ರೈತರ ಕೈಹಿಡಿದ ತರಕಾರಿ, ಹೂ-ಹಣ್ಣು

Team Udayavani, Jan 26, 2023, 4:15 PM IST

ರೈತರ ಕೈಹಿಡಿದ ತರಕಾರಿ, ಹೂ-ಹಣ್ಣು

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆ ಬಯಲುಸೀಮೆ ಪ್ರದೇಶವಾಗಿದ್ದು, ಬೆಂಗಳೂರು ಮತ್ತು ಇತರೆ ಕಡೆಗೆ ಹಣ್ಣು, ತರಕಾರಿ ಹೂವು ನೀಡುತ್ತಿದೆ. ಹಣ್ಣು, ತರಕಾರಿ, ಹೂವು ಬೆಳೆದು ರೈತರು ತಮ್ಮ ನಿತ್ಯ ಕಾಯಕ ಮಾಡುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳ ಪ್ರದೇಶ ಹೆಚ್ಚಳವಾಗುತ್ತಿದೆ.

2022ರಲ್ಲಿ ಒಟ್ಟು 1,250 ಎಕರೆ ತೋಟಗಾರಿಕೆ ಪ್ರದೇಶ ಹೆಚ್ಚಳವಾಗಿದ್ದು, ಜಿಲ್ಲೆಯ ಒಟ್ಟು ತೋಟಗಾರಿಕೆ ಬೆಳೆ ವ್ಯಾಪ್ತಿ 30, 818 ಹೆಕ್ಟೇರ್‌ ಪ್ರದೇಶವಾಗಿದೆ. ತೋಟಗಾರಿಕೆಗೆ ಉದ್ಯೋಗ ಖಾತ್ರಿ ಯೋಜನೆಯಡಿ ಅನುದಾನ ಲಭ್ಯವಾಗುವುದರಿಂದ ರೈತರಿಗೆ ಸಾಕಷ್ಟು ಅನುಕೂಲ ಆಗುತ್ತಿದೆ. ಮಳೆಯಾಶ್ರಿತ ಪ್ರದೇಶವಾ ಗಿರುವುದರಿಂದ ಜಿಲ್ಲೆಯ 4 ತಾಲೂಕುಗಳಲ್ಲಿ ಯಾವುದೇ ನದಿ, ನಾಲೆ ಇಲ್ಲದೆ ಬೋರ್‌ವೆಲ್‌ಗ‌ಳ ಮೇಲೆ ಅವಲಂಬಿತವಾಗಿ ತೋಟಗಾರಿಕೆ ಬೆಳೆ ಬೆಳೆಯುತ್ತಿದ್ದಾರೆ.

ತೋಟಗಾರಿಕೆಯತ್ತ ಹೆಚ್ಚಿನ ಆಕರ್ಷಣೆ: ರಾಜಧಾನಿ ಗಡಿ ಯಲ್ಲಿದ್ದರೂ ಗ್ರಾಮಾಂತರದಲ್ಲಿ ಕೃಷಿಗೆ ಪ್ರಾಮುಖ್ಯತೆ ಇದೆ. ಅದರಲ್ಲೂ ದೇವನ ಹಳ್ಳಿಯ ಚಕ್ಕೋತಾ, ದ್ರಾಕ್ಷಿ, ದೊಡ್ಡಬಳ್ಳಾಪುರ ತೂಬ ಗೆರೆ ಹಲಸಿಗೆ ರಾಜ್ಯದಲ್ಲಿ ಹೆಚ್ಚಿನ ಬೇಡಿಕೆ ಇದೆ. ಈ ನಡುವೆ ಕೊರೊನಾ ನಂತರ ಯುವಕರು ಸೇರಿದಂತೆ ರೈತರು ತೋಟಗಾರಿಕೆಯತ್ತ ಹೆಚ್ಚಿನ ಆಕರ್ಷಣೆ ಹೊಂದುತ್ತಿದ್ದಾರೆ. ವಾತಾವರಣದ ವೈಪರೀತ್ಯ, ಮಳೆ, ಕೂಲಿ, ಬಂಡವಾಳ ಸಮಸ್ಯೆಗಳಿಂದ ಕೃಷಿ ಬೆಳೆಗಳಾದ ರಾಗಿ, ಭತ್ತಕ್ಕಿಂತ ಹೆಚ್ಚಾಗಿ ತರಕಾರಿ, ಹಣ್ಣು ಮತ್ತು ಹೂವು ಬೆಳೆಯಲು ಆಸಕ್ತಿ ವಹಿಸುತ್ತಿದ್ದಾರೆ. ಇದು ತೋಟಗಾರಿಕೆ ವ್ಯಾಪ್ತಿಯ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

