ರೈತ ಸಭೆ: ನಿಗದಿತ ಸಮಯಕ್ಕೆ ಬಾರದ ಅಧಿಕಾರಿಗಳು


Team Udayavani, Mar 6, 2023, 2:35 PM IST

tdy-9

ಮಾಗಡಿ: ತಾಲೂಕು ಕಚೇರಿಯಲ್ಲಿ ನಡೆದ ರೈತರ ಸಭೆಗೆ ಅಧಿಕಾರಿಗಳು ನಿಗದಿತ ಸಮಯ ಮೀರಿ ಎರಡು ಗಂಟೆಯಾದರೂ ಬಾರದ ಹಿನ್ನಲೆ, ರೈತ ಸಂಘದ ಪದಾಧಿಕಾರಿಗಳು ಸಭೆ ಬಹಿಷ್ಕರಿಸಿ ಹೊರ ನಡೆಯುವ ವೇಳೆ ತಹಶೀಲ್ದಾರ್‌ ಸುರೇಂದ್ರಮೂರ್ತಿ ರೈತರನ್ನು ಮನವೊಲಿಸಿ ಸಭೆ ನಡೆಸಿದರು.

ತಾಲೂಕು ಕಚೇರಿ ಸಭಾಂಗಣದಲ್ಲಿ ನಿಗದಿಯಾಗಿದ್ದ ಸಭೆಗೆ ತಹಶೀಲ್ದಾರ್‌ ಒರತು ಪಡಿಸಿ ಬೆಸ್ಕಾಂ ಎಇಇ, ಆರೋಗ್ಯಾಧಿಕಾರಿ, ಕೆಎಸ್‌ಆರ್‌ಟಿಸಿ ಮ್ಯಾನೇಜರ್‌, ಅಬಕಾರಿ ಅಧಿಕಾರಿಗಳು ಎರಡು ಗಂಟೆ ಸಮಯ ಕಳೆದರೂ, ಬಾರದ ನಿಟ್ಟಿನಲ್ಲಿ ರೈತ ಸಂಘದ ಅಧ್ಯಕ್ಷ ಲೋಕೇಶ್‌ ಸೇರಿದಂತೆ ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ಅಧ್ಯಕ್ಷ ಲೋಕೇಶ್‌ ಮಾತನಾಡಿ, ಭರ್ಗಾವತಿ ಕೆರೆಗೆ ಕಲುಷಿತ ನೀರು ಸೇರುತ್ತಿದ್ದು, ಎಂಎಸ್‌ಐಎಲ್‌ಗ‌ಳಲ್ಲಿ ಅಕ್ರಮ, ನಕಲಿ ಮದ್ಯ ಮತ್ತು ಪ್ರತಿ ಗ್ರಾಮಗಳಲ್ಲಿ ಮದ್ಯ ಮಾರಾಟ ನಡೆಯುತ್ತಿದೆ. ಇದರಿಂದ ಇತ್ತೀಚೆಗೆ ಒರ್ವ ನಿಧನರಾಗಿದ್ದಾರೆ. ಮಾಗಡಿ-ತಾಳೇಕೆರೆಯವರೆಗೆ ಆವೈಜ್ಞಾನಿಕ ಕೆಶಿಫ್ ರಸ್ತೆ ನಿರ್ಮಾಣದಿಂದ ಪ್ರಾಣ ಹಾನಿ ನಡೆಯುತ್ತಿದ್ದು, ಈ ರಸ್ತೆಗಾಗಿ ಆ್ಯಂಬುಲೆನ್ಸ್‌ ನಿಗದಿಪಡಿಸುವಂತಾಗಿದೆ ಎಂದು ಆರೋಪಿಸಿದರು.

