ಕುಂದಾಪುರ: ಮೀಸಲಾತಿ ಅಂತಿಮ ವರದಿ ಇನ್ನೂ ನೀಡಿಲ್ಲ: ಜೆ.ಪಿ. ಹೆಗ್ಡೆ

Team Udayavani, May 17, 2023, 8:30 AM IST

ಕುಂದಾಪುರ: ಮೀಸಲಾತಿ ಅಂತಿಮ ವರದಿ ಇನ್ನೂ ನೀಡಿಲ್ಲ: ಜೆ.ಪಿ. ಹೆಗ್ಡೆ

ಕುಂದಾಪುರ: ಜಾತಿಗಳ ಸಾಮಾಜಿಕ, ಆರ್ಥಿಕ ಮಟ್ಟದ ಕುರಿತು ಅಧ್ಯಯನ ನಡೆಸದೇ ನಿರ್ದಿಷ್ಟ ಜಾತಿಗೆ ಮೀಸಲಾತಿ ಕೊಡುವುದು, ರದ್ದು ಮಾಡುವುದು ಅಸಮಂಜಸವಾಗುತ್ತದೆ. ಈ ನಿಟ್ಟಿನಲ್ಲಿ ಇನ್ನಷ್ಟು ಅಧ್ಯಯನ, ಮಾಹಿತಿ ಕ್ರೋಡೀಕರಣ ಆಗಬೇಕಿದೆ. ಆದ್ದರಿಂದ ಆಯೋಗದಿಂದ ಮಧ್ಯಾಂತರ ವರದಿ ಯನ್ನಷ್ಟೇ ಸರಕಾರಕ್ಕೆ ನೀಡ ಲಾಗಿದ್ದು ಪೂರ್ಣಪ್ರಮಾಣದ ಮೀಸಲಾತಿ ವರದಿ ನೀಡಲು ಕಾಲಾವಕಾಶದ ಅಗತ್ಯವಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಹೇಳಿದ್ದಾರೆ.

ಅವರು ಮಂಗಳವಾರ ಇಲ್ಲಿ ಸುದ್ದಿ ಗಾರರ ಜತೆ ಮಾತನಾಡಿ, ಮೀಸ ಲಾತಿ ಹಿಂಪಡೆಯುವ ಕುರಿತು, ಹೊಸ ಮೀಸಲಾತಿ ಕಲ್ಪಿಸುವ ಕುರಿತು ಈ ಹಿಂದಿನ ಸರಕಾರದ ನಿರ್ಧಾರಗಳನ್ನಾಗಲೀ, ಮುಂದಿ ನವರು ಮಾಡುತ್ತೇನೆ ಎಂಬ ಕುರಿತಾ ಗಲೀ ನಾನು ಹೇಳಿಕೆಗಳನ್ನು ನೀಡುವುದಿಲ್ಲ. ಪ್ರಕರಣ ಸರ್ವೋಚ್ಚ ನ್ಯಾಯಾಲಯದಲ್ಲಿ ಇದೆ. ಮಧ್ಯಾಂತರ ವರದಿಯಲ್ಲಿ ಯಾವುದೇ ಶಿಫಾರಸುಗಳನ್ನು ಮಾಡಲು ಬರುವುದಿಲ್ಲ. ಮಧ್ಯಾಂತರ ವರದಿಯೇ ನೀಡುವಂತಿಲ್ಲ ಎಂಬ ಆಕ್ಷೇಪವೂ ಬಂದಿತ್ತು. ಆದರೆ ಪೂರ್ಣ ಪ್ರಮಾಣದ ವರದಿ ಕೊಡುವ ಅಧಿಕಾರ ಹೊಂದಿದ ಮೇಲೆ ಮಧ್ಯಾಂತರ ವರದಿ ಕೊಡುವ ಅಧಿಕಾರವೂ ಇರುತ್ತದೆ ಎನ್ನುವುದು ಸಾಮಾನ್ಯ ತಿಳಿವಳಿಕೆ. ಈವರೆಗೆ ಮೀಸಲಾತಿ ಪಡೆದ ವರ್ಗ, ಅವರ ಈಗಿನ ಸಾಮಾಜಿಕ ಆರ್ಥಿಕ ಸ್ಥಿತಿಗತಿ ಇತ್ಯಾದಿ ಕುರಿತು ಅಧ್ಯಯನ ಮಾಡಲಾಗುತ್ತಿದೆ. ಮಾಹಿತಿ ಸಂಗ್ರಹಿಸಲಾಗುತ್ತಿದೆ. ಅವುಗಳನ್ನು ಒಟ್ಟು ಮಾಡಿ ಪ್ರತ್ಯೇಕ ಸಾಫ್ಟ್ವೇರ್‌ ಮೂಲಕ ಸಿದ್ಧಪಡಿಸಬೇಕಿದೆ. ಸಾಮಾಜಿಕ ಹಾಗೂ ಆರ್ಥಿಕವಾಗಿ ಪ್ರಗತಿ ಹೊಂದಿದವರನ್ನು ಮೀಸಲಾತಿಯಿಂದ ಹೊರಗಿಡ ಬಹುದು. ಜಾತಿ ಗಣತಿ ಮಾಹಿತಿ ಪಡೆದು ಈ ವರದಿ ಸಿದ್ಧಪಡಿಸಬೇಕಿದೆ ಎಂದರು.