ಹಣ್ಣುಗಳು ಫೇಮಸ್ಸು: ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಹಣ್ಣುಗಳು ಹೆಸರುವಾಸಿಯಾಗಿವೆ. ದೇವನಹಳ್ಳಿ ತಾಲೂಕಿನ ಬೆಂಗಳೂರು ಬ್ಲೂ ದ್ರಾಕ್ಷಿ ರಾಜ್ಯ ದೆಲ್ಲೆಡೆ ಮಾರುಕಟ್ಟೆ ಹೊಂದಿದೆ. ಜತೆಗೆ ಚಕ್ಕೋತಾ ಕೂಡ ಜನರ ಮೆಚ್ಚುಗೆ ಪಡೆದಿದೆ. ದೊಡ್ಡ ಬಳ್ಳಾಪುರ ತಾಲೂಕಿಗೆ ಬಂದರೆ ತೂಬಗೆರೆ ಗ್ರಾಮದ ಹಲ ಸು ರಾಷ್ಟ್ರಕ್ಕೆ ಫೇಮ ಸ್‌. ಕರಾವಳಿ ಜಿಲ್ಲೆಗಳ ಲ್ಲಿಯೂ ತೂಬಗೆರೆ ರುದ್ರಾಕ್ಷಿ, ಚಂದ್ರ, ಶಿವರಾತ್ರಿ ಹಲಸು ಗಳಿಗೆ ತನ್ನದೇ ಅದ ಸ್ಥಾನವಿದೆ. ಇದಲ್ಲದೆ ದಾಳಿಂಬೆ, ವಿದೇಶಿ ಹಣ್ಣಾದ ಡ್ರಾಗನ್‌ ಫ್ರೂಟ್‌ನ ಸವಿ ಕೂಡ ಮೆಚ್ಚುಗೆ ಪಡೆದಿದೆ.

ಗುಲಾಬಿ ಕಂಪು: ಅಂತಾರಾಷ್ಟ್ರಿಯ ವಿಮಾಣ ನಿಲ್ದಾಣ ಹೊಂದಿರುವ ಜಿಲ್ಲೆಯಲ್ಲಿ ಹೂವುಗಳಿಗೆ ಭಾರೀ ಬೇಡಿ ಕೆಯಿದೆ. ಅದರಲ್ಲೂ ಗುಲಾಬಿ, ಜರ್ಬರಾ ಡಿಮ್ಯಾಂಡ್‌ ಇದೆ.. ಜಿಲ್ಲೆಯಲ್ಲಿ ಬೆಳೆಯಲಾದ ಹೂವು ಗಳಿಗೆ ದೇಶ, ವಿದೇಶಗಳಲ್ಲೂ ವ್ಯಾಪಕ ಬೇಡಿಕೆಯಿದೆ. ಹೂವು ಬೆಳೆಗಾರರ ಸಂಖ್ಯೆ ಕೂಡ ಹೆಚ್ಚಾಗಿದೆ.

1,250 ಎಕರೆ ವ್ಯಾಪ್ತಿ ಹೆಚ್ಚಳ: ಬಯಲುಸೀಮೆ ಜಿಲ್ಲೆಗಳಲ್ಲಿ ಒಂದಾದ ಬೆಂಗಳೂರು ಗ್ರಾಮಾಂತರದಲ್ಲಿ ಪ್ರಸ್ತುತ ವರ್ಷಗಳಲ್ಲಿ ರೈತರು ತೋಟಗಾರಿಕೆ ಬೆಳೆಗಳಿಗೆ ಹೆಚ್ಚಿನ ಪ್ರಾಶಸ್ತ ನೀಡುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ತೋಟಗಾರಿಕೆ ಬೆಳೆ ವ್ಯಾಪ್ತಿ ವಿಸ್ತರಿಸಲಾಗಿದೆ. ಕಳೆದ ಒಂದು ವರ್ಷದಲ್ಲಿ 1,250 ಎಕರೆಯಷ್ಟು ಬೆಳೆಯ ಪ್ರದೇಶ ಹೆಚ್ಚಳಗೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ತೋಟಗಾರಿಕೆ ಪ್ರದೇಶದ ವಿಸ್ತೀರ್ಣ 30.818 ಹೆಕ್ಟೇರ್‌ಗೆ ಏರಿಕೆ ಕಂಡಿದೆ.

