬಂದಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

12 ಮಂದಿಯನ್ನು ಪಾರು ಮಾಡಲಾಗಿದ್ದು, ಉಳಿದ 8 ಮಂದಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಜಪಾನಿನ ನಾಗಸಾಕಿಯಿಂದ 160 ಕಿ.ಮೀ ಹಾಗೂ ದ. ಕೊರಿಯಾದಿಂದ 150 ಕಿ.ಮೀ.

ದೂರದಲ್ಲಿರುವ ದ್ವೀಪ ಪ್ರದೇಶದಲ್ಲಿ ಬುಧವಾರ ಹಡಗು ಮುಳುಗಡೆಯಾಗಿದ್ದು, ಪ್ರದೇಶದಲ್ಲಿ ತೀವ್ರ ಗಾಳಿಯಿದ್ದ ಕಾರಣ ಪಾರುಗಾಣಿಕಾ ಕಾರ್ಯಾಚರಣೆಗೆ ವಿಮಾನಗಳು ಹಾಗೂ ನೌಕೆಗಳು ಧಾವಿಸಲು ತಡವಾಗಿದೆ.

22 ಮಂದಿಯ ಪೈಕಿ 14 ಮಂದಿಯನ್ನು ಪಾರು ಮಾಡಲಾಗಿತ್ತಾದರೂ, ಅವರಲ್ಲಿ 9 ಮಂದಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಕಾರಣ ಜಪಾನ್‌ಗೆ ಏರ್‌ಲಿಫ್ಟ್ ಮಾಡಲಾಗುತ್ತಿತ್ತು. ಈ ವೇಳೆ ಮಾರ್ಗಮಧ್ಯದಲ್ಲಿ ಇಬ್ಬರು ಮೃತಪಟ್ಟಿರುವುದು ದೃಢವಾಗಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ಇರುವವರು ಜೀವಂತವಿರುವರೇ ಎಂಬುದನ್ನು ಇನ್ನೂ ಸಿಬ್ಬಂದಿ ತಿಳಿಸಿಲ್ಲ.

ಹಡಗಿನಲ್ಲಿದ್ದ ಸಿಬ್ಬಂದಿ ಪೈಕಿ 14 ಮಂದಿ ಚೀನಾ ಪ್ರಜೆಗಳಿದ್ದು, ಅವರಲ್ಲಿ 5 ಮಂದಿಯನ್ನು ಪಾರು ಮಾಡಲಾಗಿದೆ. ಅವರು ಜೀವಂತವಾಗಿದ್ದಾರೆ. 8 ಮಂದಿ ಮ್ಯಾನ್ಮಾರ್‌ ಮೂಲದವರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಣೆಯಾಗಿರುವ ಸಿಬ್ಬಂದಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. 6,551 ಟನ್‌ ತೂಕವಿದ್ದ ಜಿನ್‌ ಟಿಯಾನ್‌ ಎನ್ನುವ ಹಡಗು ಮುಳುಗಡೆಯಾಗಿದೆ ಎನ್ನಲಾಗಿದ್ದು, ಇದು ಹಾಂಗ್‌ ಕಾಂಗ್‌ ಮೂಲದ ಲಾಂಗ್‌ ಬ್ರೈಟ್‌ ಶಿಪ್ಪಿಂಗ್‌ ಲಿಮಿಟೆಡ್‌ ಸಂಸ್ಥೆಗೆ ಸೇರಿದ್ದು ಎನ್ನಲಾಗಿದೆ.

ಸಂಕಷ್ಟ ಕರೆ ಬಂದ ಬಳಿಕ ಮುಳುಗಡೆ
ಮಂಗಳವಾರ ತಡರಾತ್ರಿ 11.15ರ ಸಮಯಕ್ಕೆ ಹಡಗಿನಿಂದ ಕರಾವಳಿ ಭದ್ರತಾಪಡೆಗೆ ಅಪಾಯದ ಕರೆ ಬಂದಿದೆ. ಆದರೆ, ಪ್ರದೇಶದಲ್ಲಿ ಗಂಟೆಗೆ 56 ಕಿ.ಮೀ ವೇಗದಲ್ಲಿ 13 ಅಡಿ ಎತ್ತರದಲ್ಲಿ ಗಾಳಿ ಬೀಸುತ್ತಿದ್ದ ಕಾರಣ, ಅಲರ್ಟ್‌ ನೀಡಿದದ ಹಿನ್ನೆಲೆ ಪಾರುಗಾಣಿಕೆ ಕಾರ್ಯಾಚರಣೆಗೆ ತೆರಳಲು ಸಾಧ್ಯವಾಗಿಲ್ಲ. ಬುಧವಾರ ಬೆಳಗ್ಗಿನ ಜಾವ 2.41ರ ಸಮಯಕ್ಕೆ ಹಡಗಿನ ಕ್ಯಾಪ್ಟನ್‌, ಸ್ಯಾಟ್‌ಲೆçಟ್‌ ಕರೆ ಮಾಡಿದ್ದು, ಹಡಗು ಮುಳುಗುತ್ತಿರುವ ಹಿನ್ನೆಲೆ ಸಿಬ್ಬಂದಿ ದ್ವೀಪಕ್ಕೆ ಜಿಗಿಯಲು ನಿರ್ಧರಿಸಿದ್ದಾರೆ ಎಂದು ಕೊನೆಯ ಸಂವಹನ ನಡೆಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