ಮಾಗಡಿ-ಕುಣಿಗಲ್‌ ಮಾರ್ಗದಲ್ಲಿ ವಿದ್ಯಾರ್ಥಿಗಳು ಕಾಲೇಜಿಗೆ ತೆರಳುವ ವೇಳೆ ಸರ್ಕಾರಿ ಬಸ್‌ ಇಲ್ಲದೆ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ. ಕೃಷಿ ಇಲಾಖೆಯಲ್ಲಿ 50 ಮಂದಿಗೆ ಮಾತ್ರ ಬೆಳೆವಿಮೆ ಮಾಡಿಸಿದ್ದು, ಉಳಿದವರಿಗೆ ಮಾಡಿಸದ ಕಾರಣ ಬೆಳೆ ಹಾನಿಯಿಂದ ನಷ್ಟ ಅನುಭವಿಸುತ್ತಿದ್ದಾರೆ. ರೆಕಾರ್ಡ್‌ ರೂಂನಲ್ಲಿರುವ ಹಳೆಯ ದಾಖಲೆಗಳನ್ನು ಹಣ ನೀಡಿದವರಿಗೆ ದಾಖಲೆ ಮಾಡಿಕೊಡುತ್ತಿದ್ದಾರೆ. 3 ವರ್ಷದಿಂದ ಬೆಸ್ಕಾಂ ಒಂದು ಟೀಸಿ ಅಳವಡಿಸಿಲ್ಲ: 3 ವರ್ಷದಿಂದ ಬೆಸ್ಕಾಂ ಒಂದು ಟೀಸಿ ಅಳವಡಿಸಿಲ್ಲ. 40 ವರ್ಷದಿಂದ ಉಳುಮೆ ಮಾಡಿಕೊಂಡು ಬಂದಿ ರುವ ರೈತರನ್ನು ಒಕ್ಕಲೆಬ್ಬಿಸುತ್ತಿದ್ದಾರೆ. ಇದರಿಂದ ಅನ್ನ ದಾತನ ಹೊಟ್ಟೆಯ ಮೇಲೆ ಹೊಡೆಯುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಎಂದು ಆರೋಪಿಸಿದರು.

ಮಾ. 6ರಂದು ಸೋಮೇಶ್ವರ ಕಾಲೋನಿ ಬಳಿ ರಸ್ತೆ ತಡೆದು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ಹಿನ್ನೆಲೆ ತಹಶೀಲ್ದಾರ್‌ ಅಧಿಕಾರಿಗಳ-ರೈತರ ಸಭೆ ಕರೆದಿದ್ದು ತಹಶೀಲ್ದಾರ್‌ ಅವರ ಆದೇಶಕ್ಕೆ ಅಧಿಕಾರಿಗಳಿಗೆ ಕಿಮ್ಮತ್ತು ಇಲ್ಲದಂತಾಗಿ ಬಹುತೇಕ ಅಧಿಕಾರಿಗಳು ಸಭೆಗೆ ಭಾಗವಹಿಸದೆ ರೈತರನ್ನು ನಿರ್ಲಕ್ಷ್ಯಸಿದ್ದು, ನಮ್ಮ ಕುಂದುಕೊರತೆ ಶೀಘ್ರವೇ ಬಗೆಹರಿಸುವುದಾಗಿ ತಹಶೀಲ್ದಾರ್‌ ಭರವಸೆ ನೀಡಿದ್ದು , ಭರವಸೆಯಾಗೆ ಉಳಿದರೆ ರಸ್ತೆ ತಡೆದು ಬೃಹತ್‌ ಪ್ರತಿಭಟನೆ ನಡೆಸುವುದಾಗಿ ರೈತರು ಎಚ್ಚರಿಸಿದರು.

ಕಾಡುಪ್ರಾಣಿಗಳ ಹಾವಳಿ: ರೈತ ಮುಖಂಡ ಬೈರೇ ಗೌಡ ಮಾತನಾಡಿ, ಕಾಡುಪ್ರಾಣಿಗಳಿಗೆ ಬಲಿಯಾಗುವ ರೈತರ ಕುರಿ, ಮೇಕೆ, ಹಸುಗಳಿಗೆ ಅರಣ್ಯ ಇಲಾಖೆ ಮಕ್ಕಿಕಾಮಕ್ಕಿ ಪರಿಹಾರ ನೀಡುತ್ತಿದೆ. ರೈತರು ಉಳುಮೆ ಮಾಡುವ ಜಮೀನಿನ ಬಳಿ ಕಂದಾಯ ಅಧಿಕಾರಿಗಳು ತೆರಳದಂತೆ ಅರಣ್ಯಾಧಿಕಾರಿ ಗೀತಾಂಜಲಿ ಆದೇಶಿಸಿದರೂ, ಕಿಮ್ಮತ್ತು ಇಲ್ಲದಂತಾಗಿದೆ. ಗ್ರಾಮ ಮತ್ತು ಶಾಲೆಗಳ ಬಳಿ ಪ್ರತ್ಯಕ್ಷದಿಂದ ರೈತರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯಬೀತರಾಗಿದ್ದಾರೆ ಎಂದು ಆರೋಪಿಸಿದರು.