ನರೇಗಾ ಯೋಜನೆಯಡಿ ಪ್ರೋತ್ಸಾಹ: ನರೇಗಾ ಯೋಜನೆಯಡಿ ತೋಟಗಾರಿಕೆ ಬೆಳೆಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತಿದೆ. ಬೆಳೆಗಳ ವ್ಯಾಪ್ತಿ ಹೆಚ್ಚಳಕ್ಕೂ ನರೇಗಾ ನೆರವಾಗುತ್ತಿದ್ದು, ಜತೆಗೆ ಮಾವು, ದ್ರಾಕ್ಷಿ, ಸೀಬೆ, ಬಾಳೆ, ವೀಳ್ಯೆದೆಲೆಯಂತಹ ಬಹು ವಾರ್ಷಿಕ ಬೆಳೆಗಳಿಗೆ ಅಗತ್ಯ ಕೂಲಿ, ಸಾಮಗ್ರಿಗಳ ಸೇರಿ ದಂತೆ ವಿವಿಧ ಕೆಲಸಗಳಿಗೆ ನೆರವಾಗಲು ಪ್ರೋತ್ಸಾಹ ಧನವನ್ನು ನರೇಗಾದಡಿ ಬೆಳೆಯಲಾಗುತ್ತಿದೆ.

ರೈತರ ವಿರೋಧದ ನಡುವೆ ಕೆಐಎಡಿಬಿ ಸಂಸ್ಥೆಯಿಂದ ಜಿಲ್ಲೆಯಲ್ಲಿ 3,000 ಎಕರೆ ಭೂಸ್ವಾಧೀನ ಪ್ರಕ್ರಿಯೆ : ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ಕೆಐಎಡಿಬಿ(ಕರ್ನಾಟಕ ಕೈಗಾರಿಕೆ ಪ್ರದೇಶ ಅಭಿವೃದ್ಧಿ ನಿಗಮ) ವತಿಯಿಂದ ಭೂಸ್ವಾಧೀನ ಪ್ರಕ್ರಿಯೆ ಮಾಡುತ್ತಿದ್ದು, ಆ ಭಾಗದಲ್ಲಿ ಪಲವತ್ತಾದ ಭೂಮಿಗಳಲ್ಲಿ ತರಕಾರಿ, ಹಣ್ಣು, ಹೂವುಗಳನ್ನು ರೈತರು ಬೆಳೆಯುತ್ತಿದ್ದಾರೆ. ಭೂಸ್ವಾಧೀನ ಪ್ರಕ್ರಿಯೆಗಳಿಂದ ರೈತರ ಫ‌ಲವತ್ತಾದ ಭೂಮಿ ಕೈಗಾರಿಕೆ ಮತ್ತು ಇತರೆ ಉದ್ದೇಶಗಳಿಗೆ ಹೋಗುತ್ತಿರುವುದು ರೈತರಲ್ಲಿ ಆತಂಕ ಮನೆ ಮಾಡಿದೆ. ಚನ್ನರಾಯಪಟ್ಟಣ ಹೋಬಳಿಯ ಫ‌ಲವತ್ತಾದ ಭೂಮಿಗಳಲ್ಲಿ ದ್ರಾಕ್ಷಿ, ಮಾವು, ಸಪೋಟಾ, ದಾಳಿಂಬೆ ಮತ್ತು ತರಕಾರಿ ಬೆಳೆಗಳಾದ ಹೂಕೋಸು, ಆಲೂಗಡ್ಡೆ, ಟೊಮೆಟೋ, ಹುರಳಿ, ಕ್ಯಾರೆಟ್‌ ಹಾಗೂ ರೋಜ್‌ ಮತ್ತಿತರ ಬೆಳೆಗಳನ್ನು ಬೆಳೆದು ತಮ್ಮ ಜೀವನ ಸಾಗಿಸುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 3000 ಸಾವಿರ ಎಕೆರೆ ಭೂಸ್ವಾಧೀನ ಪ್ರಕ್ರಿಯೆಗೆ ಮುಂದಾಗಿದ್ದು, ಚನ್ನರಾಯಪಟ್ಟಣದಲ್ಲಿ ಕೆಐಡಿಬಿಯು ಭೂಸ್ವಾಧೀನ ಪ್ರಕ್ರಿಯೆ ಕೈಬಿಡಬೇಕೆಂದು ಒತ್ತಾಯಿಸಿ ಈಗಾಗಲೇ ನಿರಂತರವಾಗಿ ಧರಣಿಗಳು ನಡೆಯುತ್ತಿವೆ.