ಜಾತಿಗಣತಿಯೇ ಬಹಿರಂಗವಾಗದ ಕಾರಣ ಜಾತೀಯ ಮೀಸಲಾತಿ ಕುರಿತು ಪ್ರತಿಕ್ರಿಯೆ ನೀಡುವುದು ಅಪ್ರಸ್ತುತವಾಗುತ್ತದೆ. ಈವರೆಗಿನ ಯಾವುದೇ ಮೀಸಲಾತಿ ಸಂವಿಧಾನಬಾಹಿರವಾಗಿ ಇರಲಿಲ್ಲ. ಜಾತಿ ಪ್ರಮಾಣಪತ್ರದಲ್ಲಿ ಇದುವರೆಗೂ ಸ್ಥಾನ ಪಡೆಯದ ಅನೇಕ ಜಾತಿಗಳನ್ನು ಹುಡುಕಿ ಹೆಸರು ಸೇರಿಸಿ ಅವರಿಗೆ ಪ್ರಮಾಣಪತ್ರ ಹಾಗೂ ಮೀಸಲಾತಿ ಸೌಕರ್ಯ ದೊರೆಯುವಂತೆ ಮಾಡ ಲಾಗಿದೆ ಎಂದರು.

ಸರಕಾರ ಬದಲಾದೊಡನೆ ಆಯೋಗದ ಸದಸ್ಯರು, ಅಧ್ಯಕ್ಷರ ಬದಲಾವಣೆ ಆಗುತ್ತದೆಯೇ ಎಂಬ ಪ್ರಶ್ನೆಗೆ, ಆಯೋಗದ ಅವಧಿ ಡಿಸೆಂಬರ್‌ ವರೆಗೆ ಇದೆ. ಮೂರು ವರ್ಷಗಳ ಅವಧಿಗೆ ನೇಮಿಸಲಾಗಿದೆ. ಸರಕಾರದ ತೀರ್ಮಾನ ಗೊತ್ತಿಲ್ಲ ಎಂದರು.