ರೈತರ ಎಲ್ಲಾ ಸಮಸ್ಯೆಗೆ ಪರಿಹಾರ: ತಹಶೀಲ್ದಾರ್‌ ಜಿ. ಸುರೇಂದ್ರ ಮೂರ್ತಿ ಮಾತನಾಡಿ, ಕಾನೂನು ರೀತಿ ಪರಿಶೀಲನೆ ಮಾಡಿ ಅರ್ಹ ಫ‌ಲಾನುಭವಿಗಳಿಗೆ ಉಳುಮೆ ಚೀಟಿ ನೀಡಲು ಕ್ರಮಕೈಗೊಳ್ಳಲಾಗುವುದು. ರೆಕಾರ್ಡ್‌ ರೂಂನಲ್ಲಿ ನಿರ್ವಹಣೆ ಇಲ್ಲದೆ ರೆಕಾರ್ಡ್ ಗಳು ನಾಶವಾಗಿದ್ದು, ಉಳಿದ ದಾಖಲೆಗಳನ್ನು ನಿರ್ವಹಣೆ ಮಾಡಿ ಜನಸಾಮಾನ್ಯರಿಗೆ ದಾಖಲೆ ಸಿಗುವಂತೆ ಮಾಡಲಾಗುವುದು. ಇಲಾಖೆಯಲ್ಲಿ ಅನಧಿಕೃತವಾಗಿ ಯಾರು ಕೆಲಸ ಮಾಡುತ್ತಿಲ್ಲ. ರೈತರ ಎಲ್ಲಾ ಸಮಸ್ಯೆಗಳನ್ನು ಕೂಡಲೇ ಬಗೆಹರಿಸುವುದಾಗಿ ಭರವಸೆ ನೀಡಿದರು.

ಡಾಬಾಗಳಲ್ಲಿ ಮದ್ಯ ಮಾರಾಟ ಮಾಡಲು ಅನುಮತಿ ಇಲ್ಲ: ಅಬಕಾರಿ ಇಲಾಖೆಯ ಎಂ.ನಾರಾಯಣ್‌ ಮಾತನಾಡಿ, ತಾಲೂಕಿನ ಯಾವುದೇ ಮದ್ಯದಂಗಡಿಗಳಲ್ಲಿ ಎಂಆರ್‌ಪಿ ದರಕ್ಕಿಂತ ಹೆಚ್ಚು ಮಾರಾಟ ಮಾಡುವಂತಿಲ್ಲ, ಡಾಬಾಗಳಲ್ಲಿ ಮದ್ಯ ಮಾರಾಟ ಮಾಡಲು ಅನುಮತಿ ಇಲ್ಲ. ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವರ ವಿರುದ್ಧ ಕೇಸ್‌ ದಾಖಲಿಸಲಾಗಿದ್ದು, ದೂರು ಬಂದ ಸ್ಥಳಕ್ಕೆ ಭೇಟಿ ನೀಡಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದರು.

ಶಿರಸ್ತೆದಾರ್‌ ಶಿವಮೂರ್ತಿ, ಟಿಎಚ್‌ಒ ಎಂ.ಸಿ. ಚಂದ್ರಶೇಖರಯ್ಯ, ಅಕ್ಷರ ದಾಸೋಹ ಗಂಗಾಧರ್‌, ರೈತ ಸಂಘದ ಯುವ ಅಧ್ಯಕ್ಷ ರವಿಕುಮಾರ್‌, ಶಿವಲಿಂಗಯ್ಯ, ನಿಂಗಣ್ಣ, ಜಯಣ್ಣ, ಬುಡಾನ್‌ ಸಾಬ್‌, ದಿವಾಕರ, ಮುನಿರಾಜು, ರಾಜಣ್ಣ, ರಾಮಕೃಷ್ಣಯ್ಯ, ಹನುಮಂತಯ್ಯ, ರವಿಕುಮಾರ್‌ ಇದ್ದರು.

ಟಾಪ್ ನ್ಯೂಸ್

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Dk Suresh

Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.