ಜಿಲ್ಲೆಯಲ್ಲಿ ಅಡಕೆ ಘಮಲು : ಮಲೆನಾಡ ಜಿಲ್ಲೆಗಳಿಗೆ ಸೀಮಿತವಾದ ಅಡಕೆ ಕೋವಿಡ್‌ ನಂತರ ಹಾಗೂ ಕಳೆದೆರಡು ವರ್ಷಗಳ ಉತ್ತಮ ಮಳೆಯ ಕಾರಣದಿಂದ ಬಯಲು ಸೀಮೆ ಜಿಲ್ಲೆಗಳಿಗೆ ವ್ಯಾಪಿಸಿದೆ. ಅಡಕೆ ಬೆಳೆಯಲು ಇಲಾಖೆಯಿಂದ ಯಾವುದೇ ನೆರವು ಸಿಗದಿದ್ದರೂ, ದೇವನಹಳ್ಳಿ, ದೊಡ್ಡಬಳ್ಳಾಪುರದ ಸಾಸಲು, ಕೊಟ್ಟಿಗೆ ಮಾಚೇನಹಳ್ಳಿ ಸೇರಿದಂತೆ ಅನೇಕ ಕಡೆಗಳಲ್ಲಿ ರೈತರು ಮಲೆನಾಡಿ ಭಾಗಗಳಿಂದ ಸಸಿಗಳು ತರಿಸಿ ನೆಡುತ್ತಿದ್ದು, ಅದರ ವ್ಯಾಪ್ತಿ ಕೂಡ ನಿಧಾನವಾಗಿ ಹೆಚ್ಚುತ್ತಾ ಸಾಗಿದೆ.

ಜಿಲ್ಲೆಯ ಪ್ರಮುಖ ಬೆಳೆಗಳು :

„ ಗುಲಾಬಿ, ಜರ್ಬರಾ, ಸೇವಂತಿಗೆ, ಸುಗಂಧರಾಜ, ಕನಕಾಂಬರ

„ ಮಾವು, ದ್ರಾಕ್ಷಿ, ದಾಳಿಂಬೆ, ಬಾಳೆ, ಡ್ರಾಗನ್‌ ಫ್ರೂಟ್‌

„ ಟೊಮೆಟೋ, ಹೀರೇಕಾಯಿ, ಹಾಗಲಕಾಯಿ, ಹುರಳಿಕಾಯಿ

ಬೆಂ.ಗ್ರಾ.ಜಿಲ್ಲೆಯಲ್ಲಿ ತೋಟಗಾರಿಕಾ ಬೆಳೆ ವ್ಯಾಪ್ತಿ ಹೆಚ್ಚಳವಾಗಿದೆ. ಮಾವು, ಹಲಸು, ಡ್ರಾಗನ್‌ ಫ್ರೂಟ್‌ ಬೆಳೆಯಲು ನರೇಗಾದಡಿ ಅವಕಾಶವಿದೆ.  ಜಿಲ್ಲೆಯಲ್ಲಿ ಇತ್ತೀಚೆಗೆ ಅಡಕೆ ವ್ಯಾಪ್ತಿ ಕೂಡ ಹೆಚ್ಚಳ ಆಗುತ್ತಿದೆ. -ಗುಣವಂತ್‌, ಉಪನಿರ್ದೇಶಕ ತೋಟಗಾರಿಕೆ ಇಲಾಖೆ

-ಎಸ್‌. ಮಹೇಶ್‌

ಟಾಪ್ ನ್ಯೂಸ್

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

LPG Cylinder: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.

LPG Cylinder: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್‌ಗೆ 48 ಗಂಟೆ ಪ್ರಚಾರ ನಿಷೇಧ

Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್‌ಗೆ 48 ಗಂಟೆ ಪ್ರಚಾರ ನಿಷೇಧ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Devanahalli: ಬೇಸಿಗೆ ಬಿಸಿ; ಹುರುಳಿಕಾಯಿ ದರ ದುಬಾರಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

LPG Cylinder: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.

LPG Cylinder: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್‌ಗೆ 48 ಗಂಟೆ ಪ್ರಚಾರ ನಿಷೇಧ

Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್‌ಗೆ 48 ಗಂಟೆ ಪ್ರಚಾರ ನಿಷೇಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.