ಟಾಪ್ ನ್ಯೂಸ್

Mussoorie: ಭೀಕರ ರಸ್ತೆ ಅಪಘಾತ… 5 ವಿದ್ಯಾರ್ಥಿಗಳ ದುರಂತ ಅಂತ್ಯ, ಓರ್ವಳ ಸ್ಥಿತಿ ಗಂಭೀರ

Mussoorie: ಭೀಕರ ರಸ್ತೆ ಅಪಘಾತ… 5 ವಿದ್ಯಾರ್ಥಿಗಳ ದುರಂತ ಅಂತ್ಯ, ಓರ್ವಳ ಸ್ಥಿತಿ ಗಂಭೀರ

mangalore international airport

Mangaluru; ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಪೋಟ ಬೆದರಿಕೆ; ಪೊಲೀಸ್ ಭದ್ರತೆ

Pen drive case; ಪ್ರಜ್ವಲ್ ರೇವಣ್ಣ ಹಾಸನ ನಿವಾಸದಲ್ಲಿ ಎಸ್ಐಟಿ ಪರಿಶೀಲನೆ

Pen drive case; ಪ್ರಜ್ವಲ್ ರೇವಣ್ಣ ಹಾಸನ ನಿವಾಸದಲ್ಲಿ ಎಸ್ಐಟಿ ಪರಿಶೀಲನೆ

Raichur; ಅಣ್ಣಾಮಲೈ ಸೆಲ್ಫಿಗಾಗಿ ನೂಕುನುಗ್ಗಲು: ವೇದಿಕೆಯಲ್ಲೇ ಲಾಠಿ ಬೀಸಿದ ಪೊಲೀಸರು

Raichur; ಅಣ್ಣಾಮಲೈ ಸೆಲ್ಫಿಗಾಗಿ ನೂಕುನುಗ್ಗಲು: ವೇದಿಕೆಯಲ್ಲೇ ಲಾಠಿ ಬೀಸಿದ ಪೊಲೀಸರು

MIvsKKR; ಹಲವು ಪ್ರಶ್ನೆಗಳಿವೆ, ಆದರೆ…: ಎಂಟನೇ ಸೋಲಿನ ಬಳಿಕ ಹಾರ್ದಿಕ್ ಪಾಂಡ್ಯ ಹೇಳಿದ್ದೇನು?

MIvsKKR; ಹಲವು ಪ್ರಶ್ನೆಗಳಿವೆ, ಆದರೆ…: ಎಂಟನೇ ಸೋಲಿನ ಬಳಿಕ ಹಾರ್ದಿಕ್ ಪಾಂಡ್ಯ ಹೇಳಿದ್ದೇನು?

ಬಿಗ್‌ಬಾಸ್‌ ವಿಜೇತ ಎಲ್ವಿಶ್‌ ಯಾದವ್‌ ವಿರುದ್ಧ ಅಕ್ರಮ ವರ್ಗಾವಣೆ ಕೇಸ್‌ ದಾಖಲಿಸಿದ ಇ.ಡಿ

ಬಿಗ್‌ಬಾಸ್‌ ವಿಜೇತ ಎಲ್ವಿಶ್‌ ಯಾದವ್‌ ವಿರುದ್ಧ ಅಕ್ರಮ ವರ್ಗಾವಣೆ ಕೇಸ್‌ ದಾಖಲಿಸಿದ ಇ.ಡಿ

nosthush-kenjige

T20 World Cup; ಅಮೆರಿಕ ತಂಡದಲ್ಲಿ ಮೂಡಿಗೆರೆಯ ನಾಸ್ತುಷ್‌ ಕೆಂಜಿಗೆಗೆ ಸ್ಥಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೆಂಗಳೂರು: 4 ತಿಂಗಳಲ್ಲಿ ಮೂರ್ತಿ ಸ್ಥಾಪನೆ ಪೂರ್ಣಗೊಳಿಸಲು ಆದೇಶ

