ಪ್ರೀತಿಯ ಅಜ್ಜನ ಸಾವಿನ ನೋವು…22 ರ ಹರೆಯದಲ್ಲೇ ಸಮಾಜ ಸೇವೆಗಿಳಿದ ಯುವತಿ

Team Udayavani, Mar 18, 2023, 5:40 PM IST

web-suhan

ನಮ್ಮ ಜೀವನದಲ್ಲಿ ಆತ್ಮೀಯರನ್ನು ಕಳೆದುಕೊಂಡ ಸಂದರ್ಭದಲ್ಲಿನ ನೋವು ಬೇರೆ ಯಾವ ಸಂದರ್ಭದಲ್ಲಿ  ಅಷ್ಟಾಗಿ ಆಗದು. ಇವತ್ತು ನಮ್ಮ ಜೊತೆಗಿದ್ದವರು ನಾಳೆ ನಮ್ಮ ನೆನಪಿನಲ್ಲಿ ಮಾತ್ರ ನಮ್ಮನ್ನು ಕಾಡುತ್ತಾರೆ ಎನ್ನುವುದನ್ನು ಅನುಭವಿಸುವಾಗ ಆಗುವ ದುಃಖವಿದೆ ಅಲ್ವಾ ಅದನ್ನು ಅಕ್ಷರ ರೂಪದಲ್ಲಿ ಇಳಿಸಿ ಅರ್ಥೈಸಲು ಸಾಧ್ಯವಾಗದು.

ಈ ಮೇಲಿನ ಮಾತು ಹೇಳಲು ಕಾರಣ  22 ವರ್ಷದ ಖುಷಿ ಪಾಂಡೆ ಎನ್ನುವ ಯುವತಿ. ಉತ್ತರ ಪ್ರದೇಶದ ಲಕ್ನೋ ಮೂಲದ ಖುಷಿ ಪಾಂಡೆ ಸದ್ಯ ಎಲ್ ಎಲ್ ಬಿ ಓದುತ್ತಿದ್ದಾರೆ. ಈ ಸಣ್ಣ ವಯಸಿನಲ್ಲೇ ಅವರು ಜನ ಮೆಚ್ಚುವ ಸಮಾಜ ಸೇವೆಯನ್ನು ಅಳಿಲು ಸೇವೆಯನ್ನಾಗಿ ಮಾಡುತ್ತಿದ್ದಾರೆ. ಭಾರತದಲ್ಲಿ ನಿತ್ಯ ಸಾವಿರಾರು ರಸ್ತೆ ಅಪಘಾತಗಳು ಸಂಭವಿಸುತ್ತವೆ. ನೂರಾರು ಜನರು ತಮ್ಮ ಆತ್ಮೀಯರನ್ನು, ಸ್ನೇಹಿತರನ್ನು ಕಳೆದುಕೊಳ್ಳುತ್ತಾರೆ‌. ಇಂಥದ್ದೇ ಅಪಘಾತ ಒಂದರಲ್ಲಿ ಖುಷಿ ತನ್ನ ಆಪ್ತ ಜೀವವಾಗಿದ್ದ ತನ್ನ ಬಾಲ್ಯದಲ್ಲಿ ಮುದ್ದು ಮಾಡಿದ್ದ ಅಜ್ಜ ( ತಾಯಿಯ ತಂದೆ) ನನ್ನು ಕಳೆದುಕೊಳ್ಳುತ್ತಾರೆ.

ಅದು ಡಿಸೆಂಬರ್ 2022 ರ ಡಿಸೆಂಬರ್ 25 ರ ಮಂಜಿನ ಸಂಜೆಯ ಸಮಯ. ಊರೆಲ್ಲ ಕ್ರಿಸ್ ಮಸ್ ಹಬ್ಬದ ಸಂಭ್ರಮದಲ್ಲಿತ್ತು. ಅಜ್ಜ ಇನ್ನೇನು ಮನೆಗೆ ಬರುತ್ತಾರೆ ಎನ್ನುವ ನಿರೀಕ್ಷೆಯಲ್ಲಿದ್ದ ಖುಷಿಗೆ ಅದೊಂದು ಆಘಾತಕಾರಿ ಸುದ್ದಿ ಬರುತ್ತದೆ. ಸೈಕಲ್ ನಲ್ಲಿ ‌ಬರುತ್ತಿದ್ದ ಖುಷಿಯ ಅಜ್ಜನಿಗೆ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ಹಿರಿಯ ಅಲ್ಲೇ ಕೊನೆಯುಸಿರೆಳೆದ್ದಾರೆ.