-ದ್ವೀಪದಲ್ಲಿ ಕಾರ್ಗೋ ಹಡಗು ಮುಳುಗಡೆ
– 14 ಚೀನಿ, 8ಮ್ಯಾನ್ಮಾರ್‌ ಪ್ರಜೆಗಳಿದ್ದ ಹಡಗು
– 5 ಚೀನಿಯರು ಅಪಾಯದಿಂದ ಪಾರು
– ತೀವ್ರ ಗಾಳಿ ಹಿನ್ನೆಲೆ ಮುಳುಗಡೆ ಸಾಧ್ಯತೆ

 

 

ಟಾಪ್ ನ್ಯೂಸ್

1-qweqqweqwe

ಲೈಂಗಿಕ ಕಿರುಕುಳದೂರು ರಾಜಕೀಯ ಪ್ರೇರಿತ: ಪ.ಬಂಗಾಲ ಗವರ್ನರ್‌

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Malpe ದಕ್ಕೆಯಲ್ಲಿ ನೀರಿಗೆ ಬಿದ್ದು ಸಾವು: ದೂರು ದಾಖಲು

Malpe ದಕ್ಕೆಯಲ್ಲಿ ನೀರಿಗೆ ಬಿದ್ದು ಸಾವು: ದೂರು ದಾಖಲು

bjpRoad Mishap ಉಳ್ಳಾಲ: ಬಿಜೆಪಿ ಕಾರ್ಯಕರ್ತ ಸಾವು

Road Mishap ಉಳ್ಳಾಲ: ಬಿಜೆಪಿ ಕಾರ್ಯಕರ್ತ ಸಾವು

Uppinangady ಹೃದಯಾಘಾತ; ಯುವಕ ಸಾವು

Uppinangady ಹೃದಯಾಘಾತ; ಯುವಕ ಸಾವು

IND VS PAK

ಪಾಕ್‌ಗೆ ರಾಜತಾಂತ್ರಿಕ ಸಭ್ಯತೆ ಇಲ್ಲ: ಭಾರತ ಕಿಡಿ

Kadaba ಪತಿಯ ಕಿರುಕುಳ ತಾಳಲಾರದೆ ಪತ್ನಿ ಆತ್ಮಹತ್ಯೆ

Kadaba ಪತಿಯ ಕಿರುಕುಳ ತಾಳಲಾರದೆ ಪತ್ನಿ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IND VS PAK

ಪಾಕ್‌ಗೆ ರಾಜತಾಂತ್ರಿಕ ಸಭ್ಯತೆ ಇಲ್ಲ: ಭಾರತ ಕಿಡಿ

ಲೇಸರ್‌ ಸಂವಹನ: ಭೂಮಿಗೆ 14 ಕೋಟಿ ಮೈಲು ದೂರದಿಂದ ಸಂದೇಶ ರವಾನೆ

ಲೇಸರ್‌ ಸಂವಹನ: ಭೂಮಿಗೆ 14 ಕೋಟಿ ಮೈಲು ದೂರದಿಂದ ಸಂದೇಶ ರವಾನೆ

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌ ಸಾವು

Joe Biden: ವಲಸಿಗರನ್ನು ಸ್ವೀಕರಿಸದ ಕಾರಣ ಭಾರತದ ಆರ್ಥಿಕ ಪ್ರಗತಿ ಕುಂಠಿತ: ಬೈಡೆನ್‌

Joe Biden: ವಲಸಿಗರನ್ನು ಸ್ವೀಕರಿಸದ ಕಾರಣ ಭಾರತದ ಆರ್ಥಿಕ ಪ್ರಗತಿ ಕುಂಠಿತ: ಬೈಡೆನ್‌

China: ಭಾರೀ ಮಳೆಗೆ ಕುಸಿದ ಹೈವೇ: ಚೀನಾದಲ್ಲಿ ಕನಿಷ್ಠ 48 ಸಾವು

China: ಭಾರೀ ಮಳೆಗೆ ಕುಸಿದ ಹೈವೇ: ಚೀನಾದಲ್ಲಿ ಕನಿಷ್ಠ 48 ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqqweqwe

ಲೈಂಗಿಕ ಕಿರುಕುಳದೂರು ರಾಜಕೀಯ ಪ್ರೇರಿತ: ಪ.ಬಂಗಾಲ ಗವರ್ನರ್‌

Supreme Court

ಒಂದೇ ಹೆಸರಿರುವ ಅಭ್ಯರ್ಥಿಗಳ ಸ್ಪರ್ಧೆಗೆ ನಿಷೇಧ ಇಲ್ಲ: ಸುಪ್ರೀಂ

1-ewqeqewq

Eknath Shinde ಬಣ ಶಿವಸೇನೆ ಸೇರಿದ ಮಾಜಿ ಸಂಸದ ಸಂಜಯ ನಿರುಪಮ್‌

2000

2,000 ರೂ.ನ 97.76% ನೋಟು ವಾಪಸ್‌: ಆರ್‌ಬಿಐ

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.