ಬೆಂಗಳೂರು: 4 ತಿಂಗಳಲ್ಲಿ ಮೂರ್ತಿ ಸ್ಥಾಪನೆ ಪೂರ್ಣಗೊಳಿಸಲು ಆದೇಶ

Udupi ಇನ್ನೂ ನಡೆಯದ ಟೆಂಡರ್‌ ಪ್ರಕ್ರಿಯೆ; ರಾಜ್ಯದಲ್ಲಿ ಅಗ್ನಿಶಾಮಕ ವಾಹನ ಕೊರತೆ

Udupi ಇನ್ನೂ ನಡೆಯದ ಟೆಂಡರ್‌ ಪ್ರಕ್ರಿಯೆ; ರಾಜ್ಯದಲ್ಲಿ ಅಗ್ನಿಶಾಮಕ ವಾಹನ ಕೊರತೆ

Road Mishap ಮಣಿಪಾಲ: ಕಾರು ಢಿಕ್ಕಿಯಾಗಿ ಪಾದಚಾರಿ ಸಾವು

Road Mishap ಮಣಿಪಾಲ: ಕಾರು ಢಿಕ್ಕಿಯಾಗಿ ಪಾದಚಾರಿ ಸಾವು

Malpe ದಕ್ಕೆಯಲ್ಲಿ ನೀರಿಗೆ ಬಿದ್ದು ಸಾವು: ದೂರು ದಾಖಲು

Malpe ದಕ್ಕೆಯಲ್ಲಿ ನೀರಿಗೆ ಬಿದ್ದು ಸಾವು: ದೂರು ದಾಖಲು

Theme Park Karkala ಅವಶೇಷ‌ ತೆರವಿಗೆ ಕೋರ್ಟ್‌ ಆದೇಶ; ಜಿಲ್ಲಾಧಿಕಾರಿ ತಡೆ!

Theme Park Karkala ಅವಶೇಷ‌ ತೆರವಿಗೆ ಕೋರ್ಟ್‌ ಆದೇಶ; ಜಿಲ್ಲಾಧಿಕಾರಿ ತಡೆ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Desi Swara: ಹೆಮ್ಮೆಯ ದುಬೈ ಕನ್ನಡ ಸಂಘ- ಶಾರ್ಜಾ ಮಳೆ ಸಂತ್ರಸ್ಥರಿಗೆ ಸಹಾಯ ಹಸ್ತ

Desi Swara: ಹೆಮ್ಮೆಯ ದುಬೈ ಕನ್ನಡ ಸಂಘ- ಶಾರ್ಜಾ ಮಳೆ ಸಂತ್ರಸ್ಥರಿಗೆ ಸಹಾಯ ಹಸ್ತ

Mussoorie: ಭೀಕರ ರಸ್ತೆ ಅಪಘಾತ… 5 ವಿದ್ಯಾರ್ಥಿಗಳ ದುರಂತ ಅಂತ್ಯ, ಓರ್ವಳ ಸ್ಥಿತಿ ಗಂಭೀರ

Mussoorie: ಭೀಕರ ರಸ್ತೆ ಅಪಘಾತ… 5 ವಿದ್ಯಾರ್ಥಿಗಳ ದುರಂತ ಅಂತ್ಯ, ಓರ್ವಳ ಸ್ಥಿತಿ ಗಂಭೀರ

mangalore international airport

Mangaluru; ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಪೋಟ ಬೆದರಿಕೆ; ಪೊಲೀಸ್ ಭದ್ರತೆ

Pen drive case; ಪ್ರಜ್ವಲ್ ರೇವಣ್ಣ ಹಾಸನ ನಿವಾಸದಲ್ಲಿ ಎಸ್ಐಟಿ ಪರಿಶೀಲನೆ

Pen drive case; ಪ್ರಜ್ವಲ್ ರೇವಣ್ಣ ಹಾಸನ ನಿವಾಸದಲ್ಲಿ ಎಸ್ಐಟಿ ಪರಿಶೀಲನೆ

Desi Swara: ವಸಂತನಾಗಮನ- ಇಂಗ್ಲೆಂಡಿನಲ್ಲಿ ಹರುಷದಿ ಸಂಭ್ರಮಿಸಿದ ಕನ್ನಡ ಜನ

Desi Swara: ವಸಂತನಾಗಮನ- ಇಂಗ್ಲೆಂಡಿನಲ್ಲಿ ಹರುಷದಿ ಸಂಭ್ರಮಿಸಿದ ಕನ್ನಡ ಜನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.