ಅಜ್ಜನ ನಿಧನ ಸುದ್ದಿ ಖುಷಿಗೆ ಮುಂದೆ ಯಾರಿಗೂ ಈ ರೀತಿ ಆಗಬಾರದೆನ್ನುವ ಬದಲಾವಣೆಯ ಯೋಚನೆಯನ್ನು ತರುತ್ತದೆ. ಇದೇ ಕಾರಣದಿಂದ ಖುಷಿ ಸಮಾಜ ಸೇವೆಯನ್ನು ಮಾಡಲು ‌ಮುಂದಾಗುತ್ತಾರೆ.

ಬೈಕ್, ಕಾರುಗಳ ಹಾಗೆ ಸೈಕಲ್ ಸವಾರರು ರಸ್ತೆಯಲ್ಲಿ ಹೋಗುತ್ತಿರುತ್ತಾರೆ. ವೇಗವಾಗಿ ಬಂದು ಸೈಕಲ್ ಸವಾರರಿಗೆ ಢಿಕ್ಕಿಯಾದರೆ ಅಪಘಾತದಲ್ಲಿ ಸವಾರರು ಮೃತಪಡುತ್ತಾರೆ. ಹೀಗಾಗಿ ವಾಹನದಲ್ಲಿ ಇಂಡಿಕೇಟರ್ ಆಗಿ ಅಳವಡಿಸುವ ಕೆಂಪು ಲೈಟನ್ನು ಸೈಕಲ್ ಗಳಿಗೆ ಅಳವಡಿಸಲು ನಿರ್ಧರಿಸಿ ಆರಂಭಿಕವಾಗಿ ಜನವರಿ 13, 2022 ರಂದು ಮೊದಲ ಬಾರಿ ಉಚಿತವಾಗಿ ಸೈಕಲಿನ ಹಿಂಬದಿಗೆ ಲೈಟ್ ಗೆ ಅಳವಡಿಸುತ್ತಾರೆ.

ಈ ಕಾರ್ಯ ನಿಧಾನ ಲಕ್ನೋದಲ್ಲಿ ಗಮನ ಸೆಳೆಯುತ್ತದೆ. ಮಂಜು ಕವಿದ ರಸ್ತೆಯಲ್ಲಿ ಹೋಗುವ ಸೈಕಲ್ ಸವಾರರನ್ನು ನೋಡಿ ಅವರ ಸೈಕಲ್ ಗೆ ರೆಡ್ ಲೈಟ್ ಹಾಕುತ್ತಾರೆ. ನಿಧಾನವಾಗಿ ಹೋಗಿ ಎನ್ನುವ ಹಿತನುಡಿಯನ್ನು ಹೇಳಿ ಮತ್ತೊಂದು ಸೈಕಲ್ ಸವಾರರ ಬಳಿ ಹೋಗುತ್ತಾರೆ.

ಇದುವರೆಗೆ ಖುಷಿ 500 ಕ್ಕೂ ಹೆಚ್ಚಿನ ಸೈಕಲ್ ಗಳಿಗೆ ರೆಡ್ ಲೈಟ್ ಗಳನ್ನು ಅಳವಡಿಸಿದ್ದಾರೆ. ಅಪಘಾತದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಇದಲ್ಲದೇ ಸರ್ಕಾರಿ ಶಾಲಾ‌ ಮಕ್ಕಳಿಗೆ ಋತುಚಕ್ರದ ನೈರ್ಮಲ್ಯ ಕುರಿತ ಕಾರ್ಯಕ್ರಮ, ಆಸಿಡ್ ದಾಳಿಯಿಂದ ಬದುಕುಳಿದವರಿಗೆ ಕೌಶಲ್ಯ-ಆಧಾರಿತ ಕಾರ್ಯಾಗಾರಗಳನ್ನು ಮಾಡುತ್ತಿದ್ದಾರೆ. ಹಿಂದುಳಿದ ಮಕ್ಕಳಿಗಾಗಿ ಶಾಲೆಯನ್ನು ತೆರೆದಿದ್ದಾರೆ. ಇದುವರೆಗೆ ಲಕ್ನೋದ 11 ಹಳ್ಳಿಗಳಿಗೆ ಅಗತ್ಯ ಪಡಿತರವನ್ನು ವಿತರಿಸಿದ್ದಾರೆ. ಮತ್ತು ನಗರ ಸ್ವಚ್ಛ ಯೋಜನೆಗಳಲ್ಲಿ ತಮ್ಮನ್ನು  ತಾವು ತೊಡಗಿಸಿಕೊಂಡಿದ್ದಾರೆ.

ಸುಹಾನ್‌ ಶೇಕ್ 

ಟಾಪ್ ನ್ಯೂಸ